2025ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿವೆ. ಇದೀಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈ ವರ್ಷ ಮೌಲ್ಯಮಾಪನ ಕಾರ್ಯವನ್ನು ಹಿಂದಿನ ವರ್ಷಕ್ಕಿಂತ ಕೊಂಚ ಬೇಗ ನಡೆಸಲಿದ್ದು; ಶೀಘ್ರದಲ್ಲೇ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಗಳನ್ನು 2025ರ ಮೇ ಮೊದಲ ವಾರದಲ್ಲಿ ಪ್ರಕಟಿಸಲಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷ 2024ರಲ್ಲಿ ಫಲಿತಾಂಶವನ್ನು ಮೇ 9ರಂದು ಬೆಳಿಗ್ಗೆ 10:40 ಕ್ಕೆ ಪ್ರಕಟಿಸಲಾಗಿತ್ತು. ಈ ಬಾರಿ ಮೌಲ್ಯಮಾಪನ ಕಾರ್ಯವು ಬೇಗನೆ ಪ್ರಾರಂಭವಾಗುತ್ತಿರುವುದರಿ೦ದ, ಫಲಿತಾಂಶ ಕೂಡ ನಿರೀಕ್ಷಿತ ಸಮಯಕ್ಕಿಂತ ಬೇಗನೇ ಪ್ರಕಟಗೊಳ್ಳಬಹುದು.
ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಮುಖ ವಿಷಯಗಳಾದ ಕನ್ನಡ, ಗಣಿತ, ಇಂಗ್ಲೀಷ್ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಉಳಿದಂತೆ ವಿಜ್ಞಾನ ಮತ್ತು ತೃತೀಯ ಭಾಷೆಯ ಪರೀಕ್ಷೆಗಳು ಏಪ್ರಿಲ್ 2 ಮತ್ತು ಏಪ್ರಿಲ್ 4 ರಂದು ನಡೆಯಲಿವೆ. ಈ ಪರೀಕ್ಷೆಗಳ ನಂತರ ಸ್ವಲ್ಪ ವಿರಾಮದ ನಂತರ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಇದನ್ನೂ ಓದಿ: 9.970 ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿ | 10ನೇ, ಐಟಿಐ, ಡಿಪ್ಲೋಮಾ ಅಭ್ಯರ್ಥಿಗಳಿಗೆ ಅವಕಾಶ
ಮರುಪರೀಕ್ಷೆ ಮತ್ತು ಪೂರಕ ಪರೀಕ್ಷೆ
ಎಸ್‌ಎಸ್‌ಎಲ್‌ಸಿ ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ, ಪೂರಕ ಪರೀಕ್ಷೆಯ ದಿನಾಂಕಗಳನ್ನು ಮಂಡಳಿ ಪ್ರಕಟಿಸುತ್ತದೆ. ಕಳೆದ ವರ್ಷ 2024ರಲ್ಲಿ, 2ನೇ ಪರೀಕ್ಷೆಯ ಫಲಿತಾಂಶವನ್ನು ಜುಲೈ 10ರಂದು ಬೆಳಿಗ್ಗೆ 11:30 ಕ್ಕೆ ಪ್ರಕಟಿಸಲಾಗಿತ್ತು ಮತ್ತು 3ನೇ ಫಲಿತಾಂಶವನ್ನು ಆಗಸ್ಟ್ 26ರಂದು ಘೋಷಿಸಲಾಗಿತ್ತು. ಈ ಬಾರಿ ಸಹ ಇದೇ ಮಾದರಿಯಲ್ಲಿ ಪೂರಕ ಪರೀಕ್ಷೆ ಮತ್ತು ಮರುಪರೀಕ್ಷೆ ಸಮಯ ನಿರ್ಧರಿಸಲಾಗುವ ಸಾಧ್ಯತೆ ಇದೆ.
2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ಮೇ ಮೊದಲ ವಾರದಲ್ಲಿ ಪ್ರಕಟಗೊಂಡರೆ, ಪಿಯುಸಿ (PUC) ಪ್ರಥಮ ವರ್ಷದ ತರಗತಿಗಳು ಜೂನ್‌ನಲ್ಲಿಯೇ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಹಂತಕ್ಕೆ ತಡವಿಲ್ಲದೆ ಪ್ರವೇಶ ದೊರಕಬಹುದು. ಈ ಕ್ರಮವು ವಿದ್ಯಾರ್ಥಿಗಳ ಭವಿಷ್ಯ ಗುರಿಗಳನ್ನು ವೇಗವಾಗಿ ಸಾಧಿಸಲು ಸಹಾಯ ಮಾಡಲಿದೆ.
ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೀಘ್ರದಲ್ಲಿ ಪ್ರಕಟಗೊಳ್ಳುವುದರಿಂದ, ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಯೋಜನೆಗಳನ್ನು ಸುಗಮವಾಗಿ ರೂಪಿಸಬಹುದು. ಈ ಪ್ರಕ್ರಿಯೆ ವಿದ್ಯಾರ್ಥಿಗಳಿಗೆ ಒತ್ತಡವನ್ನು ಕಡಿಮೆ ಮಾಡಿ, ಅವರ ಉನ್ನತ ಶಿಕ್ಷಣ ಪ್ರವೇಶವನ್ನು ಸುಗಮಗೊಳಿಸಲಿದೆ.
ಇದನ್ನೂ ಓದಿ: Bagair Hukum Arji- ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆರು ತಿಂಗಳ ಗಡುವು | ತಹಸೀಲ್ದಾರ್‌ಗಳಿಗೆ ಕಂದಾಯ ಸಚಿವರ ಚಾಟಿ
ಫಲಿತಾಂಶ ಪರಿಶೀಲನೆಯ ಅಧಿಕೃತ ವೆಬ್‌ಸೈಟ್
ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಹಾಗೂ kseab.karnataka.gov.in ಇವುಗಳ ಮೂಲಕ ಪರಿಶೀಲಿಸಬಹುದು.
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Register Number) ಮತ್ತು ಜನ್ಮ ದಿನಾಂಕವನ್ನು (Date of Birth) ನಮೂದಿಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಮತ್ತು ಪೋಷಕರು ಫಲಿತಾಂಶದ ವಿಚಾರವಾಗಿ ಯಾವುದೇ ಊಹಾಪೋಹಗಳಿಗೆ ಕಿವಿಗೊಎದೇ ಆಗಾಗ ಮೇಲ್ಕಾಣಿಸಿದ ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸುವುದು ಉತ್ತಮ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ ಅಧಿಸೂಚನೆಗಳನ್ನು ಗಮನವಿಟ್ಟು ಅನುಸರಿಸಿ…
East Monsoon Rain- ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ | ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.