Konkan Railway 190 post Recruitment 2024 : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (Konkan Railway Corporation Limited) ಒಟ್ಟು 190 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸೀನಿಯರ್ ಸೆಕ್ಷನ್ ಇಂಜನೀಯರ್ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದ್ದು; 10ನೇ ತರಗತಿ, 12ನೇ ತರಗತಿ, ಐಟಿಐ, ಪದವಿ ವಿದ್ಯಾರ್ಹತೆ ಹೊಂದಿದವರಿಗೆ ವಿಫುಲ ಅವಕಾಶಗಳಿವೆ.
ನಮ್ಮ ಕರಾವಳಿ ತೀರದ ಮಂಗಳೂರನ್ನು ಮುಂಬೈ ಜತೆಗೆ ರೈಲು ಸಂಪರ್ಕದ ಮೂಲಕ ಸ್ಥಾಪಿಸಲಾದ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಹಲವು ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುತ್ತಿದೆ. ದೇಶದ ಇತರೆಡೆಗಳಲ್ಲಿಯೂ ಹಲವು ಯೋಜನೆಗಳನ್ನು ನಿಭಾಯಿಸುತ್ತಿದೆ.
ಇದೀಗಎಲೆಕ್ಟಿಕಲ್, ಸಿವಿಲ್, ಮೆಕಾನಿಕಲ್, ಆಪರೇಟಿಂಗ್, ಸಿಗ್ನಲ್ ಅಂಡ್ ಟೆಲಿಕಮ್ಯೂನಿಕೇಷನ್, ಕಮರ್ಷಿಯಲ್ ವಿಭಾಗಗಳಲ್ಲಿ ಖಾಲಿ ಇರುವ ಟೆಕ್ನಿಷಿಯನ್, ಪಾಯಿಂಟ್ಸ್ಮನ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಇರುವವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ವಿವರ
ಮೊದಲೇ ಹೇಳಿದಂತೆ ಈಗ ಅರ್ಜಿ ಆಹ್ವಾನಿಸಿರುವ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಐಟಿಐ, ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅಭ್ಯರ್ಥಿಯು ಆಗಸ್ಟ್ 1, 2024ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ರಿಂದ ಗರಿಷ್ಠ 36 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದಿಂದ 15 ವರ್ಷಗಳ ವರೆಗೆ ವಯೋಮಿತಿ ಸಡಿಲಿಕೆ ಇದೆ.
ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ₹1.30 ಲಕ್ಷ ಸಂಬಳದ ಹುದ್ದೆಗಳು | 5,000 ಹುದ್ದೆಗಳಿಗೆ ಅರ್ಜಿ ಆಹ್ವಾನ NSDC Recruitment 2024
ನೇಮಕವಾದವರಿಗೆ ಸಿಗಲಿರುವ ಮಾಸಿಕ ವೇತನ
ಹುದ್ದೆಗಳಿಗೆ ಅನುಗುಣವಾಗಿ ಮಾಸಿಕವೇತನವನ್ನು ನೀಗದಿಪಡಿಸಲಾಗಿದ್ದು; ವಿವಿಧ ಹುದ್ದೆಗಳ ಆರಂಭಿಕ ವೇತನ ಶ್ರೇಣಿ ಈ ಕೆಳಗಿನಂತಿದೆ:
- ಸೀನಿಯರ್ ಸೆಕ್ಷನ್ ಇಂಜಿನಿಯರ್ : ₹44,900
- ಟೆಕ್ನಿಷಿಯನ್ III : ₹19,900
- ಅಸಿಸ್ಟೆಂಟ್ ಲೋಕೋ ಪೈಲಟ್ : ₹19,900
- ಟ್ರ‍್ಯಾಕ್ ಮೆಂಟೇನರ್ : ₹18,000
- ಸ್ಟೇಷನ್ ಮಾಸ್ಟರ್ : ₹35,400
- ಗೂಡ್ಸ್ ಟೈನ್ ಮ್ಯಾನೇಜರ್ : ₹29,200
- ಪಾಯಿಂಟ್ಸ್’ಮನ್ : ₹18,000.,
- ಇಎಸ್‌ಟಿಎಂ III : ₹19,900
- ಕಮರ್ಷಿಯಲ್ ಸೂಪರ್‌ವೈಸರ್ : ₹35,400
ಅರ್ಜಿ ಶುಲ್ಕ ಹಾಗೂ ಆಯ್ಕೆ ಪ್ರಕ್ರಿಯೆ ವಿವರ
ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಎಲ್ಲ ವರ್ಗದ ಅಭ್ಯರ್ಥಿಗಳು 885 ರೂಪಾಯಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಕೆ ಹುದ್ದೆಗೆ ಅಭ್ಯರ್ಥಿಗಳು https://konkanrailway.com/ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕ
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
16-09-2024 - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
06-10-2024
ಅಧಿಸೂಚನೆ : Download