ಪಿಎಂ ಸೂರ್ಯ ಘರ್ ಯೋಜನೆಯ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ (Solar Free Electricity) ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ (PM Surya Ghar Muft Bijli Yojana) ಮೂಲಕ ಮನೆಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಗ್ರಾಹಕರಿಗೆ ಕೇಂದ್ರ ಸರ್ಕಾರ ಭರ್ಜರಿ ಅವಕಾಶ ಕಲ್ಪಿಸಿದೆ.
2024ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಈ ಯೋಜನೆಯ ಮೂಲಕ, ದೇಶದ 1 ಕೋಟಿ ಮನೆಗಳಲ್ಲಿ ಸೌರ ವಿದ್ಯುತ್ ಘಟಕ ಅಳವಡಿಸುವ ಗುರಿ ಹೊಂದಲಾಗಿದೆ.
ಮನೆ ಮಾಲೀಕರಿಗೆ ಉಚಿತ ವಿದ್ಯುತ್ ಸಿಗುವುದು ಮಾತ್ರವಲ್ಲದೆ, ಹೆಚ್ಚು ಉತ್ಪಾದನೆಯಾಗುವ ವಿದ್ಯುತ್ ಅನ್ನು ‘ಡಿಸ್ಕಾಂ’ಗಳಿಗೆ (DISCOM) ಮಾರಾಟ ಮಾಡಬಹುದು. ಇದರಿಂದ ಉಳಿತಾಯದ ಜೊತೆಗೆ ಆದಾಯವನ್ನೂ ಪಡೆಯಬಹುದು.
ಸೋಲಾರ್ ಘಟಕದಿಂದ ಸಿಗುವ ಪ್ರಮುಖ ಪ್ರಯೋಜನಗಳು
- 20 ವರ್ಷ ಉಚಿತ ವಿದ್ಯುತ್ ಬಳಕೆ
- ವಿದ್ಯುತ್ ಬಿಲ್ಲು ಶೂನ್ಯಕ್ಕೆ ಸಮಾನವಾಗಲಿದೆ
- ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಿದರೆ ಅದನ್ನು ಸರಕಾರಕ್ಕೆ ಮಾರಾಟ ಮಾಡಿ ಆದಾಯ
- 5 ವರ್ಷ ಉಚಿತ ತಾಂತ್ರಿಕ ನಿರ್ವಹಣೆ
- 25 ವರ್ಷಗಳ ಸುಧೀರ್ಘ ಉಪಯೋಗ
- ಘಟಕ ಅಳವಡಿಕೆಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸೌಲಭ್ಯ
- ಡಿಜಿಟಲ್ ಅರ್ಜಿ ಪ್ರಕ್ರಿಯೆ – ಕೇವಲ 5 ನಿಮಿಷದಲ್ಲಿ ಅರ್ಜಿ ಸಲ್ಲಿಕೆ
- ಪರಿಸರ ಸ್ನೇಹಿ – ಹಸಿರು ಶಕ್ತಿ ಬಳಕೆ
ಸರ್ಕಾರದ ಸಬ್ಸಿಡಿ ಹಾಗೂ ಉಳಿತಾಯದ ಲೆಕ್ಕಾಚಾರ
ಸೋಲಾರ್ ವಿದ್ಯುತ್ ಘಟಕ ಅಳವಡಿಸಲು ಮನೆಯ ಮೇಲ್ಛಾವಣಿಯಲ್ಲಿ ಪ್ರತಿ 1 KW ಘಟಕಕ್ಕೆ 10×10 ಅಡಿಗಳಷ್ಟು ಸ್ಥಳ ಬೇಕಾಗುತ್ತದೆ. ಘಟಕ ವೆಚ್ಚ, ಸರ್ಕಾರದ ಸಬ್ಸಿಡಿ ಹಾಗೂ ಉಳಿತಾಯದ ಲೆಕ್ಕಾಚಾರ ಈ ಕೆಳಗಿನಂತಿದೆ:
1 KW ಘಟಕ: ಈ ಘಟಕ ಅಳವಡಿಕೆಯಿಂದ ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ₹60,000ರಿಂದ ₹80,000 ವರೆಗೆ ವೆಚ್ಚವಾಗಲಿದ್ದ; ಸರ್ಕಾರದಿಂದ ₹30,000 ಸಬ್ಸಿಡಿ ಸಿಗುತ್ತದೆ. ವರ್ಷಕ್ಕೆ ₹9,600 ಉಳಿತಾಯ ಮಾಡಬಹುದು.
2 KW ಘಟಕ: ಇದರ ಅಳವಡಿಕೆಯಿಂದ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ₹1,20,000ರಿಂದ ₹1,60,000 ವರೆಗೆ ನಿರ್ಮಾಣಕ್ಕೆ ವೆಚ್ಚವಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ₹60,000 ಸಹಾಯಧನ ನೀಡಲಿದ್ದು; ಈ ಘಟಕದಿಂದ ವರ್ಷಕ್ಕೆ ₹21,600 ವಾರ್ಷಿಕ ಉಳಿತಾಯವಾಗಲಿದೆ.
3 KW ಘಟಕ: ಈ ಘಟಕದಿಂದ 300 ಯೂನಿಟ್ ಉತ್ಪಾದಿಸಬಹುದು. ಈ ಘಟಕ ನಿರ್ಮಾಣಕ್ಕೆ ₹1,80,000 ರಿಂದ ₹2,40,000 ವೆಚ್ಚವಾಗುತ್ತದೆ. ಈ ಘಟಕ್ಕೆ ₹60,000 ಸರ್ಕಾರದ ಸಬ್ಸಿಡಿ ಸಿಗಲಿದ್ದು; ವರ್ಷಕ್ಕೆ ₹35,000 ಉಳಿತಾಯ ಮಾಡಬಹುದು.

ಯಾರು ಅರ್ಜಿ ಹಾಕಬಹುದು?
- ಖಾಸಗಿ ಮನೆ ಮಾಲೀಕರು (ಗ್ರಾಮೀಣ ಹಾಗೂ ನಗರ)
- ಅಪಾರ್ಟ್ಮೆಂಟ್ / ವಸತಿ ಸಮುಚ್ಚಯಗಳ ಸಂಘಗಳು
- ಚಾವಣಿಯಲ್ಲಿ ಖಾಲಿ ಸ್ಥಳ ಇರುವವರು
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಇತ್ತೀಚಿನ ವಿದ್ಯುತ್ ಬಿಲ್
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಚಾವಣಿಯ ಮೇಲಿನ ಸ್ಥಳದ ಫೋಟೋ
Old Pension Scheme Karnataka- ರಾಜ್ಯ ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ | ಸರ್ಕಾರದ ಮಹತ್ವದ ಸೂಚನೆ
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಕೃತ ವೆಬ್‌ಸೈಟ್ pmsuryaghar.gov.in/ ಗೆ ಭೇಟಿ ನೀಡಿ.
- Apply for Rooftop Solar ಆಯ್ಕೆಮಾಡಿ
- ನಿಮ್ಮ ರಾಜ್ಯ ಮತ್ತು ವಿದ್ಯುತ್ ಪೂರೈಕೆ ಕಂಪನಿಯನ್ನು ಆಯ್ಕೆಮಾಡಿ
ಉದಾ: BESCOM, MESCOM, HESCOM ಇತ್ಯಾದಿ - ಗ್ರಾಹಕ ಐಡಿ (Consumer Number) ನಮೂದಿಸಿ
- ವಿವರ ಭರ್ತಿ ಮಾಡಿ, ದಾಖಲೆಗಳ ಅಪ್ಲೋಡ್ ಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಗುರುತಿನ ಸಂಖ್ಯೆ (Application ID) ಪಡೆದುಕೊಳ್ಳಿ
- ಅರ್ಜಿ ಸ್ಥಿತಿಯನ್ನು ವೆಬ್‌ಸೈಟ್ ಮೂಲಕವೇ ಗಮನಿಸಬಹುದಾಗಿದೆ
ನೋಂದಣಿ ನಂತರದ ಹಂತಗಳು
- ನಿಮ್ಮ ಅರ್ಜಿಯನ್ನು ಸಂಬಂಧಿಸಿದ ಡಿಸ್ಕಾಂ ಕಚೇರಿ ತಾಂತ್ರಿಕ ಪರಿಶೀಲನೆ ನಡೆಸುತ್ತದೆ.
- ಪರಿಶೀಲನೆ ಬಳಿಕ ಅನುಮೋದನೆಯ ನೀಡಿ ಏಜೆನ್ಸಿ ಮೂಲಕ ಸೋಲಾರ್ ಘಟಕ ಅಳವಡಿಸಲಾಗುತ್ತದೆ.
- ಬಳಿಕ ಸಬ್ಸಿಡಿ ಮೊತ್ತ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಈ ಯೋಜನೆಯು ಮನೆಯ ಖರ್ಚು ಕಡಿಮೆ ಮಾಡಬೇಕೆಂದು ಇಚ್ಛೆಯುಳ್ಳ ಕುಟುಂಬಗಳಿಗೆ, ನಿವೃತ್ತರಾದ ಹಿರಿಯ ನಾಗರಿಕರಿಗೆ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಪ್ರಜ್ಞಾವಂತರಿಗೆ ಅಮೂಲ್ಯ ಅವಕಾಶವಾಗಿದೆ. ಇದು ನಿಮ್ಮ ಮನೆಗೆ ನೈಸರ್ಗಿಕ ಬೆಳಕು ಮಾತ್ರವಲ್ಲ ಆರ್ಥಿಕ ಭದ್ರತೆಯನ್ನೂ ನೀಡುತ್ತದೆ.
ಅರ್ಜಿ ಲಿಂಕ್ : Apply ಮಾಡಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.