Raitara Sala Manna : ಬಹಳ ವರ್ಷಗಳಿಂದ ಕೇಳಿ ಬರುತ್ತಿರುವ ಸಾಲಮನ್ನಾ ಆಗ್ರಹ ಮತ್ತೆ ಕೇಳಲಾರಂಭಿಸಿದೆ. ಈಚೆಗೆ ನೆರೆಯ ತೆಲಂಗಾಣ ಸರಕಾರ (Telangana State Govt) ಆ ರಾಜ್ಯ ಪ್ರತಿಯೊಬ್ಬ ರೈತರ ತಲಾ 2 ಲಕ್ಷ ರೂಪಾಯಿ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ರೈತರಿಗೆ ಸಾಲಮನ್ನಾ ಭಾಗ್ಯ ಯಾವಾಗ ಸಿಗುತ್ತೇ? ಎಂಬ ನಿರೀಕ್ಷೆಗಳು ಹೆಚ್ಚಾಗಿವೆ.
2023-24ನೇ ಸಾಲಿನಲ್ಲಿ ರಾಜ್ಯಾದ್ಯಂತ ಬರಗಾಲ (Drought) ತಲೆದೋರಿದ್ದು; ಬರೋಬ್ಬರಿ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರಪೀಡಿತ ತಾಲ್ಲೂಕುಗಳ ರೈತರಿಗೆ ಅಲ್ಪಪ್ರಮಾಣದ ಬರ ಪರಿಹಾರ ವಿತರಿಸಲಾಗಿದೆ. ಇದರಿಂದ ರೈತರ ಜೀವನಮಟ್ಟ ಸುಧಾರಣೆ ಕಷ್ಟವಾಗಿದೆ. ಹೀಗಾಗಿ ರಾಜ್ಯ ಸರಕಾರ ( Karnataka State Govt) ಸಾಲಮನ್ನಾ ಮಾಡುವ ಮೂಲಕ ರೈತರಿಗೆ ನೆರವಾಗಬೇಕು ಎಂಬ ಆಗ್ರಹ ಈಚೆಗೆ ತೀವ್ರವಾಗಿ ಕೇಳಿ ಬರುತ್ತಿದೆ.
ಸರಕಾರಿ ನೌಕರರಿಗೆ ಜೂನ್ 24ರಿಂದ ಹೊಸ ರೂಲ್ಸ್ | ಕೇಂದ್ರ ಸರಕಾರದ ಖಡಕ್ ಎಚ್ಚರಿಕೆ Govt employees new rules
ಸಂಪೂರ್ಣ ಸಾಲಮನ್ನಾ ಆಗ್ರಹ
ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಮಳೆಹಾನಿ, ಪ್ರವಾಹ, ಬರ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದಾಗಿ ಬೆಳೆಗಳು ಹಾಳಾಗಿವೆ. ಕೃಷಿ ಸಾಲ ಪಡೆದ ರೈತರಿಗೆ ಸಾಲದ ಹಣ ಭರಿಸುವ ಶಕ್ತಿ ಇಲ್ಲದಾಗಿದೆ. ಬೆಳೆಗೆ ಹಾಕಿದ ಹಣ ಕೂಡ ಮರಳಿ ಬಂದಿಲ್ಲವಾದ್ದರಿ೦ದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಎಲ್ಲ ಕಾರಣದಿಂದ ಕೈಗಾರಿಕೆ ಹಾಗೂ ದೊಡ್ಡ ದೊಡ್ಡ ಉದ್ಯಮಿಗಳಿಗೆ, ಸಾಲ ಮನ್ನಾ, ತೆರಿಗೆ ಮನ್ನಾ ಮಾಡಿರುವ ರೀತಿಯಲ್ಲಿ ರೈತರ ಎಲ್ಲ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver
1 ಲಕ್ಷ ರೂಪಾಯಿ ಸಾಲ ಮನ್ನಾ
ಕಳೆದ ಐದು ವರ್ಷಗಳ ಹಿಂದೆ, ಜಾರಿಗೊಳಿಸಲಾದ ಒಂದು ಲಕ್ಷ ರೂಪಾಯಿಗಳ ಸಾಲಮನ್ನಾ ಯೋಜನೆಯ ಸೌಲಭ್ಯವನ್ನು ರಾಜ್ಯದ 17.35 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಕೆಲ ತಿಂಗಳ ಹಿಂದೆ ಮಾಹಿತಿ ನೀಡಿದ್ದರು. 2018ರಲ್ಲಿ ಒಂದು ಲಕ್ಷ ರೂಪಾಯಿ ವರೆಗೆ ಬೆಳೆಸಾಲವನ್ನು ಮನ್ನಾ ಮಾಡಿದ ನಂತರ ಈವರೆಗೂ ಬೇರೆ ಯಾವ ಸಾಲಮನ್ನಾ ಯೋಜನೆಗಳೂ ರಾಜ್ಯದಲ್ಲಿ ಜಾರಿಯಾಗಿಲ್ಲ.
2018ರಲ್ಲಿ ಜಾರಿಯಾದ ಯೋಜನೆಯ ಪೈಕಿ ಸಹಕಾರ ಸಂಘಗಳು, ಭೂಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ ಅಭಿವೃದ್ಧಿಪಡಿಸಿದ ಸಾಲ ತಂತ್ರಾAಶದಲ್ಲಿ 19.07 ಲಕ್ಷ ರೈತರ ಮಾಹಿತಿಯನ್ನು ಅಳವಡಿಸಲಾಗಿತ್ತು. ಅದರಲ್ಲಿ ಅರ್ಹತೆ ಹೊಂದದಿರುವ 1.57 ಲಕ್ಷ ರೈತರನ್ನು ತಂತ್ರಾ೦ಶದಿ೦ದ ತಿರಸ್ಕರಿಸಲಾಗಿತ್ತು.
ಬಾಕಿ ಉಳಿದ 17.50 ಲಕ್ಷ ರೈತರ ಪೈಕಿ ಎಲ್ಲಾ ಷರತ್ತುಗಳನ್ನೂ ಪೂರೈಸಿರುವ 17.32 ಲಕ್ಷ ರೈತರಿಗೆ 8,154.98 ಕೋಟಿ ರೂಪಾಯಿ ಸಾಲಮನ್ನಾ ಮಾಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಹಸಿರು ಪಟ್ಟಿ ನೀಡಲಾಯಿತು. ಸರ್ಕಾರ 17.06 ಲಕ್ಷ ರೈತರಿಗೆ 7,987.47 ಕೋಟಿ ರೂಪಾಯಿಗಳನ್ನು ಉಳಿತಾಯ ಖಾತೆಗೆ ಬಿಡುಗಡೆ ಮಾಡಿ ಸಾಲಮನ್ನಾ ಸೌಲಭ್ಯವನ್ನು ದೊರಕಿಸಿತ್ತು.
ಮತ್ತೆ ಸಾಲಮನ್ನಾ ಭಾಗ್ಯ ಯಾವಾಗ?
ಇದೀಗ ತೆಲಂಗಾಣ ಸರಕಾರ ರೈತರ ಸಾಲ ಮನ್ನಾ ಮಾಡಿ ನಂತರ ಮತ್ತೆ ರಾಜ್ಯದಲ್ಲೂ ಸಾಲ ಮನ್ನಾ ಕೂಗು ಮಾರ್ಧನಿಸತೊಡಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಅತೀ ಹೆಚ್ಚಿನ ಅನುದಾನ ವಿನಿಯೋಗವಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿದ್ದಾರೆ. ಈಚೆಗೆ ಮಧ್ಯಮಾವಧಿ ಸಾಲ ಪಡೆದ ರೈತರ ಬಡ್ಡಿಮನ್ನಾ (Loan interest waiver) ಯೋಜನೆಯನ್ನು ಅನುಷ್ಠಾನಗೊಳಿಸಿದ್ದು; ಇದರ ಪ್ರಯೋಜನ ಅನೇಕ ರೈತರು ಪಡೆದುಕೊಂಡಿದ್ದಾರೆ.
ಸದ್ಯಕ್ಕೆ ಪ್ರತ್ಯೇಕವಾಗಿ ರೈತರ ಸಾಲಮನ್ನಾ ಮಾಡುವಷ್ಟು ಸರಕಾರದ ಬೊಕ್ಕಸ ಸದೃಢವಾಗಿಲ್ಲ. ಅದಕ್ಕೆ ಬದಲಾಗಿ ಬರ ಪರಿಹಾರ, ಜೀವನೋಪಾಯ ನಷ್ಟ ಪರಿಹಾರ ಅಂತ ನೆರವು ನೀಡುತ್ತಿದೆ. ಈ ವರ್ಷ ಮಳೆ ಸಮೃದ್ಧವಾಗಿ ರೈತರ ಜೀವನ ಮಟ್ಟ ಸುಧಾರಿಸಬಹುದೆಂಬ ನಿರೀಕ್ಷೆ ರಾಜ್ಯ ಸರಕಾರಕ್ಕಿದೆ. ಹೀಗಾಗಿ ರೈತರ ಸಾಲಮನ್ನಾ ಆಗ್ರಹವನ್ನು ಸರಕಾರ ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಹಣಿಸುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.