ಆಹಾರ ಘಟಕ, ಕೃಷಿ ಉತ್ಪನ್ನ ಘಟಕಗಳಂತಹ ಉದ್ಯಮ (Self-employment) ಸ್ಥಾಪನೆಗೆ ಸರ್ಕಾರ ಬರೋಬ್ಬರಿ 15 ಲಕ್ಷ ರೂ. ಸಹಾಯಧನ ನೀಡುತ್ತದೆ. ರಾಜ್ಯದಲ್ಲಿ ಈಗಾಗಲೇ ಈ ಯೋಜನೆಯಡಿ ಸಾವಿರಾರು ಮಹಿಳೆಯರು, ರೈತರು ಉದ್ಯಮ ಸ್ಥಾಪಿಸಿ ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸ್ವಯಂ ಉದ್ಯಮ ಸ್ಥಾಪನೆಯ ಕನಸು ಕಾಣುತ್ತಿರುವ ರೈತರು ಮತ್ತು ಮಹಿಳೆಯರಿಗಾಗಿ ಕೇಂದ್ರ ಸರ್ಕಾರದಿಂದ ಉತ್ತಮ ಅವಕಾಶವಿದೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ (pradhan mantri formalisation of micro food processing enterprises scheme- PM FME) ಅಡಿಯಲ್ಲಿ ₹15 ಲಕ್ಷದ ವರೆಗೆ ಸಹಾಯಧನ (ಸಬ್ಸಿಡಿ) ದೊರೆಯುವ ಈ ಯೋಜನೆ ಈಗ ಅನೇಕರಿಗೆ ಆರ್ಥಿಕ ಸ್ವಾವಲಂಬನೆಯ ದಾರಿಯಾಗುತ್ತಿದೆ.
ಏನಿದು ಪಿಎಮ್‌ಎಫ್‌ಇ ಯೋಜನೆ?
ಕೇಂದ್ರ ಆಹಾರ ಸಂಸ್ಕರಣಾ ಮಂತ್ರಾಲಯದ (MoFPI) ವತಿಯಿಂದ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಸಲ್ಪಡುವ PMFME ಯೋಜನೆಯು ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹಣಕಾಸು, ತಾಂತ್ರಿಕ ಮತ್ತು ವ್ಯಾಪಾರ ಬೆಂಬಲ ಒದಗಿಸುತ್ತದೆ.
ರೈತರು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿ ಆದಾಯ ದ್ವಿಗುಣಗೊಳಿಸುವ ಅವಕಾಶ ನೀಡುವುದು ಹಾಗೂ ಮಹಿಳೆಯರಿಗೆ ಮತ್ತು ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗದ ಮೂಲಕ ಆತ್ಮನಿರ್ಭರ ಬದುಕು ಕಟ್ಟಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ.
Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…
ಯಾರೆಲ್ಲ ಇದರ ಪ್ರಯೋಜನ ಪಡೆಯಬಹುದು?
ವೈಯಕ್ತಿಕ ಉದ್ಯಮಿಗಳು, ಸಹಕಾರ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳು (FPO), ಖಾಸಗಿ ಮಿತ್ರ ಸಂಸ್ಥೆಗಳು, ಮಾಲೀಕತ್ವದ ಅಥವಾ ಪಾಲುದಾರಿಕೆ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸ್ವಸಹಾಯ ಸಂಘಗಳು ಈ ಯೋಜನೆಯಡಿ ಸಿಗುವ ಪ್ರಯೋಜನವನ್ನು ಪಡೆಯಬಹುದಾಗಿದೆ.
ರೊಟ್ಟಿ/ಚಪಾತಿ ತಯಾರಿಕೆ,ಶಾವಿಗೆ, ಹಪ್ಪಳ, ಚಕ್ಕಲಿ, ಖಾರದ ಪುಡಿ, ಮಸಾಲೆ ಪುಡಿ ತಯಾರಿಕೆ, ಬೇಕರಿ ಪದಾರ್ಥಗಳು, ಸಿರಿಧಾನ್ಯಗಳ ಸಂಸ್ಕರಣೆಯAತಹ ಗ್ರಾಮೀಣ ಗೃಹ ಉದ್ಯಮ ತಯಾರಿಸಲು ಇಚ್ಛಿಸುವ ಮಹಿಳೆಯರಿಗೆ ಈ ಯೋಜನೆಯು ವರದಾನವಾಗಿದೆ.
ಎಷ್ಟೆಷ್ಟು ಸಹಾಯಧನ ಸಿಗುತ್ತದೆ?
ಅಂದಾಜು ವೆಚ್ಚ ₹30 ಲಕ್ಷದ ವರೆಗಿನ ಉದ್ಯಮ ಸ್ಥಾಪನೆಗೆ ಶೇ.50ರಷ್ಟು ಸಹಾಯಧನ ಅಂದರೆ ₹7.5 ಲಕ್ಷದ ವರೆಗೆ ಸಬ್ಸಿಡಿ ಸಿಗುತ್ತದೆ. ಇನ್ನು ₹30 ಲಕ್ಷ ಮೇಲ್ಪಟ್ಟ ಘಟಕ ವೆಚ್ಚಕ್ಕೆ ಗರಿಷ್ಠ ₹15 ಲಕ್ಷದ ವರೆಗೆ ಸಹಾಯಧನ ಲಭ್ಯವಿದೆ. ಈ ಸಬ್ಸಿಡಿಯನ್ನು ಶೇ.35% ಕೇಂದ್ರ ಸರ್ಕಾರದಿಂದ ಮತ್ತು ಶೇ.15% ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತದೆ.

ಯಾವ ಉದ್ಯಮಗಳಿಗೆ ಸಿಗಲಿದೆ ಸಾಲ ಮತ್ತು ಸಬ್ಸಿಡಿ ಸೌಲಭ್ಯ?
ಪಿಎಂಎಫ್‌ಎಮ್‌ಇ (PMFME) ಯೋಜನೆಯಡಿ ಗ್ರಾಮೀಣ ಪ್ರದೇಶದ ಮಹಿಳೆಯರು, ರೈತರು ಹಾಗೂ ಸಣ್ಣ ಉದ್ಯಮಿಗಳು ತಮ್ಮ ಆಹಾರ ಸಂಸ್ಕರಣಾ ಉದ್ಯಮ ಆರಂಭಿಸಲು ಆರ್ಥಿಕ ನೆರವು ಪಡೆಯಬಹುದಾಗಿದೆ. ಈ ಯೋಜನೆಯಡಿ ನೆರವು ದೊರೆಯುವ ಪ್ರಮುಖ ಕಿರು ಉದ್ಯಮಗಳ ಪಟ್ಟಿ ಹೀಗಿದೆ:
- ರೊಟ್ಟಿ / ಚಪಾತಿ ತಯಾರಿಕೆ
- ಶಾವಿಗೆ ತಯಾರಿಕೆ
- ಹಪ್ಪಳ ತಯಾರಿಕೆ
- ಬೇಕರಿ ಪದಾರ್ಥಗಳ ತಯಾರಿಕೆ
- ಚಕ್ಕಲಿ ತಯಾರಿಕೆ
- ಸಿರಿಧಾನ್ಯ ಸಂಸ್ಕರಣೆ
- ಹಿಟ್ಟು / ರವಾ ತಯಾರಿಕೆ
- ಶೇಂಗಾ ಪದಾರ್ಥಗಳ ತಯಾರಿಕೆ
- ಅಡಿಗೆ ಎಣ್ಣೆ ತಯಾರಿಕೆ
- ಖಾರಾ ಪುಡಿ, ಮಸಾಲೆ ಪುಡಿ ತಯಾರಿಕೆ
- ಹುಣಸೆ ಹಣ್ಣು ಸಂಸ್ಕರಣೆ
- ಅರಿಷಿಣ ಪುಡಿ ಉದ್ಯಮ
- ಬೆಲ್ಲ ತಯಾರಿಕೆ ಉದ್ಯಮ
- ಸಾವಯವ ಆಹಾರ ಉತ್ಪನ್ನಗಳ ತಯಾರಿಕೆ
- ವಿವಿಧ ಚಟ್ನಿ ಪುಡಿಗಳ ತಯಾರಿಕೆ
- ಕುರುಕಲು ತಿಂಡಿಗಳ ತಯಾರಿಕೆ
- ಉಪ್ಪಿನಕಾಯಿ ತಯಾರಿಕೆ
- ಲಿಂಬೆ ಜಾಮ್, ಲಿಂಬೆ ಗುಳಂ ತಯಾರಿಕೆ
- ಹಣ್ಣು ಹಾಗೂ ತರಕಾರಿ ಸಂಸ್ಕರಣೆ
- ಚುರುಮರಿ (ಮಂಡಕ್ಕಿ), ಅವಲಕ್ಕಿ ತಯಾರಿಕೆ
- ಬೆಳ್ಳುಳ್ಳಿ / ಈರುಳ್ಳಿ ಸಂಸ್ಕರಣೆ
- ಹಾಲಿನ ಉತ್ಪನ್ನಗಳ ತಯಾರಿಕೆ (ತುಪ್ಪ, ಪನೀರ್, ಮೊಸರು)
ಈ ಎಲ್ಲ ಉದ್ಯಮಗಳನ್ನು ಆರಂಭಿಸಲು ನಿಮಗೆ ಬ್ಯಾಂಕ್ ಮೂಲಕ ಸಾಲ ಸಿಗುವಂತೆ ಮಾಡಿಕೊಡಲಾಗುತ್ತದೆ. ಅದರ ಜೊತೆಗೆ ಯೋಜನೆಯ ಮಾರ್ಗಸೂಚಿಯಂತೆ ಶೇಕಡಾ 35ರಷ್ಟು ವರೆಗೆ ಸಬ್ಸಿಡಿಯು ಸಿಗಲಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್
- ವಿದ್ಯುತ್ ಬಿಲ್ ಪ್ರತಿಗಳು
- ಉದ್ಯಮ ಸ್ಥಳದ ದಾಖಲಾತಿ (ಉತಾರ/ಬಾಡಿಗೆ ಪತ್ರ)
- ಉದ್ದಿಮೆ ಲೈಸೆನ್ಸ್
- ಸ್ಥಳದ ಭಾವಚಿತ್ರ
ಬ್ಯಾಂಕ್ ಒಪ್ಪಿಗೆ ನಂತರ ಬೇಕಾಗುವ ದಾಖಲೆಗಳು
- ಪಂಚಾಯತಿ/ಮುನ್ಸಿಪಾಲಿಟಿ ಲೈಸೆನ್ಸ್ ಮತ್ತು ಎನ್‌ಒಸಿ
- ಉತ್ತಮ ಸಿಬಿಲ್ ಸ್ಕೋರ್
- ಉದ್ಯಮಶೀಲತಾ ತರಬೇತಿ ಪ್ರಮಾಣಪತ್ರ
- 10% ಯಂತ್ರಗಳಿಗೆ ಹಾಗೂ 20% ವಂತಿಗೆ ಬಂಡವಾಳಕ್ಕೆ ಫಲಾನುಭವಿ ವಂತಿಗೆ
SSLC Result 2025- ಎಸ್ಸೆಸ್ಸೆಲ್ಸಿ ಫಲಿತಾಂಶ | ಶಿಕ್ಷಣ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…
ಅರ್ಜಿ ಸಲ್ಲಿಕೆ ಹೇಗೆ?
ಯೋಜನೆಯ ಅಧಿಕೃತ ವೆಬ್‌ಸೈಟ್ pmfme.mofpi.gov.inಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಸಬಹುದಾಗಿದೆ. ಇದಕ್ಕಾಗಿ ತಾಲೂಕು/ಜಿಲ್ಲಾ ಕೃಷಿ ಇಲಾಖೆ ಅಥವಾ ಆಹಾರ ಸಂಸ್ಕರಣಾ ಇಲಾಖೆಯಿಂದ ಮಾರ್ಗದರ್ಶನ ಪಡೆಯಬಹುದಾಗಿದೆ. ಅರ್ಜಿಯನ್ನು ಆನ್‌ಲೈನ್ ಅಥವಾ ಸಂಬಂಧಿತ ಇಲಾಖೆಯ ಮೂಲಕ ಸಲ್ಲಿಸಬಹುದು.
ಈ ಯೋಜನೆಯ ಸಹಾಯಧನದ ಮೂಲಕ ಹಳ್ಳಿಗಳಲ್ಲೇ ಸಾಕಷ್ಟು ಮಹಿಳೆಯರು ಮತ್ತು ರೈತರು ಉದ್ಯಮಿಗಳಾಗುತ್ತಿದ್ದಾರೆ. ನೀವು ಕೂಡ ಈ ಯೋಜನೆಯ ಲಾಭ ಪಡೆದು ನಿಮ್ಮ ಬದುಕಿಗೆ ಹೊಸ ತಿರುವು ನೀಡಬಹುದು. ಸಾಲ ಮತ್ತು ಸಹಾಯಧನ ಸೌಲಭ್ಯ ಕುರಿತ ಮಾಹಿತಿ ಪಡೆಯಲು ವಿವಿಧ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ…
- ವಿವಿಧ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ
- ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ : ಇಲ್ಲಿ ಕ್ಲಿಕ್ ಮಾಡಿ
Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…