20ನೇ ಕಂತಿನ ಪಿಎಂ-ಕಿಸಾನ್ ಹಣ ಜಮಾಕ್ಕೆ (PM Kisan 20ne Kanthu) ದಿನಗಣನೆ ಆರಂಭವಾಗಿದೆ. ಯಾವೆಲ್ಲ ರೈತರಿಗೆ ಹಣ ಸಿಗಲಿದೆ? ಹಣ ಪಡೆಯಲು ರೈತರೇನು ಮಾಡಬೇಕು? ಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ದೇಶದ ಲಕ್ಷಾಂತರ ರೈತರಿಗೆ ವಾರ್ಷಿಕ ಆರ್ಥಿಕ ನೆರವು ನೀಡುತ್ತಿದೆ. ಈಗ 20ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗುತ್ತಿದೆ.
20ನೇ ಕಂತಿನ ಹಣ ಯಾವೆಲ್ಲ ರೈತರು ಪಡೆಯುತ್ತಾರೆ? ಈ ಹಣ ರೈತರ ಖಾತೆಗೆ ಯಾವಾಗ ಜಮಾ ಆಗುತ್ತದೆ? ಹಣ ಪಡೆಯಲು ರೈತರು ಯಾವ ಯಾವ ಶರತ್ತುಗಳನ್ನು ಪಾಲಿಸಬೇಕು? ಮುಂತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ರೈತ ಕುಟುಂಬಕ್ಕೆ 6,000 ರೂ. ಪ್ರೋತ್ಸಾಹಧನ
ಸಣ್ಣ ಮತ್ತು ಅತೀ ರೈತರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ 2019ರಲ್ಲಿ ಕೇಂದ್ರ ಸರ್ಕಾರ PM-KISAN ಯೋಜನೆ ಅರಂಭಿಸಿದೆ. ಆ ಪ್ರಕಾರ ಪ್ರತಿ ರೈತ ಕುಟುಂಬಕ್ಕೆ ವರ್ಷಕ್ಕೆ ₹6,000 ರೂ. ನೆರವು ನೀಡಲಾಗುತ್ತದೆ.
ಈ ಹಣವನ್ನು ತಲಾ 2,000 ರೂ.ಗಳಂತೆ ವರ್ಷದಲ್ಲಿ ಮೂರು ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ ಕಳೆದ ಫೆಬ್ರವರಿಯಲ್ಲಿ 19ನೇ ಕಂತು ಬಿಡುಗಡೆ ಮಾಡಿಕೊಂಡಿದೆ. ಇದೀಗ 20ನೇ ಕಂತಿನ ಹಣ ಬಿಡುಗಡೆಯ ಸಮಯ ಬಂದಿದೆ.
20ನೇ ಕಂತು ಬಿಡುಗಡೆ ಯಾವಾಗ?
ಸಾಮಾನ್ಯವಾಗಿ ಪ್ರತೀ ವರ್ಷ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಕಂತು ಬರುತ್ತದೆ. ಕಳೆದ ವರ್ಷ 2024ರಲ್ಲಿ 17ನೇ ಕಂತು ಜೂನ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಬಾರಿ ಕೂಡ ಜೂನ್ ತಿಂಗಳಿನಲ್ಲಿಯೇ 20ನೇ ಕಂತು ಬಿಡುಗಡೆಯಾಗುವ ನಿರೀಕ್ಷೆ ಹಲವರಲ್ಲಿತ್ತು.
ಆದರೆ, ಸರ್ಕಾರದಿಂದ ಈತನಕ ಇನ್ನೂ ಯಾವುದೇ ಅಧಿಕೃತ ದಿನಾಂಕ ಘೋಷಣೆ ಆಗಿಲ್ಲವಾದರೂ, ಜುಲೈ ಮೊದಲ ವಾರ 20ನೇ ಕಂತಿನ ಹಣ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ಕೇಂದ್ರ ಸರ್ಕಾರದಿಂದ ಹಣ ಪಡೆಯಲು ರೈತರು ಈ ಕೆಳಗಿನ ಮೂರು ಮುಖ್ಯ ಹಂತಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.

1. e-KYC (ಇ-ಕೆವೈಸಿ) ಪೂರ್ಣಗೊಳಿಸಿ
e-KYC ಇಲ್ಲದೆ ಹಣವನ್ನು ಪಾವತಿಸುವುದಿಲ್ಲ ಎಂದು ಸರ್ಕಾರ ಈ ಹಿಂದೆಯೇ ಸ್ಪಷ್ಟಪಡಿಸಿದೆ. e-KYC ಮಾಡುವುದು ಬಹಳ ಸುಲಭ. ನಿಮ್ಮ ಸ್ಥಳೀಯ ಬ್ಯಾಂಕ್, ಕೃಷಿ ಕೇಂದ್ರ ಅಥವಾ ಅಂತರ್ಜಾಲದ ಮೂಲಕ ಈ ಕೆಲಸ ಮಾಡಬಹುದು. ಆಧಾರ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡುವ ಮೂಲಕ ಈ ಪ್ರಕ್ರಿಯೆ ಮುಗಿಯುತ್ತದೆ. ಈ ಕೆಲಸ ಮಾಡಿದವರು ಮಾತ್ರ ಹಣ ಪಡೆಯಲು ಅರ್ಹರಾಗುತ್ತಾರೆ.
2. ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ನೋಡಿ
ಸರ್ಕಾರದ pmkisan.gov.in ವೆಬ್‌ಸೈಟ್ ಮೂಲಕ Beneficiary Status ಪರಿಶೀಲಿಸಿ. ಅಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಯಾವುದೇ ಅಡೆತಡೆ ಇಲ್ಲದೇ 20ನೇ ಕಂತಿನ ಹಣ ಜಮಾ ಆಗುತ್ತದೆ.
ಕೆಲವೊಮ್ಮೆ ದಾಖಲೆಗಳಲ್ಲಿ ತಪ್ಪುಗಳು ಅಥವಾ ತೊಂದರೆಗಳಿಂದ ಹೆಸರು ತೆಗೆದು ಹಾಕಲ್ಪಟ್ಟಿರುತ್ತದೆ. ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಿಮಗೆ ಈ ಕಂತಿನ ಹಣ ಸಿಗುವುದಿಲ್ಲ. ಹೆಸರು ಇದ್ದರೆ ಮಾತ್ರ ₹2,000 ಹಣ ನೇರವಾಗಿ ಖಾತೆಗೆ ಜಮಾ ಆಗುತ್ತದೆ.
3. ಬ್ಯಾಂಕ್ ಖಾತೆಯ ವಿವರಗಳು ಸರಿ ಇದೆಯಾ ನೋಡಿಕೊಳ್ಳಿ
ತಪ್ಪಾದ IFSC ಕೋಡ್, ಖಾತೆ ಮುಚ್ಚಿರುವುದು ಅಥವಾ ಆಧಾರ್ ಲಿಂಕ್ ಆಗದಿರುವುದು ಹಣ ಜಮಾ ಆಗಲು ಅಡೆತಡೆ ಉಂಟು ಮಾಡುತ್ತವೆ. ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ವಿವರಗಳನ್ನು ಪರಿಶೀಲಿಸಿ ಮತ್ತು ನವೀಕರಿಸಿ. ಸರಿಯಾದ ಖಾತೆ ವಿವರಗಳಿದ್ದರೆ ಹಣ ನೇರವಾಗಿ ಬರುತ್ತದೆ.
ಪ್ರಮುಖವಾಗಿ ಇ-ಕೆವೈಸಿ ಪೂರ್ಣಗೊಳಿಸಿ. ಬ್ಯಾಂಕ್ ವಿವರಗಳನ್ನು ಸರಿಯಾಗಿವೆಯಾ ಎಂಬುವುದನ್ನು ಪರಿಶೀಲಿಸಿ, ತಪ್ಪಾಗಿದ್ದರೆ ಕೂಡಲೇ ನವೀಕರಿಸಿ. ನೋಂದಣಿಯ ಸಂದರ್ಭದಲ್ಲಿ ಒದಗಿಸಿದ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಮ್ಯಾಚ್ ಮಾಡಿ ನೋಡಿ. ಈ ಕ್ರಮಗಳನ್ನು ಮುಂಚಿತವಾಗಿ ಪೂರ್ಣಗೊಳಿಸಿದರೆ, ಹಣ ಸಿಲುಕದೆ ನೇರವಾಗಿ ಖಾತೆಗೆ ಜಮಾ ಆಗುತ್ತದೆ.
BDA Sites Auction 2025- ರಿಯಾಯ್ತಿ ದರಲ್ಲಿ ಬೆಂಗಳೂರಿನಲ್ಲಿ ಸರ್ಕಾರದ ಸೈಟು | ಆಸಕ್ತರಿಗೆ ಬಿಡಿಎ ಮುಕ್ತ ಆಹ್ವಾನ
ಹಲವಾರು ರೈತರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ
ಪ್ರಶ್ನೆ-1: ನಾನು ಹೊಸ ನೋಂದಣಿ ಮಾಡಿದ್ದೇನೆ. ನನಗೆ ಈ ಕಂತು ಸಿಗುತ್ತದೆಯೆ?
ಉತ್ತರ: ನೀವು ಪೂರ್ಣವಾಗಿ ನೋಂದಣಿ ಮಾಡಿ e-KYC ಮಾಡಿದ್ದು, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದ್ದರೆ ಖಚಿತವಾಗಿಯೂ ಹಣ ಸಿಗುತ್ತದೆ.
ಪ್ರಶ್ನೆ-2: ಹೆಸರು ಪಟ್ಟಿಯಿಂದ ತೆಗೆದು ಹಾಕಿದ್ದರೆ?
ಉತ್ತರ: ‘ಫಲಾನುಭವಿಗಳ ಪಟ್ಟಿ’ಯಲ್ಲಿ ಹೆಸರು ಇಲ್ಲದಿದ್ದರೆ ಈ ಕಂತು ಸಿಗುವುದಿಲ್ಲ. ವೆಬ್‌ಸೈಟ್‌ನಲ್ಲಿ ಹೊಸದಾಗಿ ನೋಂದಣಿ ಮಾಡಿ ಅಥವಾ ತಿದ್ದುಪಡಿ ಸಲ್ಲಿಸಿ.
ಪ್ರಶ್ನೆ-3: ಬ್ಯಾಂಕ್ ಖಾತೆ ಬದಲಾಯಿಸಿದ್ದೇನೆ, ಏನು ಮಾಡಬೇಕು?
ಉತ್ತರ: ಹೊಸ ಬ್ಯಾಂಕ್ ಖಾತೆ ವಿವರವನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿ, ಸರ್ಕಾರದ ದಾಖಲೆಗಳಲ್ಲಿ ನವೀಕರಿಸಿ.
ರೈತ ಬಂಧುಗಳೇ, ಸರ್ಕಾರವು 20ನೇ ಕಂತಿನ ಹಣವನ್ನು ಬಹಳ ಬೇಗ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಸಮಯದಲ್ಲಿ ನೀವು ಇ-ಕೆವೈಸಿ, ಬ್ಯಾಂಕ್ ವಿವರಗಳ ನವೀಕರಣ ಮತ್ತು ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಖಚಿತವಾಗಿರುವುದನ್ನು ಪರಿಶೀಲಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಫಲಾನುಭವಿಗಳ ಪಟ್ಟಿ ನೋಡುವ ಲಿಂಕ್: Beneficiary List
- ಹಣ ಜಮಾ ಸ್ಥಿತಿ ನೋಡುವ ಲಿಂಕ್: Beneficiary Status
Mungaru Bele Vime 2025- ಮುಂಗಾರು ಬೆಳೆ ವಿಮೆ | ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.