FinanceNews

PhonePe New Features- ಫೋನ್‌ಪೇನಲ್ಲಿ ಪೇಮೆಂಟ್ ಮಾಡೋದು ಇನ್ನೂ ಸುಲಭ | ಹೊಸ ಫೀಚರ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಫೋನ್‌ಪೇ (PhonePe) ಪೇಮೆಂಟ್ ಆ್ಯಪ್ ಇದೀಗ ಇನ್ನೂ ಸುಲಭವಾಗಿ ಪೇಮೆಂಟ್ ಮಾಡುವ ಫೀಚರ್‌ಗಳನ್ನು (PhonePe New Features) ಹೊಸದಾಗಿ ಪರಿಚಯಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಭಾರತದಲ್ಲಿ ಡಿಜಿಟಲ್ ಪೇಮೆಂಟ್‌ಗಳ (Digital Payment) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ, ಫೋನ್‌ಪೇ (PhonePe) ತನ್ನ ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಿದೆ.

ಆನ್‌ಲೈನ್ ಪೇಮೆಂಟ್ (Online Payment) ಮಾಡುವಾಗ ವೇಗ, ಭದ್ರತೆ ಹಾಗೂ ಸುಲಭ ಅನುಭವವನ್ನು ಒದಗಿಸುವ ಉದ್ದೇಶದಿಂದ, ಫೋನ್‌ಪೇ ಇದೀಗ ಹಲವು ಹೊಸ ಫೀಚರ್‌ಗಳನ್ನು (PhonePe New Features) ಬಿಡುಗಡೆ ಮಾಡಿದೆ.

PMAY Housing Loan Subsidy- ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ₹2.67 ಲಕ್ಷ ವರೆಗೆ ಸಹಾಯಧನ | ಪಿಎಂ ಆವಾಸ್ ಯೋಜನೆಗೆ ಅರ್ಜಿ ಆಹ್ವಾನ

ಮೂರು ಹೊಸ ಪೀಚರ್ ಪರಿಚಯ

ಮೊಬೈಲ್ ಆಧಾರಿತ ಪೇಮೆಂಟ್ ಸೌಲಭ್ಯಗಳಲ್ಲಿ ದೇಶದ ಪ್ರಮುಖ ಹೆಸರಾಗಿರುವ ಫೋನ್‌ಪೇ, ಈಗ ತನ್ನ ಆ್ಯಪ್‌ನಲ್ಲಿ ಕ್ಯೂಆರ್ ಸ್ಕ್ಯಾನ್ ಶಾರ್ಟ್ಕಟ್, ಯುಪಿಐ ಲೈಟ್ ಪೇಮೆಂಟ್ ಹಾಗೂ ಸ್ಪ್ಲಿಟ್ ಎಕ್ಸ್ಪೆನ್ಸಸ್ ಎಂಬ ಮೂರು ಪ್ರಮುಖ ಫೀಚರ್‌ಗಳನ್ನು ಪರಿಚಯಿಸಿದೆ.

ಈ ಹೊಸ ಪೀಚರ್‌ಗಳ ಮೂಲಕ, ಪ್ರತಿದಿನದ ಪೇಮೆಂಟ್‌ಗಳು ಇನ್ನಷ್ಟು ವೇಗವಾಗಿ, ಸುಲಭವಾಗಿ ಹಾಗೂ ತೊಂದರೆಯಿಲ್ಲದೆ ನೆರವೇರಲಿವೆ. ಈ ಹೊಸ ಫೀಚರ್‌ಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…

ಫೋನ್‌ಪೇ ಪೇಮೆಂಟ್ ಆ್ಯಪ್ ಇದೀಗ ಇನ್ನೂ ಸುಲಭವಾಗಿ ಪೇಮೆಂಟ್ ಮಾಡುವ ಫೀಚರ್‌ಗಳನ್ನು ಹೊಸದಾಗಿ ಪರಿಚಯಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ...
PhonePe New Features

1. ಕ್ಯೂಆರ್ ಸ್ಕ್ಯಾನ್ ಶಾರ್ಟ್‌ಕಟ್ (QR Scan Shortcut): ಕ್ಯೂಆರ್ ಕೋಡ್  ಮೂಲಕ ಸ್ಕ್ಯಾನ್ ಮಾಡಿ, ಪೇಮೆಂಟ್ ಮಾಡಲು ಫೋನ್‌ಪೇ ಆ್ಯಪ್ ಓಪನ್ ಮಾಡಬೇಕಾಗುತ್ತದೆ. ಆದರೆ, ಮೊಬೈಲ್ ಸ್ಕ್ರೀನ್‌ ಮೇಲಿರುವ ಫೋನ್‌ಪೇ ಆ್ಯಪ್ ಮೇಲೆ ಟ್ಯಾಪ್ ಮಾಡಿ, ಹೋಲ್ಡ್ ಮಾಡಿದರೆ ನೇರವಾಗಿ ಸ್ಕ್ಯಾನ್ ಮಾಡುವ ಆಯ್ಕೆ ತೋರಿಸುತ್ತದೆ. ಆಗ ನೀವು ಸುಲಭವಾಗಿ ಪೇಮೆಂಟ್ ಮಾಡಬಹುದು.

Canara Bank Loan- ಕೆನರಾ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ | ವಾಹನ ಹಾಗೂ ವೈಯಕ್ತಿಕ ಸಾಲ ಪಡೆಯುವವರಿಗೆ ಸುವರ್ಣಾವಕಾಶ

2. ಯುಪಿಐ ಲೈಟ್ ಪೇಮೆಂಟ್ (UPI Lite Payment): ಇನ್ನು ಯಾರಿಗಾದರೂ 1,000 ರೂ. ಅಥವಾ ಅದಕ್ಕಿಂತ ಕಡಿಮೆ ಮೊತ್ತ ಕಳಿಸಬೇಕಾದರೆ, ಯುಪಿಐ ಪಿನ್ ನಮೂದಿಸಲೇಬೇಕಾಗಿಲ್ಲ. ಫೋನ್‌ಪೇನಲ್ಲಿನ ‘ಯುಪಿಐ ಲೈಟ್ ಫೀಚರ್’ (UPI Lite) ಮೂಲಕ ಸಾವಿರ ರೂ. ಗಿಂತ ಕಡಿಮೆ ಮೊತ್ತವನ್ನು ಯುಪಿಐ ಪಿನ್ ಇಲ್ಲದೆ ಕಳುಹಿಸಬಹುದಾಗಿದೆ.

3. ಸ್ಪ್ಲಿಟ್ ಎಕ್ಸ್ಪೆನ್ಸಸ್ (Split Expenses): ಅದೇ ರೀತಿ ಫೋನ್‌ಪೇನಲ್ಲಿ ಸ್ಪ್ಲಿಟ್ ಎಕ್ಸ್ಪೆನ್ಸನ್ ಆಯ್ಕೆಯೂ ಇದೆ. ನೀವು ಗೆಳೆಯರ ಜತೆ ಯಾವುದಾದರೂ ‘ಹೋಟೆಲ್‌ಗೆ ಹೋಗಿ ಊಟ ಮಾಡಿ, ಬಿಲ್ ಅನ್ನು ಸಮಾನವಾಗಿ ಹಂಚಲು ಇದನ್ನು ಬಳಸಬಹುದು.

ಸ್ಪ್ಲಿಟ್ ಎಕ್ಸ್ಪೆನ್ಸಸ್ ಫೀಚರ್ ಆಯ್ಕೆ ಮಾಡಿಕೊಂಡು, ನೀವು ಪಾರ್ಟಿ ಮಾಡಲು ಹೋದವರ ಹೆಸರನ್ನು ಸೇರಿಸಿ. ಆಗ, ಪ್ರತಿಯೊಬ್ಬರೂ ಎಷ್ಟು ಹಣ ನೀಡಬೇಕು ಎಂಬುದು ತಿಳಿಯುವುದರ ಜತೆಗೆ, ಅವರಿಗೆ ನೋಟಿಫಿಕೇಶನ್ ಕೂಡ ಹೋಗುತ್ತದೆ. ಆಗ ಎಲ್ಲರೂ ಸುಲಭವಾಗಿ ಪೇಮೆಂಟ್ ಮಾಡಬಹುದು.

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!