ಕೇಂದ್ರ ಸರಕಾರಿ ನೌಕರರ (Government Employees) ಸಂಬಳ ಹೆಚ್ಚಿಸುವ ದಿಸೆಯಲ್ಲಿ 8ನೇ ವೇತನ ಆಯೋಗ (8th Pay Commission) ರಚಿಸಲು ಕೇಂದ್ರ ಸರಕಾರ (Government of India) ಅನುಮೋದನೆ ನೀಡಿದೆ. ಇದರಿಂದಾಗಿ ನೌಕರರು ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮೂಲಗಳ ಪ್ರಕಾರ, 8ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ.
8ನೇ ವೇತನ ಆಯೋಗವು ನೌಕರರ ಸಂಬಳ ಏರಿಕೆಗೆ ಮಾರ್ಗದರ್ಶಕವಾಗಲಿದ್ದು, ಸದ್ಯದ ಮಾಹಿತಿ ಪ್ರಕಾರ 2026ರ ಏಪ್ರಿಲ್ 1ರಿಂದ ಜಾರಿಯಾಗಬೇಕಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಆಯೋಗದ ಶಿಫಾರಸುಗಳು 2027ರಿಂದ ಜಾರಿಗೆ ಬರಲಿವೆ ಎನ್ನಲಾಗುತ್ತಿದೆ.
Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್?
ವೇತನ ಆಯೋಗದ ಮಹತ್ವ
ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ ರಚನೆಯಾಗಿ, ಸರ್ಕಾರಿ ನೌಕರರ ಸಂಬಳ, ಭತ್ಯೆ ಹಾಗೂ ಇತರೆ ಲಾಭಗಳನ್ನು ಪರಿಷ್ಕರಿಸಿ ಶಿಫಾರಸುಗಳನ್ನು ನೀಡಲಾಗುತ್ತದೆ. ಈ ಶಿಫಾರಸುಗಳ ಆಧಾರದಲ್ಲಿ ಕೇಂದ್ರ ಸರಕಾರ ನೌಕರರ ವೇತನವನ್ನು ನವೀಕರಿಸುತ್ತದೆ. ಇದರಿಂದ ನೌಕರರಿಗೆ ದೊಡ್ಡ ಪ್ರಮಾಣದ ವೇತನ ಏರಿಕೆಯ ಲಾಭ ಸಿಗಲಿದೆ.
8ನೇ ವೇತನ ಆಯೋಗವು 2026ರಲ್ಲಿ ಜಾರಿಗೆ ಬರುವ ನಿರೀಕ್ಷೆಯಲ್ಲಿತ್ತು. ಆದರೆ, ಕೇಂದ್ರ ಸರಕಾರ ಈಗಷ್ಟೇ ಆಯೋಗ ರಚನೆಯ ಪ್ರಕ್ರಿಯೆಯನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಶಿಫಾರಸುಗಳನ್ನು ತಯಾರು ಮಾಡಿ, ಜಾರಿಗೆ ತರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದರರ್ಥ, ನೌಕರರು ನಿರೀಕ್ಷಿಸಿದ್ದ ಸಂಬಳ ಏರಿಕೆಯು ಕನಿಷ್ಠ ಒಂದು ವರ್ಷ ತಡವಾಗಬಹುದು.

ಶೀಘ್ರ ವೇತನ ಆಯೋಗ ರಚನೆಗೆ ಒತ್ತಾಯ
ಇದುವರೆಗೆ ಕೇಂದ್ರ ಸರಕಾರ 8ನೇ ವೇತನ ಆಯೋಗದ ಕುರಿತು ಯಾವುದೇ ಅಧಿಕೃತ ಶಿಫಾರಸು ಅಥವಾ ಮಾರ್ಗಸೂಚಿಗಳನ್ನು ಘೋಷಣೆ ಮಾಡಿಲ್ಲ. ಹೀಗಾಗಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲದಿದ್ದರೂ, ವಿವಿಧ ಮಾಧ್ಯಮ ವರದಿಗಳು ಮತ್ತು ಮೂಲಗಳು ನಾನಾ ರೀತಿಯ ಮಾಹಿತಿಯನ್ನು ನೀಡುತ್ತಿವೆ.
ಸರ್ಕಾರದದ ವಿಳಂಬ ನಿರ್ಧಾರದಿಂದ ನೌಕರರಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ. ಕಳೆದ ಕೆಲವು ತಿಂಗಳುಗಳಿAದಲೇ ನೌಕರರ ಸಂಘಟನೆಗಳು 8ನೇ ವೇತನ ಆಯೋಗದ ಶೀಘ್ರ ರಚನೆಗೆ ಒತ್ತಾಯಿಸುತ್ತಿವೆ.
ಕೋಟ್ಯಾಂತರ ನೌಕರರಿಗೆ ಲಾಭ
8ನೇ ವೇತನ ಆಯೋಗದ ಶಿಫಾರಸಿನಿಂದ ದೇಶದಾದ್ಯಂತ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ. ವೇತನ ಪರಿಷ್ಕರಣೆ ಮಾತ್ರವಲ್ಲದೆ, ಪಿಂಚಣಿ ಹೆಚ್ಚಳ, ಭತ್ಯೆಗಳಲ್ಲಿ ಬದಲಾವಣೆ, ಮತ್ತು ವಿವಿಧ ಸೌಲಭ್ಯಗಳಲ್ಲಿ ನವೀಕರಣವು ಈ ಆಯೋಗದ ಪ್ರಮುಖ ಉದ್ದೇಶಗಳಾಗಿವೆ.
ಸರ್ಕಾರಿ ನೌಕರರು ವೇತನ ಆಯೋಗ ಶಿಫಾರಸುಗಳು ಶೀಘ್ರ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೆಲವೊಂದು ನೌಕರರ ಸಂಘಟನೆಗಳು ಇದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಕಳಪೆ ರಾಜಕಾರಣ ಬಳಸಲಾಗುತ್ತಿದೆ ಎಂದು ಟೀಕಿಸುತ್ತಿವೆ.
ಒಟ್ಟಾರೆ 8ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ವಿಳಂಬವಾಗುವುದು ನೌಕರರಲ್ಲಿ ನಿರಾಸೆ ಮೂಡಿಸಿದ್ದು; ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಸ್ಪಷ್ಟನೆ ನೀಡುವ ನಿರೀಕ್ಷೆಯಿದೆ. ಸರಿಯಾದ ಸಮಯದಲ್ಲಿ ಆಯೋಗ ರಚನೆಯಾಗುವುದು ಮತ್ತು ಶಿಫಾರಸುಗಳು ಸಮಯಕ್ಕೆ ಜಾರಿಗೆ ಬರುವುದು ದೇಶದ ಲಕ್ಷಾಂತರ ಸರ್ಕಾರಿ ನೌಕರರ ಬದುಕಿಗೆ ನೇರವಾಗಲಿದೆ.