ಮುಂಗಾರು ಅಧಿವೇಶನದಲ್ಲಿ ಸರಕಾರಿ ನೌಕರರ ಸಂಬಳ ಏರಿಕೆ ಚರ್ಚೆಗೆ ಸಿಎಂ ಸೂಚನೆ | ಹಳೇ ಪಿಂಚಣಿ ಯೋಜನೆ ಮರುಜಾರಿ ಸಾಧ್ಯತೆ Salary hike of govt employees in Monsoon session

Spread the love

Salary hike of govt employees in Monsoon session : ನಾಳೆಯಿಂದ (ಜುಲೈ 15) ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ (Monsoon session 2024) ರಾಜ್ಯ ಸರಕಾರಿ ನೌಕರರ ಬೇಡಿಕೆ ಕುರಿತ ಚರ್ಚೆಗೆ ವೇದಿಕೆ ರೆಡಿಯಾಗಿದೆ. ಸರಕಾರಿ ನೌಕರರು (Government Employees) ಒಟ್ಟು ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು; ಈ ಪೈಕಿ ಎರಡು ಬೇಡಿಕೆಗಳ ಕುರಿತು ಗಂಭೀರ ಚರ್ಚೆ ನಡೆದು ಅಂತಿಮ ತೀರ್ಮಾನ ಹೊರ ಬೀಳುವ ಸಂಭವವಿದೆ.

ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ
WhatsApp Group Join Now
Telegram Group Join Now

ರಾಜ್ಯ ಸರಕಾರಿ ನೌಕರರು 7ನೇ ವೇತನ ಆಯೋಗ (7th Pay Commission) ವರದಿಯ ಶಿಫಾರಸುಗಳನ್ನು ಯಥಾವತ್ ಜಾರಿಗೊಳಿಸಬೇಕು, ಹೊಸ ಪಿಂಚಣಿ ಯೋಜನೆಯನ್ನು (New Pension Scheme – NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ (Old Pension Scheme – OPS) ಮರುಜಾರಿಗೊಳಿಸಬೇಕು ಹಾಗೂ ನಗದುರಹಿತ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ‘ಆರೋಗ್ಯ ಸಂಜೀವಿನಿ’ ಯೋಜನೆ ಜಾರಿಗೊಳಿಸಬೇಕು ಎಂಬ ಮೂರು ಪ್ರಮುಖ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ.

ಈ ಪೈಕಿ ಮೊದಲ ಎರಡು ಬೇಡಿಕೆಗಳಾದ 7ನೇ ವೇತನ ಆಯೋಗದ ವರದಿ ಶಿಫಾರಸುಗಳ ಜಾರಿ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸುವ ಬೇಡಿಕೆ ಬಗ್ಗೆ ಚರ್ಚಿಸಲು ಇದೀಗ ಸಂಪುಟ ಸನ್ನದ್ಧವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಎರಡೂ ಬೇಡಿಕೆ ಕುರಿತು ಸಂಪುಟದ ಮುಂದೆ ಕಡತ ಮಂಡಿಸುವ೦ತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜುಲೈ 15ರಿಂದ ಮುಂಗಾರು ಅಧಿವೇಶನ: ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ‘ಸಂಬಳ ಏರಿಕೆ’ ಸಿಹಿಸುದ್ದಿ? 7th Pay Commission Report in Monsoon Session

Salary hike of govt employees in Monsoon session
ಆಗಸ್ಟ್’ನಿಂದ ನೌಕರರ ವೇತನ ಏರಿಕೆ ಖಚಿತ

ನಾಳೆ ನಡೆಯಲಿರುವ (ಜುಲೈ 15) ಸಚಿವ ಸಂಪುಟ ಸಭೆಯ ಮುಖ್ಯ ಕಾರ್ಯಸೂಚಿಯಲ್ಲಿರುವ ಒಟ್ಟು 20 ವಿಷಯಗಳ ಪೈಕಿ 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ವಿಷಯ ಕೂಡ ಸೇರ್ಪಡೆಯಾಗಿದೆ. ವೇತನ ಹೆಚ್ಚಳವನ್ನು ಇದೇ ಆಗಸ್ಟ್ 1ರಿಂದ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.

7ನೇ ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದೆ. ಇದರಲ್ಲಿ ಈಗಾಗಲೇ ಶೇ.17 ಮಧ್ಯಂತರ ಪರಿಹಾರ ನೀಡಲಾಗಿದ್ದು; ಉಳಿಕೆ ಶೇ.10.5 ಒದಗಿಸಬೇಕಾಗಿದೆ. ಇದಕ್ಕಾಗಿಯೇ ಬಜೆಟ್‌ನಲ್ಲಿ 14,000 ಕೋಟಿ ರೂಪಾಯಿ ಮೀಸಲಿಟ್ಟಿದ್ದು; ಈ ಹಣಕಾಸು ವರ್ಷದಲ್ಲಿ ಈಗಾಗಲೇ ನಾಲ್ಕು ತಿಂಗಳು ಮುಗಿದಿದೆ. ಮುಂದಿನ 8 ತಿಂಗಳಿಗೆ 14,000 ಕೋಟಿ ರೂಪಾಯಿ ಸಾಕಾಗುತ್ತವೆ ಎನ್ನಲಾಗುತ್ತಿದೆ. ಅಂತಿಮ ಮಾಹಿತಿ ಸಂಪುಟ ಸಭೆಯ ನಂತರವೇ ತಿಳಿಯಲಿದೆ.

ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಜಾರಿ? ಯಾರಿಗೆಲ್ಲ ಸಿಗಲಿದೆ ಇದರ ಲಾಭ? Old pension scheme for govt employees

ಹಳೆ ಪಿಂಚಣಿ ಯೋಜನೆ ಮರು ಜಾರಿ?

ಅದೇ ರೀತಿ ಸಂಪುಟದ ಮುಂದೆ ಹೊಸ ಪಿಂಚಣಿ ಯೋಜನೆಯ (ಎನ್‌ಪಿಎಸ್) ರದ್ದು ಕಡತ ಮಂಡಿಸುವAತೆ ಕೂಡ ಸಿಎಂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೊಸ ಪಿಂಚಣಿ ಯೋಜನೆ ರದ್ದು ಮಾಡುವುದರಿಂದ 2.78 ಲಕ್ಷ ಎನ್‌ಪಿಎಸ್ ನೌಕರರಿಗೆ ಅನುಕೂಲವಾಗಲಿದೆ. ಇದರಿಂದ ಸರಕಾರಕ್ಕೆ ಯಾವುದೇ ಹೊರೆ ಇಲ್ಲ, ಬದಲಾಗಿ ಉಳಿತಾಯವಾಗಲಿದೆ ಎನ್ನಲಾಗುತ್ತಿದೆ.

ಹೊಸ ಪಿಂಚಣಿ ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರಕಾರಿ ನೌಕರರಿಗೆ ಸದ್ಯಕ್ಕೆ ಮಾಸಿಕ ಕೇವಲ 1,500 ರೂಪಾಯಿ ಪಿಂಚಣಿ ಸಿಗುತ್ತಿದೆ. ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2.50 ಲಕ್ಷ ಎನ್‌ಪಿಎಸ್ ಯೋಜನೆ ವ್ಯಾಪ್ತಿಯ ನೌಕರರ ಕೊನೆಗಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ಅಭದ್ರತೆಗೆ ಸಿಲುಕುತ್ತಿದೆ. ಅಂತಹ ನೌಕರರ ಕುಟುಂಬದ ನೆರವಿಗೆ ಸರಕಾರ ಧಾವಿಸಬೇಕು ಎಂದು ನೌಕರರ ವಲಯ ಒತ್ತಾಸಿದೆ. ಈ ಕುರಿತ ಚರ್ಚೆ ಕೂಡ ಮುಂಗಾರು ಅಧಿವೇಶನದಲ್ಲಿ ನಡೆಯಲಿದ್ದು; ಅಧಿವೇಶನದ ಅಂತಿಮ ವೇಳೆಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ.

ಸರಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸು ವರದಿ ಆಗಸ್ಟ್’ನಲ್ಲಿ ಜಾರಿ? | ಸಿಎಂ ಸಿದ್ದರಾಮಯ್ಯ ಸೂಚನೆ ಏನು? Karnataka Govt Employees Good News


Spread the love
WhatsApp Group Join Now
Telegram Group Join Now
error: Content is protected !!