Scholarship for studying abroad – ವಿದೇಶಿ ವ್ಯಾಸಂಗಕ್ಕೆ ವಿದ್ಯಾರ್ಥಿವೇತನ | ಊಟ, ವಸತಿಯೊಂದಿಗೆ ಪ್ರತೀ ತಿಂಗಳೂ 32,000 ರೂ. ನೆರವು

Spread the love

WhatsApp Group Join Now
Telegram Group Join Now

2026-27ನೇ ಸಾಲಿನಲ್ಲಿ ಬ್ರೂನೈ ಸರ್ಕಾರವು ಪ್ರತೀ ತಿಂಗಳು ಸುಮಾರು 32,000 ರೂ. ನೆರವಿನೊಂದಿಗೆ (Scholarship for studying abroad) ವಿದೇಶಿ ವ್ಯಾಸಂಗಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ…

ವಿದೇಶದಲ್ಲಿ ಓದಬೇಕು ಎಂಬ ಕನಸು ಅನೇಕರಿಗೆ ಇದ್ದರೂ, ಆರ್ಥಿಕ ಅಡೆತಡೆಗಳೇ ಬಹುತೇಕ ವಿದ್ಯಾರ್ಥಿಗಳನ್ನು ಹಿಂದೆ ತಳ್ಳುತ್ತವೆ. ಆದರೆ ಇದೀಗ ಭಾರತೀಯ ವಿದ್ಯಾರ್ಥಿಗಳಿಗೆ ಬ್ರೂನೈ ದಾರುಸ್ಸಲಾಮ್ ಸರ್ಕಾರ ಒಂದು ದೊಡ್ಡ ಅವಕಾಶವನ್ನು ನೀಡುತ್ತಿದೆ.

2026-27ನೇ ಶೈಕ್ಷಣಿಕ ಸಾಲಿಗಾಗಿ ‘Brunei Darussalam Scholarship’ ಯೋಜನೆಯಡಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ಸಂಪೂರ್ಣವಾಗಿ ಸರ್ಕಾರಿ ನೆರವಿನಿಂದ ನಡೆಯುವದರಿಂದ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುತೇಕ ಎಲ್ಲ ವೆಚ್ಚಗಳಿಂದ ಮುಕ್ತವಾದ ವಿದೇಶಿ ವ್ಯಾಸಂಗದ ಅವಕಾಶ ಸಿಗಲಿದೆ.

ಇದನ್ನೂ ಓದಿ: Federal Bank Scholarship 2025-26- ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ | ಲ್ಯಾಪ್‌ಟಾಪ್ ಜೊತೆಗೆ ಕಾಲೇಜು ಶುಲ್ಕ ಪಾವತಿಗೆ ಹಣಕಾಸು ನೆರವು

About Brunei Darussalam Scholarship- ಏನಿದು ಬ್ರೂನೈ ದಾರುಸ್ಸಲಾಮ್ ಸ್ಕಾಲರ್‌ಶಿಪ್?

ಬ್ರೂನೈ ಸರ್ಕಾರವು ತನ್ನ ದೇಶದಲ್ಲಿರುವ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆಯನ್ನು ಆರಂಭಿಸಿದೆ.

ಇದರ ಮೂಲಕ ಡಿಪ್ಲೊಮಾ, ಪದವಿ (Undergraduate) ಹಾಗೂ ಸ್ನಾತಕೋತ್ತರ (Postgraduate) ಕೋರ್ಸ್’ಗಳಲ್ಲಿ ವ್ಯಾಸಂಗ ಮಾಡಲು ಅವಕಾಶ ದೊರೆಯುತ್ತದೆ.

ಈ ಸ್ಕಾಲರ್‌ಶಿಪ್ ಹಣಕಾಸಿನ ನೆರವಿನ ಜೊತೆಗೆ ವಿದ್ಯಾರ್ಥಿಗಳಿಗೆ ಸುರಕ್ಷಿತ ವಸತಿ, ಉತ್ತಮ ಆರೋಗ್ಯಸೌಲಭ್ಯ ಮತ್ತು ಜಾಗತಿಕ ಮಟ್ಟದ ಶಿಕ್ಷಣವನ್ನು ಒಟ್ಟಿಗೆ ಒದಗಿಸುವ ಸಮಗ್ರ ಪ್ಯಾಕೇಜ್ ಆಗಿದೆ.

ಇದನ್ನೂ ಓದಿ: Karnataka State Scholarship 2025-26- ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು | SSP ಮೂಲಕ ಈಗಲೇ ಅರ್ಜಿ ಹಾಕಿ…

Scholarship Amount & Facilities- ವಿದ್ಯಾರ್ಥಿವೇತನ ಮೊತ್ತ ಮತ್ತು ಸೌಲಭ್ಯಗಳ ವಿವರ

‘Brunei Darussalam Scholarship’ ಯೋಜನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಳಗಿನ ಸೌಲಭ್ಯಗಳು ಲಭ್ಯವಾಗುತ್ತವೆ:

  • ಸಂಪೂರ್ಣ ಬೋಧನಾ ಶುಲ್ಕ ವಿನಾಯಿತಿ
  • ವಿಮಾನ ಯಾನದ ವೆಚ್ಚ (ಟು & ಫ್ರೊ)
  • ತಿಂಗಳಿಗೆ 500 ಬ್ರೂನೈ ಡಾಲರ್ ಜೀವನೋಪಾಯ ಭತ್ಯೆ (ಭಾರತೀಯ ರೂಪಾಯಿಯಲ್ಲಿ ಅಂದಾಜು 32,000 ರೂ.)
  • ಉಚಿತ ವಸತಿ ಸೌಲಭ್ಯ
  • ಊಟಕ್ಕಾಗಿ ಮಾಸಿಕ ಸುಮಾರು 9,500 ರೂ.ಭತ್ಯೆ
  • ಪುಸ್ತಕ ಮತ್ತು ಅಧ್ಯಯನ ಸಾಮಗ್ರಿಗಳಿಗೆ ವಾರ್ಷಿಕ ಭತ್ಯೆ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ

ಇಷ್ಟೊಂದು ಸೌಲಭ್ಯಗಳು ದೊರಕುವ ಕಾರಣ, ವಿದ್ಯಾರ್ಥಿಗಳು ಹಣಕಾಸಿನ ಚಿಂತೆಯಿಲ್ಲದೆ ಸಂಪೂರ್ಣವಾಗಿ ತಮ್ಮ ಅಧ್ಯಯನದ ಮೇಲೆ ಗಮನಹರಿಸಬಹುದು.

ಇದನ್ನೂ ಓದಿ: January 2026 Bank Holidays – ಜನವರಿಯಲ್ಲಿ ಬರೋಬ್ಬರಿ ಅರ್ಧ ತಿಂಗಳು ಬ್ಯಾಂಕ್ ರಜೆ | ಯಾವೆಲ್ಲಾ ದಿನ ಬ್ಯಾಂಕುಗಳು ಬಂದ್ ಇರಲಿವೆ? ಸಂಪೂರ್ಣ ಪಟ್ಟಿ ಇಲ್ಲಿದೆ…

Brunei Govt Scholarship 2026-27
Brunei Govt Scholarship 2026-27

Age Limit & Eligibility- ವಯೋಮಿತಿ ಮತ್ತು ಅರ್ಹತೆಗಳು

ಕೋರ್ಸ್ಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಡಿಪ್ಲೊಮಾ ಮತ್ತು ಪದವಿ ಕೋರ್ಸ್ಗಳು: 18 ರಿಂದ 25 ವರ್ಷದ ಒಳಗಿರಬೇಕು. ಸ್ನಾತಕೋತ್ತರ ಪದವಿಗೆ (Postgraduate) 35 ವರ್ಷ ಮೀರಿರಬಾರದು.

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ಶೈಕ್ಷಣಿಕ ದಾಖಲಾತಿ (Academic Record) ಹೊಂದಿರಬೇಕು. ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಇರಬೇಕು.

WhatsApp Group Join Now
Telegram Group Join Now

ಅಂತರರಾಷ್ಟ್ರೀಯ ಶಿಕ್ಷಣ ವಾತಾವರಣಕ್ಕೆ ಹೊಂದಿಕೊಳ್ಳುವ ಮನಸ್ಥಿತಿ ಹಾಗೂ ಶಿಸ್ತುಬದ್ಧತೆ ಮತ್ತು ಅಧ್ಯಯನದ ಮೇಲಿನ ಬದ್ಧತೆ ಇದ್ದರೆ ಈ ಸ್ಕಾಲರ್‌ಶಿಪ್ ಮೂಲಕ ವಿದೇಶದಲ್ಲಿ ವ್ಯಾಸಂಗ ಮಡಬಹುದಾಗಿದೆ.

ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…

Why Choose Brunei for Studies?- ಏಕೆ ಬ್ರೂನೈನಲ್ಲಿ ವ್ಯಾಸಂಗ?

ಬ್ರೂನೈ ದಾರುಸ್ಸಲಾಮ್ (Brunei Darussalam) ಆಗ್ನೇಯ ಏಷ್ಯಾದಲ್ಲಿರುವ ಒಂದು ಸಣ್ಣ, ಸಂಪದ್ಭರಿತ ದೇಶ. ಇಲ್ಲಿ ಶಿಕ್ಷಣ ವ್ಯವಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದು, ವಿದ್ಯಾರ್ಥಿಗಳಿಗೆ ಬಹುಸಾಂಸ್ಕೃತಿಕ ಅನುಭವವೂ ಲಭಿಸುತ್ತದೆ.

ಜೊತೆಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ, ಉತ್ತಮ ಮೂಲಸೌಕರ್ಯ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣವು ಬ್ರೂನೈಯನ್ನು ವಿದೇಶಿ ವ್ಯಾಸಂಗಕ್ಕೆ ಅತ್ಯುತ್ತಮ ಗಮ್ಯಸ್ಥಾನವಾಗಿಸಿದೆ.

ಇದನ್ನೂ ಓದಿ: Banking New Rules 2026- ಜನವರಿ 1ರಿಂದ ಬ್ಯಾಂಕುಗಳಿಗೆ ಹೊಸ ನಿಯಮಗಳು ಜಾರಿ | ಸಾಲಗಾರರಿಗೆ ಭಾರೀ ಲಾಭ, ವಂಚನೆಗೆ ಬ್ರೇಕ್!

Don’t Miss This Opportunity- ಈ ಅವಕಾಶ ಸದ್ಭಳಕೆ ಮಾಡಿಕೊಳ್ಳಿ…

ವಿದೇಶಿ ವ್ಯಾಸಂಗ ಎನ್ನುವುದು ಕೇವಲ ವಿದ್ಯಾಭ್ಯಾಸವಲ್ಲ; ಅದು ಜೀವನದ ದಿಕ್ಕನ್ನೇ ಬದಲಾಯಿಸುವ ಹೆದ್ದಾರಿ. ಬ್ರೂನೈ ದಾರುಸ್ಸಲಾಮ್ ಸ್ಕಾಲರ್‌ಶಿಪ್ ಭಾರತೀಯ ವಿದ್ಯಾರ್ಥಿಗಳಿಗೆ ಅಂತಹ ಜಾಗತಿಕ ಅವಕಾಶದ ಬಾಗಿಲು ತೆರೆದಿದೆ.

ನಿಮ್ಮಲ್ಲಿ ನಿಜವಾಗಿಯೂ ಶೈಕ್ಷಣಿಕ ಸಾಮರ್ಥ್ಯ, ಆಸಕ್ತಿ ಮತ್ತು ಕನಸುಗಳಿದ್ದರೆ ಈ ವಿದ್ಯಾರ್ಥಿವೇತನ ನಿಮ್ಮ ಭವಿಷ್ಯಕ್ಕೆ ಒಂದು ದೊಡ್ಡ ಮೆಟ್ಟಿಲಾಗಬಹುದು. ಕೂಡಲೇ ಅರ್ಜಿ ಸಲ್ಲಿಸಿ, ಈ ಅವಕಾಶ ಸದ್ಭಳಕೆ ಮಾಡಿಕೊಳ್ಳಿ…

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15-02-2026

  • ಅರ್ಜಿ ಲಿಂಕ್: Apply Now
  • ಅಧಿಕೃತ ವೆಬ್‌ಸೈಟ್: mfa.gov.bn

Spread the love
error: Content is protected !!