LKG UKG Teacher Recruitment 2025- ಸರ್ಕಾರಿ ಶಾಲೆ ಎಲ್‌ಜಿ-ಯುಕೆಜಿಗೆ ಶಿಕ್ಷಕರು, ಆಯಾಗಳ ನೇಮಕಾತಿ | ಸರ್ಕಾರದ ಅಧಿಕೃತ ಸೂಚನೆ

Spread the love

WhatsApp Group Join Now
Telegram Group Join Now

ರಾಜ್ಯದ 4,056 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಅಧಿಕೃತ ಅನುಮತಿ ನೀಡಿದ್ದು; ಶಿಕ್ಷಕರು-ಆಯಾಗಳ ನೇಮಕಾತಿಗೆ (LKG UKG Teacher Recruitment 2025) ಸೂಚನೆ ಹೊರಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ….

ರಾಜ್ಯ ಸರ್ಕಾರವು ರಾಜ್ಯದಲ್ಲಿ ಮತ್ತೆ 4,056 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ (ಪೂರ್ವ ಪ್ರಾಥಮಿಕ ಶಿಕ್ಷಣ) ತರಗತಿಗಳನ್ನು ಪ್ರತ್ಯೇಕವಾಗಿ ಪ್ರಾರಂಭಿಸಲು ಅನುಮತಿ ನೀಡಿದೆ. ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲು ಅನುಮತಿ ನೀಡಲಾದ ಶಾಲೆಗಳ ವಿವರ ಹೀಗಿದೆ:

  • ಸರ್ಕಾರಿ ಶಾಲೆಗಳಲ್ಲಿ: 2,804
  • ಪಿಎಂಶ್ರೀ ಶಾಲೆಗಳಲ್ಲಿ: 126
  • ಕಲ್ಯಾಣ ಕರ್ನಾಟಕ ಭಾಗದಲ್ಲಿ: 1,126
  • ಒಟ್ಟು ಶಾಲೆಗಳು: 4,056

ಇದನ್ನೂ ಓದಿ: PM KISAN 21st Installment- ಸಣ್ಣ ರೈತರ ಬ್ಯಾಂಕ್ ಖಾತೆಗೆ ₹2,000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಶಾಲೆ ವೆಚ್ಚ ನಿರ್ವಹಣೆ ಹೇಗೆ?

2,804 ಸರ್ಕಾರಿ ಶಾಲೆಗಳು ಹಾಗೂ 126 ಪಿಎಂಶ್ರೀ ಶಾಲೆಗಳೂ ಸೇರಿದಂತೆ 2,930 ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗುತ್ತಿರುವ ಎಲ್‌ಜಿ ಹಾಗೂ ಯುಕೆಜಿ ತರಗತಿಗಳಿಗೆ ತಗಲುವ ವೆಚ್ಚವನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಅನುದಾನದಲ್ಲಿ ಭರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗುವ 1,126 ಪೂರ್ವ ಪ್ರಾಥಮಿಕ ತರಗತಿಗಳಿಗೆ ತಗಲುವ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಭರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.

2018-19ನೇ ಸಾಲಿನಿಂದ ಈ ವರೆಗೆ ಪ್ರಾರಂಭವಾಗಿರುವ 2,619 ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಮುಂದುವರಿಸುವುದು, ಪ್ರತ್ಯೇಕವಾಗಿ ದ್ವಿಭಾಷಾ ಮಾಧ್ಯಮ ನಡೆಸಲು ಕ್ರಮವಹಿಸಬೇಕೆಂದು ತಿಳಿಸಿದೆ.

ರಾಜ್ಯದ 4,056 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು; ಶಿಕ್ಷಕರು-ಆಯಾಗಳ ನೇಮಕಾತಿಗೆ ಸೂಚನೆ ಹೊರಡಿಸಿದೆ....
Govt School LKG UKG Teacher Recruitment 2025

ಇದನ್ನೂ ಓದಿ: New Voter ID Mobile Application Guide- ಮೊಬೈಲ್‌ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ…

ಮಕ್ಕಳ ಪ್ರವೇಶ ಮತ್ತು ತರಗತಿ ಸಮಯ

ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಬೆಳಗ್ಗೆ 10ರಿಂದ ಮಧ್ಯಾಹ್ನ ರಾಹ್ನ 3.30ರ ವರೆಗೆ ನಡೆಯಲಿವೆ. ಈ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸ್ಥಳೀಯವಾಗಿ ಪ್ರಚಾರ ಮಾಡಬೇಕೆಂದು ಸೂಚನೆ ನೀಡಿದೆ.

ಎಲ್‌ಕೆಜಿಗೆ 4-5 ವರ್ಷ ವಯೋಮಿತಿಯ ಮಕ್ಕಳನ್ನು ದಾಖಲು ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ಕೊಠಡಿಯನ್ನು ಸಜ್ಜುಗೊಳಿಸಬೇಕು. ಒಂದು ತರಗತಿಗೆ ಗರಿಷ್ಠ 40 ಮಕ್ಕಳನ್ನು ಮಾತ್ರ ದಾಖಲಿಸಬೇಕು ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು ನೀಡಲಾಗಿದೆ.

ಈ ಯೋಜನೆಯ ನಿರ್ವಹಣೆಯ ಜವಾಬ್ದಾರಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಹಿಸಿದ್ದು, ಇವರು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು.

ಇದನ್ನೂ ಓದಿ: Udhyogini Yojana 2025 – ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ಇಲ್ಲದ ಸಾಲ ಸೌಲಭ್ಯ | ಮಹಿಳಾ ನಿಗಮದಿಂದ ಅರ್ಜಿ ಆಹ್ವಾನ

ಶಿಕ್ಷಕರು, ಆಯಾಗಳ ನೇಮಕಾತಿ ವಿವರ

ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ತಲಾ ಒಬ್ಬ ಶಿಕ್ಷಕ ಹಾಗೂ ಒಬ್ಬ ಆಯಾಗಳನ್ನು 10 ತಿಂಗಳ ಅವಧಿಗೆ ಆಯಾ ಎಸ್‌ಡಿಎಂಸಿ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ದ್ವಿತೀಯ ಪಿಯುಸಿಯಲ್ಲಿ ಶೇ.50 ಅಂಕಗಳೊAದಿಗೆ ತೇರ್ಗಡೆಯಾಗಿದ್ದು ಡಿಪ್ಲೊಮಾ ಟೀಚರ್ಸ್ ಎಜುಕೇಷನ್/ ಪ್ರಿ-ಸ್ಕೂಲ್ ಟೀಚರ್ ಎಜುಕೇಷನ್/ ಡಿಪ್ಲೊಮಾ ಇನ್ ಅರ್ಲಿ ಚೈಲ್ಡ್’ಹುಡ್ ಎಜುಕೇಷನ್ ಪ್ರೋಗ್ರಾಮ್ ಅಥವಾ ಬಿ.ಇಡಿ (ನರ್ಸರಿ) ಅರ್ಹತೆ ಹೊಂದಿರುವ ಗರಿಷ್ಠ 45 ವರ್ಷದೊಳಗಿನ ಅಭ್ಯರ್ಥಿಗಳನ್ನು ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಬೇಕು.

ಎಸ್ಸೆಸ್ಸೆಲ್ಸಿ ಉತ್ತಿರ್ಣರಾಗಿರುವವರನ್ನು ಆಯಾಗಳಾಗಿ ನೇಮಿಸಿಕೊಳ್ಳಬೇಕು. ಶಿಕ್ಷಕರಿಗೆ ಅತಿಥಿ ಶಿಕ್ಷಕರಿಗೆ ಇರುವಂತೆ 12 ಸಾವಿರ ರೂ., ಆಯಾಗಳಿಗೆ 6,250 ರೂ. ಸಂಭಾವನೆ ನೀಡಬೇಕು. ಆಯ್ಕೆಯಾದ ತರಗತಿವಾರು ಶಿಕ್ಷಕರು ಹಾಗೂ ಆಯಾ ಅವರನ್ನು ಶೈಕ್ಷಣಿಕ ವರ್ಷದ ಮಾರ್ಚ್ 31ರ ವರೆಗೆ ಮಾತ್ರ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

HDFC Parivartan Scholarship 2025- 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳ ವರೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ | ₹15,000 ರಿಂದ ₹75,000 ವರೆಗೆ ಆರ್ಥಿಕ ನೆರವು

WhatsApp Group Join Now
Telegram Group Join Now


Spread the love
error: Content is protected !!