PM Kisan Samman Nidhi : ಕೇ೦ದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 17ನೇ ಕಂತಿನ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಅವರು ಸಹಿ ಮಾಡಿದ್ದಾರೆ. ಕಳೆದ ಜೂನ್ 09ರಂದು 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆರಂಭದಲ್ಲಿಯೇ ಪಿಎಂ ಕಿಸಾನ್ ಹಣ ಬಿಡುಗಡೆಗೆ ಸಹಿ ಮಾಡಿದ್ದು; ಇದೀಗ ರೈತರ ಖಾತೆಗೆ ಹಣ ಜಮಾ ಆಗುವ ದಿನ ಘೋಷಣೆಯಾಗಿದೆ.
ಹೌದು, ಪಿಎಂ ಕಿಸಾನ್ ಯೋಜನೆಯಡಿ ಸಮಾನ ಮೂರು ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ವರ್ಷಕ್ಕೆ ಒಟ್ಟು 6,000 ರೂಪಾಯಿ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. 2019ರ ಫೆಬ್ರವರಿಯಲ್ಲಿ 1ನೇ ಕಂತಿನ ಹಣ ಸಂದಾಯವಾಗಿದ್ದು; 2024 ಫೆಬ್ರವರಿಯಲ್ಲಿ 16ನೇ ಕಂತಿನ ಹಣ ಸಂದಾಯವಾಗಿದೆ. ಇದೀಗ ನಾಲ್ಕು ತಿಂಗಳ ಅಂತರದಲ್ಲಿ 17ನೇ ಕಂತಿನ ಹಣ ಬಿಡುಗಡೆಯಾಗಿದೆ.
ರೈತರ ಖಾತೆಗೆ ಹಣ ಜಮಾ ಯಾವಾಗ?
ಜೂನ್ 09ರಂದು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ (PM Kisan 17th Installment) ಅನುದಾನವಾಗಿ ಒಟ್ಟು 20,000 ಕೋಟಿ ರೂಪಾಯಿ ಮೊತ್ತಕ್ಕೆ ಅಧಿಕೃತವಾಗಿ ಪ್ರಧಾನಿಯವರು ಸಹಿ ಮಾಡಿದ್ದು; ದೇಶದ 9.3 ಕೋಟಿ ರೈತರ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದೆ.
ಇದೇ ಜೂನ್ 18ರ ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ‘ಪಿಎಂ ಕಿಸಾನ್ ಉತ್ಸವ ದಿವಸ’ ಆಚರಿಸಲಾಗುತ್ತಿದೆ. ಅದೇ ಸಮಯದಲ್ಲಿ ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗೆ ತಲಾ 2,000 ರೂಪಾಯಿ ಹಣ ಜಮಾ ಆಗಲಿದೆ ಎಂದು ರಾಜ್ಯ ಕೃಷಿ ಇಲಾಖೆಯ ಆಯುಕ್ತರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರುಗಳಿಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಖಾತೆಗೆ ಹಣ ಬರಲು ಏನು ಮಾಡಬೇಕು?
ಇ-ಕೆವೈಸಿ ಕಾರಣಕ್ಕೆ ಇನ್ನೂ ಸಾವಿರಾರು ರೈತರಿಗೆ ಪಿಎಂ ಕಿಸಾನ್ ಹಣ ತಲುಪುತ್ತಿಲ್ಲ. ಬಹಳಷ್ಟು ರೈತರು ಕೆವೈಸಿ ಸಂಬAಧಿತ ದಾಖಲೆಗಳನ್ನು ಸಲ್ಲಿಸಬೇಕಿದೆ. ಇದೇ ಜೂನ್ 18ರ ಒಳಗೆ ಸಮೀಪದ ಗ್ರಾಮ ಒನ್ ಕೇಂದ್ರ, ಅಂಚೆ ಕಚೇರಿ, ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅವರಿಗೂ 17ನೇ ಕಂತಿನ ಹಣ ಜಮಾ ಆಗುವ ಸಂಭವವಿದೆ.
ಈಗಾಗಲೇ ಪಿಎಂ ಕಿಸಾನ್ ಯೋಜನೆಯಡಿ 16 ಕಂತುಗಳು ಹಣ ಬಿಡುಗಡೆಯಾಗಿದ್ದು; 16ನೇ ಕಂತಿನ ಹಣ ಯಾವೆಲ್ಲ ರೈತರಿಗೆ ಬಂದಿಯೋ ಆ ರೈತರಿಗೆ ಯಥಾಪ್ರಕಾರ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ. ಕಳೆದ ಫೆಬ್ರವರಿಯಿಂದ ಈಚೆಗೆ ಇ-ಕೆವೈಸಿ ಸಲ್ಲಿಸಿದ ರೈತರಿಗೂ 17ನೇ ಕಂತಿನ ಹಣ ಸಂದಾಯವಾಗಲಿದೆ.
ನಿಮ್ಮೂರಿನ ಎಷ್ಟು ಜನರಿಗೆ ಪಿಎಂ ಕಿಸಾನ್ 17ನೇ ಕಂತಿನ ಹಣ ಬರುತ್ತದೆ ಎಂಬುವುದನ್ನು ತಿಳಿಯಲು ಇಲ್ಲಿ ಒತ್ತಿ…