ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಕೋ-ಅಪರೇಟಿವ್ ಬ್ಯಾಂಕ್ (Gruhalakshmi Multipurpose Cooperative Society Loan) ಸ್ಥಾಪನೆ ಮಾಡಿದ್ದು; ಮಹಿಳೆಯರಿಗೆ 3 ಲಕ್ಷ ರೂ. ವರೆಗೆ ಕನಿಷ್ಠ ಬಡ್ಡಿದರದಲ್ಲಿ ಸಾಲ ನೀಡಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದೆ. ‘ಗೃಹಲಕ್ಷ್ಮಿ ಯೋಜನೆ’, ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಹಾಗೂ ಈಚೆಗೆ ಮಹಿಳೆಯರ ರಕ್ಷಣೆಗಾಗಿ ‘ಅಕ್ಕ ಪಡೆ’ ಅನುಷ್ಠಾನಗೊಳಿಸಿರುವ ಸರ್ಕಾರ ಇದೀಗ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಗೃಹಲಕ್ಷ್ಮಿ ಕೋ-ಅಪರೇಟಿವ್ ಬ್ಯಾಂಕಿಗೆ ಚಾಲನೆ ನೀಡಿದೆ.
ಹೌದು, ಇದೇ ನವೆಂಬರ್ ನವೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ವಿವಿಧೋದ್ಧೇಶ ಸಹಕಾರ ಸಂಘಕ್ಕೆ (Gruhalakshmi Multipurpose Cooperative Society) ಅಧಿಕೃತ ಚಾಲನೆ ಸಿಗಲಿದೆ. ಆ ಮೂಲಕ ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿದರಲ್ಲಿ 3 ಲಕ್ಷ ರೂ. ವರೆಗೆ ಸಾಲ ದೊರೆಯಲಿದೆ.
ಇದನ್ನೂ ಓದಿ: Nyaya Bele Angadi Application- ಸರ್ಕಾರಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…
ಸಹಕಾರ ಇಲಾಖೆಯಿಂದ ನೋಂದಣಿ ಪತ್ರ
ಮಹಿಳಾ ಮತ್ತು ಮಕ್ಕಳ ಅಭವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Laxmi Hebbalkar) ಅವರು ನಿನ್ನೆ (ನವೆಂಬರ್ 11) ವಿಧಾನಸೌಧದಲ್ಲಿ ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕರಾದ ಲಕ್ಷ್ಮೀಪತಯ್ಯ ಅವರಿಂದ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ನೋಂದಾಯಿತ ಪ್ರಮಾಣ ಪತ್ರವನ್ನು ಸ್ವೀಕರಿಸಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಖಾಸಗಿ ಫೈನಾನ್ಸ್, ನ್ಯಾಷನಲ್ ಬ್ಯಾಂಕ್‌ಗಳಲ್ಲಿ ದುಬಾರಿ ಬಡ್ಡಿಗೆ ಸಾಲ ಪಡೆದು ಮಹಿಳೆಯರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಗೃಹಲಕ್ಷ್ಮೀ ಹಣದಿಂದಲೇ ಬ್ಯಾಂಕ್ ಆರಂಭಿಸಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಾಲದ ಸೌಲಭ್ಯ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಸಚಿವರು ತಿಳಿಸಿದ್ದಾರೆ.

3 ಲಕ್ಷ ರೂ. ವರೆಗೆ ಸಾಲ
ರಾಜ್ಯದಲ್ಲಿ ಸುಮಾರು 1 ಕೋಟಿ 24 ಲಕ್ಷ 12 ಸಾವಿರ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದುವರೆಗೂ 52,416 ಕೋಟಿಗೂ ಅಧಿಕ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮತ್ತೊಂದು ರೀತಿಯಲ್ಲಿ ತೊಡಗಿಸಿ ಆದಾಯ ಒದಗಿಸುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುತ್ತಿದೆ.
ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿ ವರೆಗೂ ಫಲಾನುಭವಿಗಳಿಗೆ ಸಾಲ ನೀಡಲಾಗುವುದು. ಇದರಿಂದ ಮಹಿಳೆಯರಿಗೆ ಮತ್ತಷ್ಟು ಆರ್ಥಿಕ ಶಕ್ತಿ ತುಂಬಿದAತಾಗುತ್ತದೆ. ಮಹಿಳೆಯರ ಸುರಕ್ಷತೆ ಹಾಗೂ ಆರ್ಥಿಕವಾಗಿ ಸ್ವಾವಲಂಬನೆ ನಮ್ಮ ಸರ್ಕಾರದ ಮುಖ್ಯ ಗುರಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
‘ಗೃಹಲಕ್ಷ್ಮಿ ಸಂಘ’ಗಳ ರಚನೆ
ರಾಜ್ಯದಲ್ಲಿ ಕನಿಷ್ಟ 4ರಿಂದ ಗರಿಷ್ಠ 10 ಮಹಿಳೆಯರು ಸದಸ್ಯರನ್ನಾಗಿಸಿಕಂಡು ಗೃಹಲಕ್ಷ್ಮಿ ಸಂಘಗಳನ್ನು ಸ್ಥಾಪಿಸಲಾಗುತ್ತದೆ. ಈ ಸದಸ್ಯೆಯರು ತಮಗೆ ಪ್ರತಿ ತಿಂಗಳು ಬರುವ 2,000 ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ.
ಸಂಘದ ಒಟ್ಟು ಹೂಡಿಕೆಯನ್ನು ಆಧಾರವನ್ನಾಗಿ ಮಾಡಿಕೊಂಡು ಬ್ಯಾಂಕಿನಿಂದ 3 ರೂ. ಲಕ್ಷದ ವರೆಗೆ ಸಾಲ ಸಿಗುತ್ತದೆ. ಉದಾಹರಣೆಗೆ, 10 ಮಂದಿ ಸದಸ್ಯರ ಒಂದು ಸಂಘ ವಾರ್ಷಿಕ 2.4 ಲಕ್ಷ ರೂ. ಹಣವನ್ನು ಜಮೆ ಮಾಡಬಹುದು. ಇದರ ಆಧಾರದಿಂದಲೇ ಬ್ಯಾಂಕ್ ತಂಡಕ್ಕೆ 3 ಲಕ್ಷ ರೂ. ವರೆಗೆ ಸಾಲ ನೀಡಲಿದೆ.
ಇದನ್ನೂ ಓದಿ: E-Swasthu Andolana- ಇ-ಸ್ವತ್ತು ಆಂದೋಲನ | ಗ್ರಾಮ ಪಂಚಾಯತಿ ವ್ಯಾಪ್ತಿಯ 1 ಕೋಟಿ ಆಸ್ತಿಗಳಿಗೆ ಇ-ಸ್ವತ್ತು
ಶೂರಿಟಿ ಇಲ್ಲದೇ ಸಿಗುತ್ತೆ ಸಾಲ
ಗೃಹಲಕ್ಷ್ಮಿ ಕೋ-ಅಪರೇಟಿವ್ ಬ್ಯಾಂಕಿನ ವಿಶೇಷವೆಂದರೆ ಸಾಲ ಪಡೆಯಲು ಯಾವುದೇ ಶೂರಿಟಿ (ಗ್ಯಾರೆಂಟಿ) ಅಥವಾ ದಾಖಲೆಗಳ ಅಗತ್ಯವಿಲ್ಲ. ನಬಾರ್ಡ್, ಗ್ರಾಮೀಣ ವಿಕಾಸ ಬ್ಯಾಂಕ್, ಕರ್ನಾಟಕ ಅಪ್ಪೆಕ್ಸ್ ಬ್ಯಾಂಕ್ ಮುಂತಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿದರದಲ್ಲಿ ಸರ್ಕಾರವೇ ಸಾಲ ನೀಡುತ್ತದೆ.
ಯಾವುದಕ್ಕೆಲ್ಲ ಸಾಲ ಸಿಗಲಿದೆ?
ಈ ಸಾಲ ಪಡೆದು ಸಂಘದ ಸದಸ್ಯರು ತಮ್ಮ ಆಸಕ್ತಿಗೆ ಅನುಗುಣವಾಗಿ ಹಲವಾರು ಸ್ವ-ಉದ್ಯಮ ಆರಂಭಿಸಬಹುದಾಗಿದೆ. ಕೃಷಿ ಯಂತ್ರೋಪಕರಣಗಳಾದ ಟ್ರಾಕ್ಟರ್, ನಾಟಿ ಯಂತ್ರ, ಒಕ್ಕಣೆ ಯಂತ್ರ ಖರೀದಿಸಿ ಬಾಡಿಗೆಗೆ ಕೊಡುವ ಮೂಲಕ ಆದಾಯ ಗಳಿಸಬಹುದು.
ಹೋಟೆಲ್ ಅಥವಾ ಟೀ ಸ್ಟಾಲ್, ಅಡುಗೆ ಪದಾರ್ಥ, ಹ್ಯಾಂಡಿಕ್ರಾಫ್ಟ್ ಉತ್ಪಾದನೆ, ದಿನಸಿ, ಹಣ್ಣು ತರಕಾರಿ, ಆಹಾರದ ಅಂಗಡಿ ಸ್ಥಾಪನೆ ಮಾಡಿ ಮಹಿಳೆಯರು ಹಣ ಸಂಪಾದನೆ ಮಾಡಬಹುದು.
PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.