ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯನ್ನು (Education Loan Scheme) ರೂಪಿಸಿದ್ದು; ಈ ಯೋಜನೆಯಡಿ ವಿದ್ಯಾರ್ಥಿಗಳು 5 ಲಕ್ಷ ರೂ. ವರೆಗೂ ಶಿಕ್ಷಣ ಸಾಲ ಪಡೆಯಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (Karnataka Minorities Development Corporation – KMDC) ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ‘ಅರಿವು ವಿದ್ಯಾಭ್ಯಾಸ ಸಾಲ ಯೋಜನೆ’ಯನ್ನು ರೂಪಿಸಿದೆ.
ಈ ಯೋಜನೆಯಡಿ, ಅರ್ಹ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುತ್ತಿದೆ. ಈ ಪ್ರಯೋಜನ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಬಹುದು.
ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಥಿಕ ಹಿನ್ನಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸುವುದು ಮತ್ತು ಅವರ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅಲ್ಪಸಂಖ್ಯಾತ ಸಮುದಾಯಕ್ಕೆ ಒಳಪಡುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಸಿಇಟಿ (CET), ನೀಟ್ (NEET), ಪಿಜಿಇಟಿ (PGCET) ಮೂಲಕ ಸರ್ಕಾರಿ ಕೋಟಾದಲ್ಲಿ ಸರ್ಕಾರಿ ಅಥವಾ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿರಬೇಕು.
ಯಾವ ಕೋರ್ಸ್’ಗಳಿಗೆ ಸಾಲ ಲಭ್ಯವಿದೆ?
ವೈದ್ಯಕೀಯ ಕೋರ್ಸ್’ಗಳು: ಎಂ.ಬಿ.ಬಿ.ಎಸ್ (MBBS), ಎಂ.ಡಿ. (MD), ಎಂ.ಎಸ್. (MS), ಬಿ.ಡಿ.ಎಸ್. (BDS), ಎಂ.ಡಿ.ಎಸ್. (MDS), ಬಿ.ಆಯುಷ್ (B.Ayush), ಎಂ.ಆಯುಷ್ (M.Ayush)
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್’ಗಳು: ಬಿ.ಇ. (BE), ಬಿ.ಟೆಕ್. (B.Tech), ಎಂ.ಇ. (ME), ಎಂ.ಟೆಕ್ (M.Tech), ಬಿ.ಆರ್ಕ್ (B.Arch), ಎಂ.ಆರ್ಕ್ (M.Arch)
ವಾಣಿಜ್ಯ ಮತ್ತು ನಿರ್ವಹಣಾ ಕೋರ್ಸ್’ಗಳು: ಎಂ.ಬಿ.ಎ. (MBA), ಎಂ.ಸಿ.ಎ. (MCA), ಎಲ್.ಎಲ್.ಬಿ (LLB)
ಪರಾಮೆಡಿಕಲ್ ಮತ್ತು ಇತರೆ ವೃತ್ತಿಪರ ಕೋರ್ಸ್’ಗಳು: ನರ್ಸಿಂಗ್, ಫಾರ್ಮಸಿ, ಆಹಾರ ತಂತ್ರಜ್ಞಾನ, ಹೋಟೆಲ್ ಮ್ಯಾನೇಜ್ಮೆಂಟ್, ಸೋಷಿಯಲ್ ವರ್ಕ್, ಹೋಮ್ ಸೈನ್ಸ್, ಮಾಧ್ಯಮ ಮತ್ತು ಸಂವಹನ ಕೋರ್ಸ್’ಗಳು.

Auto Taxi Loan Subsidy- ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಸರ್ಕಾರದ ಸಬ್ಸಿಡಿ | ಈಗಲೇ ಅರ್ಜಿ ಹಾಕಿ
ಯಾವ ಕೋರ್ಸ್ ಎಷ್ಟೆಷ್ಟು ಸಾಲ ಸಿಗುತ್ತದೆ?
- ಎಂ.ಬಿ.ಬಿ.ಎಸ್., ಎಂ.ಡಿ., ಎಂ.ಎಸ್- ₹5,00,000
- ಬಿ.ಡಿ.ಎಸ್., ಎಂ.ಡಿ.ಎಸ್- ₹1,00,000
- ಬಿ.ಆಯುಷ್, ಎಂ.ಆಯುಷ್ – ₹50,000
- ಬಿ.ಇ., ಬಿ.ಟೆಕ್., ಎಂ.ಇ., ಎಂ.ಟೆಕ್., ಬಿ.ಆರ್ಕ್., ಎಂ.ಆರ್ಕ್- ₹50,000
- ಎಂ.ಬಿ.ಎ., ಎಂ.ಸಿ.ಎ., ಎಲ್.ಎಲ್.ಬಿ.- ₹50,000
- ಇತರೆ ವೃತ್ತಿಪರ ಕೋರ್ಸ್’ಗಳು- ₹50,000
ಸಾಲ ಮರುಪಾವತಿ ಹೇಗೆ?
ವಿದ್ಯಾರ್ಥಿಯು ಕೋರ್ಸ್ ಮುಗಿಸಿದ ನಂತರ ಒಂದು ವರ್ಷ ಸಡಿಲಾವಧಿ (grace period) ಇದೆ. ನಂತರ, 48 ತಿಂಗಳ ಅವಧಿಯಲ್ಲಿ ಕೇವಲ ವಾರ್ಷಿಕ ಶೇ.2ರಷ್ಟು ಬಡ್ಡಿದರದಲ್ಲಿ ಸಾಲವನ್ನು ಮರುಪಾವತಿ ಮಾಡಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಬೊನಾಫೈಡ್ ಪ್ರಮಾಣಪತ್ರ/ಅಧ್ಯಯನ ಪ್ರಮಾಣಪತ್ರ
- ಕಾಲೇಜಿನ ಶುಲ್ಕ ರಶೀದಿ
- ಹಿಂದಿನ ವರ್ಷದ ಪಾಸಾದ ಅಂಕಪಟ್ಟಿ
- ಬ್ಯಾಂಕ್ ಖಾತೆ ವಿವರ
- ಭದ್ರತಾ ಠೇವಣಿ ಪಾವತಿದ ರಶೀದಿ
- KEA ಸೆಟ್ ಆರ್ಡರ್ ಅಥವಾ ಪ್ರವೇಶದ ಆದೇಶ ಪ್ರತಿಗಳು
- ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಇಂಡೆಮ್ನಿಟಿ ಬಾಂಡ್ (ನಷ್ಟ ಪರಿಹಾರ ಬಾಂಡ್)
- ವಿದ್ಯಾರ್ಥಿ ಮತ್ತು ಪೋಷಕರಿಂದ ಸ್ವಯಂ ಘೋಷಣೆ ಪತ್ರ
Women Loan Subsidy- ಮಹಿಳೆಯರಿಗಾಗಿಯೇ ಇರುವ ಸರ್ಕಾರದ ಸಾಲ ಮತ್ತು ಸಬ್ಸಿಡಿ ಯೋಜನೆಗಳು
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್‌ಸೈಟ್ kmdconline.karnataka.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-05-2025
ಅರಿವು ಯೋಜನೆಯ ಪ್ರಯೋಜನಗಳು
- ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ
- ಸಾಲ ಮರುಪಾವತಿಗೆ ಹೆಚ್ಚಿನ ಅವಧಿ
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ
- ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರಿಸಲು ನೆರವು
- ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ, ನರ್ಸಿಂಗ್, ಫಾರ್ಮಸಿ ಮುಂತಾದ ಕ್ಷೇತ್ರಗಳಲ್ಲಿ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ
ಅರ್ಜಿ ಸಲ್ಲಿಸಲು ವಿಳಂಬ ಮಾಡದೇ, ತಕ್ಷಣವೇ ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿ ಹಾಕಿ. ನಿಮ್ಮ ಶೈಕ್ಷಣಿಕ ಕನಸುಗಳನ್ನು ಅರಿವು ಯೋಜನೆಯ ಸಹಾಯದಿಂದ ನನಸು ಮಾಡಿಕೊಳ್ಳಿ!
ಅರ್ಜಿ ಸಲ್ಲಿಸಲು ಲಿಂಕ್: Apply Now
SSLC Result 2025 Karnataka- ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಯಾವಾಗ? ಹೊಸ ಅಪ್ಡೇಟ್ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.