Pauti Khate Campaign- ಈ ರೈತರಿಗೆ ಪಿಎಂ ಕಿಸಾನ್ ಸೇರಿ ಸರ್ಕಾರದ ಎಲ್ಲಾ ಸೌಲಭ್ಯಗಳು ಬಂದ್ | ಕಂದಾಯ ಸಚಿವರ ಎಚ್ಚರಿಕೆ

ಈ ರೈತರಿಗೆ ಪಿಎಂ ಕಿಸಾನ್ ಸೇರಿ ರಾಜ್ಯ ಸರ್ಕಾರದ ಎಲ್ಲ ಸೌಲಭ್ಯಗಳು ಬಂದ್ (Pauti Khate Campaign) ಆಗಲಿವೆ ಎಂದು ಕಂದಾಯ ಸಚಿವರು ಎಚ್ಚರಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಇನ್ನು ಮುಂದೆ ಮೃತ ವ್ಯಕ್ತಿಯ ಹೆಸರಿನಲ್ಲಿ ಇರುವ ಜಮೀನಿಗೆ ಯಾವುದೇ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಕೆ ನೀಡಿದ್ದಾರೆ. ಇದರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕೃಷಿ ಸಬ್ಸಿಡಿ, ಪ್ರವಾಹ ಪರಿಹಾರ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳು ಸೇರಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೃತರ ಹೆಸರಿನಲ್ಲಿರುವ ಜಮೀನಿಗೆ ಕೇಂದ್ರ ಸರ್ಕಾರವೇ ‘ಪಿಎಂ ಕಿಸಾನ್ ಸಮ್ಮಾನ್’ ಕೊಡುವುದನ್ನು ನಿಲ್ಲಿಸಲು ಸೂಚನೆ ನೀಡಿದೆ. ಇದಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿzಯಿದೇ ರೀತಿ ಎಲ್ಲಾ ಕೃಷಿ ಸಬ್ಸಿಡಿಗಳು, ಬೆಳೆ ವಿಮೆ, ನೆರೆ ಪರಿಹಾರ ಹಣ ಇತ್ಯಾದಿಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
Free Sheep and Dairy Farming Training- ಉಚಿತ ಹೈನುಗಾರಿಕೆ ಮತ್ತು ಉಚಿತ ಕುರಿ ಸಾಕಣೆ ತರಬೇತಿ | ಅರ್ಜಿ ಆಹ್ವಾನ
ಮೃತರ ಹೆಸರಿನಲ್ಲಿ 52.56 ಲಕ್ಷ ಜಮೀನುಗಳು
ಸದ್ಯ ರಾಜ್ಯದಾದ್ಯಂತ ಪೌತಿ ಖಾತೆ ಅಭಿಯಾನ ಪ್ರಾರಂಭವಾಗಿದೆ. ಈ ಅಭಿಯಾನದ ಉದ್ದೇಶ, ಮೃತ ವ್ಯಕ್ತಿಗಳ ಹೆಸರಿನಲ್ಲಿ ಇರುವ ಜಮೀನನ್ನು ವಾರಸುದಾರರ ಹೆಸರಿನಲ್ಲಿ ದಾಖಲಾತಿ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದಾಗಿದೆ.
ರಾಜ್ಯದಲ್ಲಿ ಇನ್ನೂ ಬರೋಬ್ಬರಿ 52.56 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿಯೇ ಇವೆ. ಈಗಾಗಲೇ ಹೆಚ್ಚಿನ ಕುಟುಂಬಗಳು ದಾಖಲೆ ಬದಲಾವಣೆಗೆ ಸಹಕರಿಸುತ್ತಿದ್ದು, ಸಹಕರಿಸದೇ ಇರುವ ಆಸ್ತಿಗಳನ್ನು ಕೈ ಬಿಡಲಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ.

ಭೂ ದಾಖಲೆಗಳ ‘ಭೂ ಸುರಕ್ಷೆ’ ಯೋಜನೆ
ಜನತೆ ತಮ್ಮ ಆಸ್ತಿ ದಾಖಲೆಗಳನ್ನು ಸುಲಭವಾಗಿ ಪಡೆಯುವಂತೆ ಮಾಡಲು ರಾಜ್ಯ ಸರ್ಕಾರ ‘ಭೂ ಸುರಕ್ಷೆ’ (Bhoo Suraksha) ಎಂಬ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ 150 ವರ್ಷಗಳಷ್ಟು ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಾಂತರ ಮಾಡಲಾಗುತ್ತಿದೆ.
100 ಕೋಟಿ ಪುಟಗಳ ಪೈಕಿ 33% ದಾಖಲೆಗಳ ಸ್ಕ್ಯಾನಿಂಗ್ ಈಗಾಗಲೇ ಪೂರ್ಣಗೊಂಡಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ಆನ್‌ಲೈನ್ ಮೂಲಕ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ, ಬಳಿಕ ಮುಂದಿನ ಹಂತದಲ್ಲಿ ಬಾಪೂಜಿ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.
ಪೌತಿ ಖಾತೆ ಅಭಿಯಾನ ಪೂರ್ಣಗೊಂಡ ನಂತರ ಸರ್ಕಾರ ಪೋಡಿ ಮುಕ್ತ ಗ್ರಾಮ ಅಭಿಯಾನವನ್ನು ಬಹುಮುಖ್ಯ ಯೋಜನೆಯಾಗಿ ಕೈಗೆತ್ತಿಕೊಳ್ಳಲಿದೆ. ಈ ಮೂಲಕ ಜಮೀನಿನ ತಕರಾರು ಕಡಿಮೆಯಾಗುವುದು. ಖಾತೆದಾರರ ಹೆಸರಿನಲ್ಲಿ ಸ್ಪಷ್ಟ ದಾಖಲೆಗಳು ಸಿಗಲಿವೆ, ಸರ್ಕಾರಿ ಸೌಲಭ್ಯಗಳನ್ನು ನೀಡುವ ಪ್ರಕ್ರಿಯೆ ಸುಗಮವಾಗುತ್ತದೆ.
E-Swathu Digital Records- ಇ-ಸ್ವತ್ತು ಯೋಜನೆ: ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ ಪಡೆಯಲು ಅರ್ಜಿ ಆಹ್ವಾನ
ಇದು ರೈತರಿಗೆ ಎಚ್ಚರಿಕೆ ಮತ್ತು ಅವಕಾಶ
ಈ ಎಲ್ಲ ಕ್ರಮಗಳು ರೈತರಿಗೆ ತಮ್ಮ ಆಸ್ತಿ ಹಕ್ಕುಗಳ ಮೇಲೆ ಸ್ಪಷ್ಟತೆ ನೀಡುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ನಿರ್ಬಂಧವಿಲ್ಲದೆ ಪಡೆಯಲು ಸಹಾಯ ಮಾಡಲಿವೆ. ಆದರೆ, ಆಸ್ತಿ ದಾಖಲೆ ಇನ್ನೂ ಮೃತರ ಹೆಸರಿನಲ್ಲಿ ಇರಲಿ ಎಂಬ ನಿರ್ಲಕ್ಷ್ಯ ಅಥವಾ ವಿಳಂಬ ಮಾಡುವ ಕುಟುಂಬಗಳು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಲಿವೆ.
ಹೀಗಾಗಿ, ಎಲ್ಲ ರೈತ ಕುಟುಂಬಗಳು ತಕ್ಷಣವೇ ತಾವು ಹೊಂದಿರುವ ಜಮೀನು ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಕ್ಷಣ ವಾರಸುದಾರರ ಹೆಸರಿನಲ್ಲಿ ದಾಖಲೆ ಬದಲಾಯಿಸಿಕೊಳ್ಳುವುದು ಅವಶ್ಯಕ. ಇಂದೇ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಳ್ಳುವ ಮುನ್ನ ದಾಖಲೆಗಳ ತಿದ್ದುಪಡಿ ಮಾಡಿಕೊಳ್ಳಿ…
PM Kisan 20ne Kanthu- ರೈತರಿಗೆ PM-KISAN 20ನೇ ಕಂತಿನ ₹2,000 ರೂ. ಹಣ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ…