10th, 12th ಪಾಸಾದ ಮಹಿಳೆಯರಿಗೆ 875 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… Anganwadi 875 Posts Applications invited

Spread the love

Anganwadi 875 Posts Applications invited : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ (Anganwadi post) ಭರ್ತಿಗೆ 10ನೇ ತರಗತಿ ಹಾಗೂ 12ನೇ ತರಗತಿ ಪಾಸಾದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 1,229 ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಹಾಗೂ ಅಂಗನವಾಡಿ ಸಹಾಯಕಿಯರ (Anganwadi Assistant) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ.

WhatsApp Group Join Now
Telegram Group Join Now

mahitimane.com ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವ ವಿವಿಧ ಜಿಲ್ಲೆಗಳ ಮಾಹಿತಿ ನೀಡಿದ್ದು; ಇದೀಗ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿರುವ ಬಳ್ಳಾರಿ ಮತ್ತು ಹಾಸನ ಜಿಲ್ಲೆಗಳ ಅಂಗನವಾಡಿ ಹುದ್ದೆಗಳ ಅರ್ಜಿ ಪ್ರಕ್ರಿಯೆ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

ಬಳ್ಳಾರಿ ಜಿಲ್ಲೆ ಅಂಗನವಾಡಿ ಹುದ್ದೆಗಳ ವಿವರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಳ್ಳಾರಿ ಜಿಲ್ಲೆಯ (Bellary District Anganwadi) ಎಲ್ಲ ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಒಟ್ಟಾರೆ 141 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಅಂಗನವಾಡಿ ಕಾರ್ಯಕರ್ತೆ ಹುದ್ದೆ : 22
  • ಅಂಗನವಾಡಿ ಸಹಾಯಕಿ ಹುದ್ದೆ : 119

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 10-09-2024

ಇದನ್ನೂ ಓದಿ: ಈ ಜಿಲ್ಲೆಗಳ 1,229 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ Anganwadi 1229 Vacancies District wise list

ಹಾಸನ ಜಿಲ್ಲೆ ಅಂಗನವಾಡಿ ಹುದ್ದೆಗಳ ವಿವರ

ಅದೇ ರೀತಿ ಹಾಸನ ಜಿಲ್ಲೆಯ (Hassan District Anganwadi) ಒಟ್ಟು 8 ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಒಟ್ಟಾರೆ 734 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಅಂಗನವಾಡಿ ಕಾರ್ಯಕರ್ತೆ ಹುದ್ದೆ : 168
  • ಅಂಗನವಾಡಿ ಸಹಾಯಕಿಯರ ಹುದ್ದೆ : 566

ಇದನ್ನೂ ಓದಿ: ಅಂಗನವಾಡಿ 344 ಹುದ್ದೆಗಳ ಭರ್ಜರಿ ನೇಮಕಾತಿ | SSLC ಪಾಸಾದವರು ಅರ್ಜಿ ಸಲ್ಲಿಸಿ Anganawadi Worker and Helper Recruitment

Anganwadi 875 Posts Applications invited
ತಾಲ್ಲೂಕುವಾರು ಖಾಲಿ ಹುದ್ದೆಗಳ ಹುದ್ದೆಗಳ ವಿವರ
  • ಹಾಸನ : ಕಾರ್ಯಕರ್ತೆಯರು 17, ಸಹಾಯಕಿಯರು 74
  • ಚನ್ನರಾಯಪಟ್ಟಣ : ಕಾರ್ಯಕರ್ತೆಯರು 39, ಸಹಾಯಕಿಯರು 103
  • ಹೊಳೆನರಸೀಪುರ : ಕಾರ್ಯಕರ್ತೆಯರು 27, ಸಹಾಯಕಿಯರು 61
  • ಬೇಲೂರು : ಕಾರ್ಯಕರ್ತೆಯರು 7, ಸಹಾಯಕಿಯರು 82.
  • ಸಕಲೇಶಪುರ : ಕಾರ್ಯಕರ್ತೆಯರು 15, ಸಹಾಯಕಿಯರು 46
  • ಆಲೂರು : ಕಾರ್ಯಕರ್ತೆಯರು 1, ಸಹಾಯಕಿಯರು 24
  • ಅರಸೀಕೆರೆ : ಕಾರ್ಯಕರ್ತೆಯರು 45, ಸಹಾಯಕಿಯರು 126
  • ಅರಕಲಗೂಡು : ಕಾರ್ಯಕರ್ತೆಯರು 17, ಸಹಾಯಕಿಯರು 50

ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ : 04-09-2024

ಇದನ್ನೂ ಓದಿ: ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಗಸ್ಟ್ 29ರೊಳಗೆ ಅರ್ಜಿ ಸಲ್ಲಿಸಿ… Anganwadi Nemakati Karnataka 2024 

ವಿದ್ಯಾರ್ಹತೆ ಏನಿರಬೇಕು?

ಮೇಲ್ಕಾಣಿಸಿದ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ 19 ರಿಂದ 35 ವರ್ಷದೊಳಗಿನ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಸೂಚನೆಯ ಪ್ರಕಾರ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಪಿಯುಸಿ ಮತ್ತು ಅಂಗನವಾಡಿ ಸಹಾಯಕಿಯರು ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಅಂಗನವಾಡಿ LKG-UKG ಟೀಚರ್ ನೇಮಕಾತಿ: ಹೇಗೆ ನಡೆಯಲಿದೆ ನೇಮಕ ಪ್ರಕ್ರಿಯೆ? ಸಚಿವರ ಮಹತ್ವದ ಮಾಹಿತಿ… Anganwadi LKG UKG Teacher Recruitment 2024

ನೇಮಕವಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 12,000 ರೂಪಾಯಿ ಹಾಗೂ ಸಹಾಯಕಿಯರಿಗೆ ಮಾಸಿಕ 8,000 ರೂಪಾಯಿ ಗೌರವ ಸಂಭಾವನೆ ಇದೆ.

ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು
  • ವಿದ್ಯಾರ್ಹತೆ ಪ್ರಮಾಣ ಪತ್ರ
  • ವಾಸಸ್ಥಳ ದೃಢೀಕರಣ ಪತ್ರ
  • ವಯಸ್ಸಿನ ದೃಢೀಕರಣಕ್ಕಾಗಿ ಜನನ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಆತ್ಮಹತ್ಯೆಗೆ ಒಳಗಾದ ರೈತರ ಪತ್ನಿಯಾಗಿದ್ದಲ್ಲಿ ಸ್ಥಳೀಯ ಎಸಿ ಕಡೆಯಿಂದ ಪಡೆದ ಪ್ರಮಾಣ ಪತ್ರ
  • ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ
  • ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ

ಇದನ್ನೂ ಓದಿ: 18,000 ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿ ನೇಮಕಾತಿ | ಮಾಂಟೆಸ್ಸರಿ ಟೀಚರ್ ಹುದ್ದೆಗೆ ಅರ್ಹತೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… Anganwadi Montessori Recruitment 2024

ಅರ್ಜಿ ಸಲ್ಲಿಕೆ ಹೇಗೆ?

ಅಂಗನವಾಡಿ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ವ್ಯವಸ್ಥೆ ರೂಪಿಸಲಾಗಿದ್ದು; https://karnemakaone.kar.nic.in/abcd/ ಜಾಲತಾಣಕ್ಕೆ ಭೇಟಿ ನೀಡಿ ಅಗತ್ಯ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ನಿಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಆನ್‌ಲೈನ್’ನಲ್ಲಿ ನಿಗದಿಪಡಿಸಿದÀ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್ : ಇಲ್ಲಿ ಒತ್ತಿ

ಇದನ್ನೂ ಓದಿ: SSLC, PUC ಪಾಸಾದ ಮಹಿಳೆಯರಿಗೆ 13,591 ಅಂಗನವಾಡಿ ಹುದ್ದೆಗಳಿಗೆ ಅರ್ಜಿ | ಸಿಎಂ ಸೂಚನೆ karnataka Anganwadi Nemakati 2024


Spread the love
WhatsApp Group Join Now
Telegram Group Join Now

2 thoughts on “10th, 12th ಪಾಸಾದ ಮಹಿಳೆಯರಿಗೆ 875 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… Anganwadi 875 Posts Applications invited”

Leave a Comment

error: Content is protected !!