Vruddhapya Vethana Raddu: 15.99 ಲಕ್ಷ ಜನರ ವೃದ್ಧಾಪ್ಯ ವೇತನ ರದ್ದು | ಯಾರೆಲ್ಲ ಪಿಂಚಣಿ ಕ್ಯಾನ್ಸಲ್ ಆಗಿದೆ? ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

Vruddhapya Vethana Raddu: ಸಂಧ್ಯಾ ಸುರಕ್ಷಾ ಯೋಜನೆಯಡಿ 15.99 ಲಕ್ಷ ಫಲಾನುಭವಿಗಳ ಪಿಂಚಣಿ ರದ್ದು ಮಾಡಲಾಗಿದೆ. ಯಾರೆಲ್ಲ ಪಿಂಚಣಿ ರದ್ದಾಗಿದೆ? ಅರ್ಹ ಫಲಾನುಭವಿಗಳ ಮೇಲಿನ ಪರಿಣಾಮವೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದ ಲಕ್ಷಾಂತರ ಹಿರಿಯ ನಾಗರಿಕರಿಗೆ ಆರ್ಥಿಕ ಆಸರೆಯಾಗಿರುವ ಸಂಧ್ಯಾ ಸುರಕ್ಷಾ ಯೋಜನೆ (Sandhya Suraksha Scheme) ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: PM Awas Yojana: ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ₹2.5 ಲಕ್ಷ ಆರ್ಥಿಕ ನೆರವು | ಪಿಎಂ ಆವಾಸ್ ಯೋಜನೆ ಅರ್ಜಿ ಆಹ್ವಾನ

ಸರ್ಕಾರ ನಡೆಸಿದ ರಾಜ್ಯವ್ಯಾಪಿ ಸಮೀಕ್ಷೆಯ ಬಳಿಕ, ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ಸುಮಾರು 15.99 ಲಕ್ಷ ಫಲಾನುಭವಿಗಳ ಮಾಸಾಶನವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಒಂದು ಕಡೆ ಸರ್ಕಾರಿ ಸೌಲಭ್ಯಗಳ ದುರುಪಯೋಗವನ್ನು ತಡೆಯಲು ಸರ್ಕಾರ ಮುಂದಾಗಿರುವುದನ್ನು ಸ್ವಾಗತಿಸಲಾಗುತ್ತಿದ್ದರೆ, ಮತ್ತೊಂದೆಡೆ ಹಲವು ಅರ್ಹ ವೃದ್ಧರು ಕಳೆದ ಮೂರು ತಿಂಗಳಿನಿಂದ ಪಿಂಚಣಿ ಸಿಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬ ಆತಂಕವೂ ವ್ಯಕ್ತವಾಗಿದೆ.

ಇದನ್ನೂ ಓದಿ: BharatPe Flex UPI Loan: ಮೊಬೈಲ್‌ನಲ್ಲೇ ಸಿಗುತ್ತೆ ಬಡ್ಡಿ ಇಲ್ಲದ ಸಾಲ | ಬ್ಯಾಂಕ್ ಖಾತೆಯಲ್ಲಿ ಕಾಸಿಲ್ಲದಿದ್ದರೂ ಯುಪಿಐ ಪೇಮೆಂಟ್ ಮಾಡಿ

ಹಿರಿಯ ನಾಗರಿಕರಿಗೆ ಆಸರೆಯಾಗಿರುವ ಸಂಧ್ಯಾ ಸುರಕ್ಷಾ ಯೋಜನೆ

ಸಂಧ್ಯಾ ಸುರಕ್ಷಾ ಯೋಜನೆ ರಾಜ್ಯ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ. 65 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಪಿಂಚಣಿ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

2007ರಲ್ಲಿ ಆರಂಭವಾದ ಈ ಯೋಜನೆಯು ಸಾವಿರಾರು ಕುಟುಂಬಗಳ ಬದುಕಿಗೆ ಆಧಾರವಾಗಿದೆ. ಹಲವು ವರ್ಗಗಳ ಹಿರಿಯ ನಾಗರಿಕರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತ ಯೋಜನೆಯಡಿ ಪ್ರತಿ ಫಲಾನುಭವಿಗೆ ಮಾಸಿಕ ₹1,200 ಪಿಂಚಣಿ ನೀಡಲಾಗುತ್ತಿದೆ. ಅನೇಕ ವೃದ್ಧರಿಗೆ ಇದೇ ಆದಾಯದ ಪ್ರಮುಖ ಮೂಲವಾಗಿದೆ.

ಇದನ್ನೂ ಓದಿ: Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ

ಸರ್ಕಾರಕ್ಕೆ ಅನುಮಾನ ಮೂಡಿದ್ದೇಕೆ?

ಕಳೆದ ಕೆಲವು ವರ್ಷಗಳಿಂದ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬAದಿತ್ತು. ಆದರೆ ಕೆಲವು ಜಿಲ್ಲೆಗಳಲ್ಲಿ ಫಲಾನುಭವಿಗಳ ದಾಖಲೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗತೊಡಗಿದವು.

ಕೆಲವರು ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಪಿಂಚಣಿ ಮುಂದುವರಿಯುತ್ತಿರುವುದು, ಕೆಲವು ಕಡೆ ನಕಲಿ ದಾಖಲೆಗಳ ಆಧಾರದಲ್ಲಿ ಪಿಂಚಣಿ ಪಡೆಯುತ್ತಿರುವುದು, ಇನ್ನೂ ಕೆಲವು ಪ್ರಕರಣಗಳಲ್ಲಿ ಅರ್ಹತೆಯ ಮಾನದಂಡಗಳನ್ನು ಪೂರೈಸದವರೂ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ (Revenue Department) ಸಮಗ್ರ ಪರಿಶೀಲನೆ ನಡೆಸಲು ನಿರ್ಧರಿಸಿತು. ಯೋಜನೆಯ ನಿಜವಾದ ಫಲಾನುಭವಿಗಳನ್ನು ಗುರುತಿಸುವ ಜೊತೆಗೆ ಸರ್ಕಾರಿ ಹಣ ದುರುಪಯೋಗವಾಗದಂತೆ ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.

ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?

ಮನೆ ಮನೆಗೆ ತೆರಳಿ ಸಮೀಕ್ಷೆ

ಈ ಪರಿಶೀಲನೆ ಕೇವಲ ಕಚೇರಿ ದಾಖಲೆಗಳ ಮಟ್ಟಕ್ಕೆ ಸೀಮಿತವಾಗಿರಲಿಲ್ಲ. ಅಧಿಕಾರಿಗಳು ಹಲವು ಜಿಲ್ಲೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಿದರು.

WhatsApp Group Join Now
Telegram Group Join Now

ಪಿಂಚಣಿದಾರರ ಜಿಪಿಎಸ್ (GPS) ಆಧಾರಿತ ಫೋಟೋಗಳನ್ನು ತೆಗೆದುಕೊಳ್ಳಲಾಯಿತು. ಆಧಾರ್, ಗುರುತಿನ ಚೀಟಿ, ವಯಸ್ಸಿನ ದಾಖಲೆ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಲಾಯಿತು.

ಹಲವೆಡೆ ಸ್ಥಳ ಪರಿಶೀಲನೆ ನಡೆಸಿ ಫಲಾನುಭವಿಗಳ ನೈಜ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲಾಯಿತು. ಈ ಸಮೀಕ್ಷೆಯ ವೇಳೆ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnatakakke Mungaru Pravesha: ಕರ್ನಾಟಕಕ್ಕೆ ಮುಂಗಾರು ಎಂಟ್ರಿ | ಈ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ

Vruddhapya Vethana Raddu
Vruddhapya Vethana Raddu

23.13 ಲಕ್ಷ ಫಲಾನುಭವಿಗಳಲ್ಲಿ 15.99 ಲಕ್ಷ ಪಿಂಚಣಿ ರದ್ದು

ರಾಜ್ಯದಲ್ಲಿ ಒಟ್ಟು 23.13 ಲಕ್ಷ ಮಂದಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ (Pension) ಪಡೆಯುತ್ತಿದ್ದರು. ಇವರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಸುಮಾರು 15.99 ಲಕ್ಷ ಪ್ರಕರಣಗಳಲ್ಲಿ ವಿವಿಧ ರೀತಿಯ ವ್ಯತ್ಯಾಸಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿಗಳ ಹೆಸರಿನಲ್ಲಿ ಪಿಂಚಣಿ ಮುಂದುವರಿದಿರುವುದು, ನಕಲಿ ದಾಖಲೆ ಸಲ್ಲಿಸಿರುವುದು, ತಪ್ಪು ಮಾಹಿತಿ ನೀಡಿರುವುದು ಹಾಗೂ ಅರ್ಹತೆಯ ಮಾನದಂಡಗಳಿಗೆ ಹೊಂದಿಕೆಯಾಗದಿರುವುದು ಪ್ರಮುಖ ಕಾರಣಗಳಾಗಿವೆ. ಈ ಹಿನ್ನೆಲೆಯಲ್ಲಿ ಆ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿ ಮರುಪರಿಶೀಲನೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Revive Failed Dry Borewell: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್‌ವೆಲ್ ಫೇಲ್ ಆಗಿದೆಯೇ? ಇಲ್ಲಿದೆ ಮರುಜೀವ ನೀಡುವ ಸೂತ್ರ!

ಅರ್ಹ ವೃದ್ಧರಿಗೂ ಸಂಕಷ್ಟ

ಆದರೆ ಈ ಪ್ರಕ್ರಿಯೆಯ ಮತ್ತೊಂದು ಮುಖವೂ ಇದೆ. ಪರಿಶೀಲನೆ ನಡೆಯುತ್ತಿರುವ ಕಾರಣ ಕಳೆದ ಮೂರು ತಿಂಗಳಿನಿಂದ ಅನೇಕ ವೃದ್ಧರಿಗೆ ಪಿಂಚಣಿ ಜಮೆಯಾಗಿಲ್ಲ.

ಹಿರಿಯ ನಾಗರಿಕರಲ್ಲಿ ಬಹಳಷ್ಟು ಮಂದಿ ತಮ್ಮ ಔಷಧಿ, ಚಿಕಿತ್ಸೆ, ಆಹಾರ ಹಾಗೂ ದಿನನಿತ್ಯದ ಖರ್ಚುಗಳಿಗೆ ಈ ಮಾಸಾಶನದ ಮೇಲೆಯೇ ಅವಲಂಬಿತರಾಗಿದ್ದಾರೆ. ಪಿಂಚಣಿ ಸ್ಥಗಿತಗೊಂಡ ಕಾರಣ ಹಲವು ಕಡೆ ವೃದ್ಧರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಶೇಷವಾಗಿ ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಸಂಘಟನೆಗಳಿಂದ ವ್ಯಕ್ತವಾಗಿದೆ. ಕೆಲವರು ಸಾಲ ಮಾಡಿ ಜೀವನ ಸಾಗಿಸುತ್ತಿದ್ದರೆ, ಇನ್ನೂ ಕೆಲವರು ಕುಟುಂಬದ ಸದಸ್ಯರ ನೆರವಿಗಾಗಿ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: New BPL Card Income Limit Hike: ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಶುಭಸುದ್ದಿ | ಹೊಸ ರೂಲ್ಸ್ ಜಾರಿಗೆ ಸರ್ಕಾರ ಚಿಂತನೆ

ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ

ಕಂದಾಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈಗಾಗಲೇ ಸುಮಾರು 85.97 ಶೇಕಡಾ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ ಸುಮಾರು 3.20 ಲಕ್ಷ ಫಲಾನುಭವಿಗಳ ಪರಿಶೀಲನೆ ಬಾಕಿಯಿದೆ.

ಉಳಿದ ಪರಿಶೀಲನೆ ಪೂರ್ಣಗೊಂಡ ನಂತರ ಅಂತಿಮ ಅಂಕಿಅAಶಗಳು ಹೊರಬರುವ ಸಾಧ್ಯತೆ ಇದೆ. ಈ ಹಂತದಲ್ಲಿ ತಾತ್ಕಾಲಿಕವಾಗಿ ರದ್ದಾದ ಹಲವಾರು ಪ್ರಕರಣಗಳಲ್ಲಿ ಮರುಪರಿಶೀಲನೆ ನಡೆಯುವ ಸಾಧ್ಯತೆಯೂ ಇದೆ.

ಹೀಗಾಗಿ ಪಿಂಚಣಿ ಸ್ಥಗಿತಗೊಂಡಿರುವ ಎಲ್ಲರೂ ಅನರ್ಹರೆಂದು ಹೇಳಲು ಸಾಧ್ಯವಿಲ್ಲ. ಪರಿಶೀಲನೆ ಪೂರ್ಣಗೊಂಡ ಬಳಿಕ ಅರ್ಹರಿಗೆ ಮತ್ತೆ ಪಿಂಚಣಿ ಮರುಪ್ರಾರಂಭವಾಗಬಹುದು.

ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ

ಬೆಳಗಾವಿಯಲ್ಲಿ ಅತಿ ಹೆಚ್ಚು ಪಿಂಚಣಿ ರದ್ದು

ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಫಲಾನುಭವಿಗಳ ಪಿಂಚಣಿ ರದ್ದಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 1.33 ಲಕ್ಷ ಮಂದಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಇದರ ನಂತರ ಮೈಸೂರು ಜಿಲ್ಲೆಯಲ್ಲಿ 1.06 ಲಕ್ಷ ಮಂದಿ ಪಿಂಚಣಿ ಕಳೆದುಕೊಂಡಿದ್ದಾರೆ.

ಇತರೆ ಹಲವು ಜಿಲ್ಲೆಗಳಲ್ಲಿಯೂ ಸಾವಿರಾರು ಪ್ರಕರಣಗಳು ಪರಿಶೀಲನೆಗೆ ಒಳಗಾಗಿವೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಜಿಲ್ಲಾವಾರು ಸಂಪೂರ್ಣ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: One Family One LPG Connection: ಒಂದು ಕುಟುಂಬಕ್ಕೆ ಒಂದೇ ಗ್ಯಾಸ್ ಸಂಪರ್ಕ | ಜೂನ್ 1ರಿಂದ ಹೊಸ ನಿಯಮ ಜಾರಿ | ಗ್ರಾಹಕರು ತಿಳಿಯಬೇಕಾದ ಸಂಪೂರ್ಣ ಮಾಹಿತಿ

ಪಿಂಚಣಿ ನಿಂತಿದ್ದರೆ ಏನು ಮಾಡಬೇಕು?

ಪಿಂಚಣಿ ಸ್ಥಗಿತಗೊಂಡಿರುವ ಅಥವಾ ರದ್ದಾಗಿರುವ ಅರ್ಹ ಫಲಾನುಭವಿಗಳು ತಮ್ಮ ಸಮೀಪದ ಗ್ರಾಮ ಆಡಳಿತಾಧಿಕಾರಿ, ಗ್ರಾಮ ಪಂಚಾಯಿತಿ ಕಚೇರಿ, ತಹಶೀಲ್ದಾರ್ ಕಚೇರಿ ಅಥವಾ ಸಂಬಂಧಿತ ಕಂದಾಯ ಇಲಾಖೆಯನ್ನು ಸಂಪರ್ಕಿಸಬೇಕು.

ಅಗತ್ಯ ದಾಖಲೆಗಳನ್ನು ಮರುಸಲ್ಲಿಸಿ ತಮ್ಮ ಅರ್ಹತೆಯನ್ನು ದೃಢಪಡಿಸಿಕೊಳ್ಳಬಹುದು. ದಾಖಲೆಗಳು ಸರಿಯಾಗಿದ್ದರೆ ಮರುಪರಿಶೀಲನೆಯ ಬಳಿಕ ಪಿಂಚಣಿ ಪುನಃ ಆರಂಭವಾಗುವ ಸಾಧ್ಯತೆ ಇದೆ. ಹಿರಿಯ ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನೇ ಅವಲಂಬಿಸುವುದು ಸೂಕ್ತ.

Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ


Spread the love
error: Content is protected !!