PMAY 2025 Application- ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದ ಸಬ್ಸಿಡಿ ಸಾಲ ಸೌಲಭ್ಯ | ಪಿಎಂ ಆವಾಸ್ ಯೋಜನೆ ಅರ್ಜಿ ಆಹ್ವಾನ…

Spread the love

ಪಿಎಂ ಆವಾಸ್ ಯೋಜನೆಯ (Pradhan Mantri Awas Yojana-PMAY) ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸತರಿಸಲಾಗಿದೆ. ಈ ಯೋಜನೆಯಡಿ ಸ್ವಂತ ನಿರ್ಮಾಣ ಮಾಡಿಕೊಳ್ಳುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಈ ಕನಸನ್ನು ಸಾಕಾರಗೊಳಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪ್ರಮುಖವಾದದು ಪ್ರಧಾನ ಮಂತ್ರಿ ಆವಾಸ್ ಯೋಜನೆಯೂ (Pradhan Mantri Awas Yojana-PMAY) ಒಂದು.

31-03-2022ರ ವರೆಗೆ ಗಡುವು ಹೊಂದಿದ್ದ ಪಿಎಂ ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಕೆ ಅವಧಿಯನ್ನು ಇದೀಗ ಡಿಸೆಂಬರ್ 2025ರ ವರೆಗೆ ವಿಸ್ತರಿಸಲಾಗಿದೆ. ಇದು ಸಾವಿರಾರು ಬಡ ಕುಟುಂಬಗಳಿಗೆ ಮತ್ತೊಂದು ಅವಕಾಶ ಒದಗಿಸಿದಂತಾಗಿದೆ.

Free Hostel Admission- ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಎಲ್ಲರಿಗೂ ಮನೆ Housing for All

2015ರಲ್ಲಿ ‘ಎಲ್ಲರಿಗೂ ಮನೆ’ (Housing for All) ಎಂಬ ಧ್ಯೇಯವಾಕ್ಯದೊಂದಿಗೆ ಪಿಎಂ ಆವಾಸ್ ಯೋಜನೆಯನ್ನು ಆರಂಭಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗ (EWS), ಕಡಿಮೆ ಆದಾಯ ಹೊಂದಿರುವವರು (LIG) ಹಾಗೂ ಮಧ್ಯಮ ಆದಾಯ ವರ್ಗದವರಿಗೆ (MIG) ವಾಸಯೋಗ್ಯ ಪಕ್ಕಾ ಮನೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಯೋಜನೆ PMAY-Urban (ನಗರ) ಮತ್ತು PMAY-Gramin (ಗ್ರಾಮೀಣ) ಎಂಬಂತೆ ಎರಡು ವಿಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಸರ್ಕಾರದ ಮಾಹಿತಿ ಪ್ರಕಾರ ದೇಶಾದ್ಯಂತ ಈಗಾಗಲೇ ಒಟ್ಟು 92.61 ಲಕ್ಷಕ್ಕಿಂತ ಹೆಚ್ಚು ಮನೆಗಳು ನಿರ್ಮಾಣಗೊಂಡಿವೆ. ಅರ್ಹ ವರ್ಗಗಳ ಕುಟುಂಬಗಳು ಅರ್ಜಿ ಸಲ್ಲಿಸುವ ಮೂಲಕ ಸ್ವಂತ ಮನೆ ಕನಸು ಪೂರೈಸಿಕೊಳ್ಳಬಹುದಾಗಿದೆ.

ಪಿಎಂ ಆವಾಸ್ ಯೋಜನೆಯ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ವಿಸತರಿಸಲಾಗಿದೆ. ಈ ಯೋಜನೆಯಡಿ ಸ್ವಂತ ನಿರ್ಮಾಣ ಮಾಡಿಕೊಳ್ಳುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...
PMAY 2025 Application
ಯಾರಿಗೆ ಎಷ್ಟಷ್ಟು ಸಬ್ಸಿಡಿ ಮತ್ತು ಸಾಲ ಸೌಲಭ್ಯ ಸಿಗುತ್ತದೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈ ಕೆಳಗಿನಂತೆ ವಿವಿಧ ಆರ್ಥಿಕ ಹಿನ್ನಲೆಗೆ ಅನುಗುಣವಾಗಿ ಸಬ್ಸಿಡಿ ಮತ್ತು ಸಾಲದ ನೆರವುಗಳನ್ನು ಒದಗಿಸುತ್ತದೆ.ಆರ್ಥಿಕ ವರ್ಗಗಳ ಪ್ರಕಾರ ಸಬ್ಸಿಡಿ ಮತ್ತು ಸಾಲ ವಿವರಗಳು ಹೀಗಿವೆ:

1. EWS (ಆರ್ಥಿಕವಾಗಿ ಹಿಂದುಳಿದ ವರ್ಗ)

  • ಆದಾಯ ಮಿತಿ: ವರ್ಷಕ್ಕೆ ₹6 ಲಕ್ಷದ ಒಳಗೆ
  • ಮನೆ ಗಾತ್ರ: 30 ಚದರ ಮೀಟರ್ ವರೆಗೆ
  • ಸಾಲ ಸೌಲಭ್ಯ: ₹6 ಲಕ್ಷದ ವರೆಗೆ
  • ಸಬ್ಸಿಡಿ: ₹2.67 ಲಕ್ಷವರೆಗೆ
  • ಶರತ್ತು: ಆಸ್ತಿ ಮಹಿಳೆಯ ಹೆಸರಿನಲ್ಲಿ ಇರಬೇಕು
2. LIG (ಕಡಿಮೆ ಆದಾಯದ ವರ್ಗ)
  • ಆದಾಯ ಮಿತಿ: ₹6 ಲಕ್ಷದಿಂದ ₹12 ಲಕ್ಷ
  • ಮನೆ ಗಾತ್ರ: 60 ಚದರ ಮೀಟರ್ ವರೆಗೆ
  • ಸಾಲ ಸೌಲಭ್ಯ: ₹9 ಲಕ್ಷದ ವರೆಗೆ
  • ಸಬ್ಸಿಡಿ: ₹2.35 ಲಕ್ಷದ ವರೆಗೆ
  • ಶರತ್ತು: ಆಸ್ತಿ ಮಹಿಳೆಯ ಹೆಸರಿನಲ್ಲಿ ಇರಬೇಕು

Atal Pension Yojana- ಪ್ರತೀ ತಿಂಗಳೂ ₹5000 ಪಿಂಚಣಿ | ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ…

3. MIG – ಹಂತ 1 (ಮಧ್ಯಮ ಆದಾಯ ವರ್ಗ – ಫೇಸ್ 1)
  • ಆದಾಯ ಮಿತಿ: ₹12 ಲಕ್ಷದಿಂದ – ₹18 ಲಕ್ಷ
  • ಮನೆ ಗಾತ್ರ: 160 ಚದರ ಮೀಟರ್ ವರೆಗೆ
  • ಸಾಲ ಸೌಲಭ್ಯ: ₹12 ಲಕ್ಷದ ವರೆಗೆ
  • ಸಬ್ಸಿಡಿ: ₹2.30 ಲಕ್ಷದ ವರೆಗೆ
  • ಶರತ್ತು: ಮಹಿಳೆಯ ಹೆಸರಿನಲ್ಲಿ ಆಸ್ತಿ ನೋಂದಣಿ ಇದ್ದರೆ ಮಾತ್ರ ಸಬ್ಸಿಡಿ ಲಭ್ಯ
4. MIG – ಹಂತ 2 (ಮಧ್ಯಮ ಆದಾಯ ವರ್ಗ – ಫೇಸ್ 2)
  • ಆದಾಯ ಮಿತಿ: ₹18 ಲಕ್ಷದ ವರೆಗೆ
  • ಮನೆ ಗಾತ್ರ: 200 ಚದರ ಮೀಟರ್ ವರೆಗೆ
  • ಸಾಲ ಸೌಲಭ್ಯ: ₹12 ಲಕ್ಷದ ವರೆಗೆ
  • ಸಬ್ಸಿಡಿ: ₹2.30 ಲಕ್ಷದ ವರೆಗೆ
  • ಶರತ್ತು: ಮಹಿಳೆಯ ಹೆಸರಿನಲ್ಲಿ ಆಸ್ತಿ ಕಡ್ಡಾಯವಿಲ್ಲ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು
  • ಆಧಾರ್ ಕಾರ್ಡ್ – ಅರ್ಜಿದಾರ ಮತ್ತು ಕುಟುಂಬದ ಸದಸ್ಯರದ್ದು
  • ಬ್ಯಾಂಕ್ ಖಾತೆ ವಿವರಗಳು – ಆಧಾರ್ ಲಿಂಕ್ ಆದ ಖಾತೆ
  • ಭೂಮಿ ದಾಖಲಾತಿಗಳು – ನಿವೇಶನ ಪತ್ರ, ಸರ್ವೇ ನಂ., ಅಥವಾ ಪಟಾ
  • ವಸತಿ ಪ್ರಮಾಣ ಪತ್ರ – ಸ್ಥಳೀಯ ಪುರಸಭೆಯಿಂದ
  • ಆದಾಯ ಪ್ರಮಾಣ ಪತ್ರ – ತಾಲೂಕು ಕಚೇರಿಯಿಂದ
  • ಫೋಟೋ ಮತ್ತು ಸಹಿ
  • ಮನೆ ಇಲ್ಲದ ಬಗ್ಗೆ ಅಫಿಡವಿಟ್ – ನೋಟರಿ ಮೂಲಕ ದೃಢೀಕೃತ

Village House Permit- ಹಳ್ಳಿಗಳಲ್ಲಿಯೂ ಮನೆ ಕಟ್ಟಲು ಇನ್ನು ‘ಅನುಮತಿ’ ಕಡ್ಡಾಯ | ಹೊಸ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ

ಅರ್ಜಿ ಸಲ್ಲಿಸುವ ವಿಧಾನ

ಈ ಕೆಳಗಿನ ವೆಬ್‌ಸೈಟ್ ಲಿಂಕ್ ಬಳಸಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ:

ವೆಬ್‌ಸೈಟ್ ಮುಖಪುಟದಲ್ಲ್ಲಿ ‘Citizen Assessment’ ವಿಭಾಗದಲ್ಲಿ ಅರ್ಜಿದಾರನ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು.

ಇಲ್ಲವೇ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, CSC (Customer Service Center) ಅಥವಾ ನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಸಾಲ ಸೌಲಭ್ಯಕ್ಕಾಗಿ ಸಂಪರ್ಕಿಸಬಹುದಾದ ಬ್ಯಾಂಕುಗಳು

ಪಿಎA ಆವಾಸ್ ಯೋಜನೆಯಡಿ ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ಮತ್ತು ಹೌಸಿಂಗ್ ಫೈನಾನ್ಸ್ ಸಂಸ್ಥೆಗಳು ಈ ಯೋಜನೆಗೆ ಬೆಂಬಲ ನೀಡುತ್ತವೆ. ಉದಾಹರಣೆಗೆ:

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಬ್ಯಾಂಕ್ ಆಫ್ ಬರೋಡಾ
  • ಪಂಜಾಬ್ ನ್ಯಾಷನಲ್ ಬ್ಯಾಂಕ್
  • ಎಚ್ಡಿಎಫ್‌ಸಿ ಲಿಮಿಟೆಡ್
  • ಐಸಿಐಸಿಐ ಬ್ಯಾಂಕ್
  • ಕೆನರಾ ಬ್ಯಾಂಕ್
  • ಇಂಡಿಯಾ ಬೂಲ್ಸ್ ಹೌಸಿಂಗ್ ಫೈನಾನ್ಸ್
  • ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಹೌಸಿಂಗ್
ಅರ್ಜಿ ಸಲ್ಲಿಕೆಯ ಮುಖ್ಯ ದಿನಾಂಕ

ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31, 2025 ಅಂತಿಮ ದಿನಾಂಕವಾಗಿದೆ. ಅರ್ಹ ವ್ಯಕ್ತಿಗಳು ಈ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಒಪ್ಪಿಗೆಯ ನಂತರ, ಲೋನ್ ಅನುಮೋದನೆ ಹಾಗೂ ಸಬ್ಸಿಡಿ ಮಂಜೂರಾತಿ ಆಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಶಾಕಿರಣವಾಗಿದೆ. ಇದರಲ್ಲಿ ನೀವು ಅರ್ಹರಾಗಿದ್ದರೆ, ನಿಮ್ಮ ಕನಸಿನ ಮನೆ ನಿರ್ಮಿಸಲು ಈಗನೇ ಅರ್ಜಿ ಸಲ್ಲಿಸಿ.

HDFC Bank Loan- ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಮೇ 07ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ಹೊಸ ಬಡ್ಡಿದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!