ವಿದ್ಯಾಧನ್-ಗೋಮಾಬಾಯಿ ವಿದ್ಯಾರ್ಥಿವೇತನಕ್ಕೆ (Vidyadhan-Gomabai Scholarship 2025) ಅರ್ಜಿ ಆಹ್ವಾನಿಸಲಾಗಿದೆ. ಪದವಿ ವ್ಯಾಸಂಗಕ್ಕೆ ವಾರ್ಷಿಕ 75,000 ರೂ. ವರೆಗೂ ಆರ್ಥಿಕ ನೆರವು ಸಿಗಲಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
2025-2026ನೇ ಸಾಲಿನ ಸರೋಜಿನಿ ದಾಮೋದರನ್ ಫೌಂಡೇಶನ್ (SDF) ವತಿಯಿಂದ ವಿದ್ಯಾಧನ್-ಗೋಮಾಬಾಯಿ ವಿದ್ಯಾರ್ಥಿವೇತನ 2025ಕ್ಕೆ (Vidyadhan-Gomabai Degree Scholarship 2025)ಅರ್ಜಿ ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿವೇತನ ಯೋಜನೆಯ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ರೂ. ಆರ್ಥಿಕ ನೆರವು ಸಿಗಲಿದ್ದು; ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷ ರೂ. ಮಿತಿಯಲ್ಲಿರಬೇಕು ಮತ್ತು 2025ನೇ-26ನೇ ಸಾಲಿನಲ್ಲಿ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬೇಕು.
ಹಿಂದಿನ ವರ್ಷದಲ್ಲಿ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ ಶೇ.75ರಷ್ಟು ಅಂಕಗಳು ಪಡೆದಿರಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ಅಂಕ ರಿಯಾಯ್ತಿ ಇದ್ದು; ಕನಿಷ್ಠ ಶೇ.65ರಷ್ಟು ಅಂಕ ಪಡೆದಿದ್ದರೆ ಸಾಕು.

ವಾರ್ಷಿಕ ಎಷ್ಟು ಹಣ ಸಿಗಲಿದೆ?
ವಿದ್ಯಾಧನ್-ಗೋಮಾಬಾಯಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್ ಶುಲ್ಕದ ಆಧಾರದ ಮೇಲೆ ವಾರ್ಷಿಕ 15,000 ರೂ. ದಿಂದ 75,000 ರೂ. ವರೆಗೆ ಆರ್ಥಿಕ ನೆರವು ಸಿಗಲಿದೆ.
ಪ್ರತೀ ವರ್ಷ ನವೀಕರಣ ಮಾಡಿಕೊಂಡರೆ ಈ ವಿದ್ಯಾರ್ಥಿವೇತನ ಮೊತ್ತವು ಪದವಿ ವ್ಯಾಸಂಗದ ಸಂಪೂರ್ಣ ಅವಧಿಗೆ, ಅಂದರೆ 3-5 ವರ್ಷಗಳ ಕಾಲ ವರ್ಷ ವರ್ಷವೂ ಮುಂದುವರೆಯಲಿದೆ.
ಇದನ್ನೂ ಓದಿ: E-Swasthu Andolana- ಇ-ಸ್ವತ್ತು ಆಂದೋಲನ | ಗ್ರಾಮ ಪಂಚಾಯತಿ ವ್ಯಾಪ್ತಿಯ 1 ಕೋಟಿ ಆಸ್ತಿಗಳಿಗೆ ಇ-ಸ್ವತ್ತು
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ
- ಆದಾಯ ಪ್ರಮಾಣಪತ್ರ
- ಪ್ರವೇಶ ಪರೀಕ್ಷಾ ಅಂಕಪಟ್ಟಿ
- ಫೋಟೋ
- ಮೊಬೈಲ್ ನಂಬರ್
- ಇಮೇಲ್ ಐಡಿ
ಅರ್ಜಿ ಸಲ್ಲಿಸುವುದು ಹೇಗೆ?
ಸರೋಜಿನಿ ದಾಮೋದರನ್ ಫೌಂಡೇಶನ್ Vidyadhan-Gomabai Degree Scholarship 2025ಗೆ ಅರ್ಹರಾದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದ್ದು; ಈ ಕೆಳಗಿನ ಹಂತಗಳನ್ನು ಅನುಸರಿಸಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹಂತ-1: ಮೊದಲು ಈ Vidyadhan Gomabai Degree Scholarship ಅಧಿಕೃತ ಲಿಂಕ್ ಬಳಸಿಕೊಂಡು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ.
ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿ ಮುಖಾಂತರ ರಿಜಿಸ್ಟರ್ ಮಾಡಿಕೊಳ್ಳಿ. ರಿಜಿಸ್ಟರ್ ಆದ ನಂತರ ಪುನಃ ವೆಬ್ಸೈಟ್ ಪೋರ್ಟಲ್’ಗೆ ಹೋಗಿ ಲಾಗಿನ್ ಮಾಡಿ.
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ಹಂತ-2: ಲಾಗಿನ್ ಆದ ನಂತರ Vidyadhan-Gomabai Degree Scholarship 2025 ಆಪ್ಷನ್’ಗೆ ಹೋಗಿ ಕ್ಲಿಕ್ ಮಾಡಿ. ಆಗ ನಿಮಗೆ ಒಂದು ಅರ್ಜಿ ಫಾರಂ ತೆರೆದುಕೊಳ್ಳುತ್ತದೆ. ಅದನ್ನು ಸರಿಯಾಗಿ ಭರ್ತಿ ಮಾಡಿ.
ಹಂತ-3: ಅಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹಾಗೂ ಅಪ್ಲೋಡ್ ಮಾಡಿ. ಅಪ್ಲೋಡ್ ಮಾಡಿಕೊಂಡಿದ ನಂತರ ನಿಮ್ಮ ಅರ್ಜಿಯನ್ನು ಪುನಃ ಪರಿಶೀಲಿಸಿ ನಂತರ Submiಣ ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-11-2025
- ಅರ್ಜಿ ಲಿಂಕ್: Apply Now
- ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: +91 8068333500 / +919663517131

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.