ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕೆ 2025-26ನೇ ಸಾಲಿನ ಆರ್ಟಿಇ ಅರ್ಜಿ (RTE Karnataka 2025) ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ. ಮೇ 28ರ ವರೆಗೆ ಅವಕಾಶ ನೀಡಲಾಗಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಶಿಕ್ಷಣ ಎಲ್ಲರಿಗೂ ಸಮಾನವಾಗಿ ದೊರಕಬೇಕೆಂಬ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ 2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ (RTE Act – Right to Education Act) ಜಾರಿಗೆ ತಂದಿತು. ಈ ಕಾಯ್ದೆಯಡಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇಕಡಾ 25% ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಕುಟುಂಬದ ಮಕ್ಕಳಿಗೆ ಮೀಸಲಿಡಲಾಗಿದೆ.
ಈ ಸೀಟು ಹಂಚಿಕೆಗಾಗಿ ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಪ್ರತಿವರ್ಷ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸುತ್ತದೆ. ತನ್ಮೂಲಕ 2025-26ನೇ ಸಾಲಿನ ಆರ್ಟಿಇ ಪ್ರವೇಶ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮೇ 28ರ ವರೆಗೆ ವಿಸ್ತರಿಸಲಾಗಿದೆ. ಈ ಕುರಿತಂತೆ ನಿನ್ನೆ ಮೇ 21ರಂದು ಶಾಲಾ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
KEA CET Result 2025- ಕೆಇಎ ಸಿಇಟಿ ಫಲಿತಾಂಶ 2025 | ರಿಸಲ್ಟ್ ಬಿಡುಗಡೆ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…
ಆರ್ಟಿಇ 2025-26 ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್ 22, 2025
- ಅರ್ಜಿ ಸಲ್ಲಿಕೆ ಕೊನೇ ದಿನ: ಮೇ 28, 2025
- ಮೊದಲ ಹಂತದ ಲಾಟರಿ ಆಧಾರಿತ ಸೀಟು ಹಂಚಿಕೆ: ಮೇ 30, 2025
- ಶಾಲೆಗೆ ಪ್ರವೇಶ ಪ್ರಕ್ರಿಯೆ: ಮೇ 31 ರಿಂದ ಜೂನ್ 6, 2025
ಆರ್ಟಿಇ ಅಡಿಯಲ್ಲಿ ಲಭಿಸುವ ಸೌಲಭ್ಯಗಳು
- ಖಾಸಗಿ ಶಾಲೆಗಳಲ್ಲಿ LKG ಅಥವಾ 1ನೇ ತರಗತಿಗೆ ಪೂರ್ತಿ ಉಚಿತ ಪ್ರವೇಶ
- ಯಾವುದೇ ಪ್ರವೇಶ ಶುಲ್ಕ, ವಾರ್ಷಿಕ ಶುಲ್ಕ ಅಥವಾ ಡೊನೇಷನ್ ಇರುವುದಿಲ್ಲ
- ಸರ್ಕಾರವೇ ಮಕ್ಕಳ ಶೈಕ್ಷಣಿಕ ಖರ್ಚು ಭರಿಸುತ್ತದೆ
- ಉಚಿತ ಪಾಠಪುಸ್ತಕಗಳು, ಶಾಲಾ ಸಮವಸ್ತ್ರ, ಮಧ್ಯಾಹ್ನ ಭೋಜನ ಸೌಲಭ್ಯಗಳು ಸಿಗುತ್ತವೆ.
ಯಾರು ಅರ್ಜಿ ಹಾಕಬಹುದು?
ಆರ್ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲಿ ಉಚಿತ ಸೀಟು ಪಡೆಯಲು ಪೋಷಕರು ಮತ್ತು ಮಕ್ಕಳು ಈ ಅರ್ಹತೆಗಳನ್ನು ಪೂರೈಸಬೇಕು:
- ಮಕ್ಕಳ ಪೋಷಕರು ಕರ್ನಾಟಕದ ನಿವಾಸಿಯಾಗಿರಬೇಕು
- LKGಗೆ 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳು (31 ಜುಲೈ 2025ರೊಳಗೆ)
- 1ನೇ ತರಗತಿಗೆ 5.5 ವರ್ಷದಿಂದ 6.5 ವರ್ಷದ ವರೆಗೆ ವಯೋಮಿತಿ ಹೊಂದಿರಬೇಕು.
- ಪೋಷಕರ ವಾರ್ಷಿಕ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ ಇರಬೇಕು
- ಪೋಷಕರು BPL ಕಾರ್ಡ್ ಅಥವಾ ಇತರೆ ಅರ್ಹತೆಗಳೊಂದಿಗೆ ಇರುವುದು ಅಗತ್ಯ

ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಮಕ್ಕಳ ಜನನ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನಿವಾಸ ದೃಢೀಕರಣ (ರೇಷನ್ ಕಾರ್ಡ್, ವೋಟರ್ ಐಡಿ, ವಿದ್ಯುತ್ ಬಿಲ್ ಇತ್ಯಾದಿ)
- ಪಾಸ್ಪೋರ್ಟ್ ಅಳತೆಯ ಫೋಟೋ (2 ಪ್ರತಿ)
ಅರ್ಜಿ ಸಲ್ಲಿಕೆ ಹೇಗೆ?
ಆರ್ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಪಡೆಯಲು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆರ್ಟಿಇ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ:
- ಮೊದಲಿಗೆ ಅಧಿಕೃತ ವೆಬ್ಸೈಟ್ sdcedn.karnataka.gov.inಗೆ ಭೇಟಿ ನೀಡಿ.
- RTE Admissions 2025-266 ವಿಭಾಗವನ್ನು ಆಯ್ಕೆಮಾಡಿ
- ಮಕ್ಕಳ ಆಧಾರ್ ನಂಬರ್ ನಮೂದಿಸಿ, OTP ಮೂಲಕ ದೃಢೀಕರಿಸಿ
- ಪೋಷಕರ ಮಾಹಿತಿ ಹಾಗೂ ಮಕ್ಕಳ ವಿವರಗಳನ್ನು ನಮೂದಿಸಿ
- ನಿಮ್ಮ ಮನೆಯಿಂದ 1 ಕಿಮೀ ಅಥವಾ 3 ಕಿಮೀ ವ್ಯಾಪ್ತಿಯ ಶಾಲೆ ಆಯ್ಕೆ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅರ್ಜಿಯ ಪರಿಶೀಲನೆ ಮಾಡಿ, Submit ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಿದ ರಸೀದಿಯನ್ನು ಡೌನ್ಲೋಡ್ ಮಾಡಿ
ಸೀಟು ಹಂಚಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಅರ್ಜಿ ಸಲ್ಲಿಕೆಯಾದ ನಂತರ ಇಲಾಖೆ ಅಧಿಕಾರಿಗಳು ಎಲ್ಲಾ ಅರ್ಜಿಗಳನ್ನು ಪರಿಶೀಲಿಸುತ್ತಾರೆ. ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ನಂತರ ಲಾಟರಿ ಆಧಾರಿತ ಆಯ್ಕೆ ವಿಧಾನ (Random Selection Lottery) ಮೂಲಕ ಸೀಟು ಹಂಚಲಾಗುತ್ತದೆ.
ಆಯ್ಕೆಯಾದ ಮಕ್ಕಳ ಪೋಷಕರಿಗೆ SMS ಅಥವಾ ವೆಬ್ಸೈಟ್ ಮೂಲಕ ಮಾಹಿತಿಯನ್ನು ನೀಡಲಾಗುತ್ತದೆ. ನಂತರ ಅವರು ಆಯ್ಕೆಯಾದ ಶಾಲೆಗೆ ಸಂಬAಧಪಟ್ಟ ದಾಖಲೆಗಳೊಂದಿಗೆ ಹೋಗಿ ಪ್ರವೇಶ ಪಡೆಯಬೇಕು.
ಅರ್ಜಿದಾರರಿಗೆ ಮುಖ್ಯ ಸೂಚನೆಗಳು
ತಪ್ಪು ಮಾಹಿತಿಯನ್ನು ಸಲ್ಲಿಸಬೇಡಿ. ಅದು ಅರ್ಜಿ ರದ್ದುಪಡಿಸಲು ಕಾರಣವಾಗಬಹುದು. ಎಲ್ಲಾ ದಾಖಲೆಗಳು ನಿಖರವಾಗಿರಲಿ. ಸೀಟು ಆಯ್ಕೆ ಆದ ನಂತರ ನಿಗದಿತ ಅವಧಿಯಲ್ಲಿ ಪ್ರವೇಶ ಪಡೆಯದಿದ್ದರೆ ಅವಕಾಶ ನಷ್ಟವಾಗುತ್ತದೆ. ಅರ್ಜಿಯ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ನಿಮ್ಮ ತಾಲೂಕು ಶಿಕ್ಷಣಾಧಿಕಾರಿಯನ್ನು ಸಂಪರ್ಕಿಸಿ. ಆರ್ಟಿಇ ಅಡಿಯಲ್ಲಿ ಲಭ್ಯವಿರುವ ಉಚಿತ ಶಿಕ್ಷಣದ ಅವಕಾಶವು ಸಾವಿರಾರು ಬಡ ಕುಟುಂಬಗಳ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು ಸಹಾಯ ಮಾಡುತ್ತಿದೆ. ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ಬಳಸಿಕೊಳ್ಳಿ!