e-Swathu Online- ಮೊಬೈಲ್‌ನಲ್ಲೇ ಉಚಿತವಾಗಿ ನಿಮ್ಮ ಇ-ಸ್ವತ್ತು ಡಿಜಿಟಲ್ ದಾಖಲೆಯನ್ನು ಪಡೆಯಿರಿ | ಹಂತ ಹಂತದ ಸಂಪೂರ್ಣ ಮಾಹಿತಿ

Spread the love

ಗ್ರಾಮೀಣ ಭಾಗದ ಮನೆ, ನಿವೇಶನ ಅಥವಾ ಖಾಲಿ ಜಾಗಗಳ ಇ-ಸ್ವತ್ತು ಡಿಜಿಟಲ್ ದಾಖಲೆಗಳನ್ನು (e-Swathu Online) ಮೊಬೈಲ್‌ನಲ್ಲಿಯೇ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮನೆ, ನಿವೇಶನ ಅಥವಾ ಖಾಲಿ ಜಾಗ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಆಸ್ತಿಯ ಕಾನೂನುಬದ್ಧ ಡಿಜಿಟಲ್ ದಾಖಲೆ (ಇ-ಸ್ವತ್ತು/e-Swathu) ಹೊಂದಿರುವುದು ಅಗತ್ಯವಾಗಿದೆ. ಈಗ ಈ ದಾಖಲೆಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿಯೇ ಉಚಿತವಾಗಿ ಪಡೆಯುವ ವ್ಯವಸ್ಥೆ ರಾಜ್ಯ ಸರ್ಕಾರ ಒದಗಿಸಿದೆ.

e-Swathu (ಇ-ಸ್ವತ್ತು) ಎಂಬುದು ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾಸಗಿ ಆಸ್ತಿಗಳ ಮಾಲೀಕತ್ವದ ವಿವರಗಳು, ನೋಂದಣಿ, ಬದಲಾವಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ನೀಡುವ ಅಧಿಕೃತ ಸರ್ಕಾರದ ವ್ಯವಸ್ಥೆಯಾಗಿದೆ. ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ಅಧಿಕೃತ ಇ-ಸ್ವತ್ತು ಪೋರ್ಟಲ್ ಮೂಲಕ ಡಿಜಿಟಲ್ ಆಗಿ ದೊರೆಯುತ್ತದೆ.

Karnataka Protsahadhana Yojana- SSLC, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ | ₹35,000 ನೆರವಿಗೆ ಅರ್ಜಿ ಆಹ್ವಾನ

e-Swathu ಯಾಕೆ ಅಗತ್ಯ?

ಇ-ಸ್ವತ್ತು ಮನೆ ಅಥವಾ ನಿವೇಶನದ ಮಾಲೀಕತ್ವವನ್ನು ಕಾನೂನುಬದ್ಧವಾಗಿ ಸಾಬೀತು ಮಾಡುವ ಪ್ರಮುಖ ದಾಖಲೆಯಾಗಿದೆ. ಇ-ಸ್ವತ್ತು ದಾಖಲೆ ಈ ಕೆಳಗಿನ ಪ್ರಯೋಜನಗಳಿಗೆ ಅಗತ್ಯವಾಗಿದೆ:

  • ಬ್ಯಾಂಕ್ ಲೋನ್ ಪಡೆಯಲು
  • ಆಸ್ತಿ ಮಾರಾಟ ಅಥವಾ ಖರೀದಿಗೆ ಮಾಡಲು
  • ಪಟಾ ದಾಖಲೆ ಮಾಡಲು
  • ಮನೆ ನಿರ್ಮಾಣ ಅನುಮತಿ ಪಡೆಯಲು
  • ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು

ಇ-ಸ್ವತ್ತು ಇಲ್ಲದಿದ್ದರೆ, ಆಸ್ತಿ ಕಾನೂನುಬದ್ಧ ಅಲ್ಲ ಎಂಬ ಕಾರಣದಿಂದ ಅನೇಕ ಸೌಲಭ್ಯಗಳಿಂದ ವಂಚಿತರಾಗಬಹುದು.

ಗ್ರಾಮೀಣ ಭಾಗದ ಮನೆ, ನಿವೇಶನ ಅಥವಾ ಖಾಲಿ ಜಾಗಗಳ ಇ-ಸ್ವತ್ತು ಡಿಜಿಟಲ್ ದಾಖಲೆಗಳನ್ನು ಮೊಬೈಲ್‌ನಲ್ಲಿಯೇ ಪಡೆಯುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
e-Swathu Online Mobile Download Guide
e-Swathu ದಾಖಲೆ ಪಡೆಯುವ ವಿಧಾನ

ಯಾವುದೇ ಮೀಡಿಯೇಟರ್ ಅಥವಾ ಬ್ರೋಕರ್‌ಗಳ ಸಹಾಯವಿಲ್ಲದೆ, ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲೇ ಈ ದಾಖಲೆ ಪಡೆಯಬಹುದು.

  • ಹಂತ 1: ನಿಮ್ಮ ಮೊಬೈಲ್/ಕಂಪ್ಯೂಟರ್ ಬ್ರೌಸರ್‌ನಲ್ಲಿ ಈ ಲಿಂಕ್ ತೆರೆಯಿರಿ: ‘e-Swathu Property’
  • ಹಂತ 2: ಮುಖ್ಯ ಪುಟದಲ್ಲಿ ‘ಆಸ್ತಿಗಳ ಶೋಧನೆ / Search Property’ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ಹಂತ 3: ‘Search By’ ವಿಭಾಗದಲ್ಲಿ ನೀವು ಹುಡುಕ ಬಯಸುವ ವಿವರದ ಪ್ರಕಾರ ಆಯ್ಕೆಮಾಡಿ:
    → Form-9 (ಮಾಲೀಕತ್ವ ದಾಖಲೆ)
    → Form-11 (ಬಳಕೆ ವಿವರ)
    → Survey Number
  • ಹಂತ 4: ನಿಮ್ಮ ಜಿಲ್ಲೆ → ತಾಲ್ಲೂಕು → ಗ್ರಾಮ ಪಂಚಾಯತಿ → ಹಳ್ಳಿ ಆಯ್ಕೆ ಮಾಡಿ.
  • ಹಂತ 5: ‘ಶೋಧನೆ/Search’ ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದಲ್ಲಿನ ಆಸ್ತಿಗಳ ಪಟ್ಟಿ (e-Swathu ID), ಮಾಲೀಕರ ಹೆಸರು ಇತ್ಯಾದಿ) ತೋರಿಸಲಿದೆ.
  • ಹಂತ 6: ಇಲ್ಲಿ ನಿಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.

Hasu Kuri Koli Subsidy- ಹಸು, ಕುರಿ, ಕೋಳಿ ಸಾಕಾಣಿಕೆ ಸರ್ಕಾರಿ ಸಬ್ಸಿಡಿ ಯೋಜನೆಗಳು | ಪಶುಪಾಲನಾ ಇಲಾಖೆಯ ಯೋಜನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಇ-ಸ್ವತ್ತು ದಾಖಲೆ ಸಿಗದಿದ್ದರೆ ಏನು ಮಾಡಬೇಕು?

ವೆಬ್‌ಸೈಟ್‌ನಲ್ಲಿ ನಿಮ್ಮ ಆಸ್ತಿ ವಿವರ ಸಿಗದಿದ್ದರೆ, ಅದು ಡಿಜಿಟಲ್ ದಾಖಲೆ ಆಗಿಲ್ಲ ಎಂದರ್ಥ. ಆಗ ನಿಮ್ಮ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನಿಮ್ಮ ಆಸ್ತಿಯನ್ನು e-Swathu ನಲ್ಲಿ ನೋಂದಣಿ ಮಾಡಲು, ಅರ್ಜಿ ಸಲ್ಲಿಸಬೇಕಾಗುತ್ತದೆ.

ಪಂಚಾಯತಿ ಕಚೇರಿಗೆ ಹೋಗಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಹೀಗಿವೆ:

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಆಸ್ತಿಯ ಎದುರು ನಿಂತಿರುವ ನಿಮ್ಮ ಫೋಟೋ
  • ಜಂಟಿ ಮಾಲೀಕರ ಆಧಾರ್ ಕಾರ್ಡ್ (ಇದ್ದರೆ)
  • ಆಸ್ತಿ ತೆರಿಗೆ ಪಾವತಿ ರಶೀದಿ
  • ಇತ್ತೀಚಿನ ವಿದ್ಯುತ್ ಬಿಲ್

ಪಂಚಾಯತಿ ಅಧಿಕಾರಿಗಳು ಪರಿಶೀಲನೆ ನಡೆಸಿದ ಮೇಲೆ ನಿಮ್ಮ ಆಸ್ತಿ ದಾಖಲಾತಿ e-Swathu ನಲ್ಲಿ ಸೇರಿಸಲಾಗುತ್ತದೆ.

ನಿಮ್ಮ ಆಸ್ತಿ ವಿವರವನ್ನು e-Swathu ಪೋರ್ಟಲ್‌ನಲ್ಲಿ ಪರಿಶೀಲಿಸಿ. ದಾಖಲೆ ಇದ್ದರೆ ಡೌನ್‌ಲೋಡ್ ಮಾಡಿಕೊಳ್ಳಿ. ದಾಖಲೆ ಇಲ್ಲದಿದ್ದರೆ, ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ. ನಿಮ್ಮ ಆಸ್ತಿ ಕಾನೂನುಬದ್ಧವಾಗಿದ್ದರೆ, ಭವಿಷ್ಯದಲ್ಲಿ ಯಾವ ಸಮಸ್ಯೆಯೂ ಎದುರಾಗುವುದಿಲ್ಲ.

ಅಧಿಕೃತ ವೆಬ್ ಲಿಂಕ್: Click Here

Karnataka PM-Kisan- 7.19 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಬಂದ್ | ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯಾ? ತಕ್ಷಣ ಚೆಕ್ ಮಾಡಿ…


Spread the love
WhatsApp Group Join Now
Telegram Group Join Now
error: Content is protected !!