ಜನವರಿಯಲ್ಲಿ ಅರ್ಧ ತಿಂಗಳು ಬ್ಯಾಂಕ್ ರಜೆ (January 2026 Bank Holidays) ಇರಲಿದ್ದು; 2026ರ ಜನವರಿಯಲ್ಲಿ ಬ್ಯಾಂಕ್ ಕೆಲಸಕ್ಕೂ ಮುನ್ನ ಈ ಮಾಹಿತಿಯನ್ನು ತಪ್ಪದೇ ಓದಿ..
2026ರ ಮೊದಲ ತಿಂಗಳು ಜನವರಿಯಲ್ಲಿ ದೇಶಾದ್ಯಂತ ಬರೋಬ್ಬರಿ 16 ದಿನಗಳವರೆಗೆ ಬ್ಯಾಂಕ್ ರಜೆ ಇರುವುದರಿಂದ, ಬ್ಯಾಂಕ್ ಸಂಬAಧಿತ ಕೆಲಸಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವುದು ಉತ್ತಮ.
ವಿಶೇಷವಾಗಿ ಕರ್ನಾಟಕದ ಜನತೆ ಹಾಗೂ ಇತರೆ ರಾಜ್ಯಗಳಿಗೆ ಪ್ರಯಾಣ ಮಾಡುವವರು ಅಥವಾ ಅಲ್ಲಿ ಬ್ಯಾಂಕ್ ವ್ಯವಹಾರಗಳಿರುವವರು ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು.
ಇದನ್ನೂ ಓದಿ: 2026 Varshika Bhavishya- 2026ರ ವಾರ್ಷಿಕ ಭವಿಷ್ಯ | ಈ ವರ್ಷ ಯಾರಿಗೆ ಶುಭ? ಯಾರಿಗೆ ಸವಾಲು?
Karnataka Bank Holidays List – ಕರ್ನಾಟಕದಲ್ಲಿನ ಬ್ಯಾಂಕ್ ರಜೆಗಳ ವಿವರ
ಕರ್ನಾಟಕದಲ್ಲಿ ಜನವರಿ ತಿಂಗಳಲ್ಲಿ ಒಟ್ಟು 8 ದಿನಗಳು ಬ್ಯಾಂಕ್ ರಜೆ ಇರಲಿವೆ. ಇದರಲ್ಲಿ ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರಗಳ ವಾರದ ರಜೆಗಳ ಜೊತೆಗೆ ಸಂಕ್ರಾಂತಿ ಹಾಗೂ ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳೂ ಸೇರಿವೆ. ಕರ್ನಾಟಕದ ಬ್ಯಾಂಕ್ ರಜೆಗಳ ಪಟ್ಟಿ ಹೀಗಿದೆ:
- ಜನವರಿ 4: ಭಾನುವಾರ ವಾರದ ರಜೆ
- ಜನವರಿ 10: ಎರಡನೇ ಶನಿವಾರ
- ಜನವರಿ 11: ಭಾನುವಾರ ವಾರದ ರಜೆ
- ಜನವರಿ 15: ಮಕರ ಸಂಕ್ರಾಂತಿ
- ಜನವರಿ 18: ಭಾನುವಾರ ವಾರದ ರಜೆ
- ಜನವರಿ 24: ಶನಿವಾರ ನಾಲ್ಕನೇ ಶನಿವಾರ
- ಜನವರಿ 25: ಭಾನುವಾರ ವಾರದ ರಜೆ
- ಜನವರಿ 26: ಗಣರಾಜ್ಯೋತ್ಸವ
ಈ ಎಂಟು ದಿನಗಳಲ್ಲಿ ಕರ್ನಾಟಕದ ಎಲ್ಲಾ ಸಾರ್ವಜನಿಕ ವಲಯ, ಖಾಸಗಿ ಬ್ಯಾಂಕ್ಗಳು ಸಂಪೂರ್ಣ ಬಂದ್ ಆಗಿರುತ್ತವೆ.
ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…
16 Days of Bank Holidays Across States – ದೇಶದ ಇತರೆ ರಾಜ್ಯಗಳಲ್ಲಿ 16 ದಿನ ಬ್ಯಾಂಕ್ ರಜೆ!
ಜನವರಿ 2026ರಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಹಬ್ಬಗಳು, ಜಯಂತಿಗಳು ಮತ್ತು ಹೊಸ ವರ್ಷದ ಆಚರಣೆಗಳ ಹಿನ್ನೆಲೆ ಬ್ಯಾಂಕ್ ರಜೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ.
ನೀವು ತಮಿಳುನಾಡು, ಕೇರಳ, ಈಶಾನ್ಯ ರಾಜ್ಯಗಳು, ಗುಜರಾತ್ ಅಥವಾ ಅಸ್ಸಾಂ ಕಡೆ ಪ್ರಯಾಣಿಸುವ ಯೋಜನೆ ಮಾಡುತ್ತಿದ್ದರೆ, ಅಲ್ಲಿ ಬ್ಯಾಂಕ್ಗಳು ಸತತವಾಗಿ ಬಂದ್ ಇರುವ ದಿನಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

All-India Bank Holidays List – ದೇಶವ್ಯಾಪಿ ಬ್ಯಾಂಕ್ ರಜೆಗಳ ವಿವರ
- ಜನವರಿ 1: ಹೊಸ ವರ್ಷ (ತಮಿಳುನಾಡು, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು)
- ಜನವರಿ 2: ಹೊಸ ವರ್ಷ / ಮನ್ನಂ ಜಯಂತಿ (ಕೇರಳ, ಮಿಝೋರಾಮ್)
- ಜನವರಿ 3: ಹಜ್ರತ್ ಅಲಿ ಜಯಂತಿ (ತಮಿಳುನಾಡು, ಬಂಗಾಳ, ಉತ್ತರ ಪ್ರದೇಶ, ಮಿಝೋರಾಮ್)
- ಜನವರಿ 4: ಭಾನುವಾರ ಸಾರ್ವತ್ರಿಕ ರಜೆ
- ಜನವರಿ 10: ಎರಡನೇ ಶನಿವಾರ
- ಜನವರಿ 11: ಭಾನುವಾರ ಸಾರ್ವತ್ರಿಕ ರಜೆ
- ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ (ಉತ್ತರ ಪ್ರದೇಶ)
- ಜನವರಿ 14: ಮಕರ ಸಂಕ್ರಾಂತಿ / ಬಿಹು ಮಾಘ (ಗುಜರಾತ್, ಒಡಿಶಾ, ಅಸ್ಸಾಂ)
- ಜನವರಿ 15: ಮಕರ ಸಂಕ್ರಾಂತಿ (ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಸಿಕ್ಕಿಂ)
- ಜನವರಿ 16: ತಿರುವಳ್ಳುವರ್ ದಿನ (ತಮಿಳುನಾಡು)
- ಜನವರಿ 17: ಉಳವರ್ ತಿರುನಾಳ್ (ತಮಿಳುನಾಡು)
- ಜನವರಿ 18: ಭಾನುವಾರ ಸಾರ್ವತ್ರಿಕ ರಜೆ
- ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ / ಸರಸ್ವತಿ ಪೂಜೆ (ತ್ರಿಪುರ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು)
- ಜನವರಿ 24: ನಾಲ್ಕನೇ ಶನಿವಾರ
- ಜನವರಿ 25: ಭಾನುವಾರ ಸಾರ್ವತ್ರಿಕ ರಜೆ
- ಜನವರಿ 26: ಗಣರಾಜ್ಯೋತ್ಸವ (ದೇಶಾದ್ಯಂತ)
ಈ ಮೂಲಕ ಜನವರಿಯಲ್ಲಿ ಕೆಲವು ರಾಜ್ಯಗಳಲ್ಲಿ ಅರ್ಧ ತಿಂಗಳಷ್ಟು ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳುತ್ತವೆ.
ಇದನ್ನೂ ಓದಿ: Gold Silver Price Increase- ಸಂಕ್ರಾಂತಿ ನಂತರ ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ | ಮುಗಿಬಿದ್ದ ಖರೀದಿದಾರರು
Bank Services Available on Holidays – ಬ್ಯಾಂಕ್ ರಜೆ ಇದ್ದರೂ ಈ ಸೇವೆಗಳು ಲಭ್ಯ
ಬ್ಯಾಂಕ್ ಶಾಖೆಗಳು ಬಂದ್ ಇದ್ದರೂ ATM ಸೇವೆಗಳು, UPI / PhonePe / Google Pay, ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಯಥಾಪ್ರಕಾರ ಚಾಲ್ತಿಯಲ್ಲಿರುತ್ತವೆ.
ಆದರೆ ಚೆಕ್ ಕ್ಲಿಯರೆನ್ಸ್, ಡ್ರಾಫ್ಟ್, ಲೋನ್ ಪ್ರಕ್ರಿಯೆ, ನಗದು ಜಮಾ, ನಗದು ತೆಗೆದು ತೆಗೆದುಳ್ಳುವ ಕೆಲಸಗಳು ಸಾಧ್ಯವಿರುವುದಿಲ್ಲ. ಈ ಕೆಲಸಗಳನ್ನು ಬಾಂಕ್ ರಜೆ ಪಟ್ಟಿಯನ್ನು ಗಮನಿಸಿ ಹಿಂದಿನ ದಿನವೇ ಮಾಡಿಕೊಳ್ಳುವುದು ಉತ್ತಮ.
Important Banking Tips for Customers – ಉಪಯುಕ್ತ ಸಲಹೆ
ದೊಡ್ಡ ಮೊತ್ತದ ಹಣಕಾಸು ವ್ಯವಹಾರಗಳಿದ್ದರೆ ಮುಂಚಿತವಾಗಿ ಬ್ಯಾಂಕ್ಗೆ ಭೇಟಿ ನೀಡಿ. ಸಂಬಳ, ಪಿಂಚಣಿ, ಸಬ್ಸಿಡಿ ಹಣಗಳ ಜಮಾ ದಿನಾಂಕಗಳನ್ನು ಗಮನಿಸಿ. ಹೊರ ರಾಜ್ಯಗಳಿಗೆ ಹೋಗುವ ಮುನ್ನ ಅಲ್ಲಿನ ಸ್ಥಳೀಯ ಬ್ಯಾಂಕ್ ರಜೆ ಪಟ್ಟಿಯನ್ನು ಪರಿಶೀಲಿಸಿ.
ಜನವರಿ 2026ರಲ್ಲಿ ಬ್ಯಾಂಕ್ ರಜೆಗಳು ಹೆಚ್ಚಿರುವುದರಿಂದ, ಸ್ವಲ್ಪ ಅಲಕ್ಷ್ಯವಾದರೂ ನಿಮ್ಮ ದಿನನಿತ್ಯದ ಕೆಲಸಗಳಿಗೆ ಅಡ್ಡಿಯಾಗಬಹುದು. ಆದ್ದರಿಂದ ಈ ರಜೆಗಳ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಬ್ಯಾಂಕ್ ವ್ಯವಹಾರಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳುವುದು ಉತ್ತಮ.