Ditva Cyclone Karnataka Weather- ದಿತ್ವಾ ಚಂಡಮಾರುತ ಉಲ್ಭಣ | ಕರ್ನಾಟಕದ ಈ ಜಿಲ್ಲೆಗಳಲ್ಲಿ ಚಳಿ-ಮಳೆ ಬಿರುಸು

Spread the love

WhatsApp Group Join Now
Telegram Group Join Now

ದಿತ್ವಾ ಚಂಡಮಾರುತ ಉಲ್ಭಣಗೊಂಡ ಪರಿಣಾಮ (Ditva Cyclone Karnataka Weather) ಕರ್ನಾಟಕದಲ್ಲಿ ಮಳೆಯೂ, ಚಳಿಯೂ ಬಿರುಸುಗೊಂಡಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿ ಇಲ್ಲಿದೆ…

ಶ್ರೀಲಂಕಾದ ಕರಾವಳಿಯನ್ನು ದಾಟಿ ಒಳನಾಡಿನತ್ತ ವೇಗವಾಗಿ ಚಲಿಸುತ್ತಿರುವ ದಿತ್ವಾ ಚಂಡಮಾರುತ ಈಗ ದಕ್ಷಿಣ ಭಾರತದ ಹವಾಮಾನದಲ್ಲಿ ದೊಡ್ಡ ಮಟ್ಟದ ಏರುಪೇರು ಉಂಟುಮಾಡಿದೆ. ಗಾಳಿಯ ದಿಕ್ಕು ಬದಲಾಗುತ್ತಿರುವ ಪರಿಣಾಮವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಂಪು ಗಾಳಿ ಮತ್ತು ಮೋಡ ಕವಿದ ವಾತಾವರಣ ಕಾಣಿಸುತ್ತಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಬೆಳಗಿನ ಜಾವ ತುಂಬಾ ಚಳಿಗಾಳಿ ಬೀಸುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಅಂದಾಜಿನ ಪ್ರಕಾರ, ಈ ಸ್ಥಿತಿ ಮುಂದಿನ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ.

ಇದನ್ನೂ ಓದಿ: Karnataka Labour Welfare Scholarship- ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ತಾಪಮಾನದಲ್ಲಿ ಭಾರೀ ಕುಸಿತ

ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ತಾಪಮಾನ ಭಾರೀ ಕುಸಿತಗೊಂಡಿದೆ. ವಿಜಯಪುರ ಮತ್ತು ಬೀದರ್ ಜಿಲ್ಲೆಗಳು ನಿನ್ನೆ (ನವೆಂಬರ್ 29) 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಳಗಾವಿ, ಧಾರವಾಡ, ಗದಗ, ಚಿತ್ರದುರ್ಗ, ರಾಯಚೂರು, ಗಂಗಾವತಿ, ಉತ್ತರ ಕನ್ನಡ, ಮೈಸೂರು ಮೊದಲಾದ ಜಿಲ್ಲೆಗಳಲ್ಲಿ ಸಹ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಸರಾಸರಿ 2-3 ಡಿಗ್ರಿ ಕುಸಿದಿದೆ.

ಇದನ್ನೂ ಓದಿ: KMF Maize Direct Purchase- ಕೆಎಂಎಫ್‌ನಿಂದ ಮೆಕ್ಕೆಜೋಳ ನೇರ ಖರೀದಿ ಆರಂಭ | ಕ್ವಿಂಟಾಲ್‌ಗೆ ₹2,400 ಬೆಲೆ ನಿಗದಿ

ದಿತ್ವಾ ಚಂಡಮಾರುತ ಉಲ್ಭಣಗೊಂಡ ಪರಿಣಾಮ ಕರ್ನಾಟಕದಲ್ಲಿ ಮಳೆಯೂ, ಚಳಿಯೂ ಬಿರುಸುಗೊಂಡಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿ ಇಲ್ಲಿದೆ...
Ditva Cyclone Karnataka Weather
ಮುಂದಿನ ನಾಲ್ಕು ದಿನ ಮಳೆ

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸಕ್ರಿಯವಾಗಿರುವುದರಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಹೆಚ್ಚಿದೆ. ಈ ವ್ಯವಸ್ಥೆಯ ಪರಿಣಾಮ ಕರ್ನಾಟಕಕ್ಕೆ ಸಹ ತಲುಪಲಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೊಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು- ಈ ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೆ ಮೋಡ ಕವಿದ ಆಕಾಶ ಮತ್ತು ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಅವರ ಪ್ರಕಾರ, ‘ದಕ್ಷಿಣ ಕರ್ನಾಟಕದಲ್ಲಿ ಮಳೆ ಚಟುವಟಿಕೆ ಗೋಚರಿಸಲಿದೆ. ಚಂಡಮಾರುತದ ಗಾಳಿ ಮತ್ತು ತೇವಾಂಶ ಮಿಶ್ರಣದಿಂದ ವಾತಾವರಣ ಮಬ್ಬುಗೊಂಡಿರುವುದು ಸಾಮಾನ್ಯ’

ಇದನ್ನೂ ಓದಿ: Karnataka Crop Loss Compensation- ಬೆಳೆ ನಷ್ಟಕ್ಕೆ ಹೆಚ್ಚುವರಿ ಪರಿಹಾರ | ಇಂದು ರೈತರ ಬ್ಯಾಂಕ್ ಖಾತೆಗೆ ಜಮೆ | ಯಾರಿಗೆ ಎಷ್ಟು ಹಣ ಸಿಗಲಿದೆ?

ನಾಳೆಯಿಂದ ಉತ್ತರ ಕರ್ನಾಟಕದಲ್ಲಿ ಭಾರೀ ಥಂಡಿ

ಡಿಸೆಂಬರ್ 1ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಚಳಿ ಸ್ಪಷ್ಟವಾಗಿ ಹೆಚ್ಚಾಗಲಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಯಾದಗಿರಿ, ಬೆಳಗಾವಿ ಜಿಲ್ಲೆಗಳು ತೀವ್ರ ಚಳಿಯನ್ನು ಅನುಭವಿಸಲಿವೆ.

ಹವಾಮಾನ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ಹೇಳಿದಂತೆ, ಉತ್ತರದ ದಿಕ್ಕಿನಿಂದ ಬರುವ ಒಣ ಮತ್ತು ತಂಪು ಗಾಳಿಯಿಂದ ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಹೆಚ್ಚಾಗುವುದು ಸಹಜ. ಬೆಳಗಿನ ಜಾವ ಮತ್ತಷ್ಟು ತಂಪಾಗಲಿದೆ.

ಆಂಧ್ರಪ್ರದೇಶಕ್ಕೆ ನಾಲ್ಕು ದಿನ ಭಾರಿ ಮಳೆ ಎಚ್ಚರಿಕೆ

ಚಂಡಮಾರುತದ ನೇರ ಪರಿಣಾಮ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿದೆ. ಹವಾಮಾನ ಇಲಾಖೆ ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ತಿರುಪತಿ, ಚಿತ್ತೂರು, ಪ್ರಕಾಶಂ, ನೆಲ್ಲೂರು, ಕಡಪ, ಅನ್ನಮಯ್ಯ ಜಿಲ್ಲೆಗಳಿಗೆ ಭಾರಿ ಮಳೆಯ ಅಲರ್ಟ್ ನೀಡಿದೆ.

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

WhatsApp Group Join Now
Telegram Group Join Now


Spread the love
error: Content is protected !!