KKRTC Conductor Recruitment 2025 – ಪಿಯುಸಿ ಪಾಸಾದವರಿಗೆ ಕೆಕೆಆರ್‌ಟಿಸಿ ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 300 ಹುದ್ದೆಗಳು

Spread the love

WhatsApp Group Join Now
Telegram Group Join Now

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಕಂಡಕ್ಟರ್ ಹುದ್ದೆಗಳ (KKRTC Conductor Recruitment 2025) ಭರ್ತಿಗೆ ಪಿಯುಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KKRTC) ಉಳಿಕೆ ಮೂಲವೃಂದದ 253 ಹಾಗೂ ಕಲ್ಯಾಣ ಕರ್ನಾಟಕ ವೃಂದದ 63 ಹುದ್ದೆಗಳು ಸೇರಿ ಒಟ್ಟು 316 ಕಂಟಕ್ಟರ್ ಹಾಗೂ ಸಹಾಯಕ ಲೆಕ್ಕಿಗ ಹುದ್ದೆಗಳ ನೇಮಕಾತಿ ನಡೆಯಲಿದೆ.

ಈ ಸಂಬAಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು.

ಹುದ್ದೆಯ ವಿವರ
  • ನಿರ್ವಾಹಕ (ಕಂಡಕ್ಟರ್): 240+60=300
  • ಸಹಾಯಕ ಲೆಕ್ಕಿಗ: 13+03=16
  • ಒಟ್ಟು ಹುದ್ದೆಗಳು: 316

ಇದನ್ನೂ ಓದಿ: Sainik School Admission 2026- 6 ಮತ್ತು 9ನೇ ತರಗತಿ ಮಕ್ಕಳಿಗೆ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅಕ್ಟೋಬರ್ 30ರೊಳಗೆ ಅರ್ಜಿ ಸಲ್ಲಿಸಿ….

ವಿದ್ಯಾರ್ಹತೆ ಮತ್ತು ದೈಹಿಕ ಅರ್ಹತೆ

ನಿರ್ವಾಹಕ (ಕಂಡಕ್ಟರ್) ಹುದ್ದೆಗಳಿಗೆ ಕಲಾ / ವಾಣಿಜ್ಯ / ವಿಜ್ಞಾನದಲ್ಲಿ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ 10+2 ಐಸಿಎಸ್‌ಇ (ICSE), ಸಿಬಿಎಸ್‌ಇ (CBSE) ಉತ್ತೀರ್ಣರಾಗಿರಬೇಕು.

ಅಥವಾ ತತ್ಸಮಾನ ವಿದ್ಯಾರ್ಹತೆ ಅಂದರೆ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ 03 ವರ್ಷಗಳ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. ಪ್ರಮುಖವಾಗಿ ಮಾನ್ಯತೆ ಹೊಂದಿರುವ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಅನ್ನು ಹೊಂದಿರಬೇಕು.

ನಿಗದಿಪಡಿಸಿರುವ ಭೌತಿಕ ಮಾನದಂಡದAತೆ ಪುರುಷರು ಮತ್ತು ಪುರುಷ ತೃತೀಯ ಲಿಂಗ ಅಭ್ಯರ್ಥಿಗಳು ಕನಿಷ್ಠ 160 ಸೆಂ. ಮೀ ಮತ್ತು ಮಹಿಳೆಯರು ಮತ್ತು ಮಹಿಳೆ ತೃತೀಯ ಲಿಂಗ ಅಭ್ಯರ್ಥಿಗಳು ಕನಿಷ್ಠ 150 ಸೆಂ. ಮೀ ಎತ್ತರ ಹೊಂದಿರಬೇಕು.

ಇನ್ನು ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಕಾನೂನಿನ ಮೂಲಕ ಸ್ಥಾಪಿಸಲಾದ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಮೂರು ವರ್ಷಗಳ ಬ್ಯಾಚುಲರ್ ಪದವಿ ಹೊಂದಿರvಬೇಕು. ಈ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಅವಶ್ಯಕ.

ಇದನ್ನೂ ಓದಿ: BDA FDA-SDA Recruitment 2025- ಬಿಡಿಎಯಲ್ಲಿ ಎಫ್‌ಡಿಎ, ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ ಮತ್ತು ಪದವೀಧರರಿಗೆ ಅವಕಾಶ

ವೇತನ ಶ್ರೇಣಿ
  • ಸಹಾಯಕ ಲೆಕ್ಕಿಗ: ₹23,990 ರಿಂದ ₹42,800
  • ನಿರ್ವಾಹಕ (ಕಂಡಕ್ಟರ್): ₹18,660 ರಿಂದ ₹25,300

ಸಹಾಯಕ ಲೆಕ್ಕಿಗ ಮತ್ತು ನಿರ್ವಾಹಕ ಹುದ್ದೆಗಳಿಗೆ ಆಯ್ಕೆಗೊಂಡ ಅರ್ಹ ಅಭ್ಯರ್ಥಿಯನ್ನು ಒಂದು ವರ್ಷದ ಅವಧಿಗೆ ‘ಕೆಲಸದ ಮೇಲೆ ತರಬೇತಿ’ಗೆ ನಿಯೋಜಿಸಲಾಗುವುದು. ಸದರಿ ಅವಧಿಯಲ್ಲಿ ರೂ. 14,000/- ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು. ಪರೀಕ್ಷಾರ್ಥ ಸೇವೆಯ ಮೇಲೆನಿಯೋಜಿಸಲ್ಪಟ್ಟ ನಂತರ ಮೇಲ್ಕಾಣಿಸಿದ ವೇತನ ಶ್ರೇಣಿಗೆ ಅರ್ಹರಾಗುವರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
KKRTC Conductor Recruitment 2025
ವಯೋಮಿತಿ

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಕನಿಷ್ಟ ವಯೋಮಿತಿ 18 ವರ್ಷ ಹೊಂದಿರಬೇಕು. ಗರಿಷ್ಟ ವಯೋಮಿತಿಯು ಈ ಕೆಳಕಂಡಂತಿದೆ:

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷಗಳು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳು ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಕರ್ನಾಟಕ ಸರ್ಕಾರ 29-09-2025ರಲ್ಲಿ ನಿರ್ದೇಶಿಸಿರುವಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Infosys Foundation STEM Scholarship- ವಿದ್ಯಾರ್ಥಿನಿಯರಿಗೆ 1 ಲಕ್ಷ ರೂ. ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಸಲ್ಲಿಸಿ…

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
WhatsApp Group Join Now
Telegram Group Join Now

ಈ ಎಲ್ಲಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್-ಒಎಂಆರ್ ಮಾದರಿಯಲ್ಲಿ (Offline-OMR type) ನಡೆಸಲಾಗುತ್ತದೆ. ಬೆಂಗಳೂರು, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಬಳ್ಳಾರಿ, ಕೊಪ್ಪಳ, ವಿಜಯಪುರ, ತುಮಕೂರು ಮತ್ತು ಕಲಬುರ್ಗಿ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಲಿವೆ.

ಅಭ್ಯರ್ಥಿಗಳಿಗೆ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಕಟಣೆಯ ಮೂಲಕ ತಿಳಿಸಲಾಗುವುದು ಹಾಗೂ ಈ ಬಗ್ಗೆ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುವುದು.

ಅಭ್ಯರ್ಥಿಗಳು ಕಡ್ಡಾಯವಾಗಿ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಒಂದು ಮೂಲ ಗುರುತಿನ ಚೀಟಿಯೊಂದಿಗೆ (ಪ್ಯಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಪಾಸ್ಪೋರ್ಟ್, ವೋಟರ್ ಐಡಿ, ಸರ್ಕಾರಿ ನೌಕರರ ಐಡಿ) ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕು. ತಪ್ಪಿದ್ದಲ್ಲಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

ಇದನ್ನೂ ಓದಿ: KVAFSU Bidar Recruitment 2025- ಪದವಿ, ಪಿಯುಸಿ ಪಾಸಾದವರಿಗೆ ಕರ್ನಾಟಕ ಪಶು ಯೂನಿವರ್ಸಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ…

ಅರ್ಜಿ ಶುಲ್ಕ

ಆನ್‌ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 750 ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09 ಅಕ್ಟೋಬರ್ 2025
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 14 ನವೆಂಬರ್ 2025
ಪ್ರಮುಖ ಲಿಂಕ್’ಗಳು
  • ಅಧಿಸೂಚನೆ (HK): Download
  • ಅಧಿಸೂಚನೆ (NON HK): Download
  • ಅರ್ಜಿ ಲಿಂಕ್ (HK): Apply Now
  • ಅರ್ಜಿ ಲಿಂಕ್ (NON HK): Apply Now

PUC Pass Head Constable – ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ


Spread the love
error: Content is protected !!