2026-27ನೇ ಶೈಕ್ಷಣಿಕ ಸಾಲಿನ ಉಚಿತ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ (Morarji Desai Residential School Admission 2026-27) ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು; ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿಕ್ಷಣವೇ ಬಡತನದ ಬಾಗಿಲು ಮುಚ್ಚುವ ಶಕ್ತಿಯುತ ಆಯುಧ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಉಚಿತ ವಸತಿ ಶಾಲೆಗಳನ್ನು ಆರಂಭಿಸಿದೆ.
ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ವಿವಿಧ ವಸತಿ ಶಾಲೆಗಳು ಇದೀಗ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿವೆ.
Residential Schools for Admission- ಯಾವ ವಸತಿ ಶಾಲೆಗಳಿಗೆ ಪ್ರವೇಶ?
ಈ ಬಾರಿ 6ನೇ ತರಗತಿಗೆ ಪ್ರವೇಶ ನೀಡಲಾಗುತ್ತಿರುವ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿರುವ ವಸತಿ ಶಾಲೆಗಳ ವಿವರ ಹೀಗಿದೆ:
- ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು: ಇವು ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿದ್ದು, ರಾಜ್ಯದ 140 ಶಾಲೆಗಳಲ್ಲಿ ಒಟ್ಟು 10,460 ಸೀಟುಗಳು ಲಭ್ಯವಿವೆ.
- ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು: ಈ ಶಾಲೆಗಳು ಸಿಬಿಎಸ್‌ಇ (CBSE) ಪಠ್ಯಕ್ರಮವನ್ನು ಹೊಂದಿದ್ದು, 26 ಶಾಲೆಗಳಲ್ಲಿ 1,830 ಸೀಟುಗಳು ಖಾಲಿಯಿವೆ.
- ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು: ರಾಜ್ಯ ಪಠ್ಯಕ್ರಮದಡಿ ಕಾರ್ಯನಿರ್ವಹಿಸುವ ಈ ಶಾಲೆಗಳಲ್ಲಿ 04 ಶಾಲೆಗಳಲ್ಲಿಒಟ್ಟು 260 ಸೀಟುಗಳು ಲಭ್ಯವಿವೆ.
Eligibility Criteria- ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
ಮೇಲ್ಕಾಣಿಸಿದ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಕೆಳಗಿನ ಅರ್ಹತೆಗಳನ್ನು ಪೂರೈಸಿರಬೇಕು:
- ಅಭ್ಯರ್ಥಿಯು 5ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು
- ದಾಖಲೆ ಪರಿಶೀಲನೆ ವೇಳೆ ಅಂಕಪಟ್ಟಿ ಸಲ್ಲಿಸುವುದು ಕಡ್ಡಾಯ
- ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು
- ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ. ಒಳಗಿರಬೇಕು
ಇದನ್ನೂ ಓದಿ: KCET 2026 Exam Timetable- 2026ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ನಿಗದಿ | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…
Reservation & Seat Matrix- ಮೀಸಲಾತಿ ವಿವರ ಹಾಗೂ ಯಾರಿಗೆ ಎಷ್ಟು ಸೀಟು?
ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಒಟ್ಟು ಸ್ಥಾನಗಳ ಪೈಕಿ ಶೇ.75ರಷ್ಟು ಮೀಸಲಾತಿ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶೇ.25% ಮೀಸಲಾತಿಲಿಡಲಾಗಿದೆ. ಅದೇ ರೀತಿ ಒಟ್ಟು ಖಾಲಿ ಸೀಟುಗಳ ಪೈಕಿ ಬಾಲಕಿಯಲಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ.

Key Features- ವಸತಿ ಶಾಲೆಗಳ ಪ್ರಮುಖ ವೈಶಿಷ್ಟ್ಯತೆಗಳು
ಈ ವಸತಿ ಶಾಲೆಗಳು ಕೇವಲ ಪಾಠಶಾಲೆಗಳಲ್ಲ, ಬದಲಾಗಿ ಭವಿಷ್ಯ ನಿರ್ಮಾಣದ ಕೇಂದ್ರಗಳಾಗಿದ್ದು; ಇಲ್ಲಿ ಸಂಪೂರ್ಣ ಉಚಿತ ಹಾಗೂ ಗುಣಮಟ್ಟದ ವಸತಿಯುತ ಶಿಕ್ಷಣ ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆ ಮಾಡಲಾಗುತ್ತದೆ. ಶುದ್ಧ ಆಹಾರ, ಸುರಕ್ಷಿತ ವಸತಿ ಹಾಗೂ ಶಿಸ್ತುಬದ್ಧ ಪರಿಸರ ಇರಲಿದೆ.
ಸ್ಪೋಕನ್ ಇಂಗ್ಲಿಷ್, ನಾಯಕತ್ವ ಮತ್ತು ಜೀವನ ಕೌಶಲ್ಯ ತರಬೇತಿ ಜೊತೆಗೆ ಜೆಇಇ, ನೀಟ್, ಸಿಎಲ್‌ಎಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಲಾ ಹಂತದಲ್ಲಿಯೇ ತಯಾರಿ ನೀಡಲಾಗುತ್ತದೆ. ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಹಾಗೂ ವಿಶೇಷ ಜೀವನ ಕೌಶಲ್ಯ ತರಬೇತಿ ಒದಗಿಸಲಾಗುತ್ತದೆ.
ಇದನ್ನೂ ಓದಿ: Karnataka Grama Panchayat Election 2026- ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ | ಮಹತ್ವದ ಮಾಹಿತಿ ಇಲ್ಲಿದೆ…
Application Process- ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ವಿದ್ಯಾರ್ಥಿಗಳು ಸರ್ಕಾರದ ಅಧಿಕೃತ sevasindhuservices.karnataka.gov.in ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ತೆರಳಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ..
ಮುರಾರ್ಜಿ ದೇಸಾಯಿ ಮತ್ತು ಇತರೆ ವಸತಿ ಶಾಲೆಗಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು; ಉಚಿತ ವಸತಿ, ಗುಣಮಟ್ಟದ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಅನುಕೂಲಕರವಾಗಿವೆ. ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿಸಲು ಇದು ಒಂದು ಉತ್ತಮ ಅವಕಾಶ.
ಇದನ್ನೂ ಓದಿ: Banking New Rules 2026- ಜನವರಿ 1ರಿಂದ ಬ್ಯಾಂಕುಗಳಿಗೆ ಹೊಸ ನಿಯಮಗಳು ಜಾರಿ | ಸಾಲಗಾರರಿಗೆ ಭಾರೀ ಲಾಭ, ವಂಚನೆಗೆ ಬ್ರೇಕ್!
Tentative Admission Schedule- ಪ್ರವೇಶ ಪ್ರಕ್ರಿಯೆಯ ತಾತ್ಕಾಲಿಕ ವೇಳಾಪಟ್ಟಿ
- ಅರ್ಜಿ ಸಲ್ಲಿಕೆ ಪ್ರಾರಂಭ: 07-01-2026
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-02-2026
- ಲಿಖಿತ ಪರೀಕ್ಷೆ (ತಾತ್ಕಾಲಿಕ): 29-03-2026 (ಭಾನುವಾರ)
- ಫಲಿತಾಂಶ ಪ್ರಕಟಣೆ: 20-04-2026
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್: dom.karnataka.gov.in