ಭಾರತೀಯ ಹವಾಮಾನ ಇಲಾಖೆಯು (IMD) ಏಪ್ರಿಲ್ 15ರಿಂದ ಆರಂಭವಾಗಿ ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ.
ಭೌಗೋಳಿಕವಾಗಿ ಭಾರತವು ಬಂಗಾಳಕೊಲ್ಲಿಯ ಪರಿಸರದ ಮೇಲೆ ಅವಲಂಬಿತವಾಗಿದ್ದು; ಇಲ್ಲಿ ಸಂಭವಿಸುವ ಚಂಡಮಾರುತಗಳು ಇಡೀ ದೇಶದ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಬೃಹತ್ ಚಂಡಮಾರುತ ಪರಿಚಲನೆಯಾಗಿದ್ದು; ಇದರಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಅಬ್ಬರ ಆರಂಭವಾಗಿದೆ.
ದಕ್ಷಿಣ ಭಾರತದಲ್ಲಿ ಭಾರೀ ಮಳೆ
ಬಂಗಾಳಕೊಲ್ಲಿಯ ಮೇಲ್ಭಾಗದಲ್ಲಿ ಉಂಟಾದ ಚಂಡಮಾರುತವು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ತೀವ್ರ ಗಾಳಿ ಹಾಗೂ ನಿರಂತರ ಆಲಿಕಲ್ಲಿನ ಮಳೆ ಸುರಿಯುವ ಸಂಭವವಿದೆ.
ಈ ಪರಿಸ್ಥಿತಿಯಲ್ಲಿ, ಕೇವಲ ಕರಾವಳಿ ಭಾಗಗಳು ಮಾತ್ರವಲ್ಲದೆ, ಒಳನಾಡಿನ ಜಿಲ್ಲೆಗಳಲ್ಲೂ ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಗುಡುಗು, ಮಿಂಚು, ಜೋರು ಗಾಳಿಯೊಂದಿಗೆ ಬರುವ ಈ ಮಳೆ, ಹಲವು ಕಡೆಗಳಲ್ಲಿ ತಾತ್ಕಾಲಿಕ ಪ್ರವಾಹದ ಪರಿಸ್ಥಿತಿಗೂ ಕಾರಣವಾಗುತ್ತಿದೆ.

Welfare Schemes- ಉಚಿತ ಎಲೆಕ್ಟ್ರಿಕ್ ಸ್ಕೂಟರ್, ಲ್ಯಾಪ್‌ಟಾಪ್ ಮತ್ತು ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ
ಮಳೆ ಅಬ್ಬರಕ್ಕೆ ಒಳಗಾಗುವ ಪ್ರಮುಖ ಜಿಲ್ಲೆಗಳು
ಕರ್ನಾಟಕದ ಒಟ್ಟು 31 ಜಿಲ್ಲೆಗಳ ಪೈಕಿ ಸುಮಾರು 25 ಜಿಲ್ಲೆಗಳಲ್ಲಿ ಮಳೆ ತೀವ್ರವಾಗಿ ಮುಂದುವರಿಯುವ ಸೂಚನೆ ಇದೆ. ಇವುಗಳಲ್ಲಿ ಪ್ರಮುಖವಾಗಿ ಮಳೆಯ ಹೊಡೆತಕ್ಕೆ ಒಳಗಾಗುವ ಪ್ರಮುಖ ಜಿಲ್ಲೆಗಳ ವಿವರ ಈ ಕೆಳಗಿನಂತಿದೆ:
- ಉತ್ತರ ಕರ್ನಾಟಕ: ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ
- ಮಧ್ಯ ಕರ್ನಾಟಕ: ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ
- ಪಶ್ಚಿಮ ಘಟ್ಟ ಹಾಗೂ ಕರಾವಳಿ: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ
- ದಕ್ಷಿಣ ಒಳನಾಡು: ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ತುಮಕೂರು, ಚಿಕ್ಕಮಗಳೂರು, ಹಾಸನ, ಕೊಡಗು
- ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಜೆ ಪಿ ನಗರ, ಯಶವಂತಪುರ, ಬನಶಂಕರಿ, ರಾಜಾಜಿನಗರ
SSLC 2025 Results- SSLC ಫಲಿತಾಂಶ | ಮೌಲ್ಯಮಾಪನ, ರಿಸೆಲ್ಟ್ ಕುರಿತ KSEAB ಪ್ರಮುಖ ಮಾಹಿತಿ ಇಲ್ಲಿದೆ…
ಉತ್ತರ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು; ಈ ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಕೊಪ್ಪಳ ಜಿಲ್ಲೆ ಒಂದರಲ್ಲಿಯೇ ಸುಮಾರು 10,000 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿದ್ದು, ಅದರ ಅಂದಾಜು ಆರ್ಥಿಕ ನಷ್ಟ ₹110 ಕೋಟಿ ರೂಪಾಯಿ ಎಂದು ಜಿಲ್ಲಾಡಳಿತ ವರದಿ ಮಾಡಿದೆ.
ಬೆಂಗಳೂರು ನಗರದಲ್ಲಿ ನಿನ್ನೆ ಏಪ್ರಿಲ್ 14 ರಂದು ಸಂಜೆ ಉಂಟಾದ ಮಳೆಯ ಅಬ್ಬರವು ಹಲವು ಬಡಾವಣೆಗಳಲ್ಲಿ ಸಂಚಾರ ಅಡಚಣೆ ಉಂಟು ಮಾಡಿದೆ. ನಡು ರಸ್ತೆಯಲ್ಲಿ ವಾಹನ ನಿಂತು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಂಗಳೂರು ಮಹಾನಗರ ಪಾಲಿಕೆ (BBMP) ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳೀಯ ಮಟ್ಟದಲ್ಲಿ ನಿಯೋಜನೆ ಮಾಡಲಾಗಿದೆ.