ಆಸ್ತಿ ನೋಂದಣಿಗೆ ಕರ್ನಾಟಕ ಸರ್ಕಾರ ಪ್ರಯೋಗಾತ್ಮಕ ಹೊಸ ಹೆಜ್ಜೆ ಇರಿಸಿದೆ. ಇನ್ಮುಂದೆ ವಾರದ ರಜಾ ದಿನಗಳಲ್ಲೂ ಆಸ್ತಿ ನೋಂದಣಿ (Karnataka Sub-Registrar) ನಡೆಯಲಿದೆ. ಈ ಕುತಿತ ಮಾಹಿತಿ ಇಲ್ಲಿದೆ…
ನಾಳೆಯಿಂದ ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಬದಲಾವಣೆಯೊಂದು ಜಾರಿಗೆ ಬರಲಿದೆ. ರಾಜ್ಯದ ಎಲ್ಲಾ ಉಪ ನೋಂದಣಿ (Karnataka Sub-Registrar Office) ಕಚೇರಿಗಳು ಇನ್ನು ಮುಂದೆ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಲ್ಲಿಯೂ ಕಾರ್ಯನಿರ್ವಹಿಸಲಿವೆ.
ಸಾರ್ವಜನಿಕರ ಅನುಕೂಲ ಹಾಗೂ ಆಸ್ತಿ ಸಂಬಂಧಿ ನೋಂದಣಿ ಕಾರ್ಯಗಳ ಸರಳೀಕರಣದ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಹೊಸ ವ್ಯವಸ್ಥೆ 2025ರ ಜೂನ್ 1 ರಿಂದ ಡಿಸೆಂಬರ್ 28ರ ವರೆಗೆ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ.
ಏಕೆ ಈ ನಿರ್ಧಾರ ತೀವ್ರ ಅಗತ್ಯವಾಯ್ತು?
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಆಸ್ತಿ ನೋಂದಣಿ ಸಂಬಂಧಿತ ಕೆಲಸಗಳು ತೀವ್ರ ವಿಳಂಬಕ್ಕೊಳಗಾಗಿದ್ದವು. ವಾರಾಂತ್ಯದ ಭಾನುವಾರ ರಜೆ, 2ನೇ ಶನಿವಾರ, 4ನೇ ಶನಿವಾರ, ಹಬ್ಬಗಳು ಹಾಗೂ ವಿಶೇಷ ದಿನಗಳು ಸೇರಿದಂತೆ ವಿವಿಧ ರಜಾ ದಿನಗಳು ಹಾಗೂ ಸರ್ವರ್ ತಾಂತ್ರಿಕ ಸಮಸ್ಯೆಗಳು ಈ ವಿಳಂಬಕ್ಕೆ ಕಾರಣವಾಗಿವೆ.
ಇವೆಲ್ಲವೂ ಒಟ್ಟುಗೂಡಿ ಸಾಮಾನ್ಯ ನಾಗರಿಕನಿಗೆ ಆಸ್ತಿ ನೋಂದಣಿಯಂತಹ ಪ್ರಮುಖ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಅವಕಾಶ ನೀಡದೆ ತೊಂದರೆ ಉಂಟುಮಾಡುತ್ತಿದ್ದವು. ಇದನ್ನು ಮನಗಂಡ ರಾಜ್ಯ ಸರ್ಕಾರವು, ಈಗ ರಜಾ ದಿನಗಳಲ್ಲೂ ಸೇವೆ ಮುಂದುವರೆಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶದಲ್ಲೇ ಮೊದಲಿಗೆ ಈ ರೀತಿಯ ಕ್ರಮ
ಈ ಬಗೆಯ ನಿರ್ಧಾರವು ರಾಷ್ಟ್ರಮಟ್ಟದಲ್ಲಿಯೇ ಮೊದಲು ಎನ್ನಬಹುದು. ಇಂತಹ ಕ್ರಮವನ್ನು ಇನ್ನಾವುದೇ ರಾಜ್ಯ ಸರ್ಕಾರ ಜಾರಿಗೆ ತಂದಿಲ್ಲ. ಕರ್ನಾಟಕದ ಈ ಮಹತ್ವದ ನಿರ್ಧಾರ ಇತರ ರಾಜ್ಯಗಳಿಗೆ ಮಾದರಿಯಾಗುವ ಸಾಧ್ಯತೆ ಇದೆ.
KCET 2025 Counselling- ಕೆಸಿಇಟಿ 2025 ಸೀಟು ಹಂಚಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆ | ಸಂಪೂರ್ಣ ಮಾಹಿತಿ ಇಲ್ಲಿದೆ…
ಈ ಹೊಸ ನಿಯಮದ ಪ್ರಮುಖ ಅಂಶಗಳು
- ಜಾರಿಯ ದಿನಾಂಕ: 01-06-2025 ರಿಂದ 28-12-2025ರ ವರೆಗೆ
- ಓಪನ್ ಡೇಸ್: 2ನೇ ಶನಿವಾರ, 4ನೇ ಶನಿವಾರ, ಭಾನುವಾರ
- ರಜೆ ದಿನ: ಮಂಗಳವಾರ (ಶನಿವಾರ/ಭಾನುವಾರ ಸೇವೆ ಮಾಡಿದ ಸಿಬ್ಬಂದಿಗೆ ಪರ್ಯಾಯ ವಿಶ್ರಾಂತಿ ದಿನ)
- ಅನುಷ್ಠಾನ ಕ್ಷೇತ್ರ: ರಾಜ್ಯದ ಎಲ್ಲಾ 257 ಉಪ ನೋಂದಣಿ ಕಚೇರಿಗಳು
- ಉದ್ದೇಶ: ಸಾರ್ವಜನಿಕರಿಗೆ ಸರಳ, ಸುಲಭ, ಹಾಗೂ ವ್ಯವಹಾರ ಬಾಧಿತ ಸೇವೆ ಒದಗಿಸುವುದು
ಸಾರ್ವಜನಿಕರಿಗೆ ಆಗುವ ಪ್ರಮುಖ ಪ್ರಯೋಜನಗಳು
- ಉದ್ಯೋಗಸ್ಥರಿಗೆ ಅನುಕೂಲ: ಉದ್ಯೋಗಸ್ತರಿಗೆ ಕೆಲಸದ ದಿನಗಳಲ್ಲಿ ಸಮಯ ಹೊಂದಿಸಿ ನೋಂದಣಿ ಮಾಡುವುದು ಕಷ್ಟ. ಇವರಿಗೆ ಶನಿವಾರ ಅಥವಾ ಭಾನುವಾರದ ಸೇವೆ ಬಹುದೊಡ್ಡ ಅನುಕೂಲವಾಗಲಿದೆ.
- ಅವಧಿ ತಪ್ಪದೇ ಸೇವೆ: ಸದಾ ರಜೆಗಳಿಂದಾಗಿ ವಿಳಂಬವಾಗುತ್ತಿದ್ದ ಆಸ್ತಿ ನೋಂದಣಿಗೆ ಇಲ್ಲಿಯ ವರೆಗೆ ಎದುರಾಗುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಎನಿವೇರ್ ರಿಜಿಸ್ಟ್ರೇಷನ್’ಗೆ ಸಹಾಯ: ಈ ಬದಲಾವಣೆಯು ಡಿಜಿಟಲ್ ಸೇವೆಗಳ ವ್ಯಾಪ್ತಿ ವಿಸ್ತರಣೆಯಾದ ‘ಎನಿವೇರ್ ರಿಜಿಸ್ಟ್ರೇಷನ್’ ಯೋಜನೆಗೆ ಸಹ ಬೆಂಬಲವಾಗಲಿದೆ.
- ಸರ್ಕಾರಿ ಸೇವೆಗಳ ಮೇಲೆ ನಂಬಿಕೆ: ರಜೆ ದಿನಗಳಲ್ಲೂ ನೋಂದಣಿ ಕಾರ್ಯ ನಡೆಯುವುದರಿಂದ ನಾಗರಿಕರಿಗೆ ಸರ್ಕಾರದ ವ್ಯವಸ್ಥೆಯ ಮೇಲಿರುವ ನಂಬಿಕೆ ಬಲವಾಗುವುದು.
e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ
ಸಿಬ್ಬಂದಿಗೆ ಮಂಗಳವಾರ ವಾರದ ರಜಾ
ಈ ಹೊಸ ವ್ಯವಸ್ಥೆಯ ಭಾಗವಾಗಿ, ಶನಿವಾರ ಮತ್ತು ಭಾನುವಾರ ಕೆಲಸ ನಿರ್ವಹಿಸುವ ಉಪ ನೋಂದಣೆ ಕಚೇರಿಯ ಸಿಬ್ಬಂದಿಗೆ ಪ್ರತಿ ವಾರದ ಮಂಗಳವಾರ ವಿಶ್ರಾಂತಿ ದಿನ ನೀಡಲಾಗಿದೆ. ಇದರಿಂದಾಗಿ ಕೆಲಸ ಮತ್ತು ವಿಶ್ರಾಂತಿಯ ನಡುವಿನ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಲಿದೆ.
ಈ ಬದಲಾವಣೆಯು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರವೂ ಅತ್ಯವಶ್ಯಕ. ಸಾರ್ವಜನಿಕರು ನಿಗದಿತ ಸಮಯದಲ್ಲಿ ಆನ್‌ಲೈನ್ ಅಪಾಯಿಂಟ್‌ಮೆAಟ್ ಪಡೆದು, ಕಡತ ಪೂರೈಸಿದರೆ ಈ ನೂತನ ವ್ವಯಸ್ಥೆಯ ಉದ್ದೇಶವು ಸಫಲವಾಗಲಿದೆ.
ರಾಜ್ಯ ಸರ್ಕಾರದ ಈ ಹೊಸ ಕ್ರಮವು ಆಸ್ತಿ ನೋಂದಣಿಯಲ್ಲಿ ಓಡಾಟ ಕಡಿಮೆ ಮಾಡಿ, ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಜನರ ಸೇವೆಗೆ ಸಿಗುವಂತೆ ಮಾಡುವಲ್ಲಿ ಇದು ಮಾದರಿ ಎನ್ನಬಹುದು. ಇದೇ ಮಾದರಿಯಲ್ಲಿ ಇನ್ನೂ ಹಲವು ಇಲಾಖೆಗಳಿಂದ ಇಂತಹ ಸೇವಾ ಸುಧಾರಣೆಯ ಆಲೋಚನೆ ರಾಜ್ಯ ಸರ್ಕಾರಕ್ಕಿದೆ ಎನ್ನಲಾಗುತ್ತಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.