ರಾಜ್ಯಾದ್ಯಂತ ಇ-ಸ್ವತ್ತು ಅಭಿಯಾನ ಆರಂಭವಾಗಿದ್ದು; ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಸಹಾಯವಾಗಲು ಜಿಲ್ಲಾ ಸಹಾಯವಾಣಿಗಳನ್ನು (E-Swathu Helpline Numbers) ಆರಂಭಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ಅಧಿಕೃತ ದಾಖಲೆಗಳನ್ನು ಒದಗಿಸುವ ಹಿನ್ನಲೆಯಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಇ-ಸ್ವತ್ತು’ ಅಭಿಯಾನವನ್ನು ರಾಜ್ಯಾದ್ಯಂತ ಜಾರಿಗೊಳಿಸಿದೆ. ಈ ಅಭಿಯಾನದ ಮೂಲಕ ತಮ್ಮ ಮನೆ, ಜಮೀನು, ಕಟ್ಟಡ ಹಾಗೂ ಇತರೆ ಆಸ್ತಿ ವಿವರಗಳನ್ನು ಸರ್ಕಾರದ ಅಧಿಕೃತ ಪೋರ್ಟಲ್‌ನಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: SBI Bengaluru Recruitment 2025- ಬೆಂಗಳೂರು ಎಸ್‌ಬಿಐ ನೇಮಕಾತಿ | 104 ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ
ಯೋಜನೆಯ ಉದ್ದೇಶ
ಆಸ್ತಿ ದಾಖಲೆಗಳಲ್ಲಿ ಪಾರದರ್ಶಕತೆ, ಆಸ್ತಿ ಮಾಲೀಕತ್ವ ಸಂಬಂಧಿತ ಗೊಂದಲಗಳಿಗೆ ಪರಿಹಾರ, ಭವಿಷ್ಯದಲ್ಲಿ ಜಮೀನು-ಮನೆ ಖರೀದಿ/ಮಾರಾಟಕ್ಕೆ ಸುಲಭಗೊಳಿಸಲು, ಭ್ರಷ್ಟಾಚಾರ ಮತ್ತು ನಕಲಿ ದಾಖಲೆಗಳಿಗೆ ಕಡಿವಾಣ ಹಾಗೂ ನಾಗರಿಕರಿಗೆ ಸರಳ ಮತ್ತು ಸುರಕ್ಷಿತ ದಾಖಲೆ ನಿರ್ವಹಣೆಗಾಗಿ ‘ಇ-ಸ್ವತ್ತು 2.0’ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ಕಳೆದ ಡಿಸೆಂಬರ್ 1ರಿಂದ ‘ಇ-ಸ್ವತ್ತು 2.0’ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದ್ದು; ಅಂದಿನಿಂದಲೇ ‘ಇ-ಸ್ವತ್ತು’ ಅಭಿಯಾನ ಆರಂಭವಾಗಿದೆ. ನಾಗರಿಕರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ eswathu.karnataka.gov.in ವೆಬ್‌ಸೈಟ್ ಲಾಗಿನ್ ಆಗಿ ಅರ್ಜಿ ಹಾಕಲು ಅವಕಾಶವಿದೆ.
ರಾಜ್ಯವ್ಯಾಪಿ ಸಹಾಯವಾಣಿ ಆರಂಭ
ಇ-ಸ್ವತ್ತು ಅರ್ಜಿ ವಿಧಾನ, ಅರ್ಜಿ ಪ್ರಕ್ರಿಯೆ ಇತ್ಯಾದಿ ವಿವರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗಲೆಂದು ರಾಜ್ಯವ್ಯಾಪಿ ಸಹಾಯವಾಣಿಗಳನ್ನು ಕೂಡ ಆರಂಭಿಸಿದೆ.
ಇ-ಸ್ವತ್ತು ಕುರಿತಾಗಿ ಯಾವುದೇ ದೂರು, ಸಂದೇಹ ಅಥವಾ ತಾಂತ್ರಿಕ ತೊಂದರೆ ಎದುರಾದರೂ, ಈಗ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ನೇರವಾಗಿ ಸಂಪರ್ಕಿಸಿ ತಮ್ಮ ಗೊಂದಲಗಳಿಗೆ ಪರಿಹಾರ ಪಡೆಯಬಹುದು.

ಆನ್‌ಲೈನ್ ಅರ್ಜಿ ಹೇಗೆ ಸಲ್ಲಿಸುವುದು?
ನಿಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿದ್ದು; ಇ-ಸ್ವತ್ತು 2.0 ಅಧಿಕೃತ ಪೋರ್ಟಲ್ eswathu.karnataka.gov.inಗೆ ಭೇಟಿ ನೀಡಿ. ನಿಮ್ಮ ಮೊಬೈಲ್ OTP ಅಥವಾ ಇತರೆ ಮಾನ್ಯ ದಾಖಲೆಗಳ ಮೂಲಕ ಲಾಗಿನ್ ಆಗಿ.
ನಿಮ್ಮ ಮನೆ, ಜಮೀನು, ಆಸ್ತಿ ವಿವರಗಳನ್ನು ಚಿತ್ರ ಸಹಿತ ಸರಿಯಾಗಿ ತುಂಬಿ. ಆಯಾ ಆಸ್ತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ‘Submit’ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಇದನ್ನೂ ಓದಿ: Women Free Sewing Machine- ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ | ಮಹಿಳೆಯರಿಗೆ ಸುವರ್ಣಾವಕಾಶ
ಇ-ಸ್ವತ್ತು ಜಿಲ್ಲಾ ಸಹಾಯವಾಣಿ ಸಂಖ್ಯೆಗಳು
- ಬೆಂಗಳೂರು ನಗರ: 080-26710580
- ಬೆಂಗಳೂರು ಗ್ರಾಮಾಂತರ: 080-29781057
- ಬೆಂಗಳೂರು ದಕ್ಷಿಣ: 080-27276714
- ಬೆಳಗಾವಿ: 91870-82089
- ಬಳ್ಳಾರಿ: 08392-267453
- ಬಾಗಲಕೋಟೆ: 08354-200180
- ಬೀದರ್: 08482-231494
- ಗದಗ: 08372-234364
- ಧಾರವಾಡ: 0836-2448481
- ದಕ್ಷಿಣ ಕನ್ನಡ – 0824-2451036
- ದಾವಣಗೆರೆ: 8192261825
- ಚಿತ್ರದುರ್ಗ: 1800-425-1978
- ಚಿಕ್ಕಮಗಳೂರು: 94805-28888
- ಚಿಕ್ಕಬಳ್ಳಾಪುರ: 08156-277016
- ಚಾಮರಾಜನಗರ: 08226-224015
- ಕಲಬುರಗಿ: 08472-229399
- ಹಾವೇರಿ: 08375-249033
- ಕೊಡಗು: 08272-228901
- ಹಾಸನ: 08172-268339
- ಕೊಲಾರ: 08152-299956
- ವಿಜಯಪುರ: 9972218378
- ಯಾದಗಿರಿ: 08473-253758
- ವಿಜಯನಗರ: 9480837823
- ತುಮಕೂರು: 08162-278429
- ಉಡುಪಿ: 0820-2574935
- ಉತ್ತರ ಕನ್ನಡ: 08277-237100
- ರಾಯಚೂರು: 08532-230539
- ಕೊಪ್ಪಳ: 08539-221207
- ಶಿವಮೊಗ್ಗ: 08182-267243
- ಮಂಡ್ಯ: 9480872005
- ಮೈಸೂರು: 0821-2526344
ಇದನ್ನೂ ಓದಿ: Anganwadi Recruitment 2025- ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳು | 571 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಿಮ್ಮ ಆಸ್ತಿ ದಾಖಲೆಗಳು ನಿಖರವಾಗಿ ಸರ್ಕಾರದ ಡಿಜಿಟಲ್ ವ್ಯವಸ್ಥೆಯಲ್ಲಿ ಸಂರಕ್ಷಿತವಾಗಿರುವುದು ಭವಿಷ್ಯಕ್ಕೆ ಮಹತ್ತರ ಸುರಕ್ಷತೆ ನೀಡುತ್ತದೆ. ಆದ್ದರಿಂದ, ಈ ಅಭಿಯಾನವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿಯೊಬ್ಬರೂ ಅವಶ್ಯವಾಗಿ ಉಪಯೋಗಿಸಿಕೊಳ್ಳಬೇಕಿದೆ.
- ಆನ್‌ಲೈನ್ ಅರ್ಜಿ ಲಿಂಕ್: Apply Now
- ಅಧಿಕೃತ ವೆಬ್‌ಸೈಟ್ ಲಿಂಕ್: Click Here
Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ