ಕೇಂದ್ರ ಸರ್ಕಾರದ ನಬಾರ್ಡ್ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ (Nabard Recruitment 2026) ಆಹ್ವಾನಿಸಲಾಗಿದೆ. ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD – ನಬಾರ್ಡ್) ದೇಶದ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಪ್ರಮುಖ ಸಂಸ್ಥೆಯಾಗಿದೆ.
ರೈತರು, ಗ್ರಾಮೀಣ ಉದ್ಯಮಗಳು, ಸ್ವಸಹಾಯ ಗುಂಪುಗಳು ಹಾಗೂ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಹಣಕಾಸು ನೆರವು ನೀಡುವ ಮೂಲಕ ನಾಬಾರ್ಡ್ ದೇಶದ ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಎದುರು ನೋಡುತ್ತಿರುವ ಪದವಿಧರರಿಗೆ ಇದೀಗ ಸುವರ್ಣಾವಕಾಶ ಒದಗಿ ಬಂದಿದೆ. ನಾಬಾರ್ಡ್ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ 162 ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಇದನ್ನೂ ಓದಿ: Hero Splendor Bike- ಕೇವಲ 1,000 ರೂ. ಇಐಎಂ ನಲ್ಲಿ ಮನೆಗೆ ತನ್ನಿ ಹೀರೋ ಸ್ಪೆೆಂಡರ್ ಮೈಲೇಜ್ ಬೈಕ್
NABARD Post Details – ಹುದ್ದೆಗಳ ವಿವರ
- ಹುದ್ದೆಯ ಹೆಸರು: ಡೆವಲಪ್‌ಮೆಂಟ್ ಅಸಿಸ್ಟೆಂಟ್
- ಒಟ್ಟು ಹುದ್ದೆಗಳು: 162
- ವಿಭಾಗಗಳು: ಸಾಮಾನ್ಯ ವಿಭಾಗ ಮತ್ತು ಹಿಂದಿ ವಿಭಾಗ
ಈ ಹುದ್ದೆಗಳ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳು ನಬಾರ್ಡ್ ವಿವಿಧ ಪ್ರಾದೇಶಿಕ ಮತ್ತು ರಾಜ್ಯ ಘಟಕಗಳಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
Educational Qualification – ವಿದ್ಯಾರ್ಹತೆ ವಿವರ
ನಬಾರ್ಡ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪದವಿಯಲ್ಲಿ ಕನಿಷ್ಠ ಶೇಕಡಾ 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಕಲೆ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿಭಾಗದಲ್ಲಿ ಪದವಿ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ವಿಷಯದ ನಿರ್ಬಂಧ ಇಲ್ಲ.
ಎಸ್‌ಸಿ / ಎಸ್‌ಟಿ / ವಿಶೇಷ ಚೇತನ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಗದಿತ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾದರೆ ಸಾಕು. ಅಂಕಗಳ ಸಡಿಲಿಕೆ ಅನ್ವಯವಾಗಲಿದೆ.
ಇದನ್ನೂ ಓದಿ: Mobile Kaladare Enu Madabeku- ಮೊಬೈಲ್ ಕಳುವಾದರೆ ಏನು ಮಾಡಬೇಕು? ಗಾಬರಿಯಾಗದೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳು ಇಲ್ಲಿವೆ…
Hindi Stream Posts- ಹಿಂದಿ ವಿಭಾಗದ ಹುದ್ದೆಗಳು
ಹಿಂದಿ ವಿಭಾಗದ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯಲ್ಲಿ ಹಿಂದಿಯನ್ನು ಒಂದು ವಿಷಯವಾಗಿ ಓದಿರಬೇಕು. ಇಂಗ್ಲಿಷ್‌ನಿಂದ ಹಿಂದಿಗೆ ಅನುವಾದ ಮಾಡುವ ಕೌಶಲ ಹೊಂದಿರಬೇಕು.

Age Limit – ವಯೋಮಿತಿ ವಿವರ
ನಬಾರ್ಡ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು. ಅಂದರೆ ಅಭ್ಯರ್ಥಿಗಳು 1991ರ ಜನವರಿ 2 ರಿಂದ 2005ರ ಜನವರಿ 1ರ ನಡುವೆ ಜನಿಸಿದ್ದಿರಬೇಕು.
Age Relaxation – ವಯೋಮಿತಿ ಸಡಿಲಿಕೆ
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷ
- ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ
Salary & Benefits – ವೇತನ ಮತ್ತು ಸೌಲಭ್ಯಗಳು
ನಬಾರ್ಡ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹23,100 ರಿಂದ ₹55,700 ವರೆಗೆ ವೇತನ ನಿಗದಿ ಮಾಡಲಾಗಿದೆ.
ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವ ಎಲ್ಲ ಭತ್ಯೆಗಳು ಮತ್ತು ಸೌಲಭ್ಯಗಳು ದೊರೆಯುತ್ತವೆ. ಉತ್ತಮ ವೇತನದ ಜೊತೆಗೆ ಉದ್ಯೋಗ ಭದ್ರತೆ, ಪದೋನ್ನತಿ ಅವಕಾಶಗಳು ಮತ್ತು ಗೌರವಯುತ ಸೇವಾ ಪರಿಸರ ಈ ಹುದ್ದೆಯ ಪ್ರಮುಖ ಆಕರ್ಷಣೆಯಾಗಿದೆ.
ಇದನ್ನೂ ಓದಿ: Karnataka CET Application Started 2026- ಸಿಇಟಿ ಅರ್ಜಿ ಸಲ್ಲಿಕೆೆ ಆರಂಭ | ಕೆಇಎ ಮಹತ್ವದ ಮಾಹಿತಿ ಇಲ್ಲಿದೆ…
Selection Process- ಪರೀಕ್ಷಾ ವಿಧಾನ
ನಬಾರ್ಡ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ನೇಮಕಾತಿ ಪ್ರಕ್ರಿಯೆ ಎರಡು ಹಂತದ ಪರೀಕ್ಷೆಗಳನ್ನು ಒಳಗೊಂಡಿದೆ.
1. ಪೂರ್ವಭಾವಿ ಪರೀಕ್ಷೆ (Preliminary Exam): ಇಂಗ್ಲಿಷ್ ಭಾಷೆ 40 ಅಂಕ, ರೀಸನಿಂಗ್ 30 ಅಂಕ, ನ್ಯೂಮರಿಕಲ್ ಎಬಿಲಿಟಿ 30 ಅಂಕ ಸೇರಿ ಒಟ್ಟು 100 ಪ್ರಶ್ನೆಗಳು / 100 ಅಂಕಗಳಿರುತ್ತವೆ. ಹಿಂದಿ ವಿಭಾಗದ ಅಭ್ಯರ್ಥಿಗಳಿಗೆ ನ್ಯೂಮರಿಕಲ್ ಎಬಿಲಿಟಿ ಬದಲು ಹಿಂದಿ ವೃತ್ತಿಪರ ಜ್ಞಾನ ಪ್ರಶ್ನೆಗಳು ಇರಲಿವೆ.
2. ಮುಖ್ಯ ಪರೀಕ್ಷೆ (Main Exam): ರೀಸನಿಂಗ್ 30 ಅಂಕ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ 30 ಅಂಕ, ಜನರಲ್ ಅವೇರ್‌ನೆಸ್ 50 ಅಂಕ, ಕಂಪ್ಯೂಟರ್ ನಾಲೆಜ್ 40 ಅಂಕ ಹಾಗೂ ಪ್ರಬಂಧ ಬರವಣಿಗೆ (Descriptive) 50 ಅಂಕ ಸೇರಿ ಒಟ್ಟು: 200 ಅಂಕಗಳು ಇರುತ್ತವೆ. ಹಿಂದಿ ವಿಭಾಗದಲ್ಲಿ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಬದಲು ಹಿಂದಿ ಜ್ಞಾನ ಪ್ರಶ್ನೆಗಳು ಇರುತ್ತವೆ.
ಇದನ್ನೂ ಓದಿ: Agniveer Vayu Recruitment 2026- ಪಿಯುಸಿ, ಡಿಪ್ಲೊಮಾ ಅಭ್ಯರ್ಥಿಗಳಿಗೆ ವಾಯುಪಡೆ ಅಗ್ನಿವೀರರ್ ಹುದ್ದೆಗಳು
Exam Centres in Karnataka – ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಹಾಸನ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಗಳಲ್ಲಿ ಪೂರ್ವಭಾವಿ ಪರೀಕ್ಷೆ ಕೇಂದ್ರಗಳು ಇರಲಿವೆ. ಇನ್ನು ಮುಖ್ಯ ಪರೀಕ್ಷೆ ಕೇಂದ್ರಗಳು ಬೆಂಗಳೂರು, ಹುಬ್ಬಳ್ಳಿ-ಧಾರವಾಡಗಳಲ್ಲಿ ಇರಲಿವೆ.
Application Fee – ಅರ್ಜಿ ಶುಲ್ಕವೆಷ್ಟು?
ಎಸ್‌ಸಿ / ಎಸ್‌ಟಿ / ವಿಶೇಷ ಚೇತನ ಅಭ್ಯರ್ಥಿಗಳು ₹100 ಇಂಟಿಮೇಷನ್ ಫೀ ಹಾಗೂ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ₹550 ನಿಗದಿಮಾಡಲಾಗಿದೆ. ನಬಾರ್ಡ್ ಸಿಬ್ಬಂದಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇರಲಿದೆ.
ಇದನ್ನೂ ಓದಿ: KSCCF Recruitment 2026- ಪಿಯುಸಿ, ಪದವಿಧರರಿಗೆ ಸಹಕಾರ ಮಹಾ ಮಂಡಳಿಯಲ್ಲಿ ಉದ್ಯೋಗಾವಕಾಶ | ಅರ್ಜಿ ಆಹ್ವಾನ
How to Apply – ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಇತ್ತೀಚಿನ ಭಾವಚಿತ್ರ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಫೆಬ್ರವರಿ 3, 2026 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ನಬಾರ್ಡ್ ವತಿಯಿಂದ ಎಸ್‌ಸಿ / ಎಸ್‌ಟಿ, ಒಬಿಸಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸುವಾಗಲೇ ಈ ಆಯ್ಕೆಯನ್ನು ಗುರುತಿಸಬೇಕು.
Final Selection Process – ಅಂತಿಮ ಆಯ್ಕೆ ಪ್ರಕ್ರಿಯೆ
ಅರ್ಜಿಗಳ ಪರಿಶೀಲನೆಯ ನಂತರ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅಭ್ಯರ್ಥಿಗಳು ಆಯಾ ರಾಜ್ಯದ ಸ್ಥಳೀಯ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. ಸ್ಥಳೀಯ ಭಾಷಾ ಜ್ಞಾನ ಪರೀಕ್ಷೆಯ ನಂತರ ಅಂತಿಮ ಆಯ್ಕೆ ನಡೆಯಲಿದೆ.
Important Dates – ಪ್ರಮುಖ ದಿನಾಂಕಗಳು
- ಅರ್ಜಿಗೆ ಕೊನೆಯ ದಿನ: ಫೆಬ್ರವರಿ 3, 2026
- ಪೂರ್ವಭಾವಿ ಪರೀಕ್ಷೆ: ಫೆಬ್ರವರಿ 21, 2026
- ಮುಖ್ಯ ಪರೀಕ್ಷೆ: ಏಪ್ರಿಲ್ 12, 2026
ನಬಾರ್ಡ್ ಡೆವಲಪ್‌ಮೆಂಟ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುವುದು ದೇಶದ ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳುವ ಅವಕಾಶವಾಗಿದೆ. ಉತ್ತಮ ವೇತನ, ಭದ್ರ ಉದ್ಯೋಗ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ತೃಪ್ತಿ ಒಟ್ಟಿಗೆ ನೀಡುವ ಈ ಅವಕಾಶವನ್ನು ಪದವಿಧರರು ತಪ್ಪಿಸಿಕೊಳ್ಳಬಾರದು.
- ಅಧಿಸೂಚನೆ: Download
- ಅರ್ಜಿ ಲಿಂಕ್: Apply Now
- ಅಧಿಕೃತ ವೆಬ್‌ಸೈಟ್: nabard.org

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.