ರಾಜ್ಯ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ (Old Pension Scheme Karnataka) ಕುರಿತು ಕರ್ನಾಟಕ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ದಿನಾಂಕ 01-04-2006ರ ಪೂರ್ವದಲ್ಲಿ ನೇಮಕಾತಿ ಆದೇಶಗಳಡಿಯಲ್ಲಿ ಆಯ್ಕೆಗೊಂಡು, ನಂತರ ಸೇವೆಗೆ ಸೇರಿದ 13,000ಕ್ಕೂ ಹೆಚ್ಚು ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ (Old Pension Scheme – OPS) ಒಳಪಡಿಸಲು ರಾಜ್ಯ ಸರ್ಕಾರ ಅಂತಿಮವಾಗಿ ತೀರ್ಮಾನಿಸಿದೆ.
ಇದರ ಪರಿಣಾಮವಾಗಿ ಇತ್ತೀಚೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಭೆಯಲ್ಲಿ ನಿರ್ಣಯವಾಗಿದ್ದು, ಮಂಡಳಿಯ ನೌಕರರನ್ನು ಎನ್.ಪಿ.ಎಸ್ (NPS) ನಿಂದ ಓ.ಪಿ.ಎಸ್’ಗೆ (OPS) ವರ್ಗಾಯಿಸುವ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗಿದೆ.
ಹಳೆಯ ಪಿಂಚಣಿ ಯೋಜನೆ (OPS) ಮಹತ್ವ
ಹಳೆಯ ಪಿಂಚಣಿ ಯೋಜನೆಯ ಅಡಿಯಲ್ಲಿ, ನಿವೃತ್ತಿಯ ಬಳಿಕ ನೌಕರರಿಗೆ ಜೀವಿತಾವಧಿಯ ವರೆಗೆ ನಿಗದಿತ ಪ್ರಮಾಣದ ಪಿಂಚಣಿ ಮತ್ತು ವಿವಿಧ ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದರಲ್ಲಿ ನೌಕರನ ಕೊಡುಗೆ ಅಗತ್ಯವಿಲ್ಲ, ಸಂಪೂರ್ಣ ಪಿಂಚಣಿ ಸರ್ಕಾರದಿಂದ ನೀಡಲ್ಪಡುತ್ತದೆ.
ಹೊಸ ಪಿಂಚಣಿ ಯೋಜನೆ (NPS) ನಿಯಮಾವಳಿ
2006ರಿಂದ ಜಾರಿಗೆ ಬಂದಿರುವ ಹೊಸ ಪಿಂಚಣಿ ಯೋಜನೆಯ (NPS) ಅಡಿಯಲ್ಲಿ ಪ್ರತಿ ತಿಂಗಳು ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಯ 10% ಮೊತ್ತವನ್ನು ಪಿಂಚಣಿ ನಿಧಿಗೆ ಕೊಡುಗೆಯಾಗಿ ಕಟಾವು ಮಾಡಲಾಗುತ್ತದೆ. ಇದಕ್ಕೆ ಸರ್ಕಾರವು 14% ಹಂಚಿಕೆ ನೀಡುತ್ತದೆ.
ಈ ಮೊತ್ತವನ್ನು ಮುಂಬೈಯಲ್ಲಿನ PFRDA ಅಧೀನದ NPS ಟ್ರಸ್ಟ್ ಅಡಿಯಲ್ಲಿ ನೌಕರರ ಪ್ರಾನ್ ಖಾತೆಗೆ (PRAN) ಜಮೆ ಮಾಡಲಾಗುತ್ತದೆ. ನಿವೃತ್ತಿಯಾದ ನಂತರ ಈ ಮೊತ್ತದ ಮೇಲೆ ನಿರ್ಧಿಷ್ಟ ಪಾಲಿನಲ್ಲಿ ನೌಕರರಿಗೆ ಪಿಂಚಣಿ ಲಭ್ಯವಿರುತ್ತದೆ.

BWSSB ನೌಕರರಿಗೆ ನೇರ ಲಾಭ
BWSSBಯಲ್ಲಿ ಹಿಂದೆ ನೇಮಕಗೊಂಡು 01-04-2006ರ ನಂತರ ಸೇವೆಗೆ ಸೇರಿದ 104 ನೌಕರರಲ್ಲಿ 102 ಮಂದಿ ಸೇವೆಯಲ್ಲಿದ್ದು, ಇನ್ನು ಇಬ್ಬರು ಈಗಾಗಲೇ ನಿವೃತ್ತರಾಗಿದ್ದಾರೆ. ಈ ಎಲ್ಲ ನೌಕರರಿಗೂ NPS ಯಿಂದ OPSಗೆ ವರ್ಗಾವಣೆ ಸಾಧ್ಯವಿದೆ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.
ಇವರ ಪ್ರಾನ್ ಖಾತೆಗಳಲ್ಲಿ ಸಂಗ್ರಹವಾಗಿರುವ ಎನ್.ಪಿ.ಎಸ್ ನಿಧಿಯನ್ನು ಹಿಂಪಡೆದು ಹಳೆಯ ಪಿಂಚಣಿ ಯೋಜನೆಗೆ ತಲುಪಿಸಲು ಮಾರ್ಗಸೂಚಿಗಳಂತೆ ಕ್ರಮ ಕೈಗೊಳ್ಳಲು BWSSB ಸಭೆಯಲ್ಲಿ ನಿರ್ಣಯವಾಗಿದೆ.
ಆದೇಶದ ಮೂಲ ನಿರ್ಧಾರಗಳೇನು?
2006ರ ಏಪ್ರಿಲ್ 1ರ ಒಳಗೆ ನಡೆದ ನೇಮಕಾತಿಯ ಅಧಿಸೂಚನೆಯ ಆಧಾರದ ಮೇಲೆ ಆಯ್ಕೆಯಾದವರನ್ನು OPSಗೆ ವರ್ಗಾಯಿಸಬಹುದೆಂದು ಸರ್ಕಾರ ಸ್ಪಷ್ಟಪಡಿಸಿದೆ. 25-04-2025 ರಂದು ನಡೆದ BWSSB ಮಂಡಳಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬಲ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಹಾಗೂ ನೌಕರರ ಸಂಘಗಳ ಮನವಿಯನ್ನೂ ಪರಿಗಣಿಸಿ ಕ್ರಮ ಜರುಗಿಸಲಾಗಿದೆ.
ಮುಂದೆ ಏನು ನಿರೀಕ್ಷಿಸಬಹುದು?
ಈ ನಿರ್ಧಾರದಿಂದ ರಾಜ್ಯದ ಇತರ ಇಲಾಖೆಗಳಲ್ಲೂ 2006ರ ಮೊದಲಿನ ನೇಮಕಾತಿ ಹೊಂದಿದ ಎನ್.ಪಿ.ಎಸ್ ನೌಕರರಿಗೂ OPS ಜಾರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಮೂಡಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ NPS ನಿಂದ OPSಗೆ ಹೋರಾಟ ನಡೆಸುತ್ತಿರುವ ನೌಕರರ ಸಂಘಟನೆಗಳಿಗೆ ಇದು ಪ್ರೇರಣೆಯಾಗಿದೆ.
RBI Repo Rate Cut- ಇನ್ಮುಂದೆ ಕಡಿಮೆ ಬಡ್ಡಿಗೆ ಸಾಲ | ಬ್ಯಾಂಕಿನ ಎಲ್ಲಾ ರೀತಿಯ ಸಾಲಗಳಿಗೂ ಕಡಿಮೆ ಬಡ್ಡಿದರ ನಿಗದಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.