Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ

Spread the love

WhatsApp Group Join Now
Telegram Group Join Now

ಅಜಾಗರೂಕತೆಯಿಂದ ಪರ್ಸನಲ್ ಲೋನ್ ತೆಗೆದುಕೊಂಡರೆ ಏನೆಲ್ಲ ನಷ್ಟ-ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ? ಏನೆಲ್ಲ ಎಚ್ಚರಿಕೆ ಬೇಕು? (Personal Loan Tips) ಎಂಬ ಮಹತ್ವದ ಮಾಹಿತಿ ಇಲ್ಲಿದೆ…

ಆಪತ್ತಿನ ಸಮಯದಲ್ಲಿ ಕೈ ಹಿಡಿಯುವ ಸ್ನೇಹಿತನಂತೆ ಕಾಣಿಸುವ ಪರ್ಸನಲ್ ಲೋನ್ ಅನ್ನು ನಿಜಕ್ಕೂ ಆಪದ್ಭಾಂಧವ ಎಂದೇ ಕರೆಯಬಹುದು. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಬೇಕು; ಎಚ್ಚರಿಕೆಯಿಂದ ಪಡೆದರೆ ಮಾತ್ರ ಅದು ಆಪದ್ಭಾಂಧವ; ಅವಸರದಲ್ಲಿ ಪಡೆದರೆ ಅದು ಸಂಕಷ್ಟಕ್ಕೆ ಕಾರಣವಾಗಬಹುದು.

ಈಗ ಪರ್ಸನಲ್ ಲೋನ್ ಪಡೆಯುವುದು ಬಹಳ ಸುಲಭ. ವಿವಿಧ ಮೊಬೈಲ್ ಆ್ಯಪ್‌ಗಳು, ಆನ್‌ಲೈನ್ ಪ್ಲಾಟ್‌ಫಾರ್ಮ್’ಗಳು ಕೆಲವೇ ನಿಮಿಷಗಳಲ್ಲಿ ಲೋನ್ ಮಂಜೂರು ಮಾಡುವುದಾಗಿ ಜಾಹೀರಾತು ಮಾಡುತ್ತಿವೆ. ನೀವು ಅರ್ಹರಾಗಿದ್ದರೆ ಅಷ್ಟೇ ವೇಗವಾಗಿ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ.

ಆದರೆ, ಈ ವೇಗದ ಸೌಲಭ್ಯ ಅನೇಕರಿಗೆ ಉಪಯೋಗವಾದರೂ, ಅಜಾಗರೂಕ ನಿರ್ಧಾರಗಳು ದೊಡ್ಡ ಹಣಕಾಸು ನಷ್ಟಕ್ಕೂ ಕಾರಣವಾಗಬಹುದು.ಅದಕ್ಕಾಗಿ ಪರ್ಸನಲ್ ಲೋನ್ ಪಡೆಯುವ ಮೊದಲು ಈ ಪ್ರಮುಖ ಅಂಶಗಳನ್ನು ತಪ್ಪದೇ ಗಮನಿಸಿ…

ಇದನ್ನೂ ಓದಿರಿ: Gruhalakshmi Yojana 24th Installment Money Credit- ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಜಮಾ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಮಾಹಿತಿ

Important Points to Note – ಗಮನಿಸಲೇ ಬೇಕಾದ ಅಂಶಗಳು

  • ಇಎಂಐ ರೂಪದಲ್ಲಿ ಪಡೆದ ಸಾಲಕ್ಕೆ ಒಟ್ಟು ಎಷ್ಟು ಹಣ ಮರಳಿ ಕಟ್ಟುತ್ತೀರಿ ಎಂಬುದನ್ನೂ ಲೆಕ್ಕ ಹಾಕಿ.
  • ಕನಿಷ್ಠ ಎರಡು-ಮೂರು ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳ ಆಫರ್ ಹೋಲಿಸಿ, ನಂತರ ನಿರ್ಧಾರ ತೆಗೆದುಕೊಳ್ಳಿ.
  • ಲೋನ್ ಒಪ್ಪಿಕೊಳ್ಳುವ ಮೊದಲು Net Disbursal Amount ಎಷ್ಟು ಎಂದು ಸ್ಪಷ್ಟವಾಗಿ ಕೇಳಿ.
  • ನಿಮ್ಮ ಆದಾಯಕ್ಕೆ ಅನುಗುಣವಾಗಿ, ಸಾಧ್ಯವಾದಷ್ಟು ಕಡಿಮೆ ಅವಧಿಯ ಲೋನ್ ಆಯ್ಕೆ ಮಾಡುವುದು ಉತ್ತಮ.
  • ಪರ್ಸನಲ್ ಲೋನ್ ಅಗತ್ಯವಾದಾಗ ಮಾತ್ರ ತೆಗೆದುಕೊಳ್ಳಿ, ತೆಗೆದುಕೊಳ್ಳುವಾಗ ಜಾಣ್ಮೆಯಿಂದ ನಿರ್ಧಾರ ಮಾಡಿ.

ಮೇಲ್ಕಾಣಿಸಿದ ಈ ಐದೂ ಪ್ರಮುಖ ಅಂಶಗಳನ್ನು ಎಚ್ಚರಿಕೆಯಿಂದ ಗಮನಿಸದೇ ಪರ್ಸನಲ್ ಲೋನ್ ಪಡೆದರೆ ಏನೆಲ್ಲಾ ನಷ್ಟ-ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುವುದನ್ನು ವಿವರವಾಗಿ ನೋಡೋಣ.

ಇದನ್ನೂ ಓದಿರಿ: TaTa Capital Pankh Scholarship 2025- ಪಿಯುಸಿ ವಿದ್ಯಾರ್ಥಿಗಳಿಗೆ ₹15,000 ಆರ್ಥಿಕ ನೆರವು | ಟಾಟಾ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ

1. Low EMI Can Be Misleading – ಕಡಿಮೆ ಇಎಂಐ ಗೆ ಮರುಳಾಗಬೇಡಿ…

ಬಹುತೇಕ ಜನರು ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ ಮೊದಲು ನೋಡುವುದೇ EMI ಎಷ್ಟು? ಎಂಬುನ್ನು. EMI ಕಡಿಮೆ ಇದ್ದರೆ ಲೋನ್ ಮರುಪಾವತಿ ಸುಲಭ ಎಂದು ಭಾವಿಸುತ್ತಾರೆ. ಅಸಲಿ ಕಮ್ಮಿ EMI ಎಂದರೆ ಸಾಮಾನ್ಯವಾಗಿ ಹೆಚ್ಚು ಅವಧಿ ಎಂದರ್ಥ!

ಅವಧಿ ಜಾಸ್ತಿಯಾದಷ್ಟು, ನೀವು ಕಟ್ಟಬೇಕಾದ ಒಟ್ಟು ಬಡ್ಡಿಯ ಮೊತ್ತವೂ ಹೆಚ್ಚಾಗುತ್ತದೆ. ತಿಂಗಳಿಗೆ 300-500 ರೂಪಾಯಿ ವ್ಯತ್ಯಾಸ ಅಷ್ಟಾಗಿ ಕಾಣಿಸದಿದ್ದರೂ, ಮೂರು ಅಥವಾ ಐದು ವರ್ಷಗಳಲ್ಲಿ ಅದು ಸಾವಿರಾರು, ಕೆಲವೊಮ್ಮೆ ಲಕ್ಷಾಂತ ರೂ. ಗಳಾಗಬಹುದು.

ಹೀಗಾಗಿ ಕಮ್ಮಿ EMI ಎಂದ ತಕ್ಷಣಕ್ಕೆ ಅವರಸದಿಂದ ಲೋನ್ ಪಡೆಯದೇ, ಪಡೆದ ಸಾಲಕ್ಕೆ ಒಟ್ಟು ಎಷ್ಟು ಹಣ ಮರಳಿ ಕಟ್ಟುತ್ತೀರಿ ಎಂಬುದನ್ನೂ ಲೆಕ್ಕ ಹಾಕಿದ ನಂತರವೇ ಮುಂದುವರೆಯಿರಿ.

Personal Loan Tips
Personal Loan Tips

ಇದನ್ನೂ ಓದಿರಿ: Karnataka Govt SSP Scholarship 2025-26- ಕರ್ನಾಟಕ ಸರ್ಕಾರದಿಂದ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಆರ್ಥಿಕ ನೆರವು

2. Compare Banks Before You Borrow – ಬ್ಯಾಂಕ್ ಹೋಲಿಕೆ ಮಾಡಿ ಲೋನ್ ಪಡೆಯಿರಿ

ಹಲವರು ತಮ್ಮ ಸಂಬಳ ಖಾತೆ ಇರುವ ಬ್ಯಾಂಕ್‌ನಲ್ಲೇ ಪರ್ಸನಲ್ ಲೋನ್ ತೆಗೆದುಕೊಳ್ಳುತ್ತಾರೆ. ಇದು ಸುಲಭ, ಪ್ರಕ್ರಿಯೆ ವೇಗವಾಗಿ ಆಗುತ್ತದೆ ಎನ್ನುವುದು ನಿಜ. ಆದರೆ ಪ್ರತಿ ಬ್ಯಾಂಕ್ ಅಥವಾ NBFC ಒಂದೇ ಬಡ್ಡಿದರ ನೀಡುವುದಿಲ್ಲ.

ಕೇವಲ 1% ಬಡ್ಡಿದರ ವ್ಯತ್ಯಾಸವೂ ಲೋನ್ ಮೊತ್ತ ದೊಡ್ಡದಾದಾಗ ಭಾರಿ ಪರಿಣಾಮ ಬೀರುತ್ತದೆ. ಒಂದು ಬ್ಯಾಂಕ್ 11% ಕೊಟ್ಟರೆ, ಮತ್ತೊಂದು 12.5% ಇರಬಹುದು. ಇದೇ ವ್ಯತ್ಯಾಸ ನಿಮ್ಮ ಒಟ್ಟು ವೆಚ್ಚವನ್ನು ಸಾವಿರಾರು ರೂಪಾಯಿಗಳಷ್ಟು ಹೆಚ್ಚಿಸಬಹುದು.

ಹೀಗಾಗಿ ಕನಿಷ್ಠ ಎರಡು-ಮೂರು ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳ ಆಫರ್ ಹೋಲಿಸಿ, ನಂತರ ನಿರ್ಧಾರ ತೆಗೆದುಕೊಳ್ಳಿ. ಅವಸರದಲ್ಲಿ ಪರ್ಸನಲ್ ಲೋನ್ ಪಡೆದು ಅನಾವಶ್ಯಕ ಹೆಚ್ಚಿನ ಬಡ್ಡಿ ತೆರಬೇಡಿ.

WhatsApp Group Join Now
Telegram Group Join Now

ಇದನ್ನೂ ಓದಿರಿ: BOI Credit Officer Recruitment 2026- ಪದವಿಧರರಿಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ | 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ

3. Watch Out for Hidden Charges – ಗುಪ್ತ ಶುಲ್ಕಗಳ ಬಗ್ಗೆ ಎಚ್ಚರ!

ಪರ್ಸನಲ್ ಲೋನ್‌ನಲ್ಲಿ ಬಡ್ಡಿದರ ಮಾತ್ರವಲ್ಲ, ಪ್ರಾಸೆಸಿಂಗ್ ಫೀಸ್, ಜಿಎಸ್‌ಟಿ, ಡಾಕ್ಯುಮೆಂಟೇಶನ್ ಚಾರ್ಜ್, ಇನ್ಸುರನ್ಸ್ ಶುಲ್ಕ ಮುಂತಾದ ಅನೇಕ ಹೆಚ್ಚುವರಿ ವೆಚ್ಚಗಳು ಸೇರಿರುತ್ತವೆ. ಮೊದಲಿಗೆ ಈ ಶುಲ್ಕಗಳು ಚಿಕ್ಕದಾಗಿ ಕಂಡರೂ, ಲೋನ್ ಮೊತ್ತ ಜಾಸ್ತಿಯಾದಂತೆ ಅವುಗಳ ಒಟ್ಟು ಮೊತ್ತವೂ ಹೆಚ್ಚುತ್ತದೆ.

ಕೆಲವು ಸಂದರ್ಭಗಳಲ್ಲಿ ಈ ಶುಲ್ಕಗಳನ್ನು ಮೊದಲೇ ಕಡಿತಗೊಳಿಸಿ ಹಣ ಜಮೆ ಮಾಡಲಾಗುತ್ತದೆ. ಇದರಿಂದ ನೀವು ನಿರೀಕ್ಷಿಸಿದ ಮೊತ್ತಕ್ಕಿಂತ ಕಡಿಮೆ ಹಣವೇ ಕೈಗೆ ಬರುತ್ತದೆ. ಹೀಗಾಗಿ ಲೋನ್ ಒಪ್ಪಿಕೊಳ್ಳುವ ಮೊದಲು Net Disbursal Amount ಎಷ್ಟು ಎಂದು ಸ್ಪಷ್ಟವಾಗಿ ಕೇಳಿ.

ಇದನ್ನೂ ಓದಿರಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

4. Loan Tenure Matters – ಲೋನ್ ಅವಧಿ ಬಹಳ ಮುಖ್ಯ

ದೀರ್ಘಾವಧಿಯ ಲೋನ್ EMI ಕಡಿಮೆ ಮಾಡಬಹುದು. ಆದರೆ ಅದೇ EMI ಅನ್ನು ವರ್ಷಗಳ ಕಾಲ ಕಟ್ಟಬೇಕಾದ ಸ್ಥಿತಿ ನಿಮ್ಮ ಆರ್ಥಿಕ ಸ್ವಾತಂತ್ರ‍್ಯವನ್ನು ಕುಗ್ಗಿಸುತ್ತದೆ. ಮನೆ ಖರೀದಿ, ಮಕ್ಕಳ ಶಿಕ್ಷಣ, ಹೂಡಿಕೆಯಂತಹ ಯೋಜನೆಗಳು ನಿರಂತರ EMI ಕಾರಣದಿಂದ ಮುಂದೂಡಲ್ಪಡುವ ಸಾಧ್ಯತೆ ಇರುತ್ತದೆ.

ಒಂದೊಮ್ಮೆ ಆದಾಯದಲ್ಲಿ ಅಡಚಣೆ ಬಂದರೆ, ಈ EMI ದೊಡ್ಡ ಹೊರೆ ಆಗಬಹುದು. ನಿಮ್ಮ ಆದಾಯಕ್ಕೆ ಅನುಗುಣವಾಗಿ, ಸಾಧ್ಯವಾದಷ್ಟು ಕಡಿಮೆ ಅವಧಿಯ ಲೋನ್ ಆಯ್ಕೆ ಮಾಡುವುದು ಉತ್ತಮ ಮಾರ್ಗ.

ಇದನ್ನೂ ಓದಿರಿ: Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ

5. Borrow Wisely – ಜಾಣ್ಮೆಯಿಂದ ನಿರ್ಧಾರ ಮಾಡಿ

ಹಣಕಾಸು ತಜ್ಞರ ಅಭಿಪ್ರಾಯದಂತೆ, ಪರ್ಸನಲ್ ಲೋನ್ ತೆಗೆದುಕೊಳ್ಳುವ ಮೊದಲು EMI ಮಾತ್ರವಲ್ಲ, ಒಟ್ಟು ಬಡ್ಡಿ, ಲೋನ್ ಅವಧಿ, ಎಲ್ಲಾ ಶುಲ್ಕಗಳು, ಮುಂಗಡ ಪಾವತಿ (Prepayment) ನಿಯಮಗಳನ್ನೂ ಗಮನಿಸುವುದು ಅತ್ಯಂತ ಅಗತ್ಯ.

ಸ್ವಲ್ಪ ಸಮಯ ತೆಗೆದುಕೊಂಡು ಲೆಕ್ಕಾಚಾರ ಮಾಡಿದರೆ, ಭವಿಷ್ಯದಲ್ಲಿ ಎದುರಾಗಬಹುದಾದ ದೊಡ್ಡ ನಷ್ಟವನ್ನು ಸುಲಭವಾಗಿ ತಪ್ಪಿಸಬಹುದು. ಅಂದಹಾಗೇ, ಪರ್ಸನಲ್ ಲೋನ್ ಅಗತ್ಯವಾದಾಗ ಮಾತ್ರ ತೆಗೆದುಕೊಳ್ಳಿ, ಆದರೆ ತೆಗೆದುಕೊಳ್ಳುವಾಗ ಜಾಣ್ಮೆಯಿಂದ ನಿರ್ಧಾರ ಮಾಡಿ.


Spread the love
error: Content is protected !!