PM Surya Ghar Scheme- ಮನೆಗೆ ಪಿಎಂ ಸೂರ್ಯ ಘರ್ ಯೋಜನೆ ಉಚಿತ ಸೋಲಾರ್ ವಿದ್ಯುತ್ ಪಡೆಯೋದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್…

ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ ಉಚಿತ ವಿದ್ಯುತ್ ನೀಡಲು ಜಾರಿಗೆಯಾಗಿರುವ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಿಂದ (PM Surya Ghar Scheme) ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ವಿದ್ಯುತ್ ಹೊರೆಯನ್ನು ಇಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಯೇ ‘ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ’. ಈ ಯೋಜನೆಯ ಮುಖ್ಯ ಉದ್ದೇಶ ಮತ್ತು ಗುರಿ ದೇಶದ ಒಂದು ಕೋಟಿ ಮನೆಗಳಿಗೆ ಸೋಲಾರ್ ಘಟಕಗಳನ್ನು (Solar plants) ಬಳಸಿಕೊಂಡು ಪರಿಸರಸ್ನೇಹಿ ವಿದ್ಯುತ್ತನ್ನು (Electricity) ಉತ್ಪಾದನೆ ಮಾಡುವುದಾಗಿದೆ.
ಸದರಿ ಯೋಜನೆಯನ್ನು ಕೇಂದ್ರ ಸಚಿವ ಸಂಪುಟವು ಫೆಬ್ರುವರಿ 29, 2024 ರಂದು 75 ಸಾವಿರ ಕೋಟಿಗೂ ಅಧಿಕ ವೆಚ್ಚದೊಂದಿಗೆ ಅನುಮೋದನೆ ನೀಡಿದೆ. ದೇಶದಲ್ಲಿ ಸೋಲಾರ್ ವಿದ್ಯುತ್ತನ್ನು ಉತ್ಪಾದನೆ ಮಾಡುವುದರಲ್ಲಿ ಮತ್ತು ಉಪಯೋಗಿಸುವುದರಲ್ಲಿ ಭಾರತವು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಈ ಯೋಜನೆಯ ಲಾಭಗಳೇನು? ಎಷ್ಟು ರೂಪಾಯಿ ವರೆಗೆ ಸಹಾಯಧನ ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಯೋಜನೆಯ ವಿವರ ಮತ್ತು ಲಾಭಗಳು
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯು ಪ್ರತಿ ಮನೆಗೂ ಕನಿಷ್ಠ 15,000 ರೂಪಾಯಿಯ ವಿದ್ಯುತ್ ಬಿಲ್ ಉಳಿತಾಯ ಮಾಡುವ ಪರಿವರ್ತಕ ಯೋಜನೆಯಾಗಿದೆ. ಪ್ರತಿಯೊಬ್ಬರ ಮನೆಯ ಮೇಲ್ಚಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದನೆ ಮತ್ತು ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ. ಅದೇ ರೀತಿ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು.
ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Low interest loan facility) ಮತ್ತು ಸಹಾಯಧನ (Subsidy) ಸಿಗಲಿದೆ.
ಅರ್ಹ ಫಲಾನುಭವಿಗಳು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಗರಿಷ್ಠ ಎಂದರೆ 10 ಕಿಲೋ ವ್ಯಾಟ್ ವರೆಗೂ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಸೌರ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಕೇಂದ್ರ ಸರ್ಕಾರವು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಿದೆ.

ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡ ಮೇಲೆ ಐದು ವರ್ಷಗಳ ವರೆಗೆ ನಿರ್ವಹಣಾ ಗ್ಯಾರಂಟಿಯನ್ನು (Maintenance guarantee) ನೀಡಲಾಗುವುದು. ಐದು ವರ್ಷಗಳ ನಿರ್ವಹಣಾ ಗ್ಯಾರಂಟಿಯನ್ನುಕೂಡ ನೀಡಲಾಗುತ್ತದೆ.
ಅರ್ಹ ಫಲಾನುಭವಿಗಳು ಸೋಲಾರ್ ಘಟಕಗಳನ್ನು ಅಳವಡಿಸಿಕೊಂಡ ಮೇಲೆ ಯಾವುದೇ ವಿದ್ಯುತ್ ಬಿಲ್ ಅನ್ನು ಪಾವತಿಸುವ ಅಗತ್ಯವಿರುವುದಿಲ್ಲ. ನಿಮ್ಮ ಅವಶ್ಯಕತೆಗಿಂತ ಹೆಚ್ಚಿನ ವಿದ್ಯುತ್ ಉತ್ಪಾದಿಸಿದರೆ, ಅದನ್ನು ಹತ್ತಿರದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಕೂಡ ಗಳಿಸಬಹುದು.
ಇದನ್ನೂ ಓದಿ: Offline UPI Payment Method NPCI- ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಹಣ ಕಳಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ…
ಸಹಾಯಧನ ಎಷ್ಟು ಸಿಗಲಿದೆ?
ಈ ಯೋಜನೆಯ ಅಡಿಯಲ್ಲಿ ಅರ್ಹರಿರುವ ಫಲಾನುಭವಿಗಳು ತಮ್ಮ ಮನೆಯ ಮೇಲ್ಚಾವಣಿಯ ಮೇಲೆ ಒಂದು ಕಿಲೋ ವ್ಯಾಟ್ ಸಾಮರ್ಥ್ಯವಿರುವ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳಲು 30,000 ರೂಪಾಯಿ ಸಹಾಯದಿಂದ ಸಿಗಲಿದೆ.
ಒಂದು ವೇಳೆ ಅಭ್ಯರ್ಥಿಯು ಎರಡು ಕಿಲೋ ವ್ಯಾಟ್ ಸಾಮರ್ಥ್ಯವಿರುವ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳುವುದಾದರೆ 60,000 ರೂಪಾಯಿ ಸಹಾಯಧನ ಸಿಗಲಿದೆ.
ಅದೇ 3 ಕಿಲೋ ವ್ಯಾಟ್ ಸಾಮರ್ಥ್ಯವಿರುವ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳುವುದಾದರೆ 78,000 ರೂಪಾಯಿ ಸಹಾಯಧನ ಸಿಗಲಿದೆ.
ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು Eligibility criteria
- ಅರ್ಜಿದಾರರು ಭಾರತ ದೇಶದ ಪ್ರಜೆಯಾಗಿರಬೇಕು ಮತ್ತು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ತನ್ನ ಮನೆಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿಕೊಳ್ಳಲು ಸ್ವಂತ ಮನೆಯನ್ನು ಹೊಂದಿರಬೇಕು.
- ಅಭ್ಯರ್ಥಿಯ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್’ಗೆ ಲಿಂಕ್ ಹೊಂದಿರಬೇಕು.
- ಕುಟುಂಬದ ಸದಸ್ಯರು ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಇತರೆ ಯಾವುದೇ ರೀತಿಯ ಸಹಾಯಧನ ಪಡೆದಿರಬಾರದು.
ಇದನ್ನೂ ಓದಿ: Rural Godown Subsidy Scheme- ರೈತರಿಗೆ ಗೋದಾಮು ನಿರ್ಮಾಣಕ್ಕೆ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು
- ಆಧಾರ್ ಕಾರ್ಡ್
- ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್
- ವೋಟರ್ ಕಾರ್ಡ್
- ಹಿಂದಿನ ಆರು ತಿಂಗಳ ವಿದ್ಯುತ್ ಬಿಲ್
- ಬ್ಯಾಂಕ್ ಖಾತೆ ಪುಸ್ತಕ
- ಆದಾಯ ಪ್ರಮಾಣ ಪತ್ರ
- ಸ್ವಂತ ಮನೆಗೆ ಸಂಬಂಧಿಸಿದ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಅರ್ಹರಿರುವ ಫಲಾನುಭವಿಗಳು ಅಗತ್ಯವಿರುವ ದಾಖಲಾತಿಗಳೊಂದಿಗೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
Step 1: ಮೊದಲು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿ ಆಯ್ಕೆ ಮಾಡಿಕೊಂಡು, ವಿದ್ಯುತ್ ಗ್ರಾಹಕರ ಸಂಖ್ಯೆ ಹಾಗೂ ನಿಮ್ಮ ಮೊಬೈಲ್ ನಂಬರ್ ಇಮೇಲ್ ಐಡಿಯನ್ನು ನಮೂದಿಸಿ ನೋಂದಾಯಿಸಿಕೊಳ್ಳಿ.
Step 2: ನೊಂದಾಯಿಸಿಕೊಂಡ ನಂತರ ಗ್ರಾಹಕರ ಸಂಖ್ಯೆ ಹಾಗೂ ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ ಮುಂದುವರೆಯಿರಿ.
Step 3: ಲಾಗಿನ್ ಆಗಿ, ಅಗತ್ಯವಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
ಇದನ್ನೂ ಓದಿ: Har Ghar Lakhpati Yojana- ಎಸ್‌ಬಿಐ ಹರ್ ಘರ್ ಲಖ್ಪತಿ ಯೋಜನೆ: ಪ್ರತಿ ತಿಂಗಳು ಕೇವಲ 500 ರೂ. ಉಳಿಸಿ ಲಕ್ಷಾಧಿಪತಿ ಆಗಿ
Step 4: ಅರ್ಜಿ ಸಲ್ಲಿಸಿದ ಬಳಿಕ ನೀವು ಆಯ್ಕೆ ಮಾಡಿದ ವಿದ್ಯುತ್ ಸರಬರಾಜು ಕಂಪನಿಯಿಂದ ಕಾರ್ಯಸಾಧ್ಯತೆಯ ಅನುಮೋದನೆ ಬರುತ್ತದೆ. ಅನುಮೋದನೆಯ ನಂತರ ಯಾವುದೇ ನೋಂದಾಯಿತ ಸೌರ ಘಟಕ ಮಾರಾಟಗಾರರಿಂದ, ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಘಟಕಗಳನ್ನು ಅಳವಡಿಸಿಕೊಳ್ಳಬಹುದು.
Step 5: ಸೌರ ಘಟಕಗಳನ್ನು ಅಳವಡಿಸಿಕೊಂಡ ನಂತರ, ಆನ್‌ಲೈನ್’ನಲ್ಲಿ ಸೌರ ಘಟಕದ ವಿವರಗಳನ್ನು ಸಲ್ಲಿಸಿ ನೆಟ್ ಮೀಟರ್’ಗಾಗಿ ಅರ್ಜಿ ಸಲ್ಲಿಸಬಹುದು.
Step 6: ನೆಟ್ ಮೀಟರ್ ಪಡೆದು ಸ್ಥಾಪಿಸಿಕೊಂಡ ನಂತರ ವಿದ್ಯುತ್ ಸರಬರಾಜು ಕಂಪನಿಯು ಸಂಪೂರ್ಣ ತಪಾಸಣೆ ನಡೆಸುತ್ತದೆ. ತಪಾಸಣೆಯ ನಂತರ ನಿಮಗೆ ಕಾರ್ಯ ಆರಂಭದ ಪ್ರಮಾಣ ಪತ್ರವನ್ನು ಕೂಡ ನೀಡಲಾಗುವುದು.
Step 7: ಕಾರ್ಯಕ್ರಮದ ಪ್ರಮಾಣ ಪತ್ರ ಮತ್ತು ವರದಿ ಪಡೆದ ನಂತರ ಆನ್‌ಲೈನ್ ಮುಖಾಂತರ ನಿಮ್ಮ ಬ್ಯಾಂಕ್ ಖಾತೆಯ ವಿವರ ಮತ್ತು ರದ್ದುಗೊಂಡ ಚೆಕ್ ಸಲ್ಲಿಸಿದರೆ, ನಿಮ್ಮ ಖಾತೆಗೆ 30 ದಿನಗಳ ಒಳಗಾಗಿ ಸಹಾಯಧನವನ್ನು ವರ್ಗಾವಣೆ ಮಾಡಲಾಗುತ್ತದೆ.
ಅರ್ಜಿ ಲಿಂಕ್: Apply ಮಾಡಿ