ಆಗಸ್ಟ್ 13ರಿಂದ 17ರ ವರೆಗೆ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ (Bank Holiday) ಇರಲಿದ್ದು; ರಿಸರ್ವ್ ಬ್ಯಾಂಕ್ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಶ್ರಾವಣ ಸಂಭ್ರಮದ ಆಗಸ್ಟ್ ತಿಂಗಳು ಸಾಲು ಸಾಲು ಹಬ್ಬಗಳು ದಾಂಗುಡಿ ಇಟ್ಟಿವೆ. ಅದರಲ್ಲೂ ಈ ವಾರ ರಾಷ್ಟ್ರೀಯ ಹಬ್ಬ ಸ್ವಾತಂತ್ರ‍್ಯ ದಿನಾಚರಣೆ ಸೇರಿದಂತೆ ಜನ್ಮಾಷ್ಟಮಿ, ಪಾರ್ಸಿ ಹೊಸ ವರ್ಷ, ಕೃಷ್ಣ ಜಯಂತಿ ಮುಂತಾದ ಹಬ್ಬಗಳು ಒಂದರ ಹಿಂದೆ ಒಂದು ಬಂದಿವೆ.
ಇದರಿಂದಾಗಿ ಬ್ಯಾಂಕ್‌ಗಳು ದೀರ್ಘ ವಾರಾಂತ್ಯ (Long Weekend) ಎದುರಿಸುತ್ತಿವೆ. ಈ ವಾರ ಆಗಸ್ಟ್ 13ರಿಂದ 17ರ ವರೆಗೆ ಒಟ್ಟು ನಾಲ್ಕು ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಈ ಬಗ್ಗೆ ಆರ್‌ಬಿಐ ರಜಾ ವೇಳಾಪಟ್ಟಿ ಪ್ರಕಟಿಸಿದೆ.
ಸಾಲು ಸಾಲು ರಜಾ ದಿನಗಳು
ಆಗಸ್ಟ್ 13ರಂದು (ಬುಧವಾರ) ದೇಶಪ್ರೇಮಿಗಳ ದಿನಾಚರಣೆ ಇರುವ ಕಾರಣಕ್ಕೆ ಮಣಿಪುರದ ಇಂಫಾಲ್’ನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ. ಈ ದಿನ ಮಣಿಪುರದಲ್ಲಿ ‘ಹೀರೋಸ್ ಡೇ’ ಆಚರಿಸಲಾಗುತ್ತದೆ. ಉಳಿದ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಆಗಸ್ಟ್ 15ರಂದು (ಶುಕ್ರವಾರ) ದೇಶಾದ್ಯಂತ ರಾಷ್ಟ್ರೀಯ ಹಬ್ಬವಾದ ‘ಸ್ವಾತಂತ್ರ‍್ಯ ದಿನಾಚರಣೆ’ ಆಚರಣೆ ಮಾಡಲಾಗುತ್ತದೆ. ಇದೇ ದಿನ ಪಾರ್ಸಿ ಹೊಸ ವರ್ಷ (Parsi New Year / Navroz) ಹಾಗೂ ಕೆಲವು ರಾಜ್ಯಗಳಲ್ಲಿ ಇದೆ.
ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಶಾಲೆಗಳು ಮತ್ತು ಬಹುತೇಕ ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಡುವುದರಿಂದ, ಬ್ಯಾಂಕುಗಳೂ ಕಾರ್ಯನಿರ್ವಹಿಸುವುದಿಲ್ಲ.

ಆಗಸ್ಟ್ 16ರಂದು (ಶನಿವಾರ) ಕೃಷ್ಣ ಜಯಂತಿ / ಮೊಸರು ಕುಡಿಕೆ (Janmashtami Celebrations) ಆಚರಣೆ ನೆರವೇರಲಿದೆ. ವಿಶೇಷವಾಗಿ ಉತ್ತರ ಭಾರತದ ರಾಜ್ಯಗಳು, ಉದಾಹರಣೆಗೆ ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯ ಪ್ರದೇಶಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಕರ್ನಾಟಕ ಮತ್ತು ಕೆಲವು ರಾಜ್ಯಗಳಲ್ಲಿ ಈ ದಿನ ಸಾಮಾನ್ಯ ಕಾರ್ಯ ದಿನವಾಗಿರಬಹುದು.
ಆಗಸ್ಟ್ 17ರಂದು (ಭಾನುವಾರ) ದೇಶಾದ್ಯಂತ ವಾರಾಂತ್ಯದ ಪೂರ್ವನಿಯೋಜಿತ ರಜೆ (Sunday Holiday) ಇರುವ ಕಾರಣ ಬ್ಯಾಂಕುಗಳು ಮಾತ್ರವಲ್ಲದೇ ಶಾಲಾ-ಕಾಲೇಜು ಸೇರಿ ಎಲ್ಲಾ ಸರ್ಕಾರಿ ಕಚೇರಿಗಳು ಮುಚ್ಚಿರುತ್ತವೆ.
Ashlesha Male- ವಾಯುಭಾರ ಕುಸಿತ: ರಾಜ್ಯದಲ್ಲಿ ಒಂದು ವಾರ ವ್ಯಾಪಕ ಮಳೆ
ಬ್ಯಾಂಕ್ ರಜಾದಿನಗಳಲ್ಲಿ ಲಭ್ಯವಿರುವ ಸೇವೆಗಳು
ರಜಾದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮುಚ್ಚಿರುವುದರಿಂದ ನಗದು ಜಮಾ, ಚೆಕ್ ಕ್ಲಿಯರಿಂಗ್, ಡ್ರಾಫ್ಟ್, ಲಾಕರ್ ಸೌಲಭ್ಯ ಮುಂತಾದ ಕಾರ್ಯಗಳನ್ನು ನೇರವಾಗಿ ಮಾಡುವುದು ಸಾಧ್ಯವಿರುವುದಿಲ್ಲ.
ಆದರೂ, ಡಿಜಿಟಲ್ ಬ್ಯಾಂಕಿಂಗ್ (Google Pay, PhonePe, Paytm, BHIM ಇತ್ಯಾದಿ), ಎಟಿಎಂ ಸೇವೆಗಳು ಹಾಗೂ ಆನ್‌ಲೈನ್ ಬಿಲ್ ಪಾವತಿಯಂತಹ ಕೆಲವು ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.
ಆಗಸ್ಟ್ 13ರಿಂದ 17ರ ವರೆಗೆ ಬ್ಯಾಂಕ್‌ಗಳಿಗೆ ದೀರ್ಘ ವಾರಾಂತ್ಯ ಎದುರಾಗುತ್ತಿರುವುದರಿಂದ, ಜನರು ತಮ್ಮ ಹಣಕಾಸು ವ್ಯವಹಾರಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳುವುದು ಅತ್ಯಗತ್ಯ. ರಾಷ್ಟ್ರೀಯ ರಜಾದಿನಗಳ ಜೊತೆ, ರಾಜ್ಯವಾರು ಹಬ್ಬಗಳ ಕಾರಣದಿಂದಲೂ ಕೆಲ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರಬಹುದು. ಆದರೆ ಡಿಜಿಟಲ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಯಾವ ತೊಂದರೆಯಿಲ್ಲದೆ ಲಭ್ಯವಿರುತ್ತವೆ.