ರಾಜ್ಯದಲ್ಲಿ 994 ಗ್ರಾಮ ಪಂಚಾಯತಿ ಪಿಡಿಒ ಹುದ್ದೆಗಳ ಭರ್ತಿ (Karnataka PDO Recruitment 2026) ಕುರಿತು ಸರ್ಕಾರ ವಿಶೇಷ ಸೂಚನೆ ನೀಡಿದ್ದು; ಪಿಡಿಒ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕದಲ್ಲಿ ಪಿಡಿಒ (Panchayat Development Officer) ಅರ್ಥಾತ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಒಟ್ಟು 994 ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮಕೈಗೊಳ್ಳುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ.
ಕಳೆದ ಡಿಸೆಂಬರ್ 15, 2025ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಳಿದ ಚುಕ್ಕೆ ಗುರುತಿಲ್ಲ (ಸಂಖ್ಯೆ 199) ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬಗ್ಗೆ ಲಿಖಿತ ಉತ್ತರ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಪಿಡಿಒ ಖಾಲಿ ಹುದ್ದೆಗಳ ಜಿಲ್ಲಾವಾರು ವಿವರವನ್ನೂ ನೀಡಿದ್ದಾರೆ.
ಈಗಾಗಲೇ ಉಳಿಕೆ ಮೂಲ ವೃಂದದ 150 ಮತ್ತು ಕಲ್ಯಾಣ ಕರ್ನಾಟಕ ವೃಂದದ 97 ಹುದ್ದೆಗಳು ಸೇರಿ ಒಟ್ಟು 247 ಪಿಡಿಒ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕ ಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇನ್ನೂ ರಾಜ್ಯಾದ್ಯಂತ 994 ಪಿಡಿಒ ಹುದ್ದೆಗಳು ಖಾಲಿ ಇದ್ದು; ಶೀಘ್ರದಲ್ಲಿಯೇ ಇವುಗಳ ನೇಮಕಾತಿ ನಡೆಯಲಿದೆ. ಪಿಡಿಒ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ
- ಬಾಗಲಕೋಟೆ: 01
- ಬೆಂಗಳೂರು (ಗ್ರಾ.): 29
- ಬೆಂಗಳೂರು (ನಗರ): 67
- ಬೀದರ್: 40
- ಚಾಮರಾಜನಗರ: 26
- ಚಿಕ್ಕಬಳ್ಳಾಪುರ: 28
- ಚಿಕ್ಕಮಗಳೂರು: 55
- ಚಿತ್ರದುರ್ಗ: 13
- ದಾವಣಗೆರೆ: 72
- ಧಾರವಾಡ: 18
- ಗದಗ: 09
- ಗೋಕರ್ಣ: 26
- ಹಾಸನ: 48
- ಹಾವೇರಿ: 53
- ಕಲಬುರಗಿ: 68
- ಕೋಲಾರ: 43
- ಕೊಪ್ಪಳ: 30
- ಕೊಡಗು: 10
- ಮಂಡ್ಯ: 33
- ಮೈಸೂರು: 01
- ರಾಯಚೂರು: 45
- ಶಿವಮೊಗ್ಗ: 03
- ತುಮಕೂರು: 49
- ಉತ್ತರ ಕನ್ನಡ: 75
- ಉಡುಪಿ: 26
- ವಿಜಯಪುರ: 60
- ವಿಜಯನಗರ: 47
- ಯಾದಗಿರಿ: 01
- ಯಾದಗಿರಿ (ಇತರೆ/ದ್ವಿತೀಯ ದಾಖಲಾತಿ): 18
- ಒಟ್ಟು ಖಾಲಿ ಹುದ್ದೆಗಳು: 994
ಪಿಡಿಒ ಹುದ್ದೆಗಳಿಗೆ ಶೈಕ್ಷಣಿಕ ವಿದ್ಯಾರ್ಹತೆ ಏನಿರಬೇಕು?
ಭಾರತದ ಕಾನೂನಿ ರೀತ್ಯ ಸ್ಥಾಪಿತವಾದ ಅಂಗಿಕೃತ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧೀನದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ವಯಸ್ಸಿನವರಿಗೆ ಅವಕಾಶವಿದೆ?
ಕೆಪಿಎಸ್ಸಿ ಅಧಿಸೂಚನೆಯ ಪ್ರಕಾರ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ನಿಗಧಿಪಡಿಸಲಾಗಿದೆ. ಪೂರೈಸಿರಬೇಕು. ಗರಿಷ್ಠ ವಯಸ್ಸನ್ನು ಆಯಾಯ ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ
- ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನವೆಷ್ಟು? PDO Monthly Salary
ಕರ್ನಾಟಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹37,900 ರಿಂದ ₹70,850ರ ವರೆಗೆ ಸಂಬಳ ಇರಲಿದೆ. ಸಂಬಳದ ಜೊತೆಗೆ ಸರ್ಕಾರ ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಸವಲತ್ತುಗಳು ಸಿಗುತ್ತವೆ.
ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವೆಷ್ಟು?
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ (GEN) : 600 ರೂಪಾಯಿ
- ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (OBC) : 300 ರೂಪಾಯಿ
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ (Ex-ser) : 50 ರೂಪಾಯಿ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ
ಪಿಡಿಒ ಹುದ್ದೆಗಳಿಗೆ ನೇಮಕವಾಗಲು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಸದರಿ ಪರೀಕ್ಷೆಯು 150 ಅಂಕಗಳ ಒಂದು ಪ್ರಶ್ನೆಪತ್ರಿಕೆಯನ್ನು ಹೊಂದಿದ್ದು; ಪಿಡಿಒ ಹುದ್ದೆಗೆ ಅರ್ಹತೆ ಹೊಂದಲು ಅಭ್ಯರ್ಥಿಯು ಈ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸಲೇಬೇಕು. ಕನ್ನಡ ಭಾಷಾ ಪ್ರಶ್ನೆಪತ್ರಿಕೆಯನ್ನು ಎಸ್ಸೆಸ್ಸೆಲ್ಸಿ ಹಂತದ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಸಿದ್ದಪಡಿಸಲಾಗುತ್ತದೆ.
ಸದರಿ ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಹಿಂದೆ ಅಂದರೆ 2022ರ ನವೆಂಬರ್ 29ರಂದು ಹಾಗೂ ನಂತರದಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸಲಾದ ಕನ್ನಡ ಭಾಷಾ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿದ್ದಲ್ಲಿ ಅದೇ ಫಲಿತಾಂಶವನ್ನು ಈಗಿನ ಪಿಡಿಒ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆಗೆ ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: SBI Bengaluru Recruitment 2025- ಬೆಂಗಳೂರು ಎಸ್ಬಿಐ ನೇಮಕಾತಿ | 104 ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ
ಪಿಡಿಒ ಹುದ್ದೆಗಳ ಆಯ್ಕೆ ವಿಧಾನ Selection procedure
ಸ್ಪರ್ಧಾತ್ಮಕ ಪರೀಕ್ಷೆಯು ತಲಾ 100 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಎರಡೂ ಪ್ರಶ್ನೆ ಪತ್ರಿಕೆಗಳು ಇರಲಿವೆ. ಅಭ್ಯರ್ಥಿಗಳು ಈ ಎರಡೂ ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ.
ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಸ್ಪಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಅಧಿಸೂಚನೆ: Download
- ಕೆಪಿಎಸ್ಸಿ ಅಧಿಕೃತ ವೆಬ್ಸೈಟ್: kpsconline.karnataka.gov.in
PhonePe Personal Loan- ₹5 ಲಕ್ಷದ ವರೆಗೆ ಫೋನ್ಪೇ ಪರ್ಸನಲ್ ಲೋನ್ | ಮೊಬೈಲ್ನಲ್ಲೇ ಅರ್ಜಿ ಹಾಕಿ…