ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಸಮಯ ನಿಗದಿಗೆ ಸಂಕಷ್ಟ (KCET Counseling Delay Reasons) ಎದುರಾಗಿದೆ. ಇದರಿಂದಾಗಿ ಕೌನ್ಸೆಲಿಂಗ್ ಮತ್ತಷ್ಟು ವಿಳಂಬವಾಗುತ್ತಿದ್ದು; ಈ ಬಗ್ಗೆ ಕೆಇಎ ಹೇಳುವ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಸಿಇಟಿ (ಕಾಮನ್ ಎಂಟ್ರನ್ಸ್ ಟೆಸ್ಟ್) ಫಲಿತಾಂಶ ಪ್ರಕಟವಾಗಿ ಬರೋಬ್ಬರಿ 38 ದಿನಗಳು ಕಳೆದಿವೆ. ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಶಿಕ್ಷಣದ ಮುಂದಿನ ಹಂತವನ್ನು ನಿರ್ಧರಿಸಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗದ ಕಾರಣ ಅವರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ಬಾರಿ ಕಾಲೇಜುಗಳು ತಮ್ಮ ಸೀಟು ಹಂಚಿಕೆ ವಿವರಗಳನ್ನು (Seat Matrix) ಒದಗಿಸದೇ ಇರುವುದೇ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬಕ್ಕೆ ಮುಖ್ಯ ಕಾರಣವಾಗುತ್ತಿದೆ. ಆದರೆ, ಕೆಇಎ ಹೇಳುವಂತೆ ಎಲ್ಲಾ ವೃತ್ತಿಪರ ಕೋರ್ಸುಗಳ ಸೀಟ್ ಹಂಚಿಕೆ ಪಟ್ಟಿ ಕೈ ಸೇರದೇ ಸಿಇಟಿ ಕೌನ್ಸೆಲಿಂಗ್ ಆರಂಭಿಸಲು ಸಾಧ್ಯವೇ ಇಲ್ಲ!
PUC Exam 3 Result 2025- 2025ರ ಪಿಯು ಪರೀಕ್ಷೆ-3 ಫಲಿತಾಂಶ ಪ್ರಕಟ | ನಿಮ್ಮ ಫಲಿತಾಂಶವನ್ನು ಈಗಲೇ ಪರಿಶೀಲಿಸಿ
ಕೌನ್ಸೆಲಿಂಗ್ ವಿಳಂಬಕ್ಕೆ ಏನು ಸಮಸ್ಯೆ?
ಸರಕಾರವು ಪ್ರತಿವರ್ಷ ವೃತ್ತಿಪರ ಕೋರ್ಸುಗಳಿಗೆ ಸೀಟು ಹಂಚಿಕೆಯನ್ನು ನಿಯಮಾನುಸಾರವಾಗಿ ಮಾಡುತ್ತದೆ. ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳಿಗೆ ರಾಜ್ಯ ಮಟ್ಟದಲ್ಲಿ ಮ್ಯಾನೇಜ್‌ಮೆಂಟ್ ಕೋಟಾ, ಸರ್ಕಾರ ಕೋಟಾ, ಎನ್‌ಆರ್‌ಐ ಕೋಟಾ ಮುಂತಾದ ಮೀಸಲಾತಿ ನಿಯಮಗಳ ಅನುಸಾರ ಸೀಟು ಹಂಚಿಕೆ ಮಾಡಬೇಕು. ಈ ಹಂಚಿಕೆ ವಿವರವನ್ನು ಎಲ್ಲಾ ಕಾಲೇಜುಗಳು ಕೆಇಎಗೆ ಸಲ್ಲಿಸಬೇಕು.
ಈ ಬಾರಿ ಎಂಜಿನಿಯರಿಂಗ್ ಕಾಲೇಜುಗಳು ಮಾತ್ರ ತಮ್ಮ ಸೀಟ್ ಮ್ಯಾಟ್ರಿಕ್ ನೀಡಿವೆ. ಆದರೆ ವೈದ್ಯಕೀಯ, ಡೆಂಟಲ್, ಆಯುಷ್, ನರ್ಸಿಂಗ್, ಪಶುವೈದ್ಯಕೀಯ, ಕೃಷಿ ಮುಂತಾದ ಬೇರೆ ಬೇರೆ ಕೋರ್ಸುಗಳ ಕಾಲೇಜುಗಳು ತಮ್ಮ ಹಂಚಿಕೆ ವಿವರಗಳನ್ನು ಇನ್ನೂ ಸಲ್ಲಿಸಿಲ್ಲ.
ವಿದ್ಯಾರ್ಥಿಗಳ ಪರದಾಟ
ಅಪ್ಲಿಕೇಶನ್ ಪರಿಶೀಲನೆ ಮುಗಿದರೂ ಆಪ್ಷನ್ ಎಂಟ್ರಿ ಆರಂಭವಾಗಿಲ್ಲ. ಆಯ್ಕೆ ಮಾಡಿಕೊಳ್ಳಬೇಕಾದ ಕೋರ್ಸುಗಳ ಸೀಟ್ ಲಿಸ್ಟ್ ಇಲ್ಲದೆ ವಿದ್ಯಾರ್ಥಿಗಳು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಪಾಲಕರು ಮತ್ತು ವಿದ್ಯಾರ್ಥಿಗಳು ದಿನೇ ದಿನೇ ಏಇಂ ಕಚೇರಿ ಒತ್ತಾಯ ಮಾಡುತ್ತಿದ್ದಾರೆ. ಕಾಲೇಜು ಪ್ರವೇಶ ಪ್ರಕ್ರಿಯೆ ತಡವಾದರೆ ಶಿಕ್ಷಣ ವರ್ಷ ಆರಂಭವಾಗುವುದು ಕೂಡ ತಡವಾಗುತ್ತದೆ.

ಸೀಟು ಮಾಹಿತಿ ವಿಳಂಬಕ್ಕೆ ಕಾರಣವೇನು?
ಕೆಇಎ ಮೂಲಗಳು ಹೇಳುತ್ತಿರುವಂತೆ – ಅನುಪಾತದಡಿ ಸೀಟು ಹಂಚಿಕೆಗೆ ಮೀಸಲಾತಿ ಪ್ರಕ್ರಿಯೆ ಬಗ್ಗೆ ಕೆಲ ಕೋರ್ಸುಗಳಲ್ಲಿ ಗೊಂದಲ ಇದೆ. ಕಾಲೇಜುಗಳು ಸೀಟು ಹಂಚಿಕೆ ವಿವರವನ್ನು ಸ್ಪಷ್ಟವಾಗಿ ಕೊಡಲು ತಯಾರಿಲ್ಲ ಅಥವಾ ವಿಳಂಬ ಮಾಡುತ್ತಿವೆ. ಈ ಈ ಬಗ್ಗೆ ಕೆಇಎ ನಾಲ್ಕು ಬಾರಿ ಅಧಿಸೂಚನೆ ನೀಡಿ ಮನವಿ ಮಾಡಲಾಗಿದೆ.
ಕೆಇಎ ಹೇಳೋದೇನು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಸ್ಪಷ್ಟಪಡಿಸುವಂತೆ – ಎಂಜಿನಿಯರಿAಗ್ ಸೀಟುಗಳ ಮಾಹಿತಿ ಬಂದಿದೆ. ಉಳಿದ ಕೋರ್ಸುಗಳ ಮಾಹಿತಿ ಇಲ್ಲದೆ ಮುಂದೆ ಹೋಗಲು ಸಾಧ್ಯವಿಲ್ಲ. ಕಾಲೇಜುಗಳಿಗೆ ಈಗಾಗಲೇ ನಾಲ್ಕು ಬಾರಿ ಮನವಿ ಮಾಡಿದ್ದೇವೆ. ಅವರು ಸಂಪೂರ್ಣ ಮಾಹಿತಿ ನೀಡಿದ ಕೂಡಲೇ ಆಪ್ಷನ್ ಎಂಟ್ರಿ ಪ್ರಕ್ರಿಯೆ ಆರಂಭವಾಗುತ್ತದೆ.
ಅAದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದೆ. ಜೂನ್ 28ರಂದು ಯುಜಿ-ಸಿಇಟಿ ಸೀಟು ಹಂಚಿಕೆ ಮಂಥನ ಕಾರ್ಯಾಗಾರವನ್ನು ಕೂಡ ನಡೆಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾರ್ಗದರ್ಶನ ನೀಡಿದೆ. ಎಲ್ಲ ವಿವರಗಳು ಕೈ ಸೇರಿದ ಕ್ಷಣದಲ್ಲೇ ಕೌನ್ಸೆಲಿಂಗ್ ಪ್ರಕ್ರಿಯೆ ಶೀಘ್ರವಾಗಿ ನಡೆಸಲಾಗುತ್ತದೆ ಎಂದು ಕೆಇಎ ಭರವಸೆ ನೀಡಿದೆ.
ಕಾಲೇಜುಗಳು ಹೇಳೋದೇನು?
ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು ಸೀಟು ಮಾಹಿತಿ ಒದಗಿಸಲು ಈ ವಿಳಂಬಕ್ಕೆ ಮೀಸಲಾತಿ ಗೊಂದಲದ ಕಾರಣ ನೀಡುತ್ತಿದೆ ಎಂದು ಹೇಳುತ್ತಿವೆ. ಅಂದರೆ, ಮುಕ್ತ ಕೋಟಾ, ಸರ್ಕಾರಿ ಕೋಟಾ, ನಿರ್ದಿಷ್ಟ ವರ್ಗದ ಮೀಸಲಾತಿ ಹಂಚಿಕೆ ಇವುಗಳನ್ನು ಹೇಗೆ ಪಾಲಿಸಬೇಕು ಎಂಬ ಬಗ್ಗೆ ನಿರ್ಧಾರದಲ್ಲಿ ಸ್ಪಷ್ಟತೆ ಇಲ್ಲದ ಕಾರಣಕ್ಕಾಗಿ ವಿಳಂಬವಾಗುತ್ತಿದೆ ಎಂದು ಹೇಳುತ್ತಿವೆ.
ಒಟ್ಟಾರೆ ಸಕಾಲಕ್ಕೆ ಸೀಟ್ ಮ್ಯಾಟ್ರಿಕ್ ಸಿಗದೇ ಇರುವುದು, ಮೀಸಲಾತಿ ವ್ಯವಸ್ಥೆ ಖಚಿತವಾಗದಿರುವುದು ವಿದ್ಯಾರ್ಥಿಗಳ ಭವಿಷ್ಯ ತಾತ್ಕಾಲಿಕವಾಗಿ ಅತಂತ್ರ ಸ್ಥಿತಿಗೆ ತಳ್ಳಲಾಗಿದೆ. ವಿದ್ಯಾರ್ಥಿಗಳು ಸ್ಪಷ್ಟ ಸೀಟು ಹಂಚಿಕೆ ಪಟ್ಟಿ, ಶೀಘ್ರ ಆಪ್ಷನ್ ಎಂಟ್ರಿ ಪ್ರಕ್ರಿಯೆ, ಸಮಯಕ್ಕೆ ಕಾಲೇಜು ಪ್ರವೇಶ ಹಾಗೂ ಭವಿಷ್ಯದ ಪ್ಲಾನಿಂಗ್ ಮಾಡಲು ಯೋಗ್ಯವಾದ ಸಮಯಕ್ಕಾಗಿ ಕಾಯುತ್ತಿದ್ದಾರೆ.
ಇದಕ್ಕೇನು ಪರಿಹಾರ?
ಕೆಇಎ ಮನವಿ ಮಾಡಿರುವಂತೆ – ಉಳಿದ ಎಲ್ಲಾ ವೃತ್ತಿಪರ ಕೋರ್ಸುಗಳ ಕಾಲೇಜುಗಳು ಕೂಡ ತಮ್ಮ ಸೀಟ್ ಹಂಚಿಕೆ ವಿವರವನ್ನು ತ್ವರಿತವಾಗಿ ಸಲ್ಲಿಸಿದರೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟವಾಗಿ, ಆಪ್ಷನ್ ಎಂಟ್ರಿ ಆರಂಭವಾಗಿ, ಸೀಟ್ ಹಂಚಿಕೆ ಕೂಡ ಸರಿಯಾಗಿ ಮುಗಿಯಲಿದೆ. ರಾಜ್ಯ ಸರ್ಕಾರವೂ ಈ ಸಂಬಂಧ ಸಭೆಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುತ್ತಿದೆ.
ಒಟ್ಟಾರೆ, ಈ ಬಾರಿ ಸಿಇಟಿ ಕೌನ್ಸೆಲಿಂಗ್ ವಿಳಂಬಕ್ಕೆ ಕಾರಣವಾಗಿ ಎಲ್ಲಾ ವೃತ್ತಿಪರ ಕೋರ್ಸುಗಳ ಸೀಟ್ ಹಂಚಿಕೆ ಮಾಹಿತಿ ಇನ್ನೂ ಕೆಇಎಗೆ ಲಭ್ಯವಾಗಿಲ್ಲ. ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಏಇಂ ಮತ್ತು ಸರ್ಕಾರ ಇಬ್ಬರೂ ಸಹ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದು; ಶೀಘ್ರದಲ್ಲಿ ಈ ಗೊಂದಲ ನಿವಾರಣೆಯಾಗುವ ನಿರೀಕ್ಷೆ ಇದೆ.