CM Negila Yogi Yojane: ರಾಜ್ಯದ ಸಣ್ಣ ರೈತರಿಗೆ ಟ್ರ‍್ಯಾಕ್ಟರ್ ಉಳುಮೆಗೆ ಆರ್ಥಿಕ ನೆರವು ನೀಡುವ ‘ಸಿಎಂ ನೇಗಿಲ ಯೋಗಿ ಯೋಜನೆ’ಯ ಸಹಾಯಧನ ಪಡೆಯುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ…
ರಾಜ್ಯದ ರೈತ ಸಮುದಾಯಕ್ಕೆ ಕೃಷಿ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೃಷಿ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಳ್ಳಲು ಬಡ ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ದೂರ ಮಾಡಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.
ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ ಗಗನಕ್ಕೇರಿರುವ ಇಂದಿನ ದಿನಗಳಲ್ಲಿ ಸಣ್ಣ ರೈತರಿಗೆ ಆಸರೆಯಾಗಲು ‘ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ’ (CM Negila Yogi Yojane) ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಬರುತ್ತಿದೆ.
ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು
ಉಳುಮೆ ಮಾಡಲು ಟ್ರ‍್ಯಾಕ್ಟರ್ ಬಾಡಿಗೆ ಕಟ್ಟಲು ರೈತರು ಸಾಕಷ್ಟು ಪರದಾಡುತ್ತಿದ್ದಾರೆ. ಒಂದು ಗಂಟೆ ಟ್ರ‍್ಯಾಕ್ಟರ್ ಬಾಡಿಗೆಗೆ ಸಾವಿರಾರು ರೂಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ಈ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರವೇ ರೈತರಿಗೆ ಟ್ರ‍್ಯಾಕ್ಟರ್ ಉಳುಮೆಗೆ ಸಹಾಯಧನ (Tractor Plowing Subsidy) ನೀಡಲು ಮುಂದಾಗಿದೆ.
ಇದನ್ನೂ ಓದಿ: Karnataka Vokkaliga Nigama Schemes: ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ
ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?
ಸರ್ಕಾರದ ಈ ನೇಗಿಲ ಯೋಗಿ ಯೋಜನೆಯು ಎಲ್ಲರಿಗೂ ಅನ್ವಯವಾಗುವುದಿಲ್ಲ. ಕೇವಲ ಸಣ್ಣ ಮತ್ತು ಅತಿಸಣ್ಣ ರೈತರನ್ನು (Small and Marginal Farmers) ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.
ಗರಿಷ್ಠ ಮೂರು ಎಕರೆ (3 Acres) ಅಥವಾ ಅದಕ್ಕಿಂತ ಕಡಿಮೆ ಕೃಷಿ ಜಮೀನು ಹೊಂದಿರುವ ರೈತರು ಮಾತ್ರ ಈ ನೆರವು ಪಡೆಯಲು ಅರ್ಹರಾಗಿರುತ್ತಾರೆ. ಮೂರು ಎಕರೆಗಿಂತ ಮೇಲ್ಪಟ್ಟು ಜಮೀನು ಹೊಂದಿರುವ ದೊಡ್ಡ ರೈತರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

ಇದನ್ನೂ ಓದಿ: Karnataka Veerashaiva-Lingayat Schemes 2026: ಕರ್ನಾಟಕ ವೀರಶೈವ-ಲಿಂಗಾಯತ ನಿಗಮದಿಂದ ಬಂಪರ್ ಯೋಜನೆಗಳು | ಅರ್ಜಿ ಆಹ್ವಾನ
ಎಷ್ಟು ಸಹಾಯಧನ ಸಿಗಲಿದೆ?
ರೈತರು ತಮ್ಮ ಜಮೀನಿನಲ್ಲಿ ಕೈಗೊಳ್ಳುವ ಮೂರು ಪ್ರಮುಖ ಕೃಷಿ ಕೆಲಸಗಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಹೊಲ ಅಥವಾ ತೋಟ ಉಳುಮೆ ಮಾಡುವುದು (Plowing), ರೋಟೋವೇಟರ್ (Rotavator) ಹೊಡೆಯುವುದು ಮತ್ತು ಬಿತ್ತನೆ (Sowing) ಮಾಡುವುದು ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ.
- ಒಂದು ಎಕರೆಗೆ ಒಂದು ಬಾರಿ ಟ್ರ‍್ಯಾಕ್ಟರ್ ಬಳಸಿದರೆ 500 ರೂಪಾಯಿಗಳ ಸಹಾಯಧನ ನಿಗದಿಯಾಗಿದೆ.
- ಒಬ್ಬ ರೈತ ವರ್ಷದಲ್ಲಿ ಗರಿಷ್ಠ ಮೂರು ಬಾರಿ ಈ ನೆರವು ಪಡೆಯಬಹುದು. ಅಂದರೆ ಒಂದು ಎಕರೆಗೆ ವರ್ಷಕ್ಕೆ ಒಟ್ಟು 1,500 ರೂಪಾಯಿ (Financial Assistance) ನೆರವು ಲಭ್ಯವಾಗಲಿದೆ.
ಇದನ್ನೂ ಓದಿ: Gruha Lakshmi New Guidelines: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಹೊಸ ರೂಲ್ಸ್: ಇನ್ಮುಂದೆ ಪತಿ ಆಧಾರ್ ಲಿಂಕ್ ಕೂಡ ಕಡ್ಡಾಯ!
- ಒಂದು ವೇಳೆ ರೈತರ ಬಳಿ ಪೂರ್ಣ ಮೂರು ಎಕರೆ ಜಮೀನು ಇದ್ದರೆ, ವರ್ಷಕ್ಕೆ ಗರಿಷ್ಠ 4,500 ರೂಪಾಯಿಗಳ ಸಹಾಯಧನವನ್ನು ಪಡೆಯಬಹುದು.
- ಈ ಮೂರೂ ಕೆಲಸಗಳನ್ನು ರೈತರು ಪ್ರತ್ಯೇಕವಾಗಿ ಮಾಡಿಸಬಹುದು. ಅಥವಾ ತಮಗೆ ಅಗತ್ಯವಿರುವ ಯಾವುದಾದರೂ ಒಂದು ಕೆಲಸವನ್ನು ಮೂರು ಬಾರಿ ಮಾಡಿಸಿದರೂ ಈ ಹಣ ಸಿಗುತ್ತದೆ.
ಇದನ್ನೂ ಓದಿ: Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ
ಆ್ಯಪ್ ಮೂಲಕ ಸುಲಭ ಟ್ರ‍್ಯಾಕ್ಟರ್ ಬುಕ್ಕಿಂಗ್
ಯೋಜನೆಯನ್ನು ಸುಲಭವಾಗಿ ತಲುಪಿಸಲು ಕೃಷಿ ಇಲಾಖೆ (Agriculture Department) ಹೊಸ ಮೊಬೈಲ್ ಆ್ಯಪ್ (Mobile App) ಅಭಿವೃದ್ಧಿಪಡಿಸುತ್ತಿದೆ. ನಾವು ಮೊಬೈಲ್‌ನಲ್ಲಿ ಟ್ಯಾಕ್ಸಿ ಬುಕ್ ಮಾಡುವ ರೀತಿಯಲ್ಲೇ ರೈತರು ಈ ಆ್ಯಪ್ ಬಳಸಬಹುದು.
ರೈತರು ತಮಗೆ ಯಾವ ದಿನ ಟ್ರ‍್ಯಾಕ್ಟರ್ ಬೇಕು ಎಂಬುದನ್ನು ಮುಂಗಡವಾಗಿ ಬುಕ್ (Advance Booking) ಮಾಡಬಹುದು. ಇದಕ್ಕಾಗಿ ಸ್ಥಳೀಯ ಖಾಸಗಿ ಟ್ರ‍್ಯಾಕ್ಟರ್ ಮಾಲೀಕರು ಕೂಡ ಈ ಆ್ಯಪ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಟ್ರ‍್ಯಾಕ್ಟರ್‌ಗಳ ನೋಂದಣಿಗೆ ಯಾವುದೇ ಮಿತಿ ಇರುವುದಿಲ್ಲ.
ಇದನ್ನೂ ಓದಿ: Free Sewing Machine: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಸೆಪ್ಟೆಂಬರ್ 30 ಕೊನೆಯ ದಿನ
ಸಹಾಯಧನ ಪಾವತಿ ಹೇಗೆ?
ರೈತರು ಟ್ರ‍್ಯಾಕ್ಟರ್ ಬುಕ್ ಮಾಡಿ ಉಳುಮೆ ಕಾರ್ಯ ಮುಗಿದ ಮೇಲೆ, ಆರಂಭದಲ್ಲಿ ರೈತರೇ ಟ್ರ‍್ಯಾಕ್ಟರ್ ಮಾಲೀಕರಿಗೆ ಪೂರ್ಣ ಬಾಡಿಗೆ ಹಣವನ್ನು (Rental Amount) ಪಾವತಿಸಬೇಕು. ಉಳುಮೆ ಆ್ಯಪ್‌ನಲ್ಲಿ ದಾಖಲಾಗುತ್ತದೆ.
ಆನಂತರ ಸರ್ಕಾರವು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸಹಾಯಧನವನ್ನು ವರ್ಗಾವಣೆ (Bank Account Transfer) ಮಾಡುತ್ತದೆ. ಈ ಹಣ ಪಡೆಯಲು ಕೃಷಿ ಇಲಾಖೆಗೆ ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ
ಎಫ್‌ಐಡಿ (Farmer ID) ನೋಂದಣಿ ಕಡ್ಡಾಯ
ಈ ಯೋಜನೆಯ ಲಾಭ ಪಡೆಯಲು ಬಯಸುವ ರೈತರು ಕಡ್ಡಾಯವಾಗಿ ಎಫ್‌ಐಡಿ (Farmer ID) ಮಾಡಿಸಿರಲೇಬೇಕು. ರೈತರು ತಮ್ಮ ಗ್ರಾಮದ ವ್ಯಾಪ್ತಿಗೆ ಬರುವ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಫ್‌ಐಡಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ಜಮೀನಿನ ಪಹಣಿ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ.
ಮುಂಬರುವ ನವೆಂಬರ್ ತಿಂಗಳಿನಿAದ ಟ್ರ‍್ಯಾಕ್ಟರ್ ಮಾಲೀಕರು ಹಾಗೂ ರೈತರ ಹೆಸರು ನೋಂದಣಿ (Registration) ಪ್ರಕ್ರಿಯೆ ಶುರುವಾಗಲಿದೆ. ಒಟ್ಟಿನಲ್ಲಿ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಪೂರ್ಣಗೊಳಿಸಲು ‘ನೇಗಿಲ ಯೋಗಿ ಯೋಜನೆ’ಯು ರೈತರಿಗೆ ದೊಡ್ಡ ವರದಾನವಾಗಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.