ಪಿಎಂ-ಕಿಸಾನ್ ಯೋಜನೆಯ 20ನೇ ಕಂತಿನ ಹಣ ಜಮಾ ಪ್ರಕ್ರಿಯೆ ಶರುವಾಗಿವೆ. ಆದರೆ, ರಾಜ್ಯದಲ್ಲಿ 7 ಲಕ್ಷಕ್ಕೂ ಹೆಚ್ಚು ರೈತರನ್ನು (Karnataka PM-Kisan) ಹೊರಗಿಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತ ಸರ್ಕಾರ 2019ರಿಂದ ರೈತರಿಗೆ ನೇರ ಹಣಕಾಸು ಸಹಾಯ ನೀಡುತ್ತಿರುವ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-KISAN) ಯೋಜನೆಯ ಪ್ರಯೋಜನವನ್ನು ದೇಶದ ಕೋಟ್ಯಾಂತರ ರೈತರು ಪಡೆಯುತ್ತಿದ್ದಾರೆ. ಆದರೆ, ಈ ಯೋಜನೆಯ ಅಡಿಯಲ್ಲಿ ಕರ್ನಾಟಕದ 7.19 ಲಕ್ಷ ರೈತರ ಖಾತೆಗಳನ್ನು ‘ಅನರ್ಹ’ ಎಂದು ಗುರುತಿಸಿ ಸ್ಥಗಿತಗೊಳಿಸಲಾಗಿದೆ. ನೀವು ಈ ಪಟ್ಟಿಯಲ್ಲಿ ಇದ್ದೀರಾ ಎಂಬುದನ್ನು ಈಗಲೇ ಪರಿಶೀಲಿಸಿ.
ಕೇಂದ್ರ ಸಚಿವಾಲಯದ ಅಧಿಕೃತ ಮಾಹಿತಿ ಏನು ಹೇಳುತ್ತದೆ?
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 2020 ರಿಂದ 2025ರ ಅವಧಿಯಲ್ಲಿ ಒಟ್ಟು 7,19,420 ರೈತರ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಂತುವಾರು ಹೊರಗುಳಿದ ರೈತರು ಮತ್ತು ಅವರಿಗೆ ಪಾವತಿಯಾದ ಹಣದ ಅಂಕಿ-ಅಂಶಗಳು ಹೀಗಿವೆ:
- 5ನೇ ಕಂತು (2020 ಏಪ್ರಿಲ್-ಜುಲೈ): ₹1,033 ಕೋಟಿ → 51.44 ಲಕ್ಷ ರೈತರಿಗೆ
- 6ನೇ ಕಂತು (2020 ಆಗಸ್ಟ್-ನವೆಂಬರ್): ₹1,061 ಕೋಟಿ → 52.19 ಲಕ್ಷ ರೈತರಿಗೆ
- 19ನೇ ಕಂತು (2025 ಡಿಸೆಂಬರ್-ಮಾರ್ಚ್): ₹897 ಕೋಟಿ → 43.95 ಲಕ್ಷ ರೈತರಿಗೆ
ಅಂದರೆ 5ನೇ ಕಂತಿನಿಂದ 19ನೇ ಕಂತಿನ ವರೆಗೆ ಸುಮಾರು 7.19 ಲಕ್ಷ ರೈತರ ಖಾತೆ ಸ್ಥಗಿತಗೊಂಡಿದೆ.
ಖಾತೆ ರದ್ದಾಗಲು ಪ್ರಮುಖ ಕಾರಣಗಳೇನು?
ಪಿಎಂ-ಕಿಸಾನ್ ಯೋಜನೆಯಿಂದ ಹೊರಗಿಡಲಾದ ರೈತರ ಅಂಕಿ-ಅಂಶ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಈ ರೈತರ ಖಾತೆ ರದ್ದಾಗಲು ಕಾರಣಗಳನ್ನು ಕೂಡ ಸ್ಪಷ್ಟವಾಗಿ ತಿಳಿಸಿದೆ. ಆ ವಿವರ ಈ ಕೆಳಗಿನಂತಿದೆ:
ಆದಾಯ ತೆರಿಗೆ ಪಾವತಿದಾರರು: ವರ್ಷಕ್ಕೆ ₹2.5 ಲಕ್ಷಕ್ಕಿಂತ ಹೆಚ್ಚು ಆದಾಯವಿದ್ದವರಿಗೆ ಪಿಎಂ ಕಿಸಾನ್ ಪ್ರೋತ್ಸಾಹಧನ ಸಿಗದು. ಕೃಷಿಯ ಹೊರತಾಗಿ ಮತ್ತೊಂದು ವ್ಯಾಪಾರ ಅಥವಾ ಉದ್ಯೋಗ ಆದಾಯ ಇದ್ದರೂ ಯೋಜನೆಗೆ ಅರ್ಹರಲ್ಲ.
ಇ-ಕೆವೈಸಿ (e-KYC) ಪೂರ್ಣಗೊಳಿಸದವರು: ಆಧಾರ್ ಸಂಖ್ಯೆಯ ಮೂಲಕ ಬ್ಯಾಂಕ್ ಖಾತೆ ಮತ್ತು ರೈತ ನೋಂದಣಿ ಪ್ರಮಾಣೀಕರಣ ಕಡ್ಡಾಯವಾಗಿದೆ. e-ಏಙಅ ಇಲ್ಲದವರ ಖಾತೆಗೆ ಹಣ ಜಮೆ ಆಗದು.

ಆಧಾರ್ ಜೋಡಣೆ ಇಲ್ಲದವರು: ಆಧಾರ್ ಕಾರ್ಡ್ ಮಾಹಿತಿ ಸರಿಯಾಗಿ ಬ್ಯಾಂಕ್ ಖಾತೆಗೆ ಜೋಡಿಸಬೇಕು. ಡುಪ್ಲಿಕೇಟ್ ಅಥವಾ ತಪ್ಪು ದಾಖಲೆಗಳಿಂದ ತಪ್ಪಿಸಲು ಆಧಾರ್ ಕಡ್ಡಾಯವಾಗಿದೆ.
ರಾಜ್ಯ/ಕೇಂದ್ರ ಸರ್ಕಾರದ ನೌಕರರು: ಪಿಎಂ-ಕಿಸಾನ್ ಯೋಜನೆ ಕೇವಲ ಸಣ್ಣ ರೈತರಿಗೆ ಮಾತ್ರ ಮೀಸಲಾಗಿದೆ. ಸರ್ಕಾರಿ ನೌಕರರು, ಪಿಂಚಣಿದಾರರು ಯೋಜನೆಗೆ ಅರ್ಹರಲ್ಲ.
ಸರಿಯಾದ ಭೂಮಿಯ ದಾಖಲೆ ಇಲ್ಲದವರು: ತಮ್ಮ ಹೆಸರಿನಲ್ಲಿ ಅಥವಾ ಹಣ ಪಡೆಯುತ್ತಿರುವ ಕುಟುಂಬ ಸದಸ್ಯರ ಹೆಸರಿನಲ್ಲಿ ಭೂ ದಾಖಲೆ ಇರಬೇಕು. ಹೀಗೆ ಭೂ ದಾಖಲೆ ಸಮಸ್ಯೆ ಇದ್ದವರನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಇದರಿಂದ ಅರ್ಹ ರೈತರಿಗೂ ತೊಂದರೆ
- ಹಲವಾರು ಅರ್ಹ ರೈತರು e-KYC ಅಥವಾ ಆಧಾರ್ ಲಿಂಕ್ ಸಮಸ್ಯೆಗಳಿಂದ ಹಣ ಪಡೆದುಕೊಳ್ಳಲು ಆಗುತ್ತಿಲ್ಲ
- ಆದಾಯ ತೆರಿಗೆ ದಾಖಲೆ ಇಲ್ಲದವರನ್ನು ಸಹ ಕೆಲ ಬಾರಿ ತಪ್ಪಾಗಿ ಹೊರಗಿಡಲಾಗಿದೆ
- ಕೆಲವು ಕಡೆ ಭೂ ದಾಖಲೆಗಳಿಂದ ಉಪನಾಮದ ಅಥವಾ ಪಿತೃತನಾಮದ ತಪ್ಪುಗಳ ಕಾರಣ ಹಣ ಬಂದಿಲ್ಲ.
ಇಂಥ ರೈತರು ಏನು ಮಾಡಬೇಕು?
- e-KYC ಪೂರ್ತಿ ಮಾಡಿ: ಆಧಾರ್ ಮೂಲಕ OTP ಅಥವಾ ಬಯೋಮೆಟ್ರಿಕ್ ಮೂಲಕ ನಿಮ್ಮ ಖಾತೆ ಪರಿಶೀಲಿಸಿಕೊಳ್ಳಿ.
- ಆಧಾರ್ ಲಿಂಕ್ ಪರಿಶೀಲಿಸಿ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಯೇ ಎಂಬುವುದನ್ನು ನೋಡಿ.
- ಭೂ ದಾಖಲೆಗಳ ಅಪ್‌ಡೇಟ್ ಮಾಡಿ: ನಿಮ್ಮ ಹೆಸರಿನಲ್ಲಿ ಸರಿಯಾದ ಜಮೀನಿನ ದಾಖಲೆಗಳನ್ನು ಗ್ರಾಮ ಲೆವೆಲ್ ಅಧಿಕಾರಿಗೆ ನೀಡಿ.
- ತಪ್ಪು ಮಾಹಿತಿಯನ್ನು ಸರಿಪಡಿಸಿ: ಹೆಸರು, ತಂದೆ ಹೆಸರು, ಬ್ಯಾಂಕ್ ಡಿಟೇಲ್ಸ್ ಮೊದಲಾದ ತಪ್ಪುಗಳಿದ್ದರೆ ಅಪ್‌ಡೇಟ್ ಮಾಡಿ.
Uchita Holige Yantra- ಉಚಿತ ಹೊಲಿಗೆ ಯಂತ್ರ ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ | ಕೂಡಲೇ ಅರ್ಜಿ ಹಾಕಿ…
ನೀವು ಅರ್ಹರ ಪಟ್ಟಿಯಲ್ಲಿದ್ದೀರಾ? ಹೀಗೆ ಚೆಕ್ ಮಾಡಿ…
- PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ
- Beneficiary List ಕ್ಲಿಕ್ ಮಾಡಿ
- ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ
- Get Report ಕ್ಲಿಕ್ ಮಾಡಿದರೆ, ಹಳ್ಳಿಯ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿರುವವರಿಗೆ ಖಚಿತವಾಗಿ 20ನೇ ಕಂತಿನ ಹಣ ಸಂದಾಯವಾಗಲಿದೆ.
ರೈತರೇ, ನಿಮಗೆ ಹಣ ಬಂದಿಲ್ಲವೆಂದರೆ, ಕೂಡಲೇ e-KYC ಮಾಡಿ, ಆಧಾರ್ ಲಿಂಕ್ ಪರಿಶೀಲಿಸಿ, ಸರಿಯಾದ ದಾಖಲೆ ನೀಡಿ. ಸಂದೇಹಗಳಿದ್ದರೆ, ಗ್ರಾಮ ಪಂಚಾಯಿತಿ / ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಿರಿ. ಕೃಷಿ ಇಲಾಖೆ ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ.
PM Kisan 20ne Kanthu- ರೈತರಿಗೆ PM-KISAN 20ನೇ ಕಂತಿನ ₹2,000 ರೂ. ಹಣ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.