ಮೆಸ್ಕಾಂ ಅಫ್ರೆಂಟೀಸ್‌ಶಿಪ್ ನೇಮಕಾತಿಗೆ (MESCOM Apprenticeship Recruitment 2026) ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಉದ್ಯೋಗ ತರಬೇತಿ ಹುಡುಕುತ್ತಿರುವ ಪದವೀಧರರು ಹಾಗೂ ಡಿಪ್ಲೊಮಾ ಉತ್ತೀರ್ಣರಿಗೆ ಇದು ಉತ್ತಮ ಅವಕಾಶ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM) ತನ್ನ ವಿವಿಧ ಕಚೇರಿಗಳಲ್ಲಿ ಒಂದು ವರ್ಷದ ಅಫ್ರೆಂಟೀಸ್‌ಶಿಪ್ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಈ ನೇಮಕಾತಿಯಲ್ಲಿ ಒಟ್ಟು 200 ಸ್ಥಾನಗಳು ಲಭ್ಯವಿದ್ದು, ತಾಂತ್ರಿಕ ಹಾಗೂ ಸಾಮಾನ್ಯ ಪದವೀಧರರಿಗೆ ಅವಕಾಶ ಕಲ್ಪಿಸಲಾಗಿದೆ. ಈ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ. ಹೊಸದಾಗಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಯುವಕರಿಗೆ ಇದು ಅನುಭವ ಮತ್ತು ಆದಾಯ ಎರಡನ್ನೂ ಒದಗಿಸುವ ಅವಕಾಶವಾಗಲಿದೆ.
Who Can Apply? – ಯಾವ ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು?
ಮೆಸ್ಕಾಂ ಅಫ್ರೆಂಟೀಸ್‌ಶಿಪ್‌ಗೆ ಮೂರು ವಿಭಿನ್ನ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ತಾಂತ್ರಿಕ ಪದವೀಧರರು: ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಷಯದಲ್ಲಿ BE / B.Tech ಪದವಿ ಪಡೆದಿರಬೇಕು.
- ಡಿಪ್ಲೊಮಾ ಉತ್ತೀರ್ಣರು: ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಸಾಮಾನ್ಯ ಪದವೀಧರರು: BA, B.Sc, B.Com, BBA, BCA ಪದವಿಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು 2021, 2022, 2023, 2024 ಅಥವಾ 2025ರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. ಅಪ್ರೆಂಟೀಸ್‌ಶಿಪ್ ಕಾಯ್ದೆಯನ್ವಯ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಇದನ್ನೂ ಓದಿ: Tarpaulin Subsidy Scheme 2026- ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ್ ವಿತರಣೆಗೆ ಅರ್ಜಿ ಆಹ್ವಾನ
Category-wise Vacancy Details – ವಿಭಾಗವಾರು ಹುದ್ದೆಗಳ ವಿವರ
- ತಾಂತ್ರಿಕ ಪದವೀಧರರು: 70
- ಡಿಪ್ಲೊಮಾ ಉತ್ತೀರ್ಣರು: 65
- ಸಾಮಾನ್ಯ ಪದವೀಧರರು: 65
- ಒಟ್ಟು ಸ್ಥಾನಗಳು: 200

How Much Stipend Will Be Paid? – ಸ್ಟೈಪೆಂಡ್ ಎಷ್ಟು ಸಿಗುತ್ತದೆ?
ಮೆಸ್ಕಾಂ ಅಫ್ರೆಂಟೀಸ್‌ಶಿಪ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕೆಳಕಂಡAತೆ ಸ್ಟೈಪೆಂಡ್ ನೀಡಲಾಗುತ್ತದೆ.
- ತಾಂತ್ರಿಕ ಪದವೀಧರರು: ₹9,000
- ಸಾಮಾನ್ಯ ಪದವೀಧರರು: ₹9,000
- ಡಿಪ್ಲೊಮಾ ಉತ್ತೀರ್ಣರು: ₹8,000
ಈ ಮೊತ್ತವು ತರಬೇತಿ ಅವಧಿಯಲ್ಲಿ ನಿಯಮಿತವಾಗಿ ಪಾವತಿಸಲಾಗುತ್ತದೆ.
ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?
What Is the Selection Process? – ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಮೆಸ್ಕಾಂ ಅಫ್ರೆಂಟೀಸ್‌ಶಿಪ್ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮೆರಿಟ್ ಆಧಾರಿತವಾಗಿರುತ್ತದೆ. ಆನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ದಕ್ಷಿಣ ವಿಭಾಗದ ಅಪ್ರೆಂಟೀಸ್‌ಶಿಪ್ ಮಂಡಳಿ ಪರಿಶೀಲಿಸುತ್ತದೆ.
ಅಭ್ಯರ್ಥಿಗಳು ತಮ್ಮ ಅರ್ಹತೆಯ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಕಿರುಪಟ್ಟಿ ತಯಾರಿಸಲಾಗುತ್ತದೆ. ಕಿರುಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ಮೆಸ್ಕಾಂ ಕಚೇರಿಗೆ ಹಾಜರಾಗಿ ತಮ್ಮ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳಬೇಕು. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.
How to Apply? – ಅರ್ಜಿ ಸಲ್ಲಿಸುವ ವಿಧಾನ
ಮೆಸ್ಕಾಂ ಅಫ್ರೆಂಟೀಸ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸಬೇಕು.
ಹಂತ 1- NATS ಪೋರ್ಟಲ್‌ನಲ್ಲಿ ನೋಂದಣಿ: ಉದ್ಯೋಗ ತರಬೇತಿ ಬಯಸುವ ವಿದ್ಯಾರ್ಥಿಗಳು ಮೊದಲು ಓಚಿಣioಟಿಚಿಟ National Apprenticeship Training Scheme (NATS) ಪೋರ್ಟಲ್‌ನ ವಿದ್ಯಾರ್ಥಿ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಹಂತ 2- ವಿವರಗಳ ಭರ್ತಿ: ನೋಂದಣಿಯ ವೇಳೆ ಶೈಕ್ಷಣಿಕ ವಿವರಗಳು, ವೈಯಕ್ತಿಕ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
ಹಂತ 3- ಮೆಸ್ಕಾಂ ಅಪ್ರೆಂಟೀಸ್‌ಶಿಪ್ ಅರ್ಜಿ: NATS ನೋಂದಣಿ ಪೂರ್ಣಗೊಂಡ ನಂತರ ಮೆಸ್ಕಾಂ ಅಪ್ರೆಂಟೀಸ್‌ಶಿಪ್ ಅರ್ಜಿ ಸಲ್ಲಿಸಬೇಕು.
ಈಗಾಗಲೇ NATSನಲ್ಲಿ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ನೇರವಾಗಿ ಮೆಸ್ಕಾಂ ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತರು ಕೊನೆಯ ದಿನಾಂಕಗಳ ಮೊದಲು ಅರ್ಜಿ ಸಲ್ಲಿಸಿ ಈ ಅವಕಾಶವನ್ನು ತಪ್ಪಿಸಿಕೊಳ್ಳದಿರಿ.
ಇದನ್ನೂ ಓದಿ: Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್
Important Dates – ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಜನವರಿ 31, 2026
- NATS ಪೋರ್ಟಲ್‌ನಲ್ಲಿ ನೋಂದಣಿ ಕೊನೇ ದಿನ: ಫೆಬ್ರವರಿ 24, 2026
- ಮೆಸ್ಕಾಂ ಅಪ್ರೆಂಟೀಸ್‌ಶಿಪ್ ಅರ್ಜಿ ಕೊನೆಯ ದಿನ: ಮಾರ್ಚ್ 2, 2026
- ಆಯ್ಕೆಯಾದ ಅಭ್ಯರ್ಥಿಗಳ ಕಿರುಪಟ್ಟಿ ಪ್ರಕಟಣೆ: ಮಾರ್ಚ್ 6, 2026
- ದಾಖಲೆ ಪರಿಶೀಲನೆ: ಮಾರ್ಚ್ 17 ಮತ್ತು 18, 2026
ಮೆಸ್ಕಾಂ ಅಫ್ರೆಂಟೀಸ್‌ಶಿಪ್ 2026 ನೇಮಕಾತಿ ಹೊಸದಾಗಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಸರ್ಕಾರಿ ಸಂಸ್ಥೆಯಲ್ಲಿ ತರಬೇತಿ, ನಿಯಮಿತ ಸ್ಟೈಪೆಂಡ್ ಹಾಗೂ ಕೆಲಸದ ಅನುಭವ ಪಡೆಯಲು ಇದು ಸೂಕ್ತ ವೇದಿಕೆಯಾಗಿದೆ.
ಅಧಿಸೂಚನೆ: Download

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.