ನಿರುದ್ಯೋಗಿಗಳಿಗೆ ರಾಜ್ಯ ಸರಕಾರವು ಸಹಾಯಧನ ಒದಗಿಸುತ್ತಿದೆ. ಈ ನೆರವಿಗೆ ಯಾರೆಲ್ಲ ಅರ್ಜಿ ಅರ್ಹರು? ಈ ಸಾಲ ಮತ್ತು ಸಬ್ಸಿಡಿ (Self Employment Loan Subsidy) ಪಡೆಯುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ಉದ್ಯಮ ಆರಂಭಿಸಲು ಸುಲಭ ಸಾಲ ಮತ್ತು ಸಬ್ಸಿಡಿಯ ಆಧಾರದಲ್ಲಿ ‘ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ’ ಜಾರಿಗೊಳಿಸಿದೆ. ನಿರುದ್ಯೋಗ ಯುವಕ-ಯುವತಿಗಳಿಗೆ ನೌಕರಿ ಹುಡುಕುವ ಬದಲು ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸ್ವಯಂ ಉದ್ಯೋಗ ಯೋಜನೆಯ ಮೂಲಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಮತ್ತು ಮಹಿಳೆಯರಿಗೆ ತಮ್ಮ ಕ್ಷೇತ್ರದಲ್ಲಿ ತಾವು ಬಯಸಿದ ಉದ್ಯಮ, ವ್ಯಾಪಾರ ಅಥವಾ ವಾಹನ ಸಂಚಾಲನೆಯAತಹ ಚಟುವಟಿಕೆಗಳು ಆರಂಭಿಸಲು ಸರ್ಕಾರವು ಸಾಲ ಹಾಗೂ ಸಹಾಯಧನ ಒದಗಿಸುತ್ತಿದೆ. ರಾಜ್ಯದಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ನಿಗಮಗಳ ಮೂಲಕ ಈ ಯೋಜನೆ ಜಾರಿಗೆ ತರಲಾಗಿದೆ.
ಸಾಲ ಮತ್ತು ಸಬ್ಸಿಡಿ ಎಷ್ಟು?
ವಿವಿಧ ನಿಗಮಗಳ ‘ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ’ಯಡಿ ಸ್ವಯಂ ಉದ್ಯೋಗ ಘಟಕ ವೆಚ್ಚಕ್ಕೆ ಅನುಗುಣವಾಗಿ ₹50,000 ದಿಂದ ₹2 ಲಕ್ಷ ವರೆಗೂ ಆರ್ಥಿಕ ನೆರವು ಸಿಗಲಿದೆ.
ಇದರಲ್ಲಿ ಗರಿಷ್ಠ ಶೇ.15ರಷ್ಟು ಸಹಾಯಧನ ಸಿಗಲಿದೆ. ಕನಿಷ್ಟ ₹1 ಲಕ್ಷ ಸಾಲಕ್ಕೆ ₹20,000 ಹಾಗೂ ಗರಿಷ್ಟ ₹2 ಲಕ್ಷ ಸಾಲಕ್ಕೆ ₹30,000 ಸಬ್ಸಿಡಿ ಇದೆ. ಉಳಿದ ಮೊತ್ತವನ್ನು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಯಲ್ಲಿ ಸಾಲ ಮರುಪಾವತಿಸಲು ಅವಕಾಶವಿದೆ.

ಈ ಯೋಜನೆಗೆ ಅರ್ಹರಾಗುವವರು ಯಾರು?
ಈ ಕೆಳಗಿನ ನಿಗಮಗಳ ವ್ಯಾಪ್ತಿಗೆ ಬರುವ ಯುವಕರು ಈ ಯೋಜನೆಗೆ ಅರ್ಜಿ ಹಾಕಬಹುದು:
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
- ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ
- ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
- ನಿಜಗುಣ ಶರಣ ಅಂಬಿಗರ ಚೌಡಯ್ಯ ನಿಗಮ
- ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
- ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
- ಕರ್ನಾಟಕ ಮರಾಠ ಸಮುದಾಯಗಳ ನಿಗಮ
- ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
ಅರ್ಹತಾ ಮಾನದಂಡಗಳು
- ವಯಸ್ಸು: 21 ರಿಂದ 45 ವರ್ಷಗಳೊಳಗಿನ ಯುವಕರು
- ಆದಾಯ ಮಿತಿ: ಗ್ರಾಮೀಣ ಪ್ರದೇಶವರಿಗೆ ವಾರ್ಷಿಕ ಆದಾಯ ₹98,000 ಒಳಗೆ ಹಾಗೂ ನಗರ ಪ್ರದೇಶವರಿಗೆ ವಾರ್ಷಿಕ ಆದಾಯ ₹1,20,000 ಒಳಗೆ ಇರಬೇಕು.
- ಇತರೆ ಷರತ್ತು: ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ಇದೇ ನಿಗಮದಿಂದ ಅಥವಾ ಇತರ ಸರ್ಕಾರಿ ಯೋಜನೆಯಿಂದ ಸಾಲ/ಸಹಾಯಧನ ಪಡೆದಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ (ನಿವಾಸ ಪುರಾವೆ ಸಹಿತ)
- ಚಾಲನಾ ಪರವಾನಗಿ ಪ್ರತಿಯು
- ಬ್ಯಾಂಕ್ ಪಾಸ್‌ಬುಕ್ ನಕಲು
- ಸ್ವಯಂ ಘೋಷಣಾ ಪತ್ರ (Self Declaration Letter)
ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?
ಅರ್ಜಿದಾರರು ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…
ಗಮನಿಸಬೇಕಾದ ಅಂಶಗಳು
- ಬ್ಯಾಂಕ್ ಖಾತೆ ಆಧಾರ್ ಜೋಡಣೆ ಆಗಿರಬೇಕು
- ಎಲ್ಲಾ ದಾಖಲೆಗಳಲ್ಲಿ ಅರ್ಜಿದಾರರ ಹೆಸರು ಒಂದೇ ರೀತಿಯಾಗಿರಬೇಕು
- ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು
- ಆನ್‌ಲೈನ್ ಅರ್ಜಿಗೆ ಔಖಿP ಆಧಾರಿತ ದೃಢೀಕರಣ ಅಗತ್ಯವಿರುತ್ತದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
30 ಜೂನ್ 2025 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವಾಗಿದೆ. ಇಚ್ಛಾಸಕ್ತ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ನಿರುದ್ಯೋಗಿಗಳಿಗೆ ತನ್ನದೇ ಆದ ಉದ್ಯಮ ಆರಂಭಿಸಲು ಇದು ಒಳ್ಳೆಯ ಅವಕಾಶ.
ನಿರುದ್ಯೋಗಿ ಯುವಕರು ಮತ್ತು ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದು ಸದಾವಕಾಶವಾಗಿದೆ. ಹೆಚ್ಚಿನ ಮಾಹಿತಿಗೆ ಸಂಬAಧಿಸಿದ ನಿಗಮದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಸೇವಾ ಸಿಂಧು ವೆಬ್‌ಸೈಟ್‌ನ್ನು ಭೇಟಿ ನೀಡಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.