Aadhar Kaushal Scholarship 2025-26- ಆಧಾರ್ ಕೌಶಲ್ ವಿದ್ಯಾರ್ಥಿವೇತನ | ಈ ವಿದ್ಯಾರ್ಥಿಗಳಿಗೆ 50,000 ರೂ. ಆರ್ಥಿಕ ನೆರವು

Spread the love

WhatsApp Group Join Now
Telegram Group Join Now

2025-26ನೇ ಸಾಲಿನ ಆಧಾರ್ ಕೌಶಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತಾ ಮಾನದಂಡಗಳು, ಅಂತಿಮ ದಿನಾಂಕ ಮತ್ತು ಸಹಾಯಧನದ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…

ಶಿಕ್ಷಣವೇ ಬದುಕಿನ ದಾರಿ ಬದಲಿಸುವ ಶಕ್ತಿಯಾಗಿದೆ. ಆದರೆ ಆರ್ಥಿಕ ಅಡಚಣೆಗಳು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗುತ್ತಿವೆ. ಇಂತಹ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Aadhar Housing Finance Limited -AHFL) ಸಂಸ್ಥೆ ‘ಆಧಾರ್ ಕೌಶಲ್ ವಿದ್ಯಾರ್ಥಿವೇತನ’ವನ್ನು ಜಾರಿಗೊಳಿಸಿದೆ.

ಈ ವಿದ್ಯಾರ್ಥಿವೇತನವು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಹಾಗೂ ದೈಹಿಕ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಮಹತ್ವದ ಸಹಾಯವಾಗಿದೆ.

January 2026 Bank Holidays – ಜನವರಿಯಲ್ಲಿ ಬರೋಬ್ಬರಿ ಅರ್ಧ ತಿಂಗಳು ಬ್ಯಾಂಕ್ ರಜೆ | ಯಾವೆಲ್ಲಾ ದಿನ ಬ್ಯಾಂಕುಗಳು ಬಂದ್ ಇರಲಿವೆ? ಸಂಪೂರ್ಣ ಪಟ್ಟಿ ಇಲ್ಲಿದೆ…

Aadhar Kaushal Scholarship Objective – ಆಧಾರ್ ಕೌಶಲ್ ವಿದ್ಯಾರ್ಥಿವೇತನದ ಉದ್ದೇಶವೇನು?

ಆಧಾರ್ ಕೌಶಲ್ ವಿದ್ಯಾರ್ಥಿವೇತನವು ಮಹತ್ವದ ಉದ್ದೇಶಗಳನ್ನು ಹೊಂದಿದ್ದು; ಆ ಪೈಕಿ ಆರ್ಥಿಕ ಅಡಚಣೆಗಳಿಂದ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸುವ ಪರಿಸ್ಥಿತಿ ತಪ್ಪಿಸುವುದಾಗಿದೆ.

ದೈಹಿಕ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಹಾಗೂ ವೃತ್ತಿಪರ ಪದವಿಪೂರ್ವ ಕೋರ್ಸುಗಳ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು ಈ ವಿದ್ಯಾರ್ಥಿವೇತನದ ಪ್ರಮುಖ ಉದ್ದೇಶವಾಗಿದೆ.

2026 Varshika Bhavishya- 2026ರ ವಾರ್ಷಿಕ ಭವಿಷ್ಯ | ಈ ವರ್ಷ ಯಾರಿಗೆ ಶುಭ? ಯಾರಿಗೆ ಸವಾಲು?

Aadhar Kaushal Scholarship Eligibility – ಯಾರಿಗೆ ಈ ವಿದ್ಯಾರ್ಥಿವೇತನ ಸಿಗುತ್ತದೆ?

ಆಧಾರ್ ಕೌಶಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಸಾಮಾನ್ಯ ಅಥವಾ ವೃತ್ತಿಪರ ಪದವಿಪೂರ್ವ (Undergraduate) ಕೋರ್ಸುಗಳಲ್ಲಿ ಓದುತ್ತಿರಬೇಕು.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳು ಪಡೆದಿರುವ ಭಾರತದ ಯಾವುದೇ ರಾಜ್ಯದ ದೈಹಿಕ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ 3 ಲಕ್ಷದೊಳಗೆ ಇರಬೇಕು. ಕರ್ನಾಟಕದ ಸಣ್ಣ ನಗರ ಮತ್ತು ಪಟ್ಟಣದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

Federal Bank Scholarship 2025-26- ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ | ಲ್ಯಾಪ್‌ಟಾಪ್ ಜೊತೆಗೆ ಕಾಲೇಜು ಶುಲ್ಕ ಪಾವತಿಗೆ ಹಣಕಾಸು ನೆರವು

Aadhar Kaushal Scholarship Amount – ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಆಧಾರ್ ಕೌಶಲ್ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ 10,000 ರೂ. ದಿಂದ 50,000 ರೂ. ವರೆಗೆ ಹಣಕಾಸು ನೆರವು ನೀಡಲಾಗುತ್ತದೆ. ಈ ಹಣವನ್ನು ಶಿಕ್ಷಣ ಶುಲ್ಕ, ಪರೀಕ್ಷಾ ಶುಲ್ಕ, ಅಧ್ಯಯನ ಸಂಬಂಧಿತ ಖರ್ಚುಗಳಿಗೆ ಬಳಸಬಹುದಾಗಿದೆ.

Aadhar Kaushal Scholarship 2025-26
Aadhar Kaushal Scholarship 2025-26

Required Documents for Aadhar Kaushal Scholarship – ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು

  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಅರ್ಜಿದಾರರ ಆಧಾರ್ ಕಾರ್ಡ್
  • ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಕೋರ್ಸಿಗೆ ಪ್ರವೇಶ ಪಡೆದಿರುವ ಪುರಾವೆ
  • ಕೋರ್ಸ್ ಸಂಬಂಧಿಸಿದ ವೆಚ್ಚ ವಿವರಗಳು (ಶುಲ್ಕ ರಸೀದಿಗಳು)
  • ಹಿಂದಿನ ವರ್ಷ / 12ನೇ ತರಗತಿ ಅಂಕಪಟ್ಟಿ
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ಸರ್ಕಾರ ನೀಡಿದ ಮಾನ್ಯ ಅಂಗವೈಕಲ್ಯ ಪ್ರಮಾಣಪತ್ರ
  • ಬೇರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿಲ್ಲ ಎಂಬ ಘೋಷಣೆ

Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…

Aadhar Kaushal Scholarship Application Process – ಅರ್ಜಿ ಪ್ರಕ್ರಿಯೆ ಹೇಗೆ?

ಆಧಾರ್ ಕೌಶಲ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ತುಂಬಾ ಸರಳ. ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಬಳಸಿಕೊಂಡು ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

ಹಂತ 1: ಮೊದಲಿಗೆ ಕೆಳಗೆ ನೀಡಲಾದ ಅಧಿಕೃತ ಅರ್ಜಿ ಲಿಂಕ್ Apply Now ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 2: ‘Register’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ನೋಂದಣಿ ವಿವರಗಳನ್ನು ಭರ್ತಿ ಮಾಡಿ. (ಗಮನಿಸಿ: ಈಗಾಗಲೇ ನೋಂದಾಯಿಸಿದ್ದರೆ, ಜಿ-ಮೇಲ್/ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಬಳಸಿ ಲಾಗಿನ್ ಮಾಡಿ).
ಹಂತ 3: Apply Now ಬಟನ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
ಹಂತ 4: ನಿಮ್ಮ ಮೊಬೈಲ್ ಸಂಖ್ಯೆ, ಕ್ಯಾಪ್ಚಾವನ್ನು ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಯಶಸ್ವಿ ಪರಿಶೀಲನೆಯ ನಂತರ, ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ, ಪುಟದ ಕೆಳಭಾಗದಲ್ಲಿರುವ ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಿ ಮತ್ತು Submit ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

Karnataka State Scholarship 2025-26- ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು | SSP ಮೂಲಕ ಈಗಲೇ ಅರ್ಜಿ ಹಾಕಿ…

Frequently Asked Questions (FAQs)

  • ಈ ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಹಾಕಬಹುದು?
    ದೈಹಿಕ ಅಂಗವೈಕಲ್ಯ ಹೊಂದಿರುವ, ಪದವಿಪೂರ್ವ ಕೋರ್ಸ್ ಓದುತ್ತಿರುವ ಹಾಗೂ ಕುಟುಂಬ ಆದಾಯ 3 ಲಕ್ಷ ರೂ.ಒಳಗಿನ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
  • ಈ ವಿದ್ಯಾರ್ಥಿವೇತನವು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆಯೇ?
    ಹೌದು, ಕರ್ನಾಟಕವೂ ಸೇರಿದಂತೆ ಅಖಂಡ ಭಾರತದ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
  • ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ನಲ್ಲೇನಾ?
    ಹೌದು, ಯಾವುದೇ ಮಧ್ಯವರ್ತಿಯನ್ನು ನಂಬದೇ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಆಧಾರ್ ಕೌಶಲ್ ವಿದ್ಯಾರ್ಥಿವೇತನವು ಶಿಕ್ಷಣದ ಕನಸು ಕಾಣುವ ಸಾವಿರಾರು ವಿದ್ಯಾರ್ಥಿಗಳಿಗೆ ಭರವಸೆಯ ಬೆಳಕಾಗಿದೆ. ನೀವು ಅಥವಾ ನಿಮಗೆ ಪರಿಚಿತರಾದ ಅರ್ಹ ವಿದ್ಯಾರ್ಥಿಗಳು ಇದ್ದರೆ, ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ಜನವರಿ 13ರೊಳಗೆ ಅರ್ಜಿ ಸಲ್ಲಿಸಿ.

  • ಅರ್ಜಿ ಲಿಂಕ್: Apply Now 
  • ಸಹಾಯವಾಣಿ: 011-43092248 (Extension-342)

Spread the love
error: Content is protected !!