Crop Insurance: 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಒಟ್ಟು 13.39 ಕೋಟಿ ರೂ. ಪರಿಹಾರ ಜಮೆಯಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…
ಕಳೆದ 2025-26ನೇ ಸಾಲಿನ ಮುಂಗಾರು ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ (Weather Based Crop Insurance Scheme) ರೈತರು ಅನುಭವಿಸಿದ ಬೆಳೆ ನಷ್ಟಕ್ಕೆ ಪರಿಹಾರ ಹಣ ಬಿಡುಗಡೆಯಾಗಿದೆ. ಒಟ್ಟು 13.39 ಕೋಟಿ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ (Bank Accounts) ಯಶಸ್ವಿಯಾಗಿ ಜಮೆ ಮಾಡಲಾಗಿದೆ.
ಮಳೆಯ ಅಭಾವ ಹಾಗೂ ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿದ್ದ ಹಾವೇರಿ ಜಿಲ್ಲೆಯ ಅನ್ನದಾತರಿಗೆ ತೋಟಗಾರಿಕೆ ಇಲಾಖೆಯಿಂದ ಸಂದಾಯವಗಿರುವ ಈ ವಿಮಾ ಮೊತ್ತವು (Insurance Amount) ಆರ್ಥಿಕವಾಗಿ ಸ್ವಲ್ಪ ಮಟ್ಟಿನ ನೆಮ್ಮದಿ ತಂದಿದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಸಿಕ್ಕಿದೆ? (Crop-wise Compensation Details)
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ನೀಡಿರುವ ಮಾಹಿತಿಯ ಪ್ರಕಾರ, ಪ್ರಮುಖವಾಗಿ ಎರಡು ಬೆಳೆಗಳ ರೈತರ ಖಾತೆಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ:
-
ಹಸಿ ಮೆಣಸಿನಕಾಯಿ (Green Chilli): ಈ ಬೆಳೆಗೆ ವಿಮೆ ಮಾಡಿಸಿದ್ದ ಒಟ್ಟು 1,773 ರೈತರ ಖಾತೆಗೆ 306.24 ಲಕ್ಷ ರೂ. ಗಳ ಪರಿಹಾರವನ್ನು ಜಮೆ ಮಾಡಲಾಗಿದೆ.
-
ಶುಂಠಿ (Ginger): ವಿಮೆ ನೋಂದಾಯಿಸಿಕೊಂಡಿದ್ದ 5,526 ಶುಂಠಿ ಬೆಳೆಗಾರರಿಗೆ ಬರೋಬ್ಬರಿ 1032.76 ಲಕ್ಷ ರೂ. ಗಳ ಪರಿಹಾರ ಮೊತ್ತ ದೊರೆತಿದೆ.
ಒಟ್ಟಾರೆಯಾಗಿ ಈ ಎರಡು ಬೆಳೆಗಳಿಂದ ಜಿಲ್ಲೆಯ ರೈತರ ಕೈಗೆ 13.39 ಕೋಟಿ ರೂ. ವಿಮಾ ನಷ್ಟ ಪರಿಹಾರದ ಹಣ (Crop Insurance Compensation) ಸೇರಿದೆ.
ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ
ಮಾವು ಮತ್ತು ಅಡಿಕೆ ಬೆಳೆಗಾರರಿಗೆ ಶೀಘ್ರದಲ್ಲೇ ಪರಿಹಾರ (Upcoming Compensation)
ಇದೇ ವೇಳೆ, ಮಾವು (Mango) ಹಾಗೂ ಅಡಿಕೆ (Arecanut) ಬೆಳೆಗಳಿಗೆ ವಿಮೆ ಮಾಡಿಸಿದ ಅರ್ಹ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಇಲಾಖೆ ಅಭಯ ನೀಡಿದೆ.
-
ಈ ಬೆಳೆಗಳಿಗೆ ಸಂಬಂಧಿಸಿದಂತೆ ಹಣ ಜಮೆ ಮಾಡುವ ತಾಂತ್ರಿಕ ಪ್ರಕ್ರಿಯೆಗಳು (Technical Process) ಸದ್ಯ ಪ್ರಗತಿಯಲ್ಲಿವೆ.
-
ಈ ಪ್ರಕ್ರಿಯೆ ಮುಗಿದ ತಕ್ಷಣವೇ, ವಿಳಂಬವಿಲ್ಲದೆ ಉಳಿದ ಎಲ್ಲಾ ಅರ್ಹ ರೈತರ ಖಾತೆಗಳಿಗೂ ವಿಮಾ ಪರಿಹಾರದ ಮೊತ್ತ ನೇರವಾಗಿ ಜಮೆಯಾಗಲಿದೆ (Direct Bank Transfer).
-
ಉಳಿದ ರೈತರ ಖಾತೆಗಳಿಗೆ ಹಣ ಜಮೆ ಮಾಡಲು ಇಲಾಖೆಯು ಅಗತ್ಯವಿರುವ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ.
Gruhalakshmi Beneficiaries Reverification: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಮಹತ್ವದ ಸೂಚನೆ | ಸಿಎಂ ಸ್ಪಷ್ಟನೆ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.