New Ration Card Application- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ | ಯಾರೆಲ್ಲಾ ಅರ್ಜಿ ಹಾಕಬಹುದು? ಸಂಪೂರ್ಣ ವಿವರ ಇಲ್ಲಿದೆ…

Spread the love

WhatsApp Group Join Now
Telegram Group Join Now

ಹೊಸ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡಿಗೆ ಅರ್ಜಿ (New Ration Card Application) ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮೇಲೆ ರೇಷನ್ ಕಾರ್ಡಿಗೆ ಇನ್ನಿಲ್ಲದ ಬೇಡಿಕೆ ಶುರುವಾಗಿದೆ. ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ, ಆಹಾರ ಧಾನ್ಯದ ಸಬ್ಸಿಡಿ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಬೇಕೇ ಬೇಕು.

ಆದರೆ, ಅನರ್ಹರ ಪಡಿತರ ಚೀಟಿ ರದ್ದತಿ ಅಭಿಯಾನ ತೀವ್ರವಾಗಿದ್ದು; ಹಲವು ದಿನಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೊಸ ರೇಷರ್ನ್ ಪಡೆಯಲು ಅರ್ಜಿ ಆಹ್ವಾನಿಸಿಲ್ಲ. ಇದರಿಂದ ಹೊಸ ಪಡಿತರ ಚೀಟಿಗಾಗಿ ರಾಜ್ಯದ ಸಾವಿರಾರು ಫಲಾನುಭವಿಗಳು ಹಂಬಲಿಸುತ್ತಿದ್ದಾರೆ.

ವಿಶೇಷವೆಂದರೆ ಇತ್ತೀಚೆಗೆ ಸರ್ಕಾರ ಕೆಲವು ವಿಶೇಷ ವರ್ಗದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು (New Online Application For Ration Card) ಅವಕಾಶ ನೀಡಿದೆ. ಸದ್ಯಕ್ಕೆ ಯಾರಿಗೆಲ್ಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ? ಯಾವ ದಿನಾಂಕದೊಳಗೆ? ಯಾವ ದಾಖಲೆಗಳು ಬೇಕು? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: Women Free Sewing Machine- ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ | ಮಹಿಳೆಯರಿಗೆ ಸುವರ್ಣಾವಕಾಶ

ಈಗ ಯಾರೆಲ್ಲಾ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು?

ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಪಡೆಯಲು ಮೂರು ವರ್ಗದ ಫಲಾನುಭವಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ:

1. ಈ-ಶ್ರಮ್ ಕಾರ್ಡ್ ಹೊಂದಿರುವವರು (ಅಸಂಘಟಿತ ಕಾರ್ಮಿಕರು)

ಕಟ್ಟಡ ಕಾರ್ಮಿಕರು, ಹೋಟೆಲ್ ಸಿಬ್ಬಂದಿ, ಕೂಲಿ ಕಾರ್ಮಿಕರು, ವಾಹನ ಚಾಲಕರು ಇತ್ಯಾದಿ ಅಸಂಘಟಿತ ವಲಯದ ಕಾರ್ಮಿಕರು ಈಗ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ವರ್ಗದವರಿಗೆ ದಿನಾಂಕ: 04-10-2025 ರಿಂದ 31-03-2026ರ ವರೆಗೆ ಹೊಸ ರೇಷನ್ ಕಾರ್ಡ್ ಪಡೆಯಲು ಸರ್ಕಾರ ಅವಕಾಶ ನೀಡಿದೆ.

ಇದನ್ನೂ ಓದಿ: Anganwadi Recruitment 2025- ಮಹಿಳೆಯರಿಗೆ ಅಂಗನವಾಡಿ ಹುದ್ದೆಗಳು | 571 ಹುದ್ದೆಗಳಿಗೆ ಅರ್ಜಿ ಆಹ್ವಾನ

2. PVTG (ಬುಡಕಟ್ಟು/ಅಲೆಮಾರಿ) ಸಮುದಾಯದವರು

ಕೊರಗ, ಜೇನು ಕುರುಬ ಸೇರಿದಂತೆ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (PVTG) ಈ ವಿಭಾಗಕ್ಕೆ ಸೇರುತ್ತವೆ. ಈ ಸಮುದಾಯದ ಫಲಾನುಭವಿಗಳು ದಿನಾಂಕ: 04-10-2025 ರಿಂದ 31-03-2026ರ ವರೆಗೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

New Ration Card Application
New Ration Card Application
3. ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾದವರು (Medical Emergency)

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರು, ಆಸ್ಪತ್ರೆಯ ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ ಅಗತ್ಯವಿರುವ ಪರಿಸ್ಥಿತಿ ಇರುವವರು ಕೂಡಾ ಅತ್ಯಂತ ತುರ್ತಾಗಿ ರೇಷನ್ ಕಾರ್ಡ್ ಪಡೆಯಲು ಅವಕಾಶ ನೀಡಲಾಗಿದೆ. ಇಂಥವರು ದಿನಾಂಕ: 28-10-2025 ರಿಂದ 31-03-2026ರ ವರೆಗೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: PM Kusum-B Solar Pumpset Yojana- ಸೋಲಾರ್ ಪಂಪ್‌ಸೆಟ್‌ಗಳಿಗೆ ರೈತರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೆಲಸದ ದಿನಗಳಲ್ಲಿ ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.ಓಟಿಪಿ ದೃಢೀಕರಣಕ್ಕೆ ಆಧಾರ್ ಕಾರ್ಡ್ ಮತ್ತು ಲಿಂಕ್ ಮಾಡಿರುವ ಮೊಬೈಲ್ ಕಡ್ಡಾಯವಾಗಿದೆ.

ಅರ್ಜಿ ಸಲ್ಲಿಕೆಗೆ ಯಾವ ದಾಖಲೆಗಳು ಬೇಕು?

ಮೇಲ್ಕಾಣಿಸಿದ ಮೂರು ವರ್ಗದ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ವಿವಿಧ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಸರ್ಕಾರದ ನಿಯಮಾನುಸಾರ ಪ್ರತಿ ವಿಭಾಗಕ್ಕೆ ಬೇಕಾಗಿರುವ ದಾಖಲೆಗಳು ಹೀಗೆ:

1. ಈ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಅಗತ್ಯ ದಾಖಲೆಗಳು
  • ಈ-ಶ್ರಮ್ ಕಾರ್ಡ್ (12 ಅಂಕಿಯ UAN ನಂಬರ್)
  • ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ (ತಹಶೀಲ್ದಾರ್ ಕಚೇರಿಯದು)
  • ವಿಳಾಸದ ಪುರಾವೆ: ಮತದಾನ ಚೀಟಿ / ವಿದ್ಯುತ್ ಬಿಲ್ / ಬಾಡಿಗೆ ಕರಾರು ಪತ್ರ
  • ಮೊಬೈಲ್ ಸಂಖ್ಯೆ (OTPಗಾಗಿ)
  • ಪಾಸ್‌ಪೋರ್ಟ್ ಸೈಸ್ ಫೋಟೋ

ಇದನ್ನೂ ಓದಿ: Karnataka New BPL Card List- 2.93 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಈ ಹೊಸ ಪಟ್ಟಿಯಲ್ಲಿ ನೀವಿದ್ದೀರಾ?

2. PVTG ಬುಡಕಟ್ಟು/ಅಲೆಮಾರಿ ಸಮುದಾಯದವರಿಗೆ ಅಗತ್ಯ ದಾಖಲೆಗಳು
  • ಜಾತಿ ಪ್ರಮಾಣ ಪತ್ರ (ತಹಶೀಲ್ದಾರ್ ನೀಡಿದ)
  • ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ವಾಸಸ್ಥಳದ ದೃಢೀಕರಣ (ಹಕ್ಕು ಪತ್ರ ಇದ್ದರೆ ಹೆಚ್ಚು ಉತ್ತಮ)
  • ಕುಟುಂಬದ ಮುಖ್ಯಸ್ಥರ ಫೋಟೋ
3. ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಅಗತ್ಯ ದಾಖಲೆಗಳು
  • ಸರ್ಕಾರಿ ವೈದ್ಯರಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರ (ತುರ್ತು ಚಿಕಿತ್ಸೆಗಾಗಿ ಕಾರ್ಡ್ ಅಗತ್ಯವೆಂದು ಹೇಳಿರುವ ಪತ್ರ)
  • ಆಸ್ಪತ್ರೆ ದಾಖಲೆಗಳು: ಡಿಸ್ಚಾರ್ಜ್ ಸಮ್ಮರಿ ಅಥವಾ ಟೆಸ್ಟ್ ವರದಿಗಳು
  • ಆದಾಯ ಪ್ರಮಾಣ ಪತ್ರ
  • ರೋಗಿ ಮತ್ತು ಕುಟುಂಬದ ಸದಸ್ಯರ ಆಧಾರ್ ಕಾರ್ಡುಗಳು
  • ವಿಳಾಸದ ಪುರಾವೆ
  • ರೋಗಿಯ ಫೋಟೋ
WhatsApp Group Join Now
Telegram Group Join Now

ಇದನ್ನೂ ಓದಿ: Digital E-Stamp Karnataka- ಇನ್ಮುಂದೆ ಮೊಬೈಲ್‌ನಲ್ಲೇ ಡಿಜಿಟಲ್ ಇ-ಸ್ಟ್ಯಾಂಪ್ ಖರೀದಿಸಿ | ಸಂಪೂರ್ಣ ಮಾಹಿತಿ ಇಲ್ಲಿದೆ…

ಸಾಮಾನ್ಯ ಜನರಿಗೆ ಅರ್ಜಿ ಸಲ್ಲಿಕೆ ಯಾವಾಗ?

ಸರ್ಕಾರ ಈಗ ವಿಶೇಷವಾಗಿ ಈ-ಶ್ರಮ್ ಕಾರ್ಮಿಕರು, ವಿಶೇಷ ಬುಡಕಟ್ಟು ಸಮುದಾಯಗಳು ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯವಿರುವವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ನೀಡುತ್ತಿದೆ. ಮಾರ್ಚ್ 2026ರೊಳಗೆ ಸಂಬಂಧಿಸಿದವರು ಅರ್ಜಿ ಸಲ್ಲಿಸಿ ಅಗತ್ಯ ಯೋಜನೆಗಳ ಸೌಲಭ್ಯ ಪಡೆಯಬಹುದು.

ಸಾಮಾನ್ಯ ವರ್ಗದ ಬಿಪಿಎಲ್/ಎಪಿಎಲ್ ಕುಟುಂಬಗಳಿಗೆ ಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಇನ್ನೂ ತೆರೆಯಲಾಗಿಲ್ಲ. ಅನರ್ಹ ರೇಷನ್ ಕಾರ್ಡ್ ರದ್ಧತಿ ಕಾರ್ಯ ಪೂರ್ಣಗೊಂಡ ಬಳಿಕ ಅವಕಾಶ ನೀಡುವ ಸೂಚನೆಗಳಿವೆ. ಈ ಬಗ್ಗೆ ಇಲಾಖೆ ಮುಂದಿನ ಆದೇಶ ಹೊರಡಿಸಿದ ನಂತರವೇ ಅರ್ಜಿ ಪ್ರಾರಂಭವಾಗಲಿದೆ.

ಅರ್ಜಿ ಲಿಂಕ್: Apply Now

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!