ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆಯಡಿ (Pumpset Akrama Sakrama Yojana) ರೈತರು ಅಧಿಕೃತವಾಗಿ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಇದರಿಂದ ಲಾಭವೇನು? ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಬೆಳೆಗಳಿಗೆ ನೀರು ಹರಿಸಲು ಪಂಪ್‌ಸೆಟ್‌ಗಳ (Pumpset ) ಮೇಲೆ ಅವಲಂಬಿಸಿರುವ ರೈತರಿಗೆ ನಿರಂತರ ವಿದ್ಯುತ್ ಬಹಳ ಮುಖ್ಯ. ಆದರೆ ಅನೇಕ ವರ್ಷಗಳಿಂದ ಅನಿವಾರ್ಯ ಕಾರಣಗಳಿಂದ ಅನಧಿಕೃತವಾಗಿ ಅಳವಡಿಸಲಾದ ಪಂಪ್‌ಸೆಟ್‌ಗಳು ರೈತರಿಗೆ ಆತಂಕ, ದಂಡ ಮತ್ತು ವಿದ್ಯುತ್ ಕಡಿತದ ಭೀತಿಯನ್ನು ಉಂಟು ಮಾಡುತ್ತಿವೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ’ (Pumpset Akrama Sakrama Yojana) ಜಾರಿಗೆ ತಂದಿದ್ದು; ಇದೀಗ ಈ ಯೋಜನೆಯನ್ನು ಪುನಃ ಚುರುಕುಗೊಳಿಸಿದೆ.
ಸದರಿ ಯೋಜನೆಯ ಮೂಲಕ ಲಕ್ಷಾಂತರ ರೈತರಿಗೆ ಕಾನೂನುಬದ್ಧ ವಿದ್ಯುತ್ ಸಂಪರ್ಕ ನೀಡುವ ಜೊತೆಗೆ, ಹಗಲು ವೇಳೆ 7 ಗಂಟೆಗಳ ಉಚಿತ ವಿದ್ಯುತ್ ಮತ್ತು ಸೌರಶಕ್ತಿ ಪಂಪ್‌ಸೆಟ್ (Solar Pumpset)ಗಳಂತಹ ದೀರ್ಘಕಾಲೀನ ಪರಿಹಾರಗಳನ್ನು ಒದಗಿಸಲಾಗುತ್ತಿದೆ.
ಇದನ್ನೂ ಓದಿ: Hero Splendor Bike- ಕೇವಲ 1,000 ರೂ. ಇಐಎಂ ನಲ್ಲಿ ಮನೆಗೆ ತನ್ನಿ ಹೀರೋ ಸ್ಪೆೆಂಡರ್ ಮೈಲೇಜ್ ಬೈಕ್
What is the Pumpset Akrama–Sakrama Scheme? – ಏನು ಈ ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ?
ಸರಳವಾಗಿ ಹೇಳುವುದಾದರೆ, ಅನುಮತಿ ಇಲ್ಲದೆ ವಿದ್ಯುತ್ ಬಳಸುತ್ತಿದ್ದ ಕೃಷಿ ಪಂಪ್‌ಸೆಟ್‌ಗಳನ್ನು ಕಾನೂನುಬದ್ಧಗೊಳಿಸುವ ಯೋಜನೆಯೇ ಅಕ್ರಮ-ಸಕ್ರಮ ಯೋಜನೆ.
ಈ ಯೋಜನೆಯಡಿ, ವಿದ್ಯುತ್ ಜಾಲ ಅಥವಾ ಟ್ರಾನ್ಸ್ಫಾರ್ಮರ್‌ನಿಂದ 500 ಮೀಟರ್ ಒಳಗೆ ಇರುವ ಪಂಪ್‌ಸೆಟ್‌ಗಳನ್ನು ನಿಗದಿತ ಶುಲ್ಕ ಪಾವತಿಸುವ ಮೂಲಕ ಸಕ್ರಮಗೊಳಿಸಲಾಗುತ್ತದೆ.
500 ಮೀಟರ್‌ಗಿಂತ ದೂರದಲ್ಲಿರುವ ಪಂಪ್‌ಸೆಟ್‌ಗಳಿಗೆ ಕುಸುಮ್-ಸಿ ಯೋಜನೆಯಡಿ ಸೌರಶಕ್ತಿ ಪಂಪ್‌ಸೆಟ್ ಅಳವಡಿಸಲು ಸರ್ಕಾರ ಉತ್ತೇಜನ ನೀಡುತ್ತದೆ.
ಸಕ್ರಮಗೊಂಡ ಪಂಪ್‌ಸೆಟ್‌ಗಳಿಗೆ ಅಧಿಕೃತ ಖಾತೆ (RR) ಸಂಖ್ಯೆ ನೀಡಲಾಗುತ್ತದೆ. ಇದರಿಂದ ರೈತರು ಸರ್ಕಾರದ ಎಲ್ಲಾ ವಿದ್ಯುತ್ ಸಂಬಂಧಿತ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ.
What is the Objective of the Scheme? – ಯೋಜನೆಯ ಹಿಂದಿನ ಉದ್ದೇಶ ಏನು?
ರಾಜ್ಯದ ಹಲವು ಭಾಗಗಳಲ್ಲಿ ರೈತರು ತುರ್ತು ಅಗತ್ಯಕ್ಕಾಗಿ ಅಥವಾ ನೀರಿನ ಕೊರತೆಯಿಂದಾಗಿ ಅನುಮತಿ ಪಡೆಯದೇ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದರು.
ಇದರಿAದಾಗಿ ವಿದ್ಯುತ್ ಜಾಲದ ಮೇಲೆ ಅತಿಯಾದ ಒತ್ತಡ, ತಾಂತ್ರಿಕ ದೋಷಗಳು, ಸರ್ಕಾರದ ಉಚಿತ ವಿದ್ಯುತ್ ಸೌಲಭ್ಯಗಳು ರೈತರಿಗೆ ಸಿಗುವುದಿಲ್ಲ. ದಂಡ ಮತ್ತು ಸಂಪರ್ಕ ಕಡಿತದ ಭೀತಿ ಇದ್ದೇ ಇದೆ.
ಇವೆಲ್ಲವನ್ನು ಸರಿಪಡಿಸಿ, ರೈತರಿಗೆ ಕಾನೂನು ರಕ್ಷಣೆ ನೀಡುವುದು ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!
What is the Current Status of the Scheme? – ಯೋಜನೆಯ ಪ್ರಸ್ತುತ ಸ್ಥಿತಿ ಹೇಗಿದೆ?
ಯೋಜನೆ ಆರಂಭವಾಗುವಾಗ ರಾಜ್ಯದಲ್ಲಿ ಸುಮಾರು 4.5 ಲಕ್ಷ ಪಂಪ್‌ಸೆಟ್‌ಗಳ ಅರ್ಜಿಗಳು ಬಾಕಿ ಇದ್ದವು. ಸರ್ಕಾರದ ನಿರಂತರ ಪ್ರಯತ್ನದಿಂದ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ.
ಉಳಿದಿರುವ 1.5 ರಿಂದ 2 ಲಕ್ಷ ಪಂಪ್‌ಸೆಟ್‌ಗಳಿಗೆ ಸದ್ಯ ಸಕ್ರಮೀಕರಣ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಒಂದು ವರ್ಷದೊಳಗೆ ಎಲ್ಲಾ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವ ಗುರಿಯನ್ನು ಇಂಧನ ಇಲಾಖೆ ಹೊಂದಿದೆ.

How is Eligibility Determined? – ಅರ್ಹತೆ ಹೇಗೆ ನಿರ್ಧಾರವಾಗುತ್ತದೆ?
500 ಮೀಟರ್ ಒಳಗಿನ ಪಂಪ್‌ಸೆಟ್‌ಗಳು: ಹತ್ತಿರದ ಟ್ರಾನ್ಸ್ಫಾರ್ಮರ್‌ನಿಂದ 500 ಮೀಟರ್ ವ್ಯಾಪ್ತಿಯಲ್ಲಿದ್ದರೆ. ನೇರವಾಗಿ ವಿದ್ಯುತ್ ವಿತರಣಾ ಕಂಪನಿಗಳ ಮೂಲಕ ಸಂಪರ್ಕ ಸಕ್ರಮಗೊಳಿಸಲಾಗುತ್ತದೆ. ಇವುಗಳಿಗೆ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಎಸ್ಕಾಂಗಳದ್ದು.
500 ಮೀಟರ್‌ಗಿಂತ ದೂರದ ಪಂಪ್‌ಸೆಟ್‌ಗಳು: ವಿದ್ಯುತ್ ಕಂಬ ಹಾಕುವುದು ದುಬಾರಿ ಹಾಗೂ ತಾಂತ್ರಿಕವಾಗಿ ಕಷ್ಟ. ಇಂತಹ ಸಂದರ್ಭಗಳಲ್ಲಿ ಸೌರಶಕ್ತಿ ಪಂಪ್‌ಸೆಟ್ ಅತ್ಯುತ್ತಮ ಪರ್ಯಾಯ. ಇದಕ್ಕಾಗಿ ಕುಸುಮ್-ಸಿ ಯೋಜನೆಯಡಿ ಸರ್ಕಾರದಿಂದ ಭಾರೀ ಸಹಾಯಧನ ನೀಡಲಾಗುತ್ತದೆ.
ಇದನ್ನೂ ಓದಿ: February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ
Key Benefits of the KUSUM-C Scheme – ಕುಸುಮ್-ಸಿ ಯೋಜನೆಯ ಪ್ರಮುಖ ಲಾಭಗಳು
- ಹಗಲು ವೇಳೆಯಲ್ಲೇ ನಿರಂತರ 7 ಗಂಟೆ ಉಚಿತ ವಿದ್ಯುತ್
- ರಾತ್ರಿ ಹೊಲಕ್ಕೆ ಹೋಗುವ ಅಪಾಯದಿಂದ ಮುಕ್ತಿ
- ಸೌರಶಕ್ತಿಯಿಂದ ಆಧುನೀಕರಿಸಿದ ಕೃಷಿ ಫೀಡರ್‌ಗಳು
- ಒಟ್ಟು ವೆಚ್ಚದ ಶೇ.80ರಷ್ಟು ಸರ್ಕಾರದ ಸಹಾಯಧನ
- ರೈತರು ಕೇವಲ ಶೇ.20ರಷ್ಟು ಮಾತ್ರ ಪಾವತಿಸಿ ಸೌರ ಪಂಪ್‌ಸೆಟ್ ಅಳವಡಿಸಬಹುದು.
- ಪರಿಸರ ಸ್ನೇಹಿ ಮತ್ತು ದೀರ್ಘಕಾಲೀನ ಪರಿಹಾರ
Major Benefits for Farmers – ರೈತರಿಗೆ ಸಿಗುವ ಪ್ರಮುಖ ಪ್ರಯೋಜನಗಳು
ಇದರಿಂದ ರೈತರಿಗೆ ಅಕ್ರಮ ಸಂಪರ್ಕದ ದಂಡ ಅಥವಾ ವಿದ್ಯುತ್ ಕಡಿತದ ಭೀತಿ ಇಲ್ಲದಾಗುತ್ತದೆ. ಟ್ರಾನ್ಸ್ಫಾರ್ಮರ್ ಸುಟ್ಟು ಹೋದರೆ ಉಚಿತ ದುರಸ್ತಿ ಮಾಡಲಾಗುತ್ತದೆ.
ವಿದ್ಯುತ್ ಕಂಬ ಮತ್ತು ತಂತಿಗಳ ನಿರ್ವಹಣೆಯ ಜವಾಬ್ದಾರಿ ಎಸ್ಕಾಂಗಳದ್ದಾಗಿದ್ದು; ಅಧಿಕೃತ RR ಸಂಖ್ಯೆ ದೊರಕುವುದರಿಂದ ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಉಚಿತ ಅಥವಾ ರಿಯಾಯಿತಿ ದರದ ವಿದ್ಯುತ್ ಯೋಜನೆಗಳಿಗೆ ಅರ್ಹತೆ ಹೋಮದುತ್ತಾರೆ.
How to Apply – ಅರ್ಜಿ ಸಲ್ಲಿಸುವ ವಿಧಾನ
ಮೊದಲಿಗೆ ರಾಜ್ಯದ ವಿಭಾಗವಾರು ವಿದ್ಯುತ್ ವಿತರಣಾ ಸಂಸ್ಥೆಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಗೆಸ್ಕಾಂ ಗಳ ಪೈಕಿ ನಿಮ್ಮ ವ್ಯಾಪ್ತಿಯ ಎಸ್ಕಾಂ ಗೆ ಭೇಟಿ ನೀಡಿ.
ನಿಮ್ಮ ಜಮೀನಿನ ಪಹಣಿ (RTC), ಆಧಾರ್ ಕಾರ್ಡ್ ಪ್ರತಿ, ಅಕ್ರಮ ಸಂಪರ್ಕದ ಸ್ವಯಂ ಘೋಷಣಾ ಪತ್ರ ಹಾಗೂ ಸರ್ಕಾರ ನಿಗದಿಪಡಿಸಿದ ಸುಮಾರು ₹10,000 ಶುಲ್ಕ ಪಾವತಿಸಿ.
ಗಮನಾರ್ಹವೆಂದರೆ ಶುಲ್ಕದ ಮೊತ್ತ ಸರ್ಕಾರದ ಆದೇಶದಂತೆ ಬದಲಾಗಬಹುದು. ಎಸ್ಕಾಂ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ತಪಾಸಣೆ ನಂತರ ಅರ್ಹ ರೈತರಿಗೆ ಅಧಿಕೃತ RR ಸಂಖ್ಯೆ ನೀಡಲಾಗುತ್ತದೆ.
ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ ರೈತರಿಗೆ ಕೇವಲ ಕಾನೂನುಬದ್ಧ ಸಂಪರ್ಕ ನೀಡುವ ಯೋಜನೆಯಷ್ಟೇ ಅಲ್ಲ ಅದು ಭದ್ರ ಕೃಷಿ, ಆತ್ಮಸ್ಥೈರ್ಯ ಮತ್ತು ಸುಸ್ಥಿರ ಭವಿಷ್ಯದತ್ತ ಹೆಜ್ಜೆ. ನಿಮ್ಮ ಪಂಪ್‌ಸೆಟ್ ಇನ್ನೂ ಅಕ್ರಮವಾಗಿದ್ದರೆ, ವಿಳಂಬ ಮಾಡದೆ ಈ ಅವಕಾಶವನ್ನು ಬಳಸಿಕೊಳ್ಳಿ.
ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗಾಗಿ ಉಚಿತ ವಿದ್ಯುತ್ ಸಹಾಯವಾಣಿ: 1912 ಸಂಪರ್ಕಿಸಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.