Railway Technician Recruitment 2025- SSLC, ITI ಅಭ್ಯರ್ಥಿಗಳಿಂದ ಹುಬ್ಬಳ್ಳಿ, ಬೆಂಗಳೂರು ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

SSLC ಮತ್ತು ITI ಅಭ್ಯರ್ಥಿಗಳಿಗೆ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ 6,180 ರೈಲ್ವೆ ಹುದ್ದೆಗಳಿಗೆ (Railway Technician Recruitment 2025)ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ರೈಲ್ವೆ ನೇಮಕಾತಿ ಮಂಡಳಿ (RRB) 2025ರ 2ನೇ ಕೇಂದ್ರಿಕೃತ ಉದ್ಯೋಗ ಅಧಿಸೂಚನೆ (CEN-2/2025) ಅನ್ನು ಹೊರಡಿಸಲು ಸಜ್ಜಾಗಿದೆ. ಈ ಅಧಿಸೂಚನೆಯು ದೇಶದಾದ್ಯಂತ 21 ನೇಮಕಾತಿ ಮಂಡಳಿಗಳ ಮೂಲಕ ಒಟ್ಟು 6,180 ಹುದ್ದೆಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಈ ಹುದ್ದೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ಮುಖ್ಯ ಹುದ್ದೆಗಳ ವಿವರಗಳು
  • ಟೆಕ್ನಿಷಿಯನ್ ಗ್ರೇಡ್-1 (ಸಿಗ್ನಲ್) – 180 ಹುದ್ದೆಗಳು
  • ವೇತನ ಶ್ರೇಣಿ: ₹29,200/-
  • ವಯೋಮಿತಿ: 18-33 ವರ್ಷ (ಮೀಸಲಾತಿಯಂತೆ ಸಡಿಲಿಕೆ)
  • ಟೆಕ್ನಿಷಿಯನ್ ಗ್ರೇಡ್-3 – 6,000 ಹುದ್ದೆಗಳು
  • ವೇತನ ಶ್ರೇಣಿ: ₹19,900/-
  • ವಯೋಮಿತಿ: 18-30 ವರ್ಷ

Mobile Canteen Subsidy- ಮೊಬೈಲ್ ಕ್ಯಾಂಟೀನ್ ಆರಂಭಿಸಲು ₹5 ಲಕ್ಷ ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕದಲ್ಲಿ ಲಭ್ಯ ಹುದ್ದೆಗಳ ಸಂಖ್ಯೆ
  • ಹುಬ್ಬಳ್ಳಿ (ದಕ್ಷಿಣ ಪಶ್ಚಿಮ ರೈಲ್ವೆ): 106 ಹುದ್ದೆಗಳು
  • ಬೆಂಗಳೂರು (ರೈಲು ಗಾಲಿ ಕಾರ್ಖಾನೆ, ಯಲಹಂಕ): 36 ಹುದ್ದೆಗಳು
  • ಒಟ್ಟು ಹುದ್ದೆಗಳು: 142
ಇತರೆ ಪ್ರಮುಖ ಹುದ್ದೆಗಳ ವಿತರಣೆಯ ವಿವರ
  • ದಕ್ಷಿಣ ರೈಲ್ವೆ (ಚೆನ್ನೈ): 1,215 ಹುದ್ದೆಗಳು
  • ಪಶ್ಚಿಮ ರೈಲ್ವೆ (ಮುಂಬೈ): 849 ಹುದ್ದೆಗಳು

ಈ ನೇಮಕಾತಿಯಲ್ಲಿ, ಒಟ್ಟು 18 ಓಪನ್ ಲೈನ್ ವಿಭಾಗಗಳು ಮತ್ತು 22 ವರ್ಕ್ ಶಾಪ್ ವಿಭಾಗಗಳ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

SSLC ಮತ್ತು ITI ಅಭ್ಯರ್ಥಿಗಳಿಗೆ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ 6,180 ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತ ಮಾಹಿತಿ ಇಲ್ಲಿದೆ...
Railway Technician Recruitment 2025 Hubballi Bangalore SSLC-ITI Jobs
ವಿದ್ಯಾರ್ಹತೆ ವಿವರ

SSLC ಪಾಸ್ ಅಗತ್ಯ. ಸಂಬಂಧಿತ ಟ್ರೇಡಿನಲ್ಲಿ ITI ಅಥವಾ ಎನ್‌ವಿಎಸ್ ಪ್ರಮಾಣಪತ್ರ ಅಗತ್ಯ. ಗ್ರೇಡ್-1 ಹುದ್ದೆಗಳಿಗೆ B.Sc. (ಫಿಸಿಕ್ಸ್) / ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಇದ್ದವರು ಅರ್ಜಿ ಹಾಕಬಹುದು.

ಗಮನಿಸಿ: ಕೇವಲ ಹೆಚ್ಚುವರಿ ವಿದ್ಯಾರ್ಹತೆ ಇರುವುದರಿಂದ ಅರ್ಹತೆ ದೊರೆಯದು. ಪ್ರಾಥಮಿಕ ಅರ್ಹತೆ (SSLC + ITI) ಕಡ್ಡಾಯವಾಗಿದೆ.

OPS Reintroduction 2025- ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಮರುಜಾರಿ | ಸಿಎಂ ಮಹತ್ವದ ಸೂಚನೆ | ಇದರಿಂದ ಏನೇನು ಪ್ರಯೋಜನ?

ಪರೀಕ್ಷೆ ಹೀಗಿರುತ್ತದೆ?

ಗ್ರೇಡ್-1 ಹುದ್ದೆಗಳಿಗೆ ಪರೀಕ್ಷೆ: ಸಾಮಾನ್ಯ ಜ್ಞಾನ 10 ಅಂಕ, ಸಾಮಾನ್ಯ ಬುದ್ಧಿಮತ್ತೆ ಮತ್ತು ಲಾಜಿಕಲ್ ರೀಸನಿಂಗ್ 15 ಅಂಕ, ಕಂಪ್ಯೂಟರ್ ಜ್ಞಾನ 20 ಅಂಕ, ಗಣಿತ 20 ಅಂಕ ಹಾಗೂ ವಿಜ್ಞಾನ ಮತ್ತು ತಾಂತ್ರಿಕ ವಿಷಯ 35 ಅಂಕ ಒಟ್ಟು 100 ಅಂಕಗಳ ಪರೀಕ್ಷೆಗೆ 90 ನಿಮಿಷ ಅವಧಿಯನ್ನು ನಿಗದಿಪಡಿಸಲಾಗಿದೆ.

ಗ್ರೇಡ್-3 ಹುದ್ದೆಗಳಿಗೆ ಪರೀಕ್ಷೆ: ಗಣಿತ 25 ಅಂಕ, ಸಾಮಾನ್ಯ ಬುದ್ಧಿಮತ್ತೆ/ರೀಸನಿಂಗ್ 25 ಅಂಕ, ಸಾಮಾನ್ಯ ವಿಜ್ಞಾನ 40 ಅಂಕ ಹಾಗೂ ಸಾಮಾನ್ಯ ಜ್ಞಾನ 10 ಅಂಕ. ಒಟ್ಟು 100 ಅಂಕಗಳ ಪರೀಕ್ಷೆಗೆ 90 ನಿಮಿಷ ನಿಮಿಷಗಳ ಅವಧಿ ನಿಗದಿಪಡಿಸಲಾಗಿದೆ. ಎರಡು ಪರೀಕ್ಷೆಗಳಲ್ಲೂ ತಪ್ಪು ಉತ್ತರಗಳಿಗೆ 1/3 ಅಂಕ ಕಡಿತವಾಗುತ್ತದೆ.

ಹುದ್ದೆಗಳ ಹೆಸರುಗಳು
  • ಬ್ಲ್ಯಾಕ್‌ಸ್ಮಿತ್
  • ಕ್ಯಾರಿಯೇಜ್ ಅಂಡ್ ವ್ಯಾಗನ್
  • ಡೀಸೆಲ್ ಮೆಕಾನಿಕಲ್
  • ಎಲೆಕ್ಟ್ರಿಕಲ್
  • ರೆಫ್ರಿಜರೇಷನ್ ಅಂಡ್ ಏರ್ ಕಂಡಿಷನಿAಗ್
  • ಟ್ರ‍್ಯಾಕ್ ಮಷಿನ್
  • ಕಾರ್ಪೆಂಟರ್
  • ವೆಲ್ಡರ್
  • ಫಿಟ್ಟರ್
  • ಮಷಿನಿಸ್ಟ್
  • ಟ್ರಿಮ್ಮರ್
  • ಇತರ ವರ್ಕ್ ಶಾಪ್ ಟ್ರೇಡ್’ಗಳು

Self Employment Loan Subsidy- ₹2 ಲಕ್ಷ ಸಾಲ, ₹30,000 ಸಹಾಯಧನ | ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗಕ್ಕೆ ಸರಕಾರದ ನೆರವು

ಅಧಿಸೂಚನೆ ಹಾಗೂ ಅರ್ಜಿ ವಿವರಗಳು ಯಾವಾಗ?

ಪ್ರಸ್ತುತ ಸಿಇಎನ್-2/2025ರ ಸಂಕ್ಷಿಪ್ತ ಅಧಿಸೂಚನೆ ಹೊರಬಿದ್ದಿದೆ. ಪೂರ್ಣ ಅಧಿಸೂಚನೆಯು ಹಾಗೂ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಇಷ್ಟರಲ್ಲೇ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಖಖಃ ಅಧಿಕೃತ ವೆಬ್‌ಸೈಟ್‌ಗಳನ್ನು ಗಮನಿಸಿ, ಸೂಚನೆ ಬಂದ ಕೂಡಲೇ ಅರ್ಜಿ ಸಲ್ಲಿಸಬೇಕು.

ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ದೇಶದಾದ್ಯಂತ ರೈಲ್ವೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, SSLC ಹಾಗೂ ITI ಅರ್ಹತೆಯುಳ್ಳ ಯುವಕರು ಈ ಬಂಪರ್ ಉದ್ಯೋಗಾವಕಾಶದಿಂದ ಪ್ರಯೋಜನ ಪಡೆದುಕೊಳ್ಳಬಹುದು. ಉದ್ಯೋಗದ ಆಸೆ ಇರುವ ನಿರುದ್ಯೋಗಿಗಳು ತಕ್ಷಣವೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಅಧಿಸೂಚನೆ ಬಂದ ಕೂಡಲೇ ಅರ್ಜಿ ಸಲ್ಲಿಸಿ.

Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…


Spread the love
error: Content is protected !!