ಜೀವನದಲ್ಲಿ ಉಂಟಾಗುವ ಅನೇಕ ಆರ್ಥಿಕ ಅಗತ್ಯತೆಗಳಿಗೆ ತಕ್ಷಣದ ಪರಿಹಾರವಾಗಿ ವೈಯಕ್ತಿಕ ಸಾಲಗಳು (Personal Loans) ಒಂದು ಉತ್ತಮ ಆಯ್ಕೆಯಾಗಿವೆ. ಬ್ಯಾಂಕುಗಳು (Banks) ಮತ್ತು ಹಣಕಾಸು ಸಂಸ್ಥೆಗಳು (Financial institutions) ವಿವಿಧ ಉದ್ದೇಶಗಳಿಗಾಗಿ ನಾನಾ ವಿಧದ ವೈಯಕ್ತಿಕ ಸಾಲಗಳನ್ನು ನೀಡುತ್ತವೆ.
ವೈಯಕ್ತಿಕ ಸಾಲ ಎಂಬುದು ಖಾತರಿ ಇಲ್ಲದೆ (unsecured) ನೀಡಲಾಗುವ ಸಾಲವಾಗಿದ್ದು; ಇವುಗಳಿಗಾಗಿ ನೀವು ಯಾವುದೇ ಆಸ್ತಿಯನ್ನು ಅಡಮಾನ ಇಡಬೇಕಾಗಿಲ್ಲ. ಬ್ಯಾಂಕುಗಳು ಈ ಸಾಲವನ್ನು ನಿಮ್ಮ ಆರ್ಥಿಕ ಸ್ಥಿತಿ, ಕ್ರೆಡಿಟ್ ಸ್ಕೋರ್ (credit score), ಉದ್ಯೋಗ ಸ್ಥಿರತೆ ಹಾಗೂ ಮರುಪಾವತಿ ಸಾಮರ್ಥ್ಯದ ಆಧಾರದಲ್ಲಿ ನೀಡುತ್ತವೆ. ಅಂತಹ ಕೆಲವು ವಿಶೇಷ ವೈಯಕ್ತಿಕ ಸಾಲಗಳ ಪಟ್ಟಿ ಇಲ್ಲಿದೆ…
ಕೆಲವು ವೈಯಕ್ತಿಕ ಸಾಲಗಳ ವಿಧಗಳು
- ವಿವಾಹ ಸಾಲ
- ಪ್ರವಾಸ ಸಾಲ
- ಮನೆ ನವೀಕರಣ ಸಾಲ
- ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿ ಸಾಲ
- ಪಿಂಚಣಿ ಸಾಲ
ಈ ಲೇಖನದಲ್ಲಿ, ಸಾಮಾನ್ಯ ಜನರಿಗೆ ಲಭ್ಯವಿರುವ ಪ್ರಮುಖ ಐದು ವೈಯಕ್ತಿಕ ಸಾಲ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ.
Salary Package Account- ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ | ಮಹತ್ವದ ಮಾಹಿತಿ ಇಲ್ಲಿದೆ…
1. ವಿವಾಹ ಸಾಲ (Wedding Loan)
ಮನುಷ್ಯನ ಜೀವನದ ಪ್ರಮುಖ ಹಂತಗಳಲ್ಲೊಂದು ಮದುವೆ. ಆದರೆ ಮದುವೆಯ ಖರ್ಚುಗಳು ಜೋರಾಗಿರುವ ಇಂದಿನ ಕಾಲದಲ್ಲಿ, ಎಲ್ಲಾ ವೆಚ್ಚಗಳನ್ನು ತಕ್ಷಣಕ್ಕೆ ಹೊರುವದು ಎಲ್ಲರಿಗೂ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ವಿವಾಹ ಸಾಲ ನೆರವಾಗುತ್ತದೆ.
ಮಂಟಪ ಬಾಡಿಗೆ, ಚಿನ್ನಾಭರಣ ಖರೀದಿ, ಉಡುಪು, ಉಡುಗೊರೆಗಳು, ಊಟೋಪಚಾರ ವೆಚ್ಚಗಳಿಗಾಗಿ ವಿವಾಹ ಸಾಲ ಪಡೆಯಬಹುದಾಗಿದೆ. ಈ ಸಾಲವು ಬ್ಯಾಂಕುಗಳಲ್ಲಿ 10.65% (ಹೆಚ್ಚು-ಕಡಿಮೆಯಾಗಬಹುದು) ಬಡ್ಡಿದರದಲ್ಲಿ 1 ರಿಂದ 5 ವರ್ಷಗಳ ಅವಧಿಗೆ ಸಿಗುವುದುಂಟು.
2. ಪ್ರವಾಸ ಸಾಲ (Travel Loan)
ಪ್ರವಾಸ ಮಾಡುವ ಆಸೆ ಎಲ್ಲರಲ್ಲೂ ಇದೆ. ಆದರೆ ಕೆಲವೊಮ್ಮೆ ಉಳಿತಾಯದ ಕೊರತೆ ಅಥವಾ ಅನಾಹುತಗಳ ಕಾರಣದಿಂದಲೇ ತಕ್ಷಣ ಹಣ ಲಭ್ಯವಿಲ್ಲದಿರಬಹುದು. ಅಂಥ ಸಮಯದಲ್ಲಿ ನೀವು ಪ್ರವಾಸ ಸಾಲವನ್ನು ಪಡೆಯಬಹುದು.
ದೇಶ ಅಥವಾ ವಿದೇಶ ಪ್ರವಾಸಕ್ಕೆ ವಿಮಾನ/ ರೈಲು ಟಿಕೆಟ್, ಹೋಟೆಲ್ ಬುಕಿಂಗ್, ಪ್ರವಾಸದಲ್ಲಿ ಶಾಪಿಂಗ್ ಹಾಗೂ ಇತರ ವೆಚ್ಚಗಳಿಗೆ ಈ ಸಾಲ ಪಡೆಯಬಹುದಾಗಿದೆ. ಹಲವು ಬ್ಯಾಂಕುಗಳಲ್ಲಿ ಈ ಸಾಲವು 10.50% ರಿಂದ 20.40% ಬಡ್ಡಿದರದಲ್ಲಿ ಸಿಗುತ್ತದೆ.
Low Interest Loans- ಇನ್ಮುಂದೆ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ | ಮತ್ತೆ ರೆಪೋ ದರ ಇಳಿಸಿದ ಆರ್‌ಬಿಐ
3. ಮನೆ ನವೀಕರಣ ಸಾಲ (Home Renovation Loan)
ನಿಮ್ಮ ಮನೆ ನವೀಕರಣ ವೆಚ್ಚಗಳಿಗೂ ಸಾಲ ಸಿಗುತ್ತದೆ. ವೈಯಕ್ತಿಕ ಸಾಲ ವರ್ಗದಲ್ಲಿ ಲೋನ್ ಪಡೆದು ಹಳೆಯ ಮನೆಯನ್ನು ಜೀರ್ಣಾವಸ್ಥೆ ಮಾಡಬಹುದಾಗಿದೆ. ಪೇಂಟಿಂಗ್, ಹೊಸ ಕಿಚನ್, ಪ್ಲಾಸ್ಟರ್ ಕೆಲಸ, ಟೈಲ್ಸ್ ಬದಲಾವಣೆಯಂತಹ ಕಾರ್ಯಗಳಿಗೆ ನೀವು ಮನೆ ನವೀಕರಣ ಸಾಲವನ್ನು ಪಡೆಯಬಹುದು.
ಮನೆ ನವೀಕರಣ ಸಾಲವು ಬಹುತೇಕ ಬ್ಯಾಂಕುಗಳಲ್ಲಿ 10.9% ಬಡ್ಡಿದರದಲ್ಲಿ 6 ವರ್ಷಗಳ ಅವಧಿಯ ವರೆಗೆ ಸಿಗಲಿದೆ. ಈ ಸಾಲ ಕೂಡ ಶೀಘ್ರ ಮಂಜೂರಾಗಲಿದ್ದು, ಹೆಚ್ಚಿನ ದಾಖಲಾತಿಗಳ ಅಗತ್ಯ ಇರುವುದಿಲ್ಲ.

4. ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿ ಸಾಲ (Consumer Durable Loan)
ಇಂದಿನ ದಿನಗಳಲ್ಲಿ ಹೊಸ ಉಪಕರಣಗಳ ಅವಶ್ಯಕತೆ ಬೆಳೆಯುತ್ತಿದೆ. ಆದರೆ, ಹಣ ಇಲ್ಲದ ಕಾರಣದಿಂದ ಶಾಪಿಂಗ್ ಮಾಡುವ ಆಸೆ ಅದುಮಿಡಬೇಕಾಗುತ್ತದೆ. ಆದರೆ, ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿ ಸಾಲ ನಿಮಗೆ ನೆರವಾಗುತ್ತದೆ. ಮೊಬೈಲ್ ಫೋನ್, ಫ್ರಿಡ್ಜ್, ಟಿವಿ, ಲ್ಯಾಪ್‌ಟಾಪ್, ವಾಷಿಂಗ್ ಮಷೀನ್ ಏರಿದಂತೆ ಅನೇಕ ಗೃಹೋಪಯೋಗಿ ಆಧುನಿಕ ಉಪಕರಣಗಳನ್ನು ಗ್ರಾಹಕ ಬಳಕೆ ಉತ್ಪನ್ನಗಳ ಖರೀದಿ ಸಾಲ ವರ್ಗದಲ್ಲಿ ಖೊಳ್ಳಬಹುದಾಗಿದೆ.
ಈ ಸಾಲ ಅತ್ಯಂತ ಸುಲಭವಾಗಿ ಲಭ್ಯವಿದ್ದು; ನೀವು ಖರೀದಿಸಬಯಸುವ ಉಪಕರಣಗಳ ಮಳಿಗೆಯಲ್ಲಿಯೇ ನೇರವಾಗಿ ಸಿಗುತ್ತದೆ. ಈ ಸಾಲದ ಬಡ್ಡಿದರ ಒಂದೊಂದು ಉಪಕರಣಕ್ಕೆ ಒಂದೊಂದು ಮಟ್ಟಗಳಿರುತ್ತದೆ. ಇಎಂಐ ಕಂತುಗಳ ರೂಪದಲ್ಲಿ ಈ ಸಾಲ ಮರುಪಾವತಿ ಮಾಡಬೇಕು.
Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ
5. ಪಿಂಚಣಿ ಸಾಲ (Pension Loan)
ಪಿಂಚಣಿ ಪಡೆಯುವ ಹಿರಿಯ ನಾಗರಿಕರು ಕೆಲವೊಮ್ಮೆ ತಾತ್ಕಾಲಿಕ ಹಣಕಾಸು ಅಗತ್ಯಕ್ಕೆ ತುತ್ತಾಗುತ್ತಾರೆ. ಈ ಸಂದರ್ಭದಲ್ಲಿ ಪಿಂಚಣಿ ಸಾಲ ಸಹಕಾರಿಯಾಗುತ್ತದೆ.ಆರೋಗ್ಯ ಚಿಕಿತ್ಸೆಗೆ, ಮಕ್ಕಳ ಶಿಕ್ಷಣ, ಮನೆ ಪುನರ್ ನಿರ್ಮಾಣ, ಕುಟುಂಬಕ್ಕೆ ಸಹಾಯ ನೀಡುವ ಉದ್ದೇಶದಿಂದ ಪಿಂಚಣಿ ಸಾಲ ಪಡೆಯಬಹುದಾಗಿದೆ.
ಈ ಸಾಲವು ಪಿಂಚಣಿಯ 7 ರಿಂದ 10 ಪಟ್ಟು ತನಕ ಸಾಲ ಸಿಗುತ್ತದೆ. ಇದರ ಬಡ್ಡಿದರ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ. ಯಾವುದೇ ದಾಖಲೆಗಳ ಅಗತ್ಯವಿಲ್ಲದೇ ದೊರೆಯುವ ಈ ಸಾಲವನ್ನು ನಿಮ್ಮ ಪಿಂಚಣಿ ಬರುವ ಬ್ಯಾಂಕ್‌ಗಳಿಂದಲೇ ಮಾತ್ರ ಪಡೆಯಬಹುದಾಗಿದೆ.
ವೈಯಕ್ತಿಕ ಸಾಲದ ಲಾಭಗಳು
ವೈಯಕ್ತಿಕ ಸಾಲದ ದೊಡ್ಡ ಪ್ರಯೋಜನವೆಂದರೆ ಇದು ಖಾತರಿ ಇಲ್ಲದೆ ಸಿಗುತ್ತದೆ. ಶೀಘ್ರ ಪ್ರಕ್ರಿಯೆಯಲ್ಲಿ ಲಭ್ಯವಾಗವ ಈ ಸಾಲದವನ್ನು ವಿವಿಧ ಉದ್ದೇಶಗಳಿಗೆ ಉಪಯೋಗ ಮಾಡಿಕೊಳ್ಳಬಹುದು. ಆನ್‌ಲೈನ್ ಮೂಲಕ ಅರ್ಜಿ ಹಾಕುವ ಅವಕಾಶವೂ ಇದ್ದು; EMI ರೂಪದಲ್ಲಿ ಮರುಪಾವತಿ ಮಾಡಬಹುದಾಗಿದೆ.
ಯಾವುದೇ ಸಾಲ ಪಡೆಯಬೇಕಾದರೂ, ಮೊದಲಿಗೆ ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಅಳೆಯಿರಿ. ಕ್ರೆಡಿಟ್ ಸ್ಕೋರ್ ಉತ್ತಮವಾಗಿಟ್ಟುಕೊಳ್ಳಿ. ಸಾಲದ ಅವಧಿ ಕಡಿಮೆಯಾಗಿದ್ದರೆ ಬಡ್ಡಿ ದರ ಕಡಿಮೆ. EMI ಲೆಕ್ಕ ಹಾಕಿ ಉತ್ತಮ ಯೋಜನೆ ಆಯ್ಕೆ ಮಾಡಿ.
ಹೀಗೆ, ನಿಮ್ಮ ಜೀವನದ ಪ್ರತಿಯೊಂದು ಪ್ರಮುಖ ಹಂತಕ್ಕೂ ಸಾಲ ಸೌಲಭ್ಯಗಳಿವೆ. ನಿಮಗೇನು ಅಗತ್ಯವೋ ಅದಕ್ಕೆ ತಕ್ಕಂತ ಸಾಲ ಯೋಜನೆ ನಿಮಗೆ ಸಿಗುತ್ತದೆ. ಸ್ಥಳೀಯ ಬ್ಯಾಂಕ್ ಅಥವಾ ಆಧಿಕೃತ ಹಣಕಾಸು ಸಂಸ್ಥೆಯೊಂದಿಗೆ ಸಂಪರ್ಕಿಸಿ ನಿಮ್ಮ ಅಗತ್ಯಕ್ಕೆ ತಕ್ಕ ಸಾಲ ಯೋಜನೆ ಆರಿಸಿ.
MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.