RDCC Bank Recruitment 2025- ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್ಸೆಸ್ಸೆಲ್ಸಿ, ಪದವೀಧರರಿಗೆ ಅವಕಾಶ

Spread the love

WhatsApp Group Join Now
Telegram Group Join Now

ರಾಯಚೂರು – ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ (RDCC Bank Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಒಟ್ಟು 70 ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದ್ದು; ಗ್ರೇಡ್ 1 ಶ್ರೇಣಿಯ ಶಾಖಾ ವ್ಯವಸ್ಥಾಪಕ, ಸಹಾಯಕ ಹಾಗೂ ಅಟೆಂಡರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22, 2025ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: LKG UKG Teacher Recruitment 2025- ಸರ್ಕಾರಿ ಶಾಲೆ ಎಲ್‌ಜಿ-ಯುಕೆಜಿಗೆ ಶಿಕ್ಷಕರು, ಆಯಾಗಳ ನೇಮಕಾತಿ | ಸರ್ಕಾರದ ಅಧಿಕೃತ ಸೂಚನೆ

ನೇಮಕಾತಿ ಸಂಕ್ಷಿಪ್ತ ವಿವರ
  • ಸಂಸ್ಥೆಯ ಹೆಸರು: ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ (ಖಆಅಅಃ)
  • ಖಾಲಿ ಹುದ್ದೆಗಳ ಸಂಖ್ಯೆ: 70
  • ಉದ್ಯೋಗ ಸ್ಥಳ: ರಾಯಚೂರು, ಕೊಪ್ಪಳ ಜಿಲ್ಲೆ
  • ಹುದ್ದೆಯ ಹೆಸರು: ಶಾಖಾ ವ್ಯವಸ್ಥಾಪಕ, ಸಹಾಯಕ, ಅಟೆಂಡರ್
  • ಸಂಬಳ: ತಿಂಗಳಿಗೆ ₹37,500 ದಿಂದ ₹1,12,900
ಹುದ್ದೆಗಳ ವಿವರ

ಕಲ್ಯಾಣ ಕರ್ನಾಟಕ 17 ಹುದ್ದೆಗಳು ಹಾಗೂ ಉಳಿಕೆ ಮೂಲವೃಂದದ 53 ಹುದ್ದೆಗಳು ಸೇರಿ ಒಟ್ಟು 70 ಹುದ್ದೆಗಳ ನೇಮಕ ನಡೆಯಲಿದೆ. ಇವು ಗ್ರುಪ್ ‘ಎ’, ‘ಬಿ’ ಹಾಗೂ ‘ಸಿ’ ಗ್ರುಪ್ ಹುದ್ದೆಗಳಾಗಿದ್ದು; ಹುದ್ದೆಗಳ ವಿವರ ಹೀಗಿದೆ:

  • ಶಾಖಾ ವ್ಯವಸ್ಥಾಪಕ (ಗ್ರೇಡ್-1): 15
  • ಸಹಾಯಕ (ಗ್ರೇಡ್-1): 45
  • ಅಟೆಂಡರ್: 10
  • ಒಟ್ಟು ಹುದ್ದೆಗಳು: 70

ಇದನ್ನೂ ಓದಿ: New Voter ID Mobile Application Guide- ಮೊಬೈಲ್‌ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ…

ಶೈಕ್ಷಣಿಕ ಅರ್ಹತೆ

ಅಧಿಕೃತ ಅಧಿಸೂಚನೆಯ ಪ್ರಕಾರ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ಮತ್ತು ಪದವಿಯನ್ನು ಪೂರ್ಣಗೊಳಿಸಿರಬೇಕು.

ಶಾಖಾ ವ್ಯವಸ್ಥಾಪಕ (ಗ್ರೇಡ್-1) ಹಾಗೂ ಸಹಾಯಕ (ಗ್ರೇಡ್-1) ಪದವಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಇನ್ನು ಅಟೆಂಡರ್ ಹುದ್ದೆಗಳಿಗೆ 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ರಾಯಚೂರು - ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ...
RDCC Bank Recruitment 2025
ವೇತನದ ವಿವರಗಳು
  • ಶಾಖಾ ವ್ಯವಸ್ಥಾಪಕ (ಗ್ರೇಡ್-1): ₹61,300 ರಿಂದ ₹1,12,900
  • ಸಹಾಯಕ (ಗ್ರೇಡ್-1): ₹44,425 ರಿಂದ ₹83,700
  • ಅಟೆಂಡರ್: ₹37500 ರಿಂದ ₹76,100

ಇದನ್ನೂ ಓದಿ: Udhyogini Yojana 2025 – ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ಇಲ್ಲದ ಸಾಲ ಸೌಲಭ್ಯ | ಮಹಿಳಾ ನಿಗಮದಿಂದ ಅರ್ಜಿ ಆಹ್ವಾನ

ವಯೋಮಿತಿ ವಿವರ

ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸಿನವರಾಗಿರಬೇಕು.

2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷಗಳು, ಎಸ್‌ಸಿ-ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಶುಲ್ಕವೆಷ್ಟು?

ಶಾಖಾ ವ್ಯವಸ್ಥಾಪಕ, ಸಹಾಯಕ ಹುದ್ದೆಗಳಿಗೆ ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹1,600 ರೂ. ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕರು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ₹800 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಇನ್ನು ಅಟೆಂಡರ್ ಪೋಸ್ಟ್ಗೆ ಅರ್ಜಿ ಹಾಕುವ ಇತರ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ₹1,000 ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕರು, ಪಿಡಬ್ಲ್ಯೂಡಿ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕಿದೆ.

ಇದನ್ನೂ ಓದಿ: SSLC Pass Karnataka Govt Jobs- SSLC ಪಾಸಾದವರಿಗಾಗಿಯೆ ಇವೆ ರಾಜ್ಯ ಸರ್ಕಾರದ ಈ ಹುದ್ದೆಗಳು | ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ…

ಅರ್ಜಿ ಸಲ್ಲಿಕೆ ಹೇಗೆ?

ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿಕೊಳ್ಳಿ.

WhatsApp Group Join Now
Telegram Group Join Now

ಕೆಳಗೆ ನೀಡಿರುವ ಆನ್‌ಲೈನ್ ಅರ್ಜಿ ಲಿಂಕ್ ಬಳಸಿಕೊಂಡು ನಿಮ್ಮ ಅರ್ಹತೆಯ ಹುದ್ದೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣ ಪತ್ರಗಳು, ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ ಅಪ್‌ಲೋಡ್ ಮಾಡಿ.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಗೆ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆ ಹಿಡಿದಿಟ್ಟುಕೊಳ್ಳಿ..

ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 21-11-2025
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22-12-2025
  • ಲಿಖಿತ ಪರೀಕ್ಷೆಯ ದಿನಾಂಕ: 15-01-2026
ಪ್ರಮುಖ ಲಿಂಕ್‌ಗಳು
  • ಅಧಿಕೃತ ಅಧಿಸೂಚನೆ (ಹೆಚ್‌ಕೆ): Download
  • ಅಧಿಕೃತ ಅಧಿಸೂಚನೆ (ಆರ್‌ಪಿಸಿ): Download
  • ಅರ್ಜಿ ಲಿಂಕ್: Apply Now
  • ಅಧಿಕೃತ ವೆಬ್‌ಸೈಟ್: raichurdcc.bank.in

PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…


Spread the love
error: Content is protected !!