ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (The Department of Food, Civil Supplies & Consumer Affairs) ಪ್ರತಿ ತಿಂಗಳೂ ಅನರ್ಹರ ಪಡಿತರ ಚೀಟಿಗಳನ್ನು (Ration Card) ಪರಿಶೀಲಿಸಿ, ಅವುಗಳನ್ನು ರದ್ದುಗೊಳಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ಅನರ್ಹರೆಂದು ಗುರುತಿಸಲಾದ ಪಡಿತರ ಚೀಟಿದಾರರ ಪಟ್ಟಿಯನ್ನು ಆಹಾರ ಇಲಾಖೆ ತಂತ್ರಾಂಶದಲ್ಲಿ ಪ್ರಕಟಿಸುತ್ತಿದೆ.
ಈ ಪಟ್ಟಿಯನ್ನು ಈಗ ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ನೋಡಿಕೊಳ್ಳಬಹುದಾಗಿದೆ. ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದ್ದರೆ, ನಿಮ್ಮ ಪಡಿತರ ಚೀಟಿ (ರೇಷನ್ ಕಾರ್ಡ್) ರದ್ದಾಗಿರಬಹುದು. ಆದ್ದರಿಂದ, ಈಗಲೇ ಪರಿಶೀಲಿಸಿ!
ರೇಷನ್ ಕಾರ್ಡ್ ಏಕೆ ರದ್ದು ಮಾಡಲಾಗುತ್ತಿದೆ?
ರಾಜ್ಯದಲ್ಲಿ ಹಲವಾರು ಕುಟುಂಬಗಳು ಪಡಿತರ ಚೀಟಿಗಳ ಆಧಾರದ ಮೇಲೆ ರಾಜ್ಯ ಸರ್ಕಾರದಿಂದ ಆಹಾರಧಾನ್ಯಗಳನ್ನು ಪಡೆಯುತ್ತಿವೆ. ಆದರೆ ಕೆಲವೊಮ್ಮೆ ನಿಯಮಾನುಸಾರ ಅರ್ಹತೆ ಇಲ್ಲದವರು ಅಥವಾ ಸರಿಯಾದ ದಾಖಲೆ ಇಲ್ಲದವರು ಈ ಸೌಲಭ್ಯವನ್ನು ಪಡೆಯುತ್ತಿರುವುದು ಕಂಡುಬAದಾಗ, ಅಂತಹವರ ಪಡಿತರ ಚೀಟಿಗಳನ್ನು ಸರ್ಕಾರ ರದ್ದುಪಡಿಸುತ್ತದೆ. ಈ ಕೆಳಕಂಡ ಕಾರಣಕ್ಕೆ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ:
- ಕುಟುಂಬದ ವಾರ್ಷಿಕ ಆದಾಯ ಸರಕಾರದ ಮಿತಿ ಮೀರುವದು
- ಆದಾಯ ತೆರಿಗೆ (Income Tax Return) ಸಲ್ಲಿಸಿರುವುದು
- ಸರ್ಕಾರಿ ಉದ್ಯೋಗ ಅಥವಾ ಪಿಂಚಣಿ ಹೊಂದಿರುವ ಸದಸ್ಯರು
- ಇ-ಕೆವೈಸಿ (e-KYC) ಪ್ರಕ್ರಿಯೆ ಸಂಪೂರ್ಣಗೊಳಿಸದಿರುವುದು
- ನಕಲಿ ದಾಖಲೆಗಳ ಆಧಾರದ ಮೇಲೆ ಪಡಿತರ ಚೀಟಿಯನ್ನು ಪಡೆದಿರುವುದು
ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ
ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ’ ಎಂಬ ಘೋಷವಾಕ್ಯವನ್ನು ಪ್ರಕಟಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ಕಾಲ ಕಾಲಕ್ಕೆ ತಾಲೂಕುವಾರು ಅನರ್ಹ ರೇಷನ್ ಕಾರ್ಡುದಾರರ ಪಟ್ಟಿಯನ್ನು ಆಹಾರ ಇಲಾಖೆಯ ಅಧಿಕೃತ ತಂತ್ರಾಂಶದಲ್ಲಿ ಪ್ರಕಟಿಸಲಾಗುತ್ತದೆ.
ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ತಮ್ಮ ಮೊಬೈಲ್’ನಲ್ಲಿಯೇ ಅನರ್ಹ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

ತಾಲೂಕುವಾರು ಅನರ್ಹ ಪಟ್ಟಿ ಹೇಗೆ ಪರಿಶೀಲಿಸಬೇಕು?
ಅನರ್ಹ ರೇಷನ್ ಕಾರ್ಡ್ ಪಟ್ಟಿ ಚೆಕ್ ಮಾಡಲು ಮೊದಲಿಗೆ ಈ Ineligible Ration Card List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆಯ ತಂತ್ರಾAಶವನ್ನು ಪ್ರವೇಶ ಮಾಡಬೇಕು.
ನಂತರ ಅಲ್ಲಿ ಮುಖಪುಟದಲ್ಲಿ ಗೋಚರಿಸುವ ‘ಇ-ಸೇವೆಗಳು’ ಎಂಬ ವಿಭಾಗವನ್ನು ಕ್ಲಿಕ್ ಮಾಡಿ. ಮುಂದೆ ಎಡಬದಿಯಲ್ಲಿ ಕಾಣುವ ‘ಇ-ಪಡಿತರ ಚೀಟಿ’ ಆಯ್ಕೆಯನ್ನು ಆಯ್ಕೆಮಾಡಿ. ಬಳಿಕ ‘ರದ್ದುಗೊಂಡ/ ತಡೆಹಿಡಿಯಲಾದ ಪಟ್ಟಿ’ ಕ್ಲಿಕ್ ಮಾಡಿ ಈ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ಪುಟ ಓಪನ್ ಆಗುತ್ತದೆ.
ನಂತರ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷವನ್ನು ಆಯ್ಕೆಮಾಡಿ. ನಂತರ ‘Go’ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ತಾಲ್ಲೂಕಿನಲ್ಲಿ ರದ್ದುಗೊಂಡ ಪಡಿತರ ಚೀಟಿದಾರರ ಪಟ್ಟಿ ತೆರೆದುಕೊಳ್ಳುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ಪರೀಕ್ಷಿಸಿ.
ಇ-ಕೆವೈಸಿ ಮಾಡಿಸಿಲ್ಲದಿದ್ದರೆ ರೇಷನ್ ಬಂದ್!
ಆಹಾರ ಇಲಾಖೆಯ ಅಧಿಕೃತ ಸೂಚನೆಯಂತೆ, ಪ್ರತಿ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ತಮ್ಮ ವಿವರಗಳನ್ನು ಇ-ಕೆವೈಸಿ ಪ್ರಕ್ರಿಯೆ ಮೂಲಕ ನವೀಕರಿಸಬೇಕು. ಪಡಿತರ ಚೀಟಿ, ಕುಟುಂಬದ ಎಲ್ಲಾ ಸದಸ್ಯರ ಆದಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್’ನೊಂದಿಗೆ ಇ-ಕೆವೈಸಿ ಮಾಡಬಹುದಾಗಿದೆ.
ಮೇಲ್ಕಾಣಿಸಿ ದಾಖಲಾತಿಗಳೊಂದಿಗೆ ಇ-ಕೆವೈಸಿ ಪ್ರಕ್ರಿಯೆ ಮೂಲಕ ನವೀಕರಿಸಬೇಕು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ. ಸದಸ್ಯರ ಬೆರಳಚ್ಚುಗಳನ್ನು (Biometric) ಅಲ್ಲಿ ನೀಡಿದರೆ, ನ್ಯಾಯಬೆಲೆ ಅಂಗಡಿದಾರರು ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಮುಗಿಸುತ್ತಾರೆ. ಇ-ಕೆವೈಸಿ ಮಾಡಿಸದಿದ್ದರೆ ಆ ಕುಟುಂಬಕ್ಕೆ ಆ ತಿಂಗಳು ರೇಷನ್ ವಿತರಣೆಯು ಸ್ಥಗಿತಗೊಳ್ಳುತ್ತದೆ.
ಇ-ಕೆವೈಸಿ ಆಗಿರುವುದನ್ನು ಚೆಕ್ ಮಾಡುವುದು ಹೇಗೆ?
ರೇಷನ್ ಕಾರ್ಡ ಅನ್ನು ಹೊಂದಿರುವ ಫಲಾನುಭವಿಗಳು Ration Card E-KYC Status ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಆಹಾರ ಇಲಾಖೆ ತಂತ್ರಾಂಶವನ್ನು ಭೇಟಿ ಮಾಡಿ ‘ಇ-ಸ್ಥಿತಿ’ ಕಾಲಂ ನಲ್ಲಿ ಕಾಣುವ ‘ಹಾಲಿ ಪಡಿತರ ಚೀಟಿಯ ಸ್ಥಿತಿ’ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಕಾರ್ಡಿನ ಸ್ಥಿತಿ ಮತ್ತು ಇ-ಕೆವೈಸಿ (e-KYC Status) ಮುಗಿದಿದೆಯೇ ಎಂಬ ಮಾಹಿತಿ ತಕ್ಷಣವೇ ಲಭ್ಯವಾಗುತ್ತದೆ.
ನಿಮ್ಮ ಕುಟುಂಬದ ರೇಷನ್ ಕಾರ್ಡ್ ಸುಸ್ಥಿತಿಯಲ್ಲಿದೆಯೇ ಎಂಬುದನ್ನು ನೀವು ಸಮಯಕ್ಕೆ ಸರಿಯಾಗಿ ಪರಿಶೀಲಿಸಲೇಬೇಕು. ನಿಮ್ಮ ಹೆಸರು ಅನರ್ಹರ ಪಟ್ಟಿಯಲ್ಲಿ ಇದ್ದರೆ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ತಕ್ಷಣವೇ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿಸಿಕೊಳ್ಳಿ. ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿರಲು ಇದು ಅತ್ಯವಶ್ಯಕ.
Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…