ಸರ್ಕಾರಿ ನೌಕರರಿಗೆ (Government Employees) ಹೊಸ ಆರೋಗ್ಯ ವಿಮಾ ಯೋಜನೆ (New Health Insurance Scheme) ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರವು ಈಗಾಗಲೇ 8ನೇ ವೇತನ ಆಯೋಗದ (8th Pay Commission) ರಚನೆಗೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಆಯೋಗವನ್ನು ರಚಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಹಾಗಾಗಿ, ಕೇಂದ್ರ ಸರ್ಕಾರಿ ನೌಕರರು (Government Employees) ಹಾಗೂ ಪಿಂಚಣಿದಾರರು ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ.
ಇದರ ಜೊತೆಗೆ, ಇದೀಗ ಕೇಂದ್ರ ಸರ್ಕಾರ ತನ್ನ ನೌಕರರ ಹಿತದೃಷ್ಟಿಯಿಂದ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗಾಗಿ ಹೊಸ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲು ಸಜ್ಜಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ.
Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…
ಈಗಿರುವ ಆರೋಗ್ಯ ಸೇವೆ ಹೇಗಿದೆ?
ಸದ್ಯದಲ್ಲಿ, ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಹಾಗೂ ಅವರ ಅವಲಂಬಿತರು Central Government Health Scheme (CGHS) ಎಂಬ ಯೋಜನೆಯಡಿ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ.
ಈ ಯೋಜನೆಯಡಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಿಜಿಎಚ್‌ಎಸ್ ಆಸ್ಪತ್ರೆಗಳು ಹಾಗೂ ಡಿಸ್‌ಪೆನ್ಸರಿಗಳು ಕಾರ್ಯನಿರ್ವಹಿಸುತ್ತಿವೆ. ನೌಕರರು ಇದರ ಮೂಲಕ ಉಚಿತ ವೈದ್ಯಕೀಯ ಸೇವೆಗಳು, ಔಷಧ ವಿತರಣೆ, ನಿಗದಿ ಆಸ್ಪತ್ರೆಗಳಲ್ಲಿ ಒಳಗುಮಟ್ಟದ ಚಿಕಿತ್ಸೆ ಮುಂತಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಆದರೆ, ಈ ಸೌಲಭ್ಯವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿಲ್ಲ. ಹೀಗಾಗಿ ಹಲವಾರು ನೌಕರರು ಹಾಗೂ ಪಿಂಚಣಿದಾರರು ಅನುಕೂಲವಿಲ್ಲದೆ ಕೊರಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಇದಕ್ಕಿಂತ ಉತ್ತಮವಾದ ಹಾಗೂ ಎಲ್ಲೆಡೆ ಲಭ್ಯವಾಗುವಂತಹ ಆರೋಗ್ಯ ವಿಮಾ ಯೋಜನೆಯ ಅವಶ್ಯಕತೆ ಕುರಿತ ಬೇಡಿಕೆ ಹೆಚ್ಚುತ್ತಿದೆ.

Gold Price Hike- ಬಂಗಾರದ ಬೆಲೆ ಈಗ ಬರೋಬ್ಬರಿ ₹1 ಲಕ್ಷ | 4 ತಿಂಗಳಲ್ಲಿ ₹18,710 ಏರಿಕೆ ಕಂಡ ಹಳದಿ ಲೋಹ
ಹೊಸ ಯೋಜನೆಯ ವೈಶಿಷ್ಟ್ಯಗಳೇನು?
ಹಳೆ ಯೋಜನೆಗೆ ಬದಲಾಗಿ ಕೇಂದ್ರ ಸರ್ಕಾರವು Central Government Employees & Pensioners Health Insurance Scheme’ (CGEPHIS) ಎಂಬ ಹೆಸರಿನ ಹೊಸ ಆರೋಗ್ಯ ವಿಮಾ ಯೋಜನೆ ಆರಂಭಿಸಲು ಸಿದ್ಧತೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಯೋಜನೆಯು ಹಳೆಯ ಸಿಜಿಎಚ್‌ಎಸ್ ಯೋಜನೆಯ ಬದಲಿಯಾಗಿ ಅನುಷ್ಠಾನಗೊಳ್ಳಲಿದ್ದು; ಹೊಸ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಮೂಲಗಳಿಂದ ಲಭ್ಯ ಇರುವ ಮಾಹಿತಿ ಪ್ರಕಾರ ಈ ಯೋಜನೆಯು ಈ ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿರುತ್ತದೆ:
- ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಚಿಕಿತ್ಸಾ ವ್ಯವಸ್ಥೆ
- ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಹೆಚ್ಚುವರಿ ವಿಮಾ ವ್ಯಾಪ್ತಿ ವಿಸ್ತರಣೆ
- ಆಧುನಿಕ ಚಿಕಿತ್ಸಾ ವಿಧಾನಗಳು ಹಾಗೂ ತುರ್ತು ಸೇವೆಗಳು
- ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲೂ ಆರೋಗ್ಯ ಸೇವೆ
- ಡಿಜಿಟಲ್ ಆರೋಗ್ಯ ಕಾರ್ಡ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ಸೇವೆಗಳ ನಿರ್ವಹಣೆ
- ಆಯುಷ್ಮಾನ್ ಭಾರತ್ ಯೋಜನೆ ಜೊತೆಗೆ ಸಂಯೋಜನೆ
ಹೊಸ ವೇತನ ಆಯೋಗದ ಜೊತೆಗೆ ಪ್ರಾರಂಭ
8ನೇ ವೇತನ ಆಯೋಗ ಜಾರಿಗೊಳ್ಳುವ ವೇಳೆ ಈ ಹೊಸ ಆರೋಗ್ಯ ವಿಮಾ ಯೋಜನೆಯನ್ನೂ ಪ್ರಾರಂಭಿಸುವ ತೀರ್ಮಾನ ಕೇಂದ್ರ ಸರ್ಕಾರ ತೆಗೆದುಕೊಳ್ಳಬಹುದೆಂಬ ಅಂದಾಜಿದೆ. ಇದರಿಂದ ಹೊಸ ಆಯೋಗದ ಮಾರ್ಗಸೂಚಿಗಳ ಮೂಲಕವೇ ನೌಕರರ ಸಾಮಾಜಿಕ ಭದ್ರತೆಗೆ ಹೆಚ್ಚಿನ ಬಲ ದೊರೆಯಲಿದೆ.
ಈ ಯೋಜನೆಯ ಕುರಿತು ನೌಕರರ ಸಂಘಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಪಿಂಚಣಿದಾರರು ಕೂಡ ಹೊಸ ಯೋಜನೆಗೆ ನಿರೀಕ್ಷೆಯಿಂದ ಎದುರು ನೋಡುತ್ತಿದ್ದಾರೆ. ದೂರದ ಊರುಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಸಮರ್ಪಕ ಆರೋಗ್ಯ ಸೇವೆ ಸಿಗುವುದರಿಂದ, ಹೊಸ ಯೋಜನೆಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.