ಸರ್ಕಾರ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರವನ್ನು (Crop Loss and Crop Insurance Scheme) ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರೈತರ ಜೀವನದಲ್ಲಿ ಪ್ರಕೃತಿ ಯಾವಾಗ ಹೇಗೆ ತಿರುಗಿಬೀಳುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅತಿಯಾದ ಮಳೆ, ಮಳೆ ಕೊರತೆ, ನೆರೆ, ಗಾಳಿಯಿಂದಾಗಿ ಒಂದು ವರ್ಷದ ಶ್ರಮ ಕ್ಷಣಗಳಲ್ಲಿ ನಾಶವಾಗುತ್ತದೆ. ಇಂತಹ ಸಂಕಷ್ಟದ ಸಮಯದಲ್ಲಿ ರೈತರಿಗೆ ನೆರವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಯೋಜನೆಗಳನ್ನು ಜಾರಿಗೊಳಿಸಿವೆ.
Amount Credited to Farmers’ Bank Accounts – ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಓಆರ್ಎಫ್ (ORF) / SDRF ಮಾರ್ಗಸೂಚಿಗಳ ಅಡಿಯಲ್ಲಿ ಬೆಳೆ ಹಾನಿ ಪರಿಹಾರ ಹಾಗೂ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ (PMFBY) ಬೆಳೆ ವಿಮೆ ಪರಿಹಾರವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದೆ.
ಬಹುತೇಕ ರೈತರಿಗೆ ತಮ್ಮ ಖಾತೆಗೆ ಹಣ ಜಮಾ ಆಗಿದೆಯೇ? ಎಷ್ಟು ಮೊತ್ತ ಬಂದಿದೆ? ಎಂಬ ಮಾಹಿತಿ ತಿಳಿಯದೆ ಗೊಂದಲ ಉಂಟಾಗುತ್ತಿದೆ. ಅದಕ್ಕಾಗಿ ಈ ಲೇಖನದಲ್ಲಿ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರದ ನಡುವಿನ ವ್ಯತ್ಯಾಸ, ಪರಿಹಾರದ ಮೊತ್ತ, ಹಾಗೂ ಮೊಬೈಲ್ ಮೂಲಕ ಹಣ ಜಮಾ ವಿವರವನ್ನು ಹೇಗೆ ಪರಿಶೀಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಸರಳವಾಗಿ ವಿವರಿಸಲಾಗಿದೆ.
Crop Loss Compensation Scheme – ಎಂದರೇನು?
ಪ್ರಕೃತಿ ವಿಕೋಪಗಳಿಂದ (ಅತಿಯಾದ ಮಳೆ, ನೆರೆ, ಬರ) ಬೆಳೆ ನಷ್ಟವಾದ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು SDRF/ORF ಮಾರ್ಗಸೂಚಿಗಳಂತೆ ರೈತರಿಗೆ ಪರಿಹಾರ ನೀಡುತ್ತವೆ.
ಈ ಪರಿಹಾರವನ್ನು ಪಡೆಯಲು ಬೆಳೆ ಹಾನಿಯಾದ ತಕ್ಷಣ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (VA) ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಾನಿಯ ಪ್ರಮಾಣ ನಿಗದಿಪಡಿಸಿದ ನಂತರ, ಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
Crop Insurance Scheme – ಎಂದರೇನು?
ಪ್ರಧಾನಮAತ್ರಿ ಫಸಲ್ ಬೀಮಾ ಯೋಜನೆ (PMFBY) ಅಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ಮುಂಚಿತವಾಗಿ ವಿಮೆ ಮಾಡಿಸಬೇಕು. ಪ್ರತಿ ಹಂಗಾಮಿನ ಆರಂಭದಲ್ಲಿ ನಿಗದಿತ ಪ್ರಿಮಿಯಂ ಪಾವತಿ ಕಡ್ಡಾಯ. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಪ್ರತ್ಯೇಕ ವಿಮೆ ಪಾವತಿಸಬೇಕಾಗುತ್ತದೆ.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ವಿಮಾ ಕಂಪನಿಯಿಂದ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾ ಆಗುತ್ತದೆ. ವಿಮೆ ಮಾಡಿಸದೇ ಇದ್ದರೆ, ಈ ಯೋಜನೆಯಡಿ ಪರಿಹಾರ ದೊರೆಯುವುದಿಲ್ಲ ಎಂಬುದನ್ನು ರೈತರು ಗಮನದಲ್ಲಿಟ್ಟುಕೊಳ್ಳಬೇಕು.

Compensation Amount Per Hectare – ಪ್ರತಿ ಹೆಕ್ಟರ್ಗೆ ಎಷ್ಟು ಬೆಳೆ ಹಾನಿ ಪರಿಹಾರ?
ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ, ಪ್ರತೀ ಹೆಕ್ಟೆರ್ಗೆ ಅಂದರೆ ತಲಾ 2.5 ಎಕರೆ ಪ್ರದೇಶಕ್ಕೆ ನೀಡಲಾಗುವ ಪರಿಹಾರದ ಮೊತ್ತ ಈ ಕೆಳಗಿನಂತಿದೆ:
- ಮಳೆಯಾಶ್ರಿತ ಬೆಳೆಗಳಿಗೆ: 17,000 ರೂ.
- ನೀರಾವರಿ ಬೆಳೆಗಳಿಗೆ: 25,500 ರೂ.
- ಬಹುವಾರ್ಷಿಕ ಬೆಳೆಗಳಿಗೆ: 25,500 ರೂ.
ಈ ಮೊತ್ತವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: Aadhar Kaushal Scholarship 2025-26- ಆಧಾರ್ ಕೌಶಲ್ ವಿದ್ಯಾರ್ಥಿವೇತನ | ಈ ವಿದ್ಯಾರ್ಥಿಗಳಿಗೆ 50,000 ರೂ. ಆರ್ಥಿಕ ನೆರವು
Monsoon Compensation Status 2025-26 – 2025-26 ಮುಂಗಾರು ಹಂಗಾಮಿನ ಪರಿಹಾರ ಸ್ಥಿತಿ
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದ ಅತಿಯಾದ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ, ಸರ್ಕಾರವು ಈಗಾಗಲೇ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರ ಹಣವನ್ನು ಹಂತ ಹಂತವಾಗಿ ಜಮಾ ಮಾಡುತ್ತಿದೆ.
ರೈತರು ತಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ಮೊಬೈಲ್ನಲ್ಲೇ ಸುಲಭವಾಗಿ ಪರಿಶೀಲಿಸಬಹುದು. ಎರಡೂ ಯೋಜನೆಗಳ ಪರಿಹಾರದ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ವಿವರವನ್ನು ಮೊಬೈಲ್ ಮೂಲಕ ತಿಳಿಯುವ ವಿಧಾನ ಈ ಕೆಳಗಿನಂತಿದೆ.
Check Crop Loss Compensation- ಬೆಳೆ ಹಾನಿ ಪರಿಹಾರ ವಿವರ ಪರಿಶೀಲಿಸುವ ವಿಧಾನ
ಹಂತ-1: ಕಂದಾಯ ಇಲಾಖೆಯ ಅಧಿಕೃತ Parihara Payment Report ವೆಬ್ಸೈಟ್ಗೆ ಭೇಟಿ ನೀಡಿ.
ಹಂತ-2: ಅಲ್ಲಿ ವರ್ಷ, ಹಂಗಾಮು, ವಿಪತ್ತಿನ ವಿಧ, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ ‘ವರದಿ ಪಡೆಯಿರಿ’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಆಗ ನಿಮ್ಮ ಗ್ರಾಮದಲ್ಲಿ ಯಾರಿಗೆ ಎಷ್ಟು ಪರಿಹಾರ ಜಮಾ ಆಗಿದೆ ಎಂಬ ಸಂಪೂರ್ಣ ಪಟ್ಟಿ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…
Check Crop Insurance Payment Status – ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರ ಚೆಕ್ ಮಾಡುವ ವಿಧಾನ
ಹಂತ-1: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅಧಿಕೃತ samrakshaneಗೆ ಭೇಟಿ ನೀಡಿ.
ಹಂತ-2: ಅಲ್ಲಿ ನೀವು ಪರಿಶೀಲಿಸಬೇಕಾದ ವರ್ಷ ಮತ್ತು ಹಂಗಾಮು ಆಯ್ಕೆ ಮಾಡಿ. ಕೆಳಗೆ ಕಾಣುವ Application Status ಅಥವಾ Check Status ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ-3: ನೀವು ಅರ್ಜಿ ಸಲ್ಲಿಸುವಾಗ ನೀಡಿದ ಮೊಬೈಲ್ ನಂಬರ್ ನಮೂದಿಸಿ. ಕ್ಯಾಪ್ಚಾ ಕೋಡ್ ಹಾಕಿ, Search ಬಟನ್ ಒತ್ತಿದರೆ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ ಮತ್ತು ಹಣ ಜಮಾ ಆಗಿರುವ ವಿವರಗಳನ್ನು ನೋಡಬಹುದು.
ಹಂತ-4: ಈ ಪುಟದ ಕೊನೆಯಲ್ಲಿ ಕಾಣುವ Select ಬಟನ್ ಮೇಲೆ ಕ್ಲಿಕ್ ಮಾಡಿದರೆ UTR Details ಕಾಲಂ ನಲ್ಲಿ ನಿಮಗೆ ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿರುವುದರ ವಿವರವನ್ನು ನೋಡಬಹುದು.
ರೈತರು ಬೆಳೆ ಹಾನಿಯಾದಾಗ ತಕ್ಷಣ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸುವುದು ಹಾಗೂ ಪ್ರತೀ ಹಂಗಾಮಿನ ಆರಂಭದಲ್ಲೇ ಬೆಳೆ ವಿಮೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಇದರಿಂದ ಸಂಕಷ್ಟದ ಸಮಯದಲ್ಲಿ ಸರ್ಕಾರದಿಂದ ದೊರೆಯುವ ನೆರವು ನೇರವಾಗಿ ನಿಮ್ಮ ಕೈ ಸೇರುತ್ತದೆ.
ಈ ಮಾಹಿತಿ ನಿಮಗೂ ಉಪಯುಕ್ತವಾಗಿದೆ ಎಂದರೆ, ದಯವಿಟ್ಟು ಇತರ ರೈತ ಸ್ನೇಹಿತರಿಗೂ ಹಂಚಿಕೊಳ್ಳಿ. ಇಂತಹ ಇನ್ನಷ್ಟು ರೈತೋಪಯೋಗಿ ಮಾಹಿತಿಗಾಗಿ mahitimane.com ಜಾಲತಾಣ ಫಾಲೋ ಮಾಡಿ…