2024-25ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು (PUC Result 2025) ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು (ಏಪ್ರಿಲ್ 08) ಘೋಷಿಸಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಶೇಕಡಾ 82.54 ರಷ್ಟು ಪಾಸ್ ಆಗಿದ್ದಾರೆ.
ಎಂದಿನAತೆ ಈ ಈ ಬಾರಿಯೂ ಸಾಕಷ್ಟು ವಿದ್ಯಾರ್ಥಿಗಳು ಫೇಲ್ ಕೂಡ ಆಗಿದ್ದಾರೆ. ಇಂದು ಫಲಿತಾಂಶ ಬಾರದೇ ಇರುವವರನ್ನು ‘ಅನುತ್ತೀರ್ಣ’ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅವರಿಗೆ ಎರಡು ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Karnataka Second PUC Result- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ನಿಮ್ಮ ಮೊಬೈಲ್‌ನಲ್ಲೇ ನೋಡಿ…
ಅನುತ್ತೀರ್ಣರಾದವರಿಗೆ ಮತ್ತೆರಡು ಅವಕಾಶಗಳು
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ದಿನವೇ ಕೆಲವು ವಿದ್ಯಾರ್ಥಿಗಳು ‘ಫೇಲ್’ ಅಥವಾ ‘ಅನುತ್ತೀರ್ಣ’ ಎಂಬ ಟ್ಯಾಗ್‌ಗೆ ಒಳಗಾಗುತ್ತಾರೆ. ಆದರೆ, ಸರ್ಕಾರ ಯಾವುದೇ ವಿದ್ಯಾರ್ಥಿಯನ್ನು ತಕ್ಷಣ ‘ಫೇಲ್’ ಎಂದು ಪರಿಗಣಿಸದೆ, ಅವರಿಗೊಂದು ಸಕಾರಾತ್ಮಕ ಭವಿಷ್ಯ ರೂಪಿಸಲು ಮತ್ತೆರಡು ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಕಡಿಮೆ ಅಂಕ ಪಡೆದವರು ಅಥವಾ ಪಾಸ್ ಆಗದವರು ಮರುಮೌಲ್ಯಮಾಪನ (revaluation) ಫಲಿತಾಂಶ ಬರುವವರೆಗೆ ಕಾಯಬೇಕಾದ ಅವಶ್ಯಕತೆ ಇಲ್ಲ. ಅಥವರು ತಕ್ಷಣವೇ ಪರೀಕ್ಷೆ-2ಗೆ ಅರ್ಜಿ ಹಾಕಬಹುದು. ಪರೀಕ್ಷೆ-2 (Supplementary Exam-2) ವಿವರ ಈ ಕೆಳಗಿನಂತಿದೆ:
- ನೋಂದಣಿ ಅವಧಿ: ಏಪ್ರಿಲ್ 8ರಿಂದ ಏಪ್ರಿಲ್ 17, 2025ರೊಳಗೆ ತಮ್ಮ ಕಾಲೇಜುಗಳಲ್ಲಿಯೇ ನೋಂದಾಯಿಸಬಹುದು.
- ದಂಡ ಸಹಿತ ನೋಂದಣಿ: ಏಪ್ರಿಲ್ 16 ಮತ್ತು 17 ರಂದು ಕೂಡಾ ಅರ್ಜಿ ಹಾಕಬಹುದು.
- ಪರೀಕ್ಷಾ ದಿನಾಂಕಗಳು: ಏಪ್ರಿಲ್ 24 ರಿಂದ ಮೇ 8, 2025ರ ವರೆಗೆ ನಡೆಯಲಿದೆ.

ಪರೀಕ್ಷೆ-3ರ ಅವಕಾಶ
ಪರೀಕ್ಷೆ-2ರಲ್ಲೂ ನಿರೀಕ್ಷತ ಫಲಿತಾಂಶ ಬರದಿದ್ದರೆ ಅಥವಾ ಆ ಫಲಿತಾಂಶ ಸಮಾಧಾನ ತರದೇ ಇದ್ದರೆ ಪರೀಕ್ಷೆ-3 (Supplementary Exam-3) ಅರ್ಜಿ ಸಲ್ಲಿಸಬಹುದುದಾಗಿದೆ. ಪರೀಕ್ಷೆ-3 ಜೂನ್ 9 ರಿಂದ ಜೂನ್ 21, 2025ರ ವರೆಗೆ ನಡೆಯಲಿದೆ.
ಅದೇ ರೀತಿ, ಹಾಜರಾತಿ ಕೊರತೆ (Attendance Shortage) ಸೇರಿದಂತೆ ಯಾವುದೇ ಕಾರಣಕ್ಕೆ 2025ರ ಪಿಯುಸಿ ಪರೀಕ್ಷೆ-1ಕ್ಕೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಕೂಡ ಪರೀಕ್ಷೆ 2 ಅಥವಾ 3ಕ್ಕೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಬಹುದು.
ಈ ಬಾರಿಯ ಫಲಿತಾಂಶದಿ೦ದ ಖುಷಿಯಾಗದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹತಾಶರಾಗಬೇಕಿಲ್ಲ. ಎರಡನೇ ಹಾಗೂ ಮೂರನೇ ಪರೀಕ್ಷೆಗಳು ನಿಮ್ಮ ಭವಿಷ್ಯ ರೂಪಿಸಲು ಮಹತ್ತರ ಅವಕಾಶಗಳಾಗಿವೆ. ಈ ಚಾನ್ಸ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಿ, ತಯಾರಿ ಮಾಡಿಕೊಳ್ಳಿ ಮತ್ತು ಉತ್ತಮ ಫಲಿತಾಂಶ ಗಳಿಸಿ.
ಪರೀಕ್ಷೆ-1ರ ಜಿಲ್ಲಾವಾರು ಫಲಿತಾಂಶ
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಒಟ್ಟು 6,37,805 ವಿದ್ಯಾರ್ಥಿಗಳು ಬರೆದಿದ್ದರು. ಈ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ. 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ ಪಡೆದಿದೆ ಎಂಬ ವಿವರ ಈ ಕೆಳಗಿನಂತಿದೆ:
- ಉಡುಪಿ- ಶೇ.93.90
- ದಕ್ಷಿಣ ಕನ್ನಡ- ಶೇ.93.57
- ಬೆಂಗಳೂರು ದಕ್ಷಿಣ ಶೇ. 85.36
- ಕೊಡಗು- ಶೇ. 83.84
- ಬೆಂಗಳೂರು ಉತ್ತರ- ಶೇ.83.31
- ಉತ್ತರ ಕನ್ನಡ- ಶೇ.82.93
- ಶಿವಮೊಗ್ಗ- ಶೇ.79.91
- ಬೆಂಗಳೂರು ಗ್ರಾಮಾಂತರ- ಶೇ.79.70
- ಚಿಕ್ಕಮಗಳೂರು- ಶೇ.79.56
- ಹಾಸನ- ಶೇ.77.56
- ಚಿಕ್ಕಬಳ್ಳಾಪುರ- ಶೇ.75.80
- ಮೈಸೂರು- ಶೇ.74.30
- ಚಾಮರಾಜನಗರ- ಶೇ.73.97
- ಮಂಡ್ಯ- ಶೇ.73.27
- ಬಾಗಲಕೋಟೆ- ಶೇ.72.83
- ಕೋಲಾರ- ಶೇ.72.45
- ಧಾರವಾಡ- ಶೇ.72.32
- ತುಮಕೂರು- ಶೇ.72.02
- ರಾಮನಗರ- ಶೇ. 69.71
- ದಾವಣಗೆರೆ- ಶೇ.69.45
- ಹಾವೇರಿ- ಶೇ.76.56
- ಬೀದರ್- ಶೇ.67.31
- ಕೊಪ್ಪಳ- ಶೇ.67.20
- ಚಿಕ್ಕೋಡಿ- ಶೇ.66.76
- ಗದಗ- ಶೇ.66.64
- ಬೆಳಗಾವಿ- ಶೇ.65.37
- ಬಳ್ಳಾರಿ- ಶೇ.64.41
- ಚಿತ್ರದುರ್ಗ- ಶೇ.59.87
- ವಿಜಯಪುರ- ಶೇ.58.81
- ರಾಯಚೂರು- ಶೇ.58.75
- ಕಲಬುರಗಿ- ಶೇ.55.70
- ಯಾದಗಿರಿ- ಶೇ.48.45